ಮಲಪ್ರಭಾ ನದಿಯಲ್ಲಿ ತಗ್ಗಿದ ಪ್ರವಾಹ ಭೀತಿ ; ಘಟಪ್ರಭಾ ನದಿ ಪಾತ್ರದಲ್ಲಿ ಮುಂದುವರೆದ ಆತಂಕ..!

ಬೆಳಗಾವಿ ತಾಲೂಕಿನ ಬೇಂಡಿಗೇರಿ ಗ್ರಾಮದ ಬಳಿ 22 ಎಕರೆ ಪ್ರದೇಶದಲ್ಲಿ ಇರುವ ಕೆರೆಯೊಂದು ಒಡೆದಿದೆ. ಇದರಿಂದ 100ಕ್ಕೂ ಎಕರೆ ಜಮೀನುಗಳಿಗೆ ನೀರು ನುಗ್ಗಿದ್ದು, ಸಾಕಷ್ಟು ಪ್ರಮಾಣದಲ್ಲಿ ಹಾನಿ ಸಂಭವಿಸಿದೆ.


Updated:August 9, 2020, 8:00 AM IST
ಮಲಪ್ರಭಾ ನದಿಯಲ್ಲಿ ತಗ್ಗಿದ ಪ್ರವಾಹ ಭೀತಿ ; ಘಟಪ್ರಭಾ ನದಿ ಪಾತ್ರದಲ್ಲಿ ಮುಂದುವರೆದ ಆತಂಕ..!
ಬೆಳೆಗಳಿಗೆ ನೀರು ತುಂಬಿಕೊಂಡಿರುವುದು
  • Share this:
ಬೆಳಗಾವಿ(ಆಗಸ್ಟ್. 9) : ಪಶ್ಚಿಮ ಘಟ್ಟಪ್ರದೇಶದಲ್ಲಿ ಕಳೆದ ಒಂದು ವಾರದಿಂದ ವ್ಯಾಪಕವಾಗಿ ಮಳೆಯಾಗಿದೆ. ಇದರಿಂದ ಮಲಪ್ರಭಾ ನದಿ ಅಪಾಯದ ಮಟ್ಟ ಮೀರಿ ಹರಿದು ಸಾಕಷ್ಟು ಪ್ರಮಾಣದಲ್ಲಿ ಬೆಳೆ ಹಾನಿ ಸಂಭವಿಸಿದೆ. ಇದೀಗ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಪ್ರವಾಹ ಭೀತಿ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಆದರೆ, ಘಟಪ್ರಭಾ ನದಿಗೆ ವ್ಯಾಪಕವಾಗಿ ನೀರು ಹರಿದು ಬರುತ್ತಿದ್ದು, ಡ್ಯಾಂ ನಿಂದ ಯಾವುದೇ ಕ್ಷಣದಲ್ಲಿ ನೀರು ಹೊರ ಬಿಡುವ ಸಾಧ್ಯತೆ ಇದೆ. ಇದರಿಂದ ಡ್ಯಾಂ ಕೆಳಭಾಗದ ಜನರಿಗೆ ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಬೆಳಗಾವಿ ಜಿಲ್ಲಾಡಳಿತ ಸೂಚನೆ ನೀಡಿದೆ.

ಮಲಪ್ರಭಾ ನದಿ ಮೇಲ್ಭಾಗದಲ್ಲಿ ಮಳೆಯ ಪ್ರಮಾಣ ನಿನ್ನೆಯಿಂದ ಕಡಿಮೆಯಾಗಿದೆ. ಹೀಗಾಗಿ ಖಾನಾಪುರ ತಾಲೂಕಿನಲ್ಲಿ ಜಾಲವೃತವಾಗಿದ್ದ ಸೇತುವೆಗಳು ಓಪನ್ ಆಗಿವೆ. ಅಷ್ಟೇ ಅಲ್ಲ ಬಹುತೇಕ ಗ್ರಾಮಗಳ ಸಂಪರ್ಕ ಮತ್ತೆ ಆರಂಭವಾಗಿದೆ. ಆದರೇ ಮಳೆಯಿಂದ ಭತ್ತ, ಕಬ್ಬು ಹಾಗೂ ಮೆಕ್ಕೆಜೋಳ ಬೆಳೆಗಳು ಸಾಕಷ್ಟು ಪ್ರಮಾಣದಲ್ಲಿ ಹಾನಿ ಸಂಭವಿಸಿದೆ. ಇನ್ನೂ ಮಲಪ್ರಭಾ ಜಲಾಶಯ ಬಹುತೇಕ ಭರ್ತಿಯಾಗಿದ್ದು, ಜಲಾಶಯದಿಂದ 4 ಸಾವಿರ ಕ್ಯೂಸೆಕ್ ನೀರು ನದಿಗೆ ಬಿಡಲಾಗುತ್ತಿದೆ. ರಾಮದುರ್ಗ- ಸುರೇಬಾನ್ ಸಂಪರ್ಕಿಸುವ ಹಳೆಯ ಸೇತುವೆಯೊಂದು ಇದರಿಂದ ಮುಳುಗಡೆಯಾಗಿದೆ.

ಬೆಳಗಾವಿ ಬಳಿ ಹರಿಯುವ ಬಳ್ಳಾರಿ ನಾಲಾದಲ್ಲಿಯೂ ನೀರಿಯ ಪ್ರಮಾಣದಲ್ಲಿ ಒಂದೇ ದಿನಲ್ಲಿ ತೀವ್ರವಾಗಿ ಕಡಿಮೆಯಾಗಿದೆ. ಮುಳುಗಡೆಯಾಗಿದ್ದ ಕಬ್ಬು, ಭತ್ತ ಬೆಳಗಳಿಗೆ ಹಾನಿ ಸಂಭವಿಸಿದೆ. ಇದೀಗ ರೈತರು ತಮ್ಮ ಜಮೀನುಗಳಿಗೆ ಭೇಟಿ ನೀಡಿ ಬೆಳೆ ಹಾನಿಯ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : ಕೃಷ್ಣಾ ನದಿಯಲ್ಲಿ ಪ್ರವಾಹ ಬಂದರೂ 230 ಕುರಿ, ಶ್ವಾನ ಬಿಟ್ಟು ಬಾರದೆ ನಡುಗಡ್ಡೆಯಲ್ಲಿ ಸಿಲುಕಿದ ಕುರಿಗಾಯಿ!

ಮಹಾರಾಷ್ಟ್ರ ಪಶ್ಚಿಮ ಘಟ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆ ಮುಂದುವರೆದಿದ್ದು, ಘಟಪ್ರಭಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಹೀಗಾಗಿ ಹಿಡಕಲ್ ಜಲಾಶಯ ಬಹುತೇಕ ಶೇ. 90ರಷ್ಟು ಭರ್ತಿಯಾಗಿದೆ. ಜಲಾಶಯದಿಂದ ಯಾವುದೇ ಸಂದರ್ಭದಲ್ಲಿ ನೀರು ಬಿಡುಗಡೆ ಮಾಡಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ. ನದಿ ಅಚ್ಚುಕಟ್ಟು ಪ್ರದೇಶದಲ್ಲಿ ಇರೋ ಸಾರ್ವಜನಿಕರು ಎಚ್ಚರಿಕೆ ಇರುವಂತೆ ಸೂಚನೆ ನೀಡಿದ್ದಾರೆ.

ಬೆಳಗಾವಿ ತಾಲೂಕಿನ ಬೇಂಡಿಗೇರಿ ಗ್ರಾಮದ ಬಳಿ 22 ಎಕರೆ ಪ್ರದೇಶದಲ್ಲಿ ಇರುವ ಕೆರೆಯೊಂದು ಒಡೆದಿದೆ. ಇದರಿಂದ 100ಕ್ಕೂ ಎಕರೆ ಜಮೀನುಗಳಿಗೆ ನೀರು ನುಗ್ಗಿದ್ದು, ಸಾಕಷ್ಟು ಪ್ರಮಾಣದಲ್ಲಿ ಹಾನಿ ಸಂಭವಿಸಿದೆ. ಈಗಾಗಲೇ ಮಳೆಯಿಂದ ಜನ ತತ್ತರಿಸಿದ್ದು, ಕೆರೆ ಒಡೆದು ಗಾಯದ ಮೇಲೆ ಬರೆ ಎಳೆದಿದೆ. ಕೆರೆಯಿಂದ ಬೇಸಿಗೆ ಸಂದರ್ಭದಲ್ಲಿ ಜನರಿಗೆ ಸಾಕಷ್ಟು ಪ್ರಮಾಣದಲ್ಲಿ ಅನಕೂಲವಾಗುತ್ತಿತ್ತು. ಆದರೇ ಕೆರೆ ಒಡೆದು ನೀರು ಪೋಲಾಗಿದ್ದು, ತಕ್ಷಣ ದುರಸ್ಥಿ ಮಾಡಬೇಕು ಎಂದು ಗ್ರಾಮಸ್ಥರ ಆಗ್ರಹವಾಗಿದೆ.
Published by: G Hareeshkumar
First published: August 9, 2020, 7:53 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading