HOME » NEWS » District » GIVE ME A JOB OR GIVE ME AN EUTHANASIA THE CRY OF THE YOUTH WHO LOST LAND FOR THE RAICHUR POWER PLANT SBR MAK

ಕೆಲಸ ಕೊಡಿ, ಇಲ್ಲವೇ ದಯಾಮರಣ ನೀಡಿ; ವಿದ್ಯುತ್​ ಸ್ಥಾವರಕ್ಕಾಗಿ ಭೂಮಿ ಕಳೆದುಕೊಂಡ ಯುವಕರ ಅಳಲು

ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಾದಂತೆ ಯರಮರಸ್ ಬಳಿಯಲ್ಲಿ 1600 ಮೆಗಾವ್ಯಾಟ್ ಸಾಮಾರ್ಥ್ಯದ ಸೂಪರ್ ನ್ಯುಮೆರಿಕಲ್ ಶಾಖೋತ್ಪನ್ನ ಸ್ಥಾವರವು ಪ್ರಾರಂಭವಾಗಿದೆ. ಈ ಸ್ಥಾವರಕ್ಕಾಗಿ ಏಗನೂರು, ಕುಕನೂರು, ಹೆಗಸನಳ್ಳಿ ಹಾಗು ಚಿಕ್ಕಸೂಗೂರಿನ ರೈತರ ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು 1125 ಎಕರೆ ಪ್ರದೇಶವನ್ನು 541 ರೈತರಿಂದ ಸ್ವಾದೀನ ಪಡಿಸಿಕೊಂಡು ಸ್ಥಾವರವನ್ನು ಆರಂಭಿಸಲಾಗಿತ್ತು.

news18-kannada
Updated:March 4, 2021, 7:31 AM IST
ಕೆಲಸ ಕೊಡಿ, ಇಲ್ಲವೇ ದಯಾಮರಣ ನೀಡಿ; ವಿದ್ಯುತ್​ ಸ್ಥಾವರಕ್ಕಾಗಿ ಭೂಮಿ ಕಳೆದುಕೊಂಡ ಯುವಕರ ಅಳಲು
ರಾಯಚೂರು ವಿದ್ಯುತ್​ ಸ್ಥಾವರ.
  • Share this:
ರಾಯಚೂರು; ರಾಜ್ಯದ ವಿದ್ಯುತ್ ಉತ್ಪಾದನೆಯಲ್ಲಿ ಶೇ.40 ರಷ್ಟು ಪಾಲನ್ನು ರಾಯಚೂರು ಜಿಲ್ಲೆ ನೀಡುತ್ತಿದೆ. ಆದರೆ ರಾಜ್ಯಕ್ಕೆ ಬೆಳಕು ನೀಡುವುದಕ್ಕಾಗಿ ಭೂಮಿ  ನೀಡಿದ ರೈತರ ಬದುಕು ಮಾತ್ರ ಇನ್ನೂ ಕತ್ತಲೆಯಲ್ಲೇ ಇದೆ. ಭೂಮಿ ಕಳೆದುಕೊಂಡ ರೈತರಿಗೆ ಕೆಲಸ ನೀಡಲು ಕೆಪಿಸಿ ಹಿಂದೇಟು ಹಾಕುತ್ತಿದೆ. ಇದರಿಂದಾಗಿ ರೈತ ಕುಟುಂಬದ ಯುವಕರು ಉದ್ಯೋಗ ಕೊಡಿ ಇಲ್ಲವೆ ನಮಗೆ ದಯಾಮರಣಕ್ಕೆ ಅವಕಾಶ ನೀಡಿ ಎಂದು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ದೇಶದಲ್ಲಿ ಕಲ್ಲಿದ್ದಿಲಿನಿಂದ ಶಾಖೋತ್ಪನ್ನ ಮಾಡಿ ಅದರಲ್ಲಿ ಟರ್ಬೈನ್ ತಿರುಗಿಸಿ ವಿದ್ಯುತ್ ಉತ್ಪಾದನೆ ಮಾಡುವ ಬೃಹತ್ ವಿದ್ಯುತ್ ಸ್ಥಾವರು ಟ್ರಾಂಬೈ ನಂತರ ಆರಂಭವಾಗಿದ್ದೆ ರಾಯಚೂರಿನಲ್ಲಿ. ದೇವಸಗೂರಿನ ಬಳಿ ಮೊದಲ ಶಾಖೋತ್ಪನ್ನ ಸ್ಥಾವರ ಆರಂಭವಾಯಿತು.

ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಾದಂತೆ ಯರಮರಸ್ ಬಳಿಯಲ್ಲಿ 1600 ಮೆಗಾವ್ಯಾಟ್ ಸಾಮಾರ್ಥ್ಯದ ಸೂಪರ್ ನ್ಯುಮೆರಿಕಲ್ ಶಾಖೋತ್ಪನ್ನ ಸ್ಥಾವರವು ಪ್ರಾರಂಭವಾಗಿದೆ. ಈ ಸ್ಥಾವರಕ್ಕಾಗಿ ಏಗನೂರು, ಕುಕನೂರು, ಹೆಗಸನಳ್ಳಿ ಹಾಗು ಚಿಕ್ಕಸೂಗೂರಿನ ರೈತರ ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು 1125 ಎಕರೆ ಪ್ರದೇಶವನ್ನು 541 ರೈತರಿಂದ ಸ್ವಾದೀನ ಪಡಿಸಿಕೊಂಡು ಸ್ಥಾವರವನ್ನು ಆರಂಭಿಸಲಾಗಿತ್ತು. ಸಾಮಾನ್ಯವಾಗಿ ಭೂಮಿಯನ್ನು ಕೃಷಿಯೇತರ ಉಪಯೋಗಕ್ಕಾಗಿ ನೀಡಿದಾಗ, ಭೂಮಿ‌ ಕಳೆದುಕೊಂಡ ರೈತರಿಗೆ ಅಲ್ಲಿ ಸ್ಥಾಪನೆಯಾಗುವ ಉದ್ಯಮದಲ್ಲಿ ಕೆಲಸ ನೀಡಬೇಕು. ಆದರೆ ವೈಟಿಪಿಎಸ್ ನಲ್ಲಿ ಭೂಮಿ ಕಳೆದುಕೊಂಡ ರೈತ ಕುಟುಂಬಗಳಿಗೆ ಕೆಲಸ ನೀಡಲು ಕರ್ನಾಟಕ ಪಾವರ್ ಕಾರ್ಪೊರೇಷನ್ ಹಿಂದೇಟು ಹಾಕುತ್ತಿದೆ.

ಸ್ಥಳೀಯರಿಗೆ ಉದ್ಯೋಗ ನೀಡಿ ಎಂದು ರೈತರು ಹಲವು ಬಾರಿ ಹೋರಾಟ ಮಾಡಿದ್ದಾರೆ. ಆದರೂ ರೈತರಿಗೆ ಉದ್ಯೋಗ ನೀಡಿಲ್ಲ. 2015 ರಲ್ಲಿ ಭೂಮಿ ಕಳೆದುಕೊಂಡ ರೈತರು ಈಗಲೂ ಉದ್ಯೋಗಕ್ಕಾಗಿ ಅಲೆದಾಡುವಂತಾಗಿದೆ. ಉದ್ಯೋಗವಿಲ್ಲದೆ ರೈತ ಕುಟುಂಬದವರ ಮಕ್ಕಳು ಈಗಲೂ ಬೀದಿಯಲ್ಲಿರುವಂತಾಗಿದೆ. ಇದೇ ಕಾರಣಕ್ಕಾಗಿ 9 ಜನ ರೈತರ ಮಕ್ಕಳಾದ ಯುವಕರು ರಾಯಚೂರು ಜಿಲ್ಲಾಧಿಕಾರಿಗಳಿಗೆ ಕೆಲಸ ಕೊಡಿ ಇಲ್ಲವೆ ನಮಗೆ ದಯಾಮರಣ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: TamilNadu Plitics: ಚುನಾವಣೆಗೂ ಮುನ್ನವೇ ರಾಜಕೀಯ ತೊರೆದ ಉಚ್ಛಾಟಿತ ಎಡಿಎಂಕೆ ಮುಖ್ಯಸ್ಥೆ ವಿ.ಕೆ. ಶಶಿಕಲಾ

ರಾಯಚೂರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ 25 ದಿನವಾದರೂ ಅಧಿಕಾರಿಗಳು ರೈತ ಯುವಕರತ್ತ ತಿರುಗಿ ನೋಡಿಲ್ಲ. ಇದೇ ವೇಳೆ ಈಗ ಆಗ ಇಲ್ಲದ ಕಾನೂನುಗಳನ್ನು ಈಗ ಹೇಳುತ್ತಿದ್ದಾರೆ. ರೈತರಿಂದ ಸಲ್ಲಿಕೆಯಾಗದಂಥ ದಾಖಲೆಗಳನ್ನು ಕೇಳುತ್ತಿದ್ದಾರೆ. ಈ ರೀತಿಯಾಗಿ ಕೇಳುತ್ತಾ ಕಾಲಹರಣ ಮಾಡುತ್ತಿದ್ದಾರೆ. ಈ ಹಿಂದೆ ಒಪ್ಪಿಕೊಂಡಂತೆ ಉದ್ಯೋಗ ನೀಡಲೇಬೇಕೆಂದು ರೈತರು ಆಗ್ರಹಿಸುತ್ತಿದ್ದಾರೆ.

ಈ ಹಿಂದೆ ಕೆಪಿಸಿಯಿಂದ ವೈಟಿಪಿಎಸ್ ನಿರ್ವಹಣೆ ಮಾಡುತ್ತಿದ್ದರು, ಆದರೆ ಕಾರ್ಮಿಕರು, ಈ ಭಾಗದ ಜನರ ವಿರೋಧದ ನಡುವೆಯೂ ಹೈದ್ರಾಬಾದ್ ಮೂಲದ ಪಾವರ್ ಮೇಕ್ ಕಂಪನಿಗೆ ನಿರ್ವಹಣೆಗಾಗಿ ಗುತ್ತಿಗೆ ನೀಡಲಾಗಿದೆ. ಈಗ ಪಾವರ್ ಮೇಕ್ ಕಂಪನಿಯವರು ಉದ್ಯೋಗ ನೀಡಬೇಕು, ಆದರೆ ನೇರವಾಗಿ  ಪಾವರ್ ಮೇಕ್ ಕಂಪನಿಯವರು ಕೆಲಸ ನೀಡಲು ಆಗುವುದಿಲ್ಲ, ಕೆಪಿಸಿಯೇ ಭೂ ಸಂತ್ರಸ್ತರಿಗೆ ಕೆಲಸ ನೀಡಬೇಕು. ಈ ಕುರಿತು ಜಿಲ್ಲೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಯತ್ನಿಸಬೇಕಾಗಿದೆ.
Published by: MAshok Kumar
First published: March 4, 2021, 7:31 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories