• Home
  • »
  • News
  • »
  • district
  • »
  • ಗದಗ ಜಿಮ್ಸ್ ಕಾಲೇಜಿ​ನಲ್ಲಿ ವಿಷಪೂರಿತ ಆಹಾರ! ಊಟ ಸೇವಿಸಿ ಆಸ್ಪತ್ರೆ ಸೇರಿದ ವೈದ್ಯಕೀಯ ವಿದ್ಯಾರ್ಥಿಗಳು!

ಗದಗ ಜಿಮ್ಸ್ ಕಾಲೇಜಿ​ನಲ್ಲಿ ವಿಷಪೂರಿತ ಆಹಾರ! ಊಟ ಸೇವಿಸಿ ಆಸ್ಪತ್ರೆ ಸೇರಿದ ವೈದ್ಯಕೀಯ ವಿದ್ಯಾರ್ಥಿಗಳು!

ಆಸ್ಪತ್ರೆಗೆ ದಾಖಲಾಗಿರುವ ವಿದ್ಯಾರ್ಥಿಗಳು.

ಆಸ್ಪತ್ರೆಗೆ ದಾಖಲಾಗಿರುವ ವಿದ್ಯಾರ್ಥಿಗಳು.

ಆಗಿರುವ ಸಮಸ್ಯೆ ಸಣ್ಣದಾದರೂ ಸಹ ಅನುಮಾನಗಳು ಹಲವು ರೀತಿಯದ್ದಾಗಿವೆ. ಕ್ಯಾಂಟೀನ್ ಆಹಾರದ ಗುಣಮಟ್ಟ ಪರಿಶೀಲಿಸಿ ಗುಣಮಟ್ಟ ಕಾಯೋ ಜವಾಬ್ದಾರಿ ಹೊತ್ತಿರುವ ಆಡಳಿತ ಮಂಡಳಿಯೇ ಇದಕ್ಕೆಲ್ಲ ಉತ್ತರಿಸಬೇಕಾಗಿದೆ. ಇನ್ನಾದರೂ ಆಡಳಿತ ಮಂಡಳಿ ವಿದ್ಯಾರ್ಥಿಗಳ ಆರೋಗ್ಯದತ್ತ ಗಮನ ಹರಿಸಿ ವಿದ್ಯಾರ್ಥಿಗಳ ಸುರಕ್ಷತೆಗೆ ಮುತುವರ್ಜಿ ವಹಿಸಬೇಕಾಗಿದೆ.

ಮುಂದೆ ಓದಿ ...
  • Share this:

ಗದಗ: ಜಿಮ್ಸ್ ಕಾಲೇಜಿಗೆ ಬೇರೆ ರಾಜ್ಯ ಹಾಗೂ ಜಿಲ್ಲೆಗಳಿಂದ ಮೆಡಿಕಲ್ ಓದೋಕೆ ವಿದ್ಯಾರ್ಥಿಗಳು ಬಂದಿದ್ದಾರೆ. ಅವರೆಲ್ಲಾ ಕಾಲೇಜಿನ ಹಾಸ್ಟೆಲ್​ನಲ್ಲಿ ತಂಗಿದ್ದಾರೆ.  ಎಂದಿನಂತೆ ನೆನ್ನೆ ಕಾಲೇಜಿ ಕ್ಯಾಂಟೀನ್​ನಲ್ಲಿ ಆಹಾರ ಸೇವಿಸಿದ್ದ 14 ವೈದ್ಯಕೀಯ ವಿದ್ಯಾರ್ಥಿಗಳು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಬುಧವಾರ ರಾತ್ರಿ ನಡೆದಿದೆ.


ಜಿಮ್ಸ್ ಕಾಲೇಜಿನಲ್ಲಿರುವ ಶಾರದಾ ಕ್ಯಾಂಟಿನ್‌ನಲ್ಲಿ ವಿದ್ಯಾರ್ಥಿಗಳಿ ಅನ್ನ- ಸಾಂಬಾರ್ ಸೇವಿಸಿದ್ದಾರೆ. ಊಟವಾದ ಬಳಿಕ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ. ವಿಷಪೂರಿತ ಆಹಾರ ಸೇವಿಸಿದ ಪರಿಣಾಮವಾಗಿ ವಿದ್ಯಾರ್ಥಿಗಳಿಗೆ ವಾಂತಿ- ಬೇದಿಯಂತಹ ಲಕ್ಷಣ ಕಾಣಿಸಿಕೊಂಡು ಅಸ್ವಸ್ಥರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳನ್ನು ಜಿಮ್ಸ್‌ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈಗಾಗಲೇ ಮೂವರು ಎಂಬಿಬಿಎಸ್ ವಿದ್ಯಾರ್ಥಿಗಳು ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇನ್ನು ತೀವ್ರವಾಗಿ ಅಸ್ವಸ್ಥಗೊಂಡಿರುವ 11 ಜನ ಬಿಎಸ್‌ಸಿ ನರ್ಸಿಂಗ್ ವಿದ್ಯಾರ್ಥಿಗಳು ಜಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು ಆಗಮಿಸಿ ತನಿಖೆ ಕೈಗೊಂಡಿದ್ದಾರೆ. ಇತ್ತ ಆಹಾರದ ಕಳಪೆ ಗುಣಮಟ್ಟವೇ ಈ‌ ಸಮಸ್ಯೆಗೆ ಕಾರಣವಾಗಿದ್ದು ನಮಗೇನಾದರೂ ಹೆಚ್ಚು ಕಡಿಮೆಯಾದರೆ ಯಾರು ಜವಾಬ್ದಾರಿ ಅಂತ ವಿದ್ಯಾರ್ಥಿಗಳು ಪ್ರಶ್ನಿಸಿದ್ದಾರೆ.


ಇದನ್ನು ಓದಿ: ಅಖಿಲ ಭಾರತೀಯ ಪರಿಷತ್ ಸಭೆ ಉದ್ಘಾಟನೆ, ಆರೆಸ್ಸೆಸ್ ಮುಖಂಡರಾದ ಮೋಹನ್ ಭಾಗವತ್, ಸುರೇಶ್ ಭಯ್ಯ ಜೋಷಿ ಭಾಗಿ


ಇನ್ನು ಆಹಾರದ ಗುಣಮಟ್ಟ ಸರಿ ಇಲ್ಲವೆಂದಾದರೆ ವಿಷಪೂರಿತ ಆಹಾರವಾಗಿದ್ದು ಹೇಗೆ ಅನ್ನೋ ಪ್ರಶ್ನೆ ಸಹ ಮೂಡಿದೆ. ಕ್ಯಾಂಟೀಈನ್ ಸರ್ವಿಸ್ ಟೆಂಡರ್ ತೆಗೆದುಕೊಂಡವರನ್ನು ಈಗಾಗಲೇ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸ್ತಿದ್ದಾರೆ. ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳ ಊಟದ ವ್ಯವಸ್ಥೆಗೆಂದೇ ಕಾಲೇಜಿನ ಆಡಳಿತ ಮಂಡಳಿ ಕೋಟಿಗಟ್ಟಲೆ ಮೊತ್ತ ವ್ಯಯಿಸುತ್ತಿದೆ. ಹೀಗಿದ್ದೂ ಇದೀಗ ದೀಢೀರನೆ ವಿದ್ಯಾರ್ಥಿಗಳ ಹೊಟ್ಟೆಗೆ ವಿಷಪೂರಿತ ಆಹಾರ ಸೇರಿದ್ದಾದ್ರೂ ಹೇಗೆ ಅನ್ನೋ ಅನುಮಾನ ಕಾಡತೊಡಗಿದೆ. ರಾತ್ರಿ ಊಟ ಮಾಡಿದ ಚಪಾತಿ, ಪಲ್ಯ ಸರಿ ಇದ್ದಿಲ್ಲ‌ ಅಂತ ಸಬೂಬಿನ ಉತ್ತರ ಹೇಳೋದಾದ್ರೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ವಿದ್ಯಾರ್ಥಿಗಳಿಗೆ ತೊಂದರೆ ಆಗುಬಹುದಾ‌‌‌ ಅನ್ನೋದು ಸಹ ಪ್ರಶ್ನೆಯಾಗಿದೆ. ಇನ್ನು ಜೀಮ್ಸ್ ಆವರಣದಲ್ಲಿರೋ ಹಣ್ಣು ಹಂಪಲು ಮಳಿಗೆಗಳಲ್ಲಿ ಎಗ್ ರೈಸ್ ನಂತಹ ಊಟ ನೀಡುತ್ತಿದ್ದು ರೋಗಿಗಳಿಗೆ ಉತ್ತಮವಲ್ಲದ ಆಹಾರ‌ ನೀಡುವ ಬಗ್ಗೆ ದೂರುಗಳು ಸಹ ಕೇಳಿ ಬಂದಿವೆ. ಆದರೆ ಆಡಳಿತ ಮಂಡಳಿ ಮಾತ್ರ ಇದಾವುದಕ್ಕೂ ತಲೆ ಕೆಡಿಸಿಕೊಳ್ತಿಲ್ಲ. ಹೀಗಾದ್ರೆ ನಾವು ಇಲ್ಲಿ ವ್ಯಾಸಂಗ ಮಾಡೋದು ಹೇಗೆ? ನಮ್ಮ ಪಾಲಕರಿಗೆ ನಾವೆಲ್ಲ ಏನಂತ ಹೇಳೋಣ ಎಂಬುದು ವಿದ್ಯಾರ್ಥಿಗಳ ಅಳಲಾಗಿದೆ. ವೈದ್ಯಕೀಯ ಕಾಲೇಜಿನಲ್ಲಿಯೇ ಊಟದ ಸಮಸ್ಯೆಯಿಂದಾಗಿ ವೈದ್ಯಕೀಯ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವುದು ಸೋಜಿಗದ ವಿಷಯವೇ ಸರಿ.


ಒಟ್ಟಾರೆ ಆಗಿರುವ ಸಮಸ್ಯೆ ಸಣ್ಣದಾದರೂ ಸಹ ಅನುಮಾನಗಳು ಹಲವು ರೀತಿಯದ್ದಾಗಿವೆ. ಕ್ಯಾಂಟೀನ್ ಆಹಾರದ ಗುಣಮಟ್ಟ ಪರಿಶೀಲಿಸಿ ಗುಣಮಟ್ಟ ಕಾಯೋ ಜವಾಬ್ದಾರಿ ಹೊತ್ತಿರುವ ಆಡಳಿತ ಮಂಡಳಿಯೇ ಇದಕ್ಕೆಲ್ಲ ಉತ್ತರಿಸಬೇಕಾಗಿದೆ. ಇನ್ನಾದರೂ ಆಡಳಿತ ಮಂಡಳಿ ವಿದ್ಯಾರ್ಥಿಗಳ ಆರೋಗ್ಯದತ್ತ ಗಮನ ಹರಿಸಿ ವಿದ್ಯಾರ್ಥಿಗಳ ಸುರಕ್ಷತೆಗೆ ಮುತುವರ್ಜಿ ವಹಿಸಬೇಕಾಗಿದೆ.


ವರದಿ: ಸಂತೋಷ ಕೊಣ್ಣೂರ

Published by:HR Ramesh
First published: