ಶಿವರಾತ್ರಿ ಅಮಾವಾಸ್ಯೆ ದಿನ‌ ನಡೆಯಿತು ಗೋವಾ-ಕಾರವಾರ ಗಡಿ ಗ್ರಾಮ‌ ಉತ್ಸವ; ಸಾವಿರಾರು ಜನ ಭಾಗಿ

ಶಿವರಾತ್ರಿ ದಿನದಂದು ಉಪವಾಸ ಮಾಡಿ ನಂತರ ಸಮುದ್ರ ಸ್ನಾನ ಮಾಡುವ ಮೂಲಕ ಉಪವಾಸ ಬಿಡುವುದು ಸಹ ಈ ಜಾತ್ರೆ ವಿಶೇಷ. ಇನ್ನು ಈ ಬಾರಿ ಒಂದು ದಿನ ತಡವಾಗಿ ಜಾತ್ರೆ ಬಂದರೂ ಭಕ್ತರು ನಿನ್ನೆ ದಿನ ಸಹ ಉಪವಾಸ ಮಾಡಿ ಇಂದು ಜಾತ್ರೆ ಆಚರಿಸಿದರು. ಇದಲ್ಲದೇ ಪಡಿ ನೀಡುವುದು ಈ ಜಾತ್ರೆಯ ವಿಶೇಷ. ಸಮುದ್ರ ಸ್ನಾನಕ್ಕೆ ಬರುವ ಭಕ್ತರು ಅರ್ಚಕರಿಗೆ ಹಿರಿಯರ ನೆನಪಿಗಾಗಿ ಅಕ್ಕಿ, ತೆಂಗಿನಕಾಯಿಯನ್ನ ಪಡಿ ಎಂದು ಕೊಡುತ್ತಾರೆ.

ಸಮುದ್ರ ಸ್ನಾನ ಮಾಡುತ್ತಿರುವ ಭಕ್ತರು.

ಸಮುದ್ರ ಸ್ನಾನ ಮಾಡುತ್ತಿರುವ ಭಕ್ತರು.

  • Share this:
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ-ಗೋವಾ ಗಡಿ ಭಾಗದ ಮಾಜಾಳಿ ಗ್ರಾಮದಲ್ಲಿ ಇಂದು ಶಿವರಾತ್ರಿ ಅಮಾವಾಸ್ಯೆ ಮುಕ್ತಾಯ ದಿನ ಅದ್ದೂರಿಯಾಗಿ ಗಡಿ ಗ್ರಾಮ ಉತ್ಸವ ಸಾಂಪ್ರದಾಯಿಕಬದ್ಧವಾಗಿ ನಡೆಯಿತು. ಮಾಜಾಳಿ ಗ್ರಾಮದ ಸಮುದ್ರ ತೀರದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಐದು ಊರಿನ ಜನ ಪಾಪ ಕಳೆಯಲು ಸಮುದ್ರ ಸ್ನಾನ ಮಾಡಿ ಗ್ರಾಮದ ಶಿವ ದೇವರನ್ನು ನೆನೆದರು. ಮಾಜಾಳಿ ಗ್ರಾಮ ವ್ಯಾಪ್ತಿಯ ಐದು ಊರಿನ ಏಳು ಶಿವ ದೇವರ ಪಲ್ಕಕ್ಕಿ ಸಮುದ್ರ ತೀರಕ್ಕೆ ಆಗಮಿಸಿ ಪೂಜೆ ಪುನಸ್ಕಾರಗಳು ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ದೇವರ ದರ್ಶನ ಪಡೆದು ಪೂಜೆ ನೆರವೇರಿಸಿದರು. ಇನ್ನೊಂದು ಕಡೆ ಸ್ಥಳೀಯ ಪೂರೋಹಿತರ ಸಮ್ಮುಖದಲ್ಲಿ ಪಿತೃ ಪಿಂಡ ಪ್ರಧಾನ ಕಾರ್ಯ ನಡೆಯಿತು. ಹಿಂದಿನ ಸಾಂಪ್ರದಾಯಿಕ ಪದ್ದತಿಯಂತೆ ಉತ್ಸವ ನಡೆಯಿತು.

ಹೇಗಿತ್ತು ಇವತ್ತಿನ ಉತ್ಸವ

ಪ್ರತಿ ವರ್ಷದಂತೆ ಈ ವರ್ಷ ಸಹ ಮಾಜಾಳಿ ಗಾಂವಗೇರಿಯಲ್ಲಿನ ರಾಮನಾಥ ದೇವರ ಜಾತ್ರಾ ಮಹೋತ್ಸವ ನಡೆಯಿತು. ಶಿವರಾತ್ರಿಯ ಅಮಾವಾಸ್ಯೆ ದಿನ ಅಥವಾ ಶಿವರಾತ್ರಿ ನಂತರ ಬರುವ ಅಮಾವಾಸ್ಯೆ ದಿನ ರಾಮನಾಥ ದೇವರ ಜಾತ್ರಾ ಮಹೋತ್ಸವ ನಡೆಯುತ್ತದೆ. ಇಂದು ಸಹ ಅಮಾವಾಸ್ಯೆ ಹಿನ್ನಲೆಯಲ್ಲಿ ರಾಮನಾಥ ದೇವರ ಜಾತ್ರಾ ಮಹೋತ್ಸವ ನಡೆಯಿತು. ಈ ಜಾತ್ರೆಯಲ್ಲಿ ಅಸ್ನೋ ಮಾಜಾಳಿ, ಕೃಷ್ಣಪುರ, ಚಿತ್ತಾಕುಲ, ಮುಡಿಗೇರಿ, ಹೊಸಳ್ಳಿ ಗ್ರಾಮಗಳಿಂದ ಬೇರೆ ಬೇರೆ ದೇವರುಗಳನ್ನು ಪಲ್ಲಕ್ಕಿಯಲ್ಲಿ ಕಡಲ ತೀರಕ್ಕೆ ತರಲಾಯಿತು. ಕಡಲಿಗೆ ತಂದು ಪಲ್ಲಕ್ಕಿಯಲ್ಲಿನ ದೇವರನ್ನು ಸಮುದ್ರದಲ್ಲಿ ಸ್ನಾನ ಮಾಡಿಸುವುದು ವಿಶೇಷ. ಅದರಂತೆ ಈ ಬಾರಿ ಸಹ ಪಲ್ಲಕ್ಕಿಯಲ್ಲಿ ತಂದು ಒಬ್ಬಂತು ಗ್ರಾಮದ ದೇವರುಗಳನ್ನು ಸಮುದ್ರದ ನೀರನ್ನ ಹಾಕಿ ಸ್ನಾನ ಮಾಡಿಸಲಾಯಿತು.

ಇನ್ನು ಜಾತ್ರೆಗೆ ಆಗಮಿಸುವ ಜನರು ಶಿವರಾತ್ರಿ ದಿನದಿಂದ ಉಪವಾಸ ವ್ರತ ಮಾಡಿ ನಂತರ ಕಡಲ ತೀರಕ್ಕೆ ಆಗಮಿಸಿ ಸಮುದ್ರ ಸ್ನಾನ ಮಾಡಿ ಪಲ್ಲಕ್ಕಿಯಲ್ಲಿನ ದೇವರಿಗೆ ಪೂಜೆ ಮಾಡುವುದು ವಿಶೇಷ. ಹಾಗೇ ಮಾಡಿದರೆ ಒಳ್ಳೆಯದಾಗುತ್ತದೆ ಅನ್ನುವ ನಂಬಿಕೆ ಹಿಂದಿನಿಂದ ಬಂದಿದೆ. ಅದರಂತೆ ಈ ಬಾರಿ ಸಹ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ಕಡಲಿನಲ್ಲಿ ಎಲ್ಲರು ಒಟ್ಟಾಗಿ ಸ್ನಾನ ಮಾಡಿ ನಂತರ ಪಲ್ಲಕ್ಕಿಯಲ್ಲಿನ ದೇವರುಗಳಿಗೆ ಪೂಜೆ ಸಲ್ಲಿಸಿದರು.

ಇದನ್ನು ಓದಿ: ಅಧಿವೇಶನದಲ್ಲಿಯೇ ಸ್ಯಾನಿಟೈಸರ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಬಿಜೆಪಿ ಶಾಸಕ

ಇನ್ನು ಗಾಂವಗೇರಿಯಲ್ಲಿ ನಡೆಯುವ ಈ ರಾಮನಾಥ ದೇವರ ಜಾತ್ರಾ ಮಹೋತ್ಸವದಲ್ಲಿ ಗೋವಾ, ಮಹಾರಾಷ್ಟ್ರ, ಸೇರಿದಂತೆ ವಿವಿಧ ಭಾಗಗಳಿಂದ ಸಹ ಭಕ್ತರು ಆಗಮಿಸಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಶಿವರಾತ್ರಿ ದಿನದಂದು ಉಪವಾಸ ಮಾಡಿ ನಂತರ ಸಮುದ್ರ ಸ್ನಾನ ಮಾಡುವ ಮೂಲಕ ಉಪವಾಸ ಬಿಡುವುದು ಸಹ ಈ ಜಾತ್ರೆ ವಿಶೇಷ. ಇನ್ನು ಈ ಬಾರಿ ಒಂದು ದಿನ ತಡವಾಗಿ ಜಾತ್ರೆ ಬಂದರೂ ಭಕ್ತರು ನಿನ್ನೆ ದಿನ ಸಹ ಉಪವಾಸ ಮಾಡಿ ಇಂದು ಜಾತ್ರೆ ಆಚರಿಸಿದರು.

ಇದಲ್ಲದೇ ಪಡಿ ನೀಡುವುದು ಈ ಜಾತ್ರೆಯ ವಿಶೇಷ. ಸಮುದ್ರ ಸ್ನಾನಕ್ಕೆ ಬರುವ ಭಕ್ತರು ಅರ್ಚಕರಿಗೆ ಹಿರಿಯರ ನೆನಪಿಗಾಗಿ ಅಕ್ಕಿ, ತೆಂಗಿನಕಾಯಿಯನ್ನ ಪಡಿ ಎಂದು ಕೊಡುತ್ತಾರೆ. ಇದಲ್ಲದೇ ಹಿರಿಯರಿಗೆ ಪಿಂಡವನ್ನ ಸಮುದ್ರದಲ್ಲಿ ಬಿಡುವುದು ವಿಶೇಷ ಆಚರಣೆ ಆಗಿರುವುದರಿಂದ ಜಾತ್ರೆಗೆ ಆಗಮಿಸಿದ ಭಕ್ತರು ಕಡಲ ತೀರದಲ್ಲಿ ಅರ್ಚಕರಿಂದ ಪೂಜೆ ಸಲ್ಲಿಸಿ ಹಿರಿಯರನ್ನು ನೆನೆದು ಪಿಂಡ ಬಿಟ್ಟರು. ಇನ್ನು ಸಮುದ್ರ ಸ್ನಾನ ಮಾಡುವುದೇ ಈ ಜಾತ್ರೆ ವಿಶೇಷ ವಾಗಿರುವುದರಿಂದ ನಾನಾ ಭಾಗದಿಂದ ಬಂದವರು ಕುಟುಂಬ ಸಮೇತ, ಸ್ನೇಹಿತರ ಜೊತೆ ಸಮುದ್ರ ಸ್ನಾನ ಮಾಡಿ, ಸಂತೋಷ ಪಟ್ಟರು.
Published by:HR Ramesh
First published: