ನನಗೆ ಸಚಿವ ಸ್ಥಾನ ನೀಡುವುದು ಪಕ್ಷಕ್ಕೆ, ಸಿಎಂಗೆ ಬಿಟ್ಟ ವಿಚಾರ ; ಶಾಸಕ ಜಿ ಹೆಚ್ ತಿಪ್ಪಾರೆಡ್ಡಿ

ನಾನು ಕಳೆದ 50 ವರ್ಷಗಳಿಂದ ರಾಜಕೀಯದಲ್ಲಿ ಸೇವೆ ಮಾಡಿದ್ದು, ಸ್ವಾಭಾವಿಕವಾಗಿ ಆಕಾಂಕ್ಷೆ ಇರುತ್ತೆ ಎಂದಿದ್ದು, ಈ ಬಗ್ಗೆ ಪಕ್ಷ ಮತ್ತು‌ ಸಿಎಂ ನಿರ್ಧಾರಕ್ಕೆ ಬದ್ದನಾಗಿರುತ್ತೇನೆ ಪಕ್ಷಕ್ಕೆ ಚ್ಯುತಿ ಬರುವಂತೆ  ವರ್ತಿಸುವುದಿಲ್ಲ ಎಂದು ಹೇಳಿದ್ದಾರೆ.

ಶಾಸಕ ಜಿ ಹೆಚ್ ತಿಪ್ಪಾರೆಡ್ಡಿ

ಶಾಸಕ ಜಿ ಹೆಚ್ ತಿಪ್ಪಾರೆಡ್ಡಿ

  • Share this:
ಚಿತ್ರದುರ್ಗ(ಸೆಪ್ಟೆಂಬರ್​. 19): ಸಚಿವ ಸಂಪುಟ ವಿಸ್ತರಣೆಯಲ್ಲಿ ನನಗೆ ಅವಕಾಶ ಕೊಡುವುದು ಮುಖ್ಯಮಂತ್ರಿಗಳಿಗೆ, ಪಕ್ಷಕ್ಕೆ ಬಿಟ್ಟದ್ದು, ನಾನು ಪದೇ ಪದೇ ಹೋಗಿ ಕೇಳುವ ಅಭ್ಯಾಸ ಇಟ್ಟುಕೊಂಡಿಲ್ಲ. ಮುಖ್ಯಮಂತ್ರಿಗಳಿಗೆ, ಪಕ್ಷಕ್ಕೆ ಎಲ್ಲರ ಹಿರಿತನದ ಬಗ್ಗೆ ಗೊತ್ತಿರುತ್ತದೆ ಎಂದು ಸಚಿವಾಕಾಂಕ್ಷಿ ಬಿಜೆಪಿ ಹಿರಿಯ ಶಾಸಕ ಜಿ ಹೆಚ್ ತಿಪ್ಪಾರೆಡ್ಡಿ ಹೇಳಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಕುರಿತು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಅವರು ದೆಹಲಿ ಭೇಟಿ ಹಿನ್ನೆಲೆ ಚಿತ್ರದುರ್ಗದಲ್ಲಿ ಹೇಳಿಕೆ ನೀಡಿರುವ ಸಚಿವಾಕಾಂಕ್ಷಿ ಶಾಸಕ ಜಿ ಹೆಚ್ ತಿಪ್ಪಾರೆಡ್ಡಿ, ಸಚಿವ ಸಂಪುಟ ವಿಸ್ತರಣೆ ಹಾಗೂ ಸಿಎಂ ದೆಹಲಿ ಭೇಟಿ ಬಗ್ಗೆ ನಾನು ಗಮನ ಹರಿಸಿಲ್ಲ. ಮಾರ್ಚ್ 3 ನೇ ವಾರದಲ್ಲಿ ನಾನು ಸಿಎಂ ಯಡಯೂರಪ್ಪ ಅವರನ್ನ ಭೇಟಿಯಾಗಿದ್ದೆ, ಬಳಿಕ ಈ ವರೆಗೂ ಮತ್ತೆ  ಮುಖ್ಯಮಂತ್ರಿಗಳನ್ನ ಭೇಟಿ ಮಾಡಿಲ್ಲ ಎಂದು ಶಾಸಕ ಜಿ ಹೆಚ್ ತಿಪ್ಪಾರೆಡ್ಡಿ ಹೇಳಿದರು.

ಇನ್ನೂ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಪದೇ ಪದೇ ಹೋಗಿ ನನಗೆ ಸಚಿವ ಸ್ಥಾನ ಕೇಳುವ ಅಭ್ಯಾಸ ಇಟ್ಟುಕೊಂಡಿಲ್ಲ, ಮುಖ್ಯಮಂತ್ರಿಗಳಿಗೆ, ಪಕ್ಷಕ್ಕೆ ಎಲ್ಲರ ಹಿರಿತನದ ಬಗ್ಗೆ ಗೊತ್ತಿರುತ್ತದೆ, ಅವರೇ ಈ ಬಗ್ಗೆ ತೀರ್ಮಾನಿಸುತ್ತಾರೆ. ಆದರೆ, ಜಿಲ್ಲೆಯ ಜನರಗೆ ನಾನು ಸಚಿವರಾಗಬೇಕು ಎಂಬ ಅಭಿಪ್ರಾಯ ಇದೆ. ಯಾಕೆಂದರೆ ಹತ್ತಾರು ವರ್ಷಗಳಿಂದ ನಮ್ಮ ಜಿಲ್ಲೆಯವರು ಸಚಿವರಾಗಿಲ್ಲ, ಹೊರ ಜಿಲ್ಲೆಯಿಂದ ಬಂದ ಸಚಿವರು ನಮ್ಮ ಜಿಲ್ಲೆಯ ಅಭಿವೃದ್ದೆಗೆ ಕಾಳಜಿ ವಹಿಸಿಲ್ಲ, ಆದ್ದರಿಂಸ ಜಿಲ್ಲೆಯ ನೀರಾವರಿ, ಸೇರಿದಂತೆ ಅನೇಕ ಅಭಿವೃದ್ದಿಗಳಿಂದ ವಂಚಿತರಾಗಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನೂ ಸಚಿವ ಸಂಪುಟದಲ್ಲಿ ನನಗೆ ಅವಕಾಶ ನೀಡುವ ಕುರಿತು ಸಿಎಂ ಮತ್ತು ಪಕ್ಷಕ್ಕೆ ಬಿಟ್ಟದೆ. ಆದರೆ, ನಾನು ಕಳೆದ 50 ವರ್ಷಗಳಿಂದ ರಾಜಕೀಯದಲ್ಲಿ ಸೇವೆ ಮಾಡಿದ್ದು, ಸ್ವಾಭಾವಿಕವಾಗಿ ಆಕಾಂಕ್ಷೆ ಇರುತ್ತೆ ಎಂದಿದ್ದು, ಈ ಬಗ್ಗೆ ಪಕ್ಷ ಮತ್ತು‌ ಸಿಎಂ ನಿರ್ಧಾರಕ್ಕೆ ಬದ್ದನಾಗಿರುತ್ತೇನೆ ಪಕ್ಷಕ್ಕೆ ಚ್ಯುತಿ ಬರುವಂತೆ  ವರ್ತಿಸುವುದಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಯೋಗೇಶ್ವರ್ ನಾಮನಿರ್ದೇಶನ ಹಿಂಪಡೆಯದಿದ್ದರೆ ಕಾನೂನು ಹೋರಾಟ: ಕಾಂಗ್ರೆಸ್​ ನಾಯಕ ಪೊನ್ನಣ್ಣ

ಚಿತ್ರದುರ್ಗ ಜಿಲ್ಲೆಯಲ್ಲಿ ಆರು ಭಾರೀ ಶಾಸಕರಾಗಿ ಆಯ್ಕೆಯಾಗಿರುವ ಶಾಸಕ ಜಿ ಹೆಚ್. ತಿಪ್ಪಾರೆಡ್ಡಿಯವರಿಗೆ ಈ ಭಾರೀ ಬಿಜೆಪಿ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗುತ್ತದೆ ಎನ್ನುವ ಆಶಾಭಾವದಿಂದ ಇದ್ದರು. ಆದರೆ, ಬಿಜೆಪಿ ಸರ್ಕಾರ ರಚನೆ ಮಾಡುವುದಕ್ಕೆ ಕಾರಣವಾಗಿ ಕಾಂಗ್ರೆಸ್, ಜೆಡಿಎಸ್ ಪಕ್ಷಗಳನ್ನ ತೊರೆದು ಅನರ್ಹರಾಗಿ ಮತ್ತೆ ಬಿಜೆಪಿಯಿಂದ ಪ್ರತಿನಿಧಿಸಿ ಚುನಾವಣೆಯಲ್ಲಿ ಗೆದ್ದು ಶಾಸಕರಾದವರಿಗೆ ಸರ್ಕಾರದಲ್ಲಿ ಸಚಿವ ಸ್ಥಾನ ನೀಡಬೇಕಾದ್ದು ಅನಿವಾರ್ಯವಾಗಿತ್ತು. ಆದ್ದರಿಂದಲೆ ಮೊದಲನೆ ಬಾರಿಗೆ ಸಚಿವ ಸಂಪುಟ ವಿಸ್ಥರಣೆಯಲ್ಲಿ ಶಾಸಕ ತಿಪ್ಪಾರೆಡ್ಡಿಗೆ ಸಚಿವ ಸ್ಥಾನ ಕೈ ತಪ್ಪಿತ್ತು. ಇದರಿಂದ ಬೇಸರಗೊಂಡಿದ್ದ ಶಾಸಕ ಜಿ ಹೆಚ್.ತಿಪ್ಪಾರೆಡ್ಡಿ ಸರ್ಕಾರದ ವಿರುದ್ದ ಆಗಲೇ ಬೇಸರ ವ್ಯಕ್ತಪಡಿಸಿದ್ದರು.

ಅಷ್ಟೆ ಅಲ್ಲದೇ ಸಚಿವ ಸ್ಥಾನ ಕೈ ತಪ್ಪಿದ್ದರಿಂದ ಚಿತ್ರದುರ್ಗ ಜಿಲ್ಲೆಯಲ್ಲಿನ ಬೆಂಬಲಿಗರು ಬೃಹತ್ ಪ್ರತಿಭಟನೆ ಮಾಡಿ ಸಚಿವ ಸ್ಥಾನ ನೀಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದ್ದರು. ಬಳಿಕ ಹೈಕಮಾಡ್ ನಿರ್ದೇಶನ ಮೇರೆಗೆ ಮುಂದಿನ ಸಚಿವ ಸಂಪುಟದಲ್ಲಿ ಅವಕಾಶ ಸಿಗುವ ನೀರಿಕ್ಷೆಯಿಂದ ಕಾಯುತ್ತಿದ್ದರು. ಆದರೆ, ಕಳೆದ ಎರಡು ತಿಂಗಳುಗಳ ಹಿಂದೆ ಶಾಸಕರನ್ನ ಅಸಮಧಾನ ಶಮನದ ಮಾಡಲು ಸಿಎಂ ಬಿ ಎಸ್ ಯಡಿಯೂರಪ್ಪನವರು ಶಾಸರಿಗೆ ನಿಗಮ ಮಂಡಳಿ ಸ್ಥಾನ ಘೋಷಿಸಿದರು, ಇದರಿಂದ ಮತ್ತಷ್ಟು ಬೇಸರಗೊಂಡಿದ್ದ ಶಾಸಕರು ನಿಗಮ ಮಂಡಳಿಯನ್ನ ತಿರಸ್ಕರಿಸಿ, ಕ್ಷೇತ್ರದ ಅಭಿವೃದ್ದಿಗಾಗಿ ದುಡಿಯುತ್ತೇ‌ನೆ ಎಂದು ಹೇಳಿದ್ದರು.
Published by:G Hareeshkumar
First published: