ಕೋಲಾರ; ಕಳೆದ ಉಪ ಚುನಾವಣೆಯಲ್ಲಿ ಸೋಲನುಭವಿಸಿದ ಬಿಜೆಪಿ ನಾಯಕರಿಗೆ ಸಿಎಂ ಬಿ.ಎಸ್. ಯಡಿಯೂರಪ್ಪ ಕೊಟ್ಟ ಮಾತಿನಂತೆ ವಿಧಾನ ಪರಿಷತ್ ಸ್ಥಾನ ನೀಡಿ ಗೆಲ್ಲಿಸಿಕೊಂಡು ಬರಬೇಕು ಎಂದು ಅಬಕಾರಿ ಸಚಿವ ಹೆಚ್. ನಾಗೇಶ್ ಒತ್ತಾಯಿಸಿದ್ದಾರೆ.
ಪರಿಷತ್ ಚುನಾವಣೆ ಹತ್ತಿರವಾಗುತ್ತಿದ್ದಂತೆ ಬಿಜೆಪಿಯಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಎಂಬ ದೊಡ್ಡ ಗೊಂದಲವೇ ಉಂಟಾಗಿದೆ. ಅತ್ತ ಮೂಲ ಬಿಜೆಪಿಗರು ಮತ್ತು ಇತ್ತ ವಲಸೆ ಬಿಜೆಪಿ ನಾಯಕರು ಟಿಕೆಟ್ಗಾಗಿ ಈಗಾಗಲೇ ಲಾಬಿ ಶುರು ಮಾಡಿದ್ದಾರೆ. ಈ ನಡುವ ಕಳೆದ ಉಪ ಚುನಾವಣೆಯಲ್ಲಿ ಸೋಲನುಭವಿಸಿದ ಎಂಟಿಬಿ ನಾಗರಾಜ್, ಹೆಚ್. ವಿಶ್ವನಾಥ್ ಮತ್ತು ಆರ್. ಶಂಕರ್ ಅವರಿಗೆ ಟಿಕೆಟ್ ನೀಡಬೇಕು ಎಂಬ ಮಾತು ಕೇಳಿಬರುತ್ತಿರುವ ಬೆನ್ನಿಗೆ ಸಚಿವ ಹೆಚ್. ನಾಗೇಶ್ ದನಿಗೂಡಿಸಿದ್ದಾರೆ.
ಈ ಕುರಿತು ಶುಕ್ರವಾರ ಕೋಲಾರದಲ್ಲಿ ಮಾತನಾಡಿರುವ ಅವರು, "ಬಿಜೆಪಿ ಸರ್ಕಾರ ರಚನೆಗೆಂದು ಸಚಿವ ಸ್ತಾನಕ್ಕೆ ರಾಜಿನಾಮೆ ನೀಡಿ ಬೈ ಎಲೆಕ್ಷನ್ ನಲ್ಲಿ ಸೋಲು ಕಂಡಿದ್ದ ಎಮ್ ಟಿ ಬಿ ನಾಗರಾಜ್, ಆರ್. ಶಂಕರ್ ಹಾಗೂ ಹಿರಿಯ ನಾಯಕ ಹೆಚ್. ವಿಶ್ವನಾಥ್ ಅವರನ್ನು ಪರಿಷತ್ಗೆ ನಾಮ ನಿರ್ದೇಶನ ಮಾಡಿ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ಯಡಿಯೂರಪ್ಪನವರ ಮೇಲಿದೆ.
ಏಕೆಂದರೆ ಸರ್ಕಾರ ರಚನೆಯಾಗಲು ಅಂದು ನಮ್ಮ 18 ಶಾಸಕರ ಪಾತ್ರ ಅತಿ ಮುಖ್ಯವಾಗಿತ್ತು. ಇದನ್ನು ಯಾರೂ ಮರೆಯುವಂತಿಲ್ಲ. ಅಂದು ಯಡಿಯೂರಪ್ಪ ಅವರು ಕೊಟ್ಟ ಮಾತು ತಪ್ಪೊಲ್ಲ, ಏಕೆಂದರೆ ಒಂದು ಬಾರಿ ಯಡಿಯೂರಪ್ಪ ಅವರು ಹೇಳಿದರೆ ಅದು ಖಂಡಿತ ಆಗುತ್ತದೆ. ಆದರೆ ಉಪ ಚುನಾವಣೆಯಲ್ಲಿ ಸೋತವರಿಗೆ ಪರಿಷತ್ ಟಿಕೆಟ್ ನೀಡೊದಕ್ಕೆ ಮೂಲ ಬಿಜೆಪಿ ನಾಯಕರ ವಿರೋದ ಮಾಡುವುದು ಸರಿಯಲ್ಲ.
ಅಂದು ಅವರೆಲ್ಲ ಪಕ್ಷಾಂತರ ಮಾಡದೆ ಇದ್ದಿದ್ದರೆ ಇವತ್ತು ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇರುತ್ತಿರಲಿಲ್ಲ. ಬದಲಾಗಿ ಇನ್ನು ವಿರೋದ ಪಕ್ಷದಲ್ಲಿ ಕೂತಿರಬೇಕಿತ್ತು. ಕಾರಣಾಂತರದಿಂದ ಎಲೆಕ್ಷನ್ ನಲ್ಲಿ ಸೋತಿದ್ದಾರೆ. ಹೀಗಾಗಿ ಇವರು ಮತ್ತೆ ಆಯ್ಕೆಯಾದರೆ ಸರ್ಕಾರಕ್ಕೆ ಮತ್ತಷ್ಟು ಬಲ ಬರುತ್ತೆ" ಎಂದು ಹೇಳುವ ಮೂಲಕ ಸಚಿವ ಹೆಚ್. ನಾಗೇಶ್ ಸೋತ ಶಾಸಕರಿಗೆ ಟಿಕೆಟ್ ನೀಡುವಂತೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಕರ್ನಾಟಕದಲ್ಲಿಂದು ದಾಖಲೆಯ 515 ಕೊರೋನಾ ಕೇಸ್!; ಉಡುಪಿಯೊಂದರಲ್ಲೇ 204 ಸೋಂಕಿತರು ಪತ್ತೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ