• Home
  • »
  • News
  • »
  • district
  • »
  • ಕುಕ್ಕೆ ಸುಬ್ರಹ್ಮಣ್ಯ ಜಾತ್ರೋತ್ಸವಕ್ಕೆ ಪ್ರತ್ಯಕ್ಷವಾಗುತ್ತೆ ಈ ವಿಶೇಷ ಅತಿಥಿ!

ಕುಕ್ಕೆ ಸುಬ್ರಹ್ಮಣ್ಯ ಜಾತ್ರೋತ್ಸವಕ್ಕೆ ಪ್ರತ್ಯಕ್ಷವಾಗುತ್ತೆ ಈ ವಿಶೇಷ ಅತಿಥಿ!

ದೇವರ ಮೀನುಗಳು

ದೇವರ ಮೀನುಗಳು

ಸ್ನಾನಘಟ್ಟದ ಬಳಿ ಹೂಳು ಕೂಡಾ ಸಾಕಷ್ಟು ಹೆಚ್ಚಿನ ಪ್ರಮಾಣದಲ್ಲಿ ತುಂಬಿರುವುದರಿಂದ ಭಕ್ತಾಧಿಗಳಿಗೆ ಈ ಬಾರಿ ತೀರ್ಥಸ್ನಾನ ನೆರವೇರಿಸಲೂ ಅನಾನುಕೂಲವಾಗುತ್ತಿದೆ. ಭಕ್ತರ ಈ ಅನಾನುಕೂಲತೆ ಮೀನುಗಳಿಗೆ ತೊಂದರೆಯಾಗದಿರಲಿ ಎನ್ನುವುದು ಸ್ಥಳೀಯರ ಕಾಳಜಿಯಾಗಿದೆ.

  • Share this:

ದಕ್ಷಿಣ ಕನ್ನಡ; ಇತಿಹಾಸ ಪ್ರಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದಲ್ಲಿಗ ಷಷ್ಠಿ ಉತ್ಸವದ ಸಂಭ್ರಮ. ಈ ಸಂದರ್ಭದಲ್ಲಿ ದೇಶದೆಲ್ಲೆಡೆಯಿಂದ ಲಕ್ಷಾಂತರ ಭಕ್ತಾಧಿಗಳು ಬಂದು ಇಲ್ಲಿನ ಸಂಭ್ರಮಕ್ಕೆ ಸಾಕ್ಷಿಯಾಗುತ್ತಾರೆ. ಹಲವಾರು  ವೈಶಿಷ್ಟ್ಯಗಳನ್ನು ಹೊಂದಿರುವ ಸುಬ್ರಹ್ಮಣ್ಯಕ್ಕೆ ಭಕ್ತರಂತೆ ಮೀನುಗಳು ಜಾತ್ರೆ ನೋಡಲು ಬರುವುದು ಇಲ್ಲಿನ ವಿಶಿಷ್ಠತೆಯಾಗಿದೆ.


ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ದಕ್ಷಿಣ ಭಾರತದಲ್ಲೇ ಅತ್ಯಂತ ಪ್ರಸಿದ್ದವಾದ ಹಾಗೂ ಅತೀ ಪುರಾತನವಾದ ದೇವಸ್ಥಾನವಾಗಿದೆ.  ಸುಬ್ರಹ್ಮಣ್ಯ ಸ್ವಾಮಿಯೇ ಇಲ್ಲಿನ ಪ್ರಮುಖ ಆರಾಧ್ಯ ಮೂರ್ತಿಯಾಗಿದ್ದಾನೆ. ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಆಗಮಿಸಿ ದೇವರ ದರ್ಶನ ಪಡೆಯುತ್ತಾರೆ. ಆದರೆ ಪ್ರತಿವರ್ಷ ಚಂಪಾ ಷೃಷ್ಠಿಯಂದು ನಡೆಯುವ ಇಲ್ಲಿನ ಜಾತ್ರೋತ್ಸವಕ್ಕೆ ಲಕ್ಷಾಂತರ ಮಂದಿ ಭಕ್ತಾಧಿಗಳು ಆಗಮಿಸಿ ಇಲ್ಲಿನ ವೈಭವಕ್ಕೆ ಸಾಕ್ಷಿಯಾಗುತ್ತಾರೆ. ಹಲವು ಪವಾಡಗಳ ನಾಡಾಗಿರುವ ಸುಬ್ರಹ್ಮಣ್ಯದಲ್ಲಿ ಜಾತ್ರೆಯ ಸಂದರ್ಭ ದೇವಾಲಯದ ಕುಮಾರಧಾರ ಸ್ನಾನ ಘಟ್ಟಕ್ಕೆ ಮೀನುಗಳು ಅತಿಥಿಗಳಾಗಿ ಬರುವುದು ಅವುಗಳಲ್ಲಿ ಒಂದಾಗಿದೆ. ದೇವಸ್ಥಾನದಲ್ಲಿ ಜಾತ್ರೆಯ ಸಂದರ್ಭ ಕೊಪ್ಪರಿಗೆ ಏರುವ ದ್ವಾದಶಿಯಂದು , ದೂರದ ಏನೆಕಲ್ಲು- ಸಂಕಪಾಲ ಸುಬ್ರಹ್ಮಣ್ಯ ದೇವಸ್ಥಾನದ ಮೀನುಗಳು ಇಲ್ಲಿಗೆ ಬರುತ್ತದೆ. ಜಾತ್ರೆ ಮುಗಿಯುವವರೆಗೂ ಇಲ್ಲೇ ಇರುವ ಈ ಮೀನುಗಳು ದೇವಸ್ಥಾನದ ಜಾತ್ರೋತ್ಸವದ ಕೊನೆಯಲ್ಲಿ ನಡೆಯುವ ದೈವದ ಕೋಲದ ಬಳಿಕ ತಮ್ಮ ಸ್ವಸ್ಥಾನಕ್ಕೆ ಮರಳುತ್ತದೆ. ದೈವವು  ಬಂದು ನದಿಗೆ ನೈವೇದ್ಯ ಹಾಕಿದ ಬಳಿಕ ಅದನ್ನು ತಿಂದು ಅವುಗಳು ಮರಳಿ ಬಂದಲ್ಲಿಗೇ ಮರಳುತ್ತವೆ.


ಇದನ್ನು ಓದಿ: ಮಂಡ್ಯ ಜಿಲ್ಲೆಯಲ್ಲಿ ಮತ್ತೊಂದು ಗ್ರಾ.ಪಂ.ಸದಸ್ಯ ಸ್ಥಾನ‌ ಹರಾಜು; ಡಿಸಿ ಆದೇಶಕ್ಕೂ ಕ್ಯಾರೆ ಅನ್ನದ ಜನರು


ಮೀನುಗಳಿಂದಲೇ ತುಂಬಿ ತುಳುಕುವ ಕುಮಾರಧಾರ ನದಿಯಲ್ಲಿ ಸ್ನಾನ ಮಾಡುವವರಿಗೆ ಇವುಗಳು ಕಚಗುಳಿ ಇಡುತ್ತವೆ. ದೇವರ ಮೀನುಗಳೇ ಎಂದು ಕರೆಯಲ್ಪಡುವ ಇವುಗಳನ್ನು ಯಾರೂ ಹಿಡಿಯುವಂತಿಲ್ಲ. ಮೀನುಗಳು ಈ ನಡವಳಿಕೆಗಳಿಗೆ ನೈಸರ್ಗಿಕ ಕಾರಣಗಳಿದ್ದರೂ, ಸುಬ್ರಹ್ಮಣ್ಯದ ಜಾತ್ರೋತ್ಸವದ ಸಂದರ್ಭವೇ ಇವುಗಳು ಇಲ್ಲಿ ಸೇರುತ್ತಿರುವುದರಿಂದ ಇವು ಭಕ್ತರಿಗೆ ಕುತೂಹಲದ ಕೇಂದ್ರ ಬಿಂದುವಾಗಿದೆ. ಕುಮಾರಧಾರಾ ಸ್ನಾನಘಟ್ಟದಲ್ಲಿ ಈ ಬಾರಿ ನೀರಿನ ಹರಿವು ಕೊಂಚ ಕಡಿಮೆಯಾಗಿದ್ದು,ಇದರಿಂದಾಗಿ ಈ ಬಾರಿ ಮೀನುಗಳ ಸಂಖ್ಯೆಯಲ್ಲೂ ಇಳಿಮುಖವಾಗಿದೆ.


ಸ್ನಾನಘಟ್ಟದಲ್ಲಿ ಈ ಸಮಯದಲ್ಲಿ ಹೆಚ್ಚಿನ ಭಕ್ತಾಧಿಗಳು ಸೇರುವ ಹಿನ್ನಲೆಯಲ್ಲಿ ಭಕ್ತಾಧಿಗಳು ನೀಡುವ ಆಹಾರಕ್ಕಾಗಿಯೂ ಈ ಮೀನುಗಳು ಸ್ನಾನಘಟ್ಟದ ಬಳಿಯಲ್ಲೇ ಅಲೆಯುತ್ತಿರುತ್ತವೆ. ಸ್ನಾನಘಟ್ಟದ ಬಳಿ ಹೂಳು ಕೂಡಾ ಸಾಕಷ್ಟು ಹೆಚ್ಚಿನ ಪ್ರಮಾಣದಲ್ಲಿ ತುಂಬಿರುವುದರಿಂದ ಭಕ್ತಾಧಿಗಳಿಗೆ ಈ ಬಾರಿ ತೀರ್ಥಸ್ನಾನ ನೆರವೇರಿಸಲೂ ಅನಾನುಕೂಲವಾಗುತ್ತಿದೆ. ಭಕ್ತರ ಈ ಅನಾನುಕೂಲತೆ ಮೀನುಗಳಿಗೆ ತೊಂದರೆಯಾಗದಿರಲಿ ಎನ್ನುವುದು ಸ್ಥಳೀಯರ ಕಾಳಜಿಯಾಗಿದೆ.

Published by:HR Ramesh
First published: