ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ಸೇರಿದಂತೆ ಕೊಪ್ಪಳದ 69 ಮಂದಿಗೆ ಕೊರೋನಾ ಸೋಂಕು

ಜುಲೈ 17ರಂದು ಸ್ವ್ಯಾಬ್ ಟೆಸ್ಟ್ ಕೊಟ್ಟಿದ್ದ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿಯವರಿಗೆ ಕೊರೋನಾ ವೈರಸ್ ಬಂದಿರುವುದು ಜುಲೈ 19ರಂದು ದೃಢಪಟ್ಟಿದೆ. ಇವರೂ ಸೇರಿ ನಿನ್ನೆ ಕೊಪ್ಪಳದ 69 ಮಂದಿಗೆ ಸೋಂಕು ಇರುವುದು ಖಚಿತಪಟ್ಟಿದೆ.

ಕೊಪ್ಪಳ ಜಿಲ್ಲಾ ಪಂಚಾಯತ್​ ಕಚೇರಿ

ಕೊಪ್ಪಳ ಜಿಲ್ಲಾ ಪಂಚಾಯತ್​ ಕಚೇರಿ

  • Share this:
ಕೊಪ್ಪಳ: ಕೊರೋನಾ ಸೋಂಕು ತಗುಲುತ್ತಿರುವ ಜನಪ್ರತಿನಿಧಿಗಳ ಸಂಖ್ಯೆ ಏರುತ್ತಿದೆ. ಈಗ ಈ ಪಟ್ಟಿಗೆ ಕೊಪ್ಪಳ ಜಿಲ್ಲೆಯ ಶಾಸಕರ ಹೆಸರು ಸೇರಿಕೊಂಡಿದೆ. ಗಂಗಾವತಿ ಕ್ಷೇತ್ರದ ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಕೊಪ್ಪಳದಲ್ಲಿ ನಿನ್ನೆ ಭಾನುವಾರ ಪರಣ್ಣ ಮುನವಳ್ಳಿ ಸೇರಿದಂತೆ 69 ಜನರಿಗೆ ಕೋವಿಡ್-19 ಸೋಂಕು ಇರುವುದು ಖಚಿತವಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಮತ್ತೊಮ್ಮೆ ಗರಿಷ್ಠ ಸಂಖ್ಯೆಯ ಕೋವಿಡ್-19 ಪ್ರಕರಣಗಳು ದೃಢಪಟ್ಟಿವೆ.

ರವಿವಾರ 46 ಜನರು ಸೋಂಕಿನಿಂದ ಮುಕ್ತಿ ಪಡೆದು ಗುಣಮುಖರಾಗಿದ್ದಾರೆ. ಒಟ್ಟಾರೆ ಜಿಲ್ಲೆಯಲ್ಲಿ ದಾಖಲಾದ 515 ಕೇಸ್‌ಗಳ ಪೈಕಿ 328 ಜನರು ಗುಣಮುಖರಾದಂತಾಗಿದೆ. ಈವರೆಗೆ 12 ಜನರು ಮೃತಪಟ್ಟಿದ್ದು 175 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ: ಬಾಲಕಿಗೆ ಕೊರೋನಾ ನೆಗಿಟಿವ್​​ ಬಂದರೂ ಏರಿಯಾ ಸೀಲ್​ಡೌನ್​​ ತೆರವುಗೊಳಿಸದ ಕೊಡಗು ಜಿಲ್ಲಾಡಳಿತ: ಜನರ ಆಕ್ರೋಶ ​

ಜುಲೈ 17ರಂದು ಸ್ವ್ಯಾಬ್ ಟೆಸ್ಟ್ ಕೊಟ್ಟಿದ್ದ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿಯವರಿಗೆ ಕೊರೋನಾ ವೈರಸ್ ಬಂದಿರುವುದು ಜುಲೈ 19ರಂದು ದೃಢಪಟ್ಟಿದೆ. ಜುಲೈ 16ರಂದು ಕೊರೋನಾ ನಿಯಂತ್ರಣ ಕುರಿತ ಜಿಲ್ಲಾಧಿಕಾರಿಗಳು ಆಹ್ವಾನಿಸಿದ್ದ ಸಭೆಗೆ ಜಿಲ್ಲೆಯ ಎಲ್ಲ ಶಾಸಕರು ಭಾಗವಹಿಸಿದ್ದರು. ಬಿಜೆಪಿ ಶಾಸಕ ಪರಣ್ಣ ಮುನವಳ್ಳಿಯವರ ಎಡ ಹಾಗೂ ಬಲಭಾಗಕ್ಕೆ ಕಾಂಗ್ರೆಸ್ ಶಾಸಕರಾದ ರಾಘವೇಂದ್ರ ಹಿಟ್ನಾಳ ಹಾಗೂ ಅಮರೇಗೌಡ ಬಯ್ಯಾಪುರ ಆಸೀನರಾಗಿದ್ದರು. ಇವರಿಬ್ಬರು ಪರಣ್ಣ ಮುನವಳ್ಳಿಯವರ ಪ್ರೈಮರಿ ಕಾಂಟ್ಯಾಕ್ಟ್ ಲಿಸ್ಟ್‌ನಲ್ಲಿ ಬರುತ್ತಾರೆ. ಇನ್ನುಳಿದ ಜನಪ್ರತಿನಿಧಿಗಳು, ಅಧಿಕಾರಿ ವರ್ಗ ಶಾಸಕ‌ ಪರಣ್ಣ ಮುನವಳ್ಳಿಯವರಿಂದ ಒಂದು ಮೀಟರ್‌ಗೂ ಅಧಿಕ ದೂರದಲ್ಲಿದ್ದರು. ಮೇಲಾಗಿ ಸಭೆಯಲ್ಲಿದ್ದ ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಂಡಿದ್ದೆವು. ಮಾಸ್ಕ್ ಹಾಕಿಕೊಂಡು, ಸ್ಯಾನಿಟೈಸರ್ ಬಳಸಿದ್ದೇವೆ. ಯಾರೂ, ಯಾರಿಗೂ ಕೈ ಕುಲುಕಿಲ್ಲ ಎಂದು ಜಿಲ್ಲಾಧಿಕಾರಿ ಎಸ್. ವಿಕಾಸ್ ಕಿಶೋರ್ ತಿಳಿಸಿದ್ದಾರೆ.

ಇದನ್ನೂ ಓದಿ: ಕೊರೋನಾ ರೋಗಿಗಳಿಗೆ ಬೆಡ್ ಕೊಡದೆ ಸತಾಯಿಸುತ್ತಿರುವ ಖಾಸಗಿ ಆಸ್ಪತ್ರೆಗಳ ಮೇಲೆ ಸರ್ಕಾರದ ಕಣ್ಗಾವಲು

ಇನ್ನು, ರಾಜ್ಯದಲ್ಲಿ ಭಾನುವಾರ 4 ಸಾವಿರಕ್ಕೂ ಹೆಚ್ಚು ಮಂದಿಗೆ ಸೋಂಕಿತರು ಪತ್ತೆಯಾಗಿದ್ದಾರೆ. ಬೆಂಗಳೂರು ನಗರವೊಂದರಲ್ಲೇ 2 ಸಾವಿರಕ್ಕೂ ಹೆಚ್ಚು ಪ್ರಕರಣಗಳು ನಿನ್ನೆ ಬಳಕಿಗೆ ಬಂದಿವೆ. ಬೆಂಗಳೂರು ಬಿಟ್ಟು ಇತರ 7 ಜಿಲ್ಲೆಗಳಲ್ಲಿ ನೂರಕ್ಕೂ ಹೆಚ್ಚು ಪಾಸಿಟಿವ್ ಕೇಸ್​ಗಳು ದೃಢಪಟ್ಟಿವೆ. ರಾಜ್ಯದಲ್ಲಿ ಈವರೆಗೆ ದಾಖಲಾದ ಪ್ರಕರಣಗಳ ಸಂಖ್ಯೆ 63 ಸಾವಿರ ದಾಟಿ ಹೋಗಿದೆ. ಸಾವಿನ ಸಂಖ್ಯೆ 1,331 ತಲುಪಿದೆ. ಸಕ್ರಿಯ ಪ್ರಕರಣಗಳು 40 ಸಾವಿರದ ಗಡಿ ಸಮೀಪಿಸಿವೆ.
Published by:Vijayasarthy SN
First published: