• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • BS Yeddyurappa: ಮಹದಾಯಿ ನದಿ ನೀರು ವಿಚಾರದಲ್ಲಿ ಮತ್ತೆ ಕ್ಯಾತೆ ತೆಗೆದ ಗೋವಾ; ತಕ್ಕ ಉತ್ತರ ನೀಡ್ತಾರ ಯಡಿಯೂರಪ್ಪ?  

BS Yeddyurappa: ಮಹದಾಯಿ ನದಿ ನೀರು ವಿಚಾರದಲ್ಲಿ ಮತ್ತೆ ಕ್ಯಾತೆ ತೆಗೆದ ಗೋವಾ; ತಕ್ಕ ಉತ್ತರ ನೀಡ್ತಾರ ಯಡಿಯೂರಪ್ಪ?  

ಮಹದಾಯಿ ನದಿ.

ಮಹದಾಯಿ ನದಿ.

ಮಹದಾಯಿ ನೀರಾವರಿ ಯೋಜನೆಗೆ ಕರ್ನಾಟಕ ಸರ್ಕಾರ ಮುಂದಾದಾಗಿ. ಆದರೆ, ಕಳಸಾ ಮತ್ತು ಬಂಡೂರಿ ಯೋಜನೆಯಿಂದಾಗಿ ಪ್ರಕೃತಿ ಸಮಸ್ಯೆಗಳು ಉಂಟಾಗಲಿವೆ. ಈ ಯೋಜನೆಯಿಂದ ಗೋವಾಕ್ಕೆ ಅನ್ಯಾಯವಾಗಲಿದೆ ಎಂಬ ಕ್ಯಾತೆ ತೆಗೆಯುವುದು ನೆರೆ ರಾಜ್ಯಕ್ಕೆ ಸಾಮಾನ್ಯವಾಗಿದೆ.

  • Share this:

ಧಾರವಾಡ : ನಮ್ಮ ರಾಜ್ಯಕ್ಕೆ‌ ಒಂದಲ್ಲ ರೀತಿಯಲ್ಲಿ ಗಡಿ ರಾಜ್ಯಗಳ ಕಿರಕಿರಿ ಇದ್ದದ್ದೆ. ಒಂದೆಡೆ ಮಹಾರಾಷ್ಟ್ರ ಗಡಿ ಕ್ಯಾತೆ ತೆಗದ್ರೆ, ಇತ್ತ ಗೋವಾ ರಾಜ್ಯ ಮಹದಾಯಿ ವಿಚಾರವಾಗಿ ಕ್ಯಾತೆ ತೆಗೆದಿದೆ. ನೆರೆ ರಾಜ್ಯಗಳು ಏಕಕಾಲಕ್ಕೆ ಕರ್ನಾಟಕದ ವಿರುದ್ಧ ತಿರುಗಿ ಬಿದ್ದಿವೇ ಅಂದರೆ ತಪ್ಪಾಗಲಾದಾಗಿದೆ. ಇದಕ್ಕೆ ಸಾಕ್ಷಿಯಾಗುತ್ತಿರೊದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮಹಾಜನ ವರದಿ ಪ್ರಕಾರ ಕರ್ನಾಟಕದ ಕೆಲ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಬೇಕೆಂಬ ಉದ್ಧಟತನದ ಹೇಳಿಕೆ ಹಳೆಯ ವಿಷಯ. ಅದರ ಬೆನ್ನಲೇ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್, ಗೋವಾ ಅಧಿವೇಶನದಲ್ಲಿ ಮಹದಾಯಿ ವಿಷಯ ಪ್ರಸ್ತಾಪಿಸಿ, ಪಕ್ಷ ಬದಿಗಿಟ್ಟು ಮಹದಾಯಿ ವಿಚಾರದಲ್ಲಿ ಕರ್ನಾಟಕ ರಾಜ್ಯದ ವಿರುದ್ಧ ತೊಡೆ ತಟ್ಟಿದೆ.


"ಮಹದಾಯಿ ಗೋವಾದ ಜೀವನದಿ. ನಂಗೆ ತಾಯಿ ಸಮಾನ. ಮಹದಾಯಿ ವಿಷಯದಲ್ಲಿ ಪಕ್ಷದ ಮಾತು ಕೇಳುವುದಿಲ್ಲ. ಈ ಜೀವನದಿಗೆ ಪಕ್ಷ-ರಾಜಕೀಯ ಬದಿಗಿಡುವೆ. ರಾಜಿ-ಒತ್ತಡಕ್ಕೆ ಮಣಿಯುವದಿಲ್ಲ" ಎಂದು ಅಲ್ಲಿನ ನಾಯಕರು ಇಂದು ನಡೆದ ಅಧಿವೇಶನದಲ್ಲಿ ಹೇಳಿದ್ದಾರೆ.


ಮಹದಾಯಿ ಉತ್ತರ ಕರ್ನಾಟಕದ ಮಲಪ್ರಭೆ ಅಚ್ಚುಕಟ್ಟು ಪ್ರದೇಶದ ರೈತರ ಬಹುದಿನದ ಕನಸು. ಗದಗ, ಧಾರವಾಡ, ಬೆಳಗಾವಿ-ಬಾಗಲಕೋಟೆಯ ನಾಲ್ಕು ಜಿಲ್ಲೆಯ 6 ತಾಲೂಕಿಗೆ ಕುಡಿಯುವ-ನೀರಾವರಿಗೆ ನೀರು ಒದಗಿಸುವ ಯೋಜನೆ. ಈ ಯೋಜನೆ ಅನುಷ್ಠಾನಕ್ಕೆ ನಾಲ್ಕು ದಶಕಗಳ ಹೋರಾಟದ ಇತಿಹಾಸವಿದೆ. ಈಚೆಗೆ ಹೋರಾಟ ತೀವ್ರ ಸ್ವೂರಪ ಪಡೆದಿತ್ತು. ಹೋರಾಟಕ್ಕೆ ಮಣಿದ ಕೇಂದ್ರ-ರಾಜ್ಯ ಸರ್ಕಾರ ಯೋಜನೆ ಅನುಷ್ಠಾನಕ್ಕೆ ಉತ್ಸಕತೆ ತೋರಿದ್ದವು.


ಮಹದಾಯಿ ನೀರು ಹಂಚಿಕೆ ಬಗ್ಗೆ ಐತೀರ್ಪು ಪ್ರಕಟಿಸಿತ್ತು. ಯೋಜನೆ ಅನುಷ್ಠಾನಕ್ಕೆ ಕೇಂದ್ರ ಸರ್ಕಾರವು ಗೆಜೆಟ್ ಅಧಿಸೂಚನೆ ಹೊರಡಿಸಿತ್ತು. ಇದರಿಂದ ಕಳಸಾ-ಬಂಡೂರಿ, ಮಹದಾಯಿಗೆ ಇದ್ದ ಅಡೆತಡೆಗಳು ದೂರವಾಗಿದ್ದವು. ಸುಪ್ರೀಂ ತೀರ್ಪಿಗೆ ಅನುಗುಣವಾಗಿ ಗೆಜೆಟ್ ಹೊರಡಿಸಿ,13.42 ಟಿಎಂಸಿ ನೀರು ಬಳಕೆಗೆ ಸಮ್ಮತಿಸಿತ್ತು. ಕಳಸಾಗೆ-1.27 ಟಿಎಂಸಿ, ಬಂಡೂರಿಗೆ-2.18 ಟಿಎಂಸಿ ಕುಡಿಯುವ ನೀರಿಗೆ 3.98 ಟಿಎಂಸಿ ನೀರನ್ನು ಹಂಚಿಕೆ ಮಾಡಲಾಗಿತ್ತು.


ಕೇಂದ್ರ, ಕರ್ನಾಟಕ-ಗೋವಾ ಮೂರೂ ಕಡೆ ಬಿಜೆಪಿ ಸರ್ಕಾರವಿದೆ. ಹೀಗಾಗಿ ಮಹದಾಯಿ ನದಿ ಬಿಕ್ಕಟ್ಟು ಸರಳವಾಗಿ ಇತ್ಯರ್ಥ ಆಗಲಿದೆ ಎಂದೇ ಜನ ಭಾವಿಸಿದ್ದರು. ಆದರೆ, ಗೋವಾ ಸಿಎಂ ಹೇಳಿಕೆ, ಮಲಪ್ರಭೆ ಅಚ್ಚುಕಟ್ಟು ಪ್ರದೇಶದ ರೈತರಿಗೆ-ಬಿಜೆಪಿಗೆ ಬಿಸಿ ತುಪ್ಪವಾಗಿದೆ.


ಮಹದಾಯಿ ನೀರಾವರಿ ಯೋಜನೆಗೆ ಕರ್ನಾಟಕ ಸರ್ಕಾರ ಮುಂದಾದಾಗಿ. ಆದರೆ, ಕಳಸಾ ಮತ್ತು ಬಂಡೂರಿ ಯೋಜನೆಯಿಂದಾಗಿ ಪ್ರಕೃತಿ ಸಮಸ್ಯೆಗಳು ಉಂಟಾಗಲಿವೆ. ಈ ಯೋಜನೆಯಿಂದ ಗೋವಾಕ್ಕೆ ಅನ್ಯಾಯವಾಗಲಿದೆ ಎಂಬ ಕ್ಯಾತೆ ತೆಗೆಯುವುದು ನೆರೆ ರಾಜ್ಯಕ್ಕೆ ಸಾಮಾನ್ಯವಾಗಿದೆ.


ಇದನ್ನೂ ಓದಿ: ಕೊಡಗು; ಮಂಜಿನ ನಗರಿಯ ಕಸದ ಬೆಟ್ಟ ಕರಗಲು ಇನ್ನೆಷ್ಟು ವರ್ಷ?


ನಿರ್ಣಯವಾಗಿ ಎರಡು ವರ್ಷಗಳು ಕಳೆದರೂ, ಯೋಜನೆ ಕಾರ್ಯಾರಂಭವಾಗಿಲ್ಲ. ಇದೇ ಗೋವಾ ರಾಜ್ಯ ತಗಾದೆ ತೆಗೆಯಲು ಮುಖ್ಯ ಕಾರಣ. ತಕ್ಷಣವೇ ಕರ್ನಾಟಕ ಸರ್ಕಾರ ಯೋಜನೆ ಅನುಷ್ಠಾನಕ್ಕೆ ಮುಂದಾಗಬೇಕಿದೆ.


ಗೋವಾ ಸಿಎಂ ಸಾವಂತ್ ರಾಜಕೀಯ ಮಾಡುತ್ತ, ತಮ್ಮ ಖುರ್ಚಿಯನ್ನು ಉಳಿಸಿಕೊಳ್ಳಲು ಮಹದಾಯಿ ವಿಚಾರವನ್ನು ಕೆಣಕುತ್ತಿದ್ದಾರೆ. ಜನತೆ ಇಕ್ಕಟ್ಟಿಗೆ ಸಿಗಿಸಲು ಮತ್ತು ದಿಕ್ಕು ತಪ್ಪಿಸಲು ಮುಂದಾಗಿದ್ದಾರೆ. ಮಹದಾಯಿ ಅನುಷ್ಠಾನದಲ್ಲಿ ಕರ್ನಾಟಕ ಸರ್ಕಾರದ ವಿಳಂಬ ಧೋರಣೆಯಿಂದಾಗಿಯೇ ಗೋವಾ ಕ್ಯಾತೆಗೆ ಮುಂದಾಗಿದೆ. ಹೀಗಾಗಿ ಗೋವಾ ಸಿಎಂಗೆ ಬಿಎಸ್‌ವೈ ತಕ್ಕ ಉತ್ತರ ನೀಡಬೇಕು. ಇಲ್ಲದೇ ಹೋದಲ್ಲಿ ಮತ್ತೆ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಮಹದಾಯಿ ಹಿರಾಟಗಾರ  ಶಂಕರ ಅಂಬಲಿ ಎಚ್ಚರಿಕೆ‌ನೀಡಿದ್ದಾರೆ.

Published by:MAshok Kumar
First published: