ಸಕಲ ಮುನ್ನೆಚ್ಚರಿಕೆಗಳೊಂದಿಗೆ ಇಂದಿನಿಂದ ಘಾಟಿ ಸುಬ್ರಹ್ಮಣ್ಯ ದೇವರ ದರ್ಶನಕ್ಕೆ ಅವಕಾಶ

ಭಕ್ತರಿಗೆ ದೇವರ ದರ್ಶನಕ್ಕೆ ಮಾತ್ರ ಅವಕಾಶವಿದ್ದು, ಸೇವೆಗಳಿಗೆ ಅವಕಾಶವಿರುವುದಿಲ್ಲ. ಹಿರಿಯ ನಾಗರೀಕರು ಹಾಗೂ ಪುಟ್ಟ ಮಕ್ಕಳು, ಗರ್ಭಿಣಿಯರು ಮನೆಯಲ್ಲೇ ಇರಬೇಕು ಎಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಕೋರಿದ್ದಾರೆ.

ಘಾಟಿ ಸುಬ್ರಹ್ಮಣ್ಯ ದೇವಸ್ಥಾದದ ದೇವರ ಮೂರ್ತಿ

ಘಾಟಿ ಸುಬ್ರಹ್ಮಣ್ಯ ದೇವಸ್ಥಾದದ ದೇವರ ಮೂರ್ತಿ

  • Share this:
ದೊಡ್ಡಬಳ್ಳಾಪುರ(ಜೂನ್ 08): ತಾಲೂಕಿನ ಘಾಟಿ ಸುಬ್ರಹ್ಮಣ್ಯ ದೇವರ ದರ್ಶನಕ್ಕೆ ಇಂದಿನಿಂದ ಷರತ್ತಿಗೆ ಒಳಪಟ್ಟು ತೆರೆಯಲು ಅನುಮತಿ ನೀಡಲಾಗಿದೆ. ಅದರಂತೆ, ದೇವಾಲಯದ ಪ್ರವೇಶದ್ವಾರ ಹಾಗೂ ಆವರಣದಲ್ಲಿ ಸ್ವಚ್ಚತೆ  ಕಾಪಾಡಲು ಕ್ರಮ ವಹಿಸಲಾಗಿದೆ. ಭಕ್ತಾದಿಗಳ ದೇಹದ ಉಷ್ಣತೆ ತಪಾಸಣೆಗಾಗಿ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಹಾಗೂ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ. ದೇವಾಲಯದ ಶೌಚಾಲಯವನ್ನು ಆಗ್ಗಿಂದಾಗ್ಗೆ ಸ್ವಚ್ಚಗೊಳಿಸಲು ಕ್ರಮವಹಿಸಲಾಗಿದೆ.

ದೇವಾಲಯದ ಆವರಣ ಪ್ರವೇಶಿಸುವ ಭಕ್ತಾದಿಗಳು ಹಾಗೂ ದೇವಾಲಯ ಸಿಬ್ಬಂದಿ ಅವರವರ ಮೊಬೈಲ್​ನಲ್ಲಿ ಆರೋಗ್ಯ ಸೇತು ಆ್ಯಪ್ ಅನ್ನು ಹೊಂದಿರುವುದು ಕಡ್ಡಾಯ. ಭಕ್ತರು ಪಾದರಕ್ಷೆಗಳನ್ನು ಬಂದಿರುವ ವಾಹನದಲ್ಲೇ ಅಥವಾ ಪ್ರತ್ಯೇಕವಾಗಿ ಇಡುವ ವ್ಯವಸ್ಥೆ ಮಾಡಿಕೊಳ್ಳಬೇಕು. ಸರತಿ ಸಾಲಿನಲ್ಲಿ ಆರು ಅಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಪ್ರವೇಶ ಹಾಗೂ ನಿರ್ಗಮನಕ್ಕೆ ಪ್ರತ್ಯೇಕ ವ್ಯವಸ್ಥೆ ಇರಬೇಕು. ಮಾಸ್ಕ್ ಧರಿಸುವ ಜನರಿಗೆ ಮಾತ್ರ ದೇವಾಲಯಕ್ಕೆ ಪ್ರವೇಶ. ಇವಿಷ್ಟೂ ನಿಯಮಗಳನ್ನ ಚಾಚೂಚಪ್ಪದೆ ಪಾಲಿಸುವಂತೆ ಅಪ್ಪಣೆ ಮಾಡಲಾಗಿದೆ.

ಇದನ್ನೂ ಓದಿ: ಕತ್ತಿ, ಕೋರೆ, ಶೆಟ್ಟಿ ಬಿಟ್ಟು ಕಡಾಡಿ, ಗಸ್ತಿಗೆ ಟಿಕೆಟ್ ಕೊಟ್ಟ ಬಿಜೆಪಿ ಹೈಕಮಾಂಡ್​ನ ಮರ್ಮವೇನು?

ದೇವಾಲಯ ಪ್ರವೇಶಿಸುವ ಭಕ್ತಾದಿಗಳು ವಿಗ್ರಹಗಳು ಹಾಗೂ ಪವಿತ್ರ ಗ್ರಂಥಗಳನ್ನು ಮುಟ್ಟುವುದನ್ನು  ನಿಷೇಧಿಸಲಾಗಿದೆ. ಧಾರ್ಮಿಕ ಸಭೆ, ಸಮಾರಂಭಗಳು, ಜಾತ್ರೆಗಳು, ಉತ್ಸವಗಳನ್ನು ಆಯೋಜಿಸುವುದನ್ನು ಹಾಗೂ ಪರಸ್ಪರ ಸಂಪರ್ಕಿಸುವುದನ್ನು ನಿಷೇಧಿಸಿದೆ.

ಭಕ್ತರಿಗೆ ದೇವರ ದರ್ಶನಕ್ಕೆ ಮಾತ್ರ ಅವಕಾಶವಿದ್ದು, ಸೇವೆಗಳಿಗೆ ಅವಕಾಶವಿರುವುದಿಲ್ಲ. 65 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ 10 ವರ್ಷ ಕೆಳಗಿನ ಮಕ್ಕಳು ಮತ್ತು ಗರ್ಭಿಣಿಯರು ಆದಷ್ಟು ಮನೆಯಲ್ಲಿಯೇ ಇದ್ದು ಸಹಕರಿಸಬೇಕು. ಅಸ್ವಸ್ಥರು ದೇವಾಲಯದೊಳಗೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಅವರು ಸ್ಪಷ್ಟಪಡಿಸಿದ್ದಾರೆ.

First published: