ನಾಳೆಯಿಂದ ಗಂಗಾವತಿ-ಶ್ರೀರಾಮನಗರ ಹತ್ತು ದಿನ ಲಾಕ್‌ಡೌನ್; ಸಚಿವ ಬಿ.ಸಿ.ಪಾಟೀಲ್

ರಾಜ್ಯದಲ್ಲಿ ದಿನೇ ದಿನೇ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿವೆ. ಕೊಪ್ಪಳ ಜಿಲ್ಲೆಯಲ್ಲೂ ಪ್ರಕರಣಗಳು ಜಾಸ್ತಿ ಆಗ್ತಿವೆ. ಕಾಯಿಲೆ ಯಾರನ್ನೂ ಬಿಡಲ್ಲ. ಮಾಧ್ಯಮದವರನ್ನೂ, ಜನಪ್ರತಿನಿಧಿಗಳನ್ನೂ ಬಿಡಲ್ಲ. ಕಾಯಿಲೆ ನಿಯಂತ್ರಣದ ನಿಟ್ಟಿನಲ್ಲಿ ಅಧಿಕಾರಿಗಳ ಸಭೆ ನಡೆಸುತ್ತೇನೆ. ಕ್ವಾರಂಟೈನ್ ಸೆಂಟರ್, ಆಸ್ಪತ್ರೆ, ಚಿಕಿತ್ಸೆ ಕುರಿತ ಸಮಸ್ಯೆಗಳಿದ್ದರೆ ಪರಿಹರಿಸುವ ಕುರಿತು ಸಮಾಲೋಚನೆ ನಡೆಸಲಾಗುವುದು ಎಂದರು.

news18-kannada
Updated:July 20, 2020, 9:53 PM IST
ನಾಳೆಯಿಂದ ಗಂಗಾವತಿ-ಶ್ರೀರಾಮನಗರ ಹತ್ತು ದಿನ ಲಾಕ್‌ಡೌನ್; ಸಚಿವ ಬಿ.ಸಿ.ಪಾಟೀಲ್
ಬಿ.ಸಿ. ಪಾಟೀಲ್.
  • Share this:
ಕೊಪ್ಪಳ: ಕೊಪ್ಪಳ ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗಿ ಗಂಗಾವತಿ ನಗರ ಹಾಗೂ ಶ್ರೀರಾಮನಗರದಲ್ಲಿ ಕಾಣಿಸುತ್ತಿವೆ. ಹಾಗಾಗಿ ಅವುಗಳನ್ನು ಕೊರೋನಾ ಹಾಟ್ ಸ್ಪಾಟ್‌ಗಳೆಂದು ಗುರುತಿಸಿ ಜುಲೈ 21ರ ರಾತ್ರಿ 8ರಿಂದ 10 ದಿನಗಳ ಕಾಲ ಸಂಪೂರ್ಣ ಲಾಕ್‌ಡೌನ್ ಮಾಡಲು‌ ನಿರ್ಧರಿಸಲಾಗಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ ತಿಳಿಸಿದರು.

ಕೊಪ್ಪಳ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಂಗಾವತಿ ಮತ್ತು ಶ್ರೀರಾಮನಗರದಲ್ಲಿ ಅಗತ್ಯ ವಸ್ತುಗಳ ಅಂಗಡಿ ತೆರೆದಿರುತ್ತವೆ. ಬ್ಯಾಂಕ್ ಆರಂಭ ಕುರಿತು ನಾಳೆಯೊಳಗೆ ಜಿಲ್ಲಾಧಿಕಾರಿಗಳು ತಿಳಿಸುತ್ತಾರೆ. ಕೊಪ್ಪಳ ತಾಲೂಕಿನಲ್ಲಿ ಭಾಗ್ಯನಗರ ಹಾಟ್‌ಸ್ಪಾಟ್ ಎಂದು ಗುರುತಿಸಲಾಗಿದ್ದು ಲಾಕ್‌ಡೌನ್ ಮಾಡುವ ಕುರಿತು ಚರ್ಚೆ ನಡೆದಿದೆ. ಆ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದರು.

ತಕ್ಷಣದಿಂದ ಹತ್ತು ಸಾವಿರ ಆಂಟಿಜೆನ್ ಕಿಟ್ ಖರೀದಿಗೆ ಸೂಚನೆ ನೀಡಲಾಗಿದ್ದು, ಇದಕ್ಕೆ 45 ಲಕ್ಷ ರೂಪಾಯಿ ಖರ್ಚಾಗುತ್ತದೆ. ಈಗಿರುವ ಸುಮಾರು 40 ವೆಂಟಿಲೆಟರ್‌ಗಳ ಜೊತೆಗೆ 21 ವೆಂಟಿಲೆಟರ್ ಖರೀದಿಗೆ ಸೂಚಿಸಲಾಗಿದೆ. ಅದಕ್ಕೆ ಸುಮಾರು 91 ಲಕ್ಷ ಖರ್ಚಾಗುತ್ತದೆ. 1,343 ಹೆಲ್ತ್ ಕಿಟ್ ಅಂಗನವಾಡಿ ಕಾರ್ಯಕರ್ತರಿಗೆ ವಿತರಿಸಲು ನಿರ್ಧರಿಸಲಾಗಿದ್ದು, 55 ಲಕ್ಷ ಖರ್ಚಾಗುತ್ತದೆ. ಲ್ಯಾಬ್ ಟೆಕ್ನಿಷಿಯನ್ ಸೇರಿದಂತೆ ಅಗತ್ಯ ವೈದ್ಯಕೀಯ ಸಿಬ್ಬಂದಿಯನ್ನು ತಾತ್ಕಾಲಿಕವಾಗಿ  ಭರ್ತಿ ಮಾಡಲಾಗುವುದು. ಹೆಚ್ಚುವರಿಯಾಗಿ 30 ಮೊಬೈಲ್ ಯುನಿಟ್ ಜಿಲ್ಲಾದ್ಯಂತ ಸಂಚರಿಸಲಿವೆ. ಜಿಲ್ಲೆಯ ಗಡಿಭಾಗಗಳಲ್ಲಿ ಅಂತರ್ ಜಿಲ್ಲಾ ಚೆಕ್‌ಪೋಸ್ಟ್ ಆರಂಭಿಸುತ್ತಿದ್ದೇವೆ ಎಂದು ಅವರು ವಿವರಿಸಿದರು.

ತಂಗಡಗಿಯಂಥ ಸತ್ಯಹರಿಶ್ಚಂದ್ರನನ್ನು ನೋಡೇ ಇಲ್ಲ: ಪಾಟೀಲ ವ್ಯಂಗ್ಯ

ಮಾಜಿ ಸಚಿವ, ಕಾಂಗ್ರೆಸ್‌ನ ಕೊಪ್ಪಳ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿಯಂಥ ಪ್ರಾಮಾಣಿಕ, ಸತ್ಯ ಹರಿಶ್ಚಂದ್ರರಂತಿರುವ ವ್ಯಕ್ತಿಯನ್ನು ನಾನು ಇದುವರೆಗೂ ನೋಡೇ ಇಲ್ಲ. ಅದಕ್ಕೆ ಜನ ಅವರನ್ನು ಎಲ್ಲಿಡಬೇಕೋ ಅಲ್ಲೇ ಇಟ್ಟಿದ್ದಾರೆ ಎಂದು ಸಚಿವ ಬಿ.ಸಿ‌.ಪಾಟೀಲ ವ್ಯಂಗ್ಯವಾಡಿದರು.

ಕಾಮಾಲೆ‌ ಕಣ್ಣಿನವರಿಗೆ ಕಾಣೋದೆಲ್ಲ ಹಳದಿನೇ. ಅವರು ಈ ಹಿಂದೆ ಮಾಡಿದ್ದನ್ನು ಪದೇ ಪದೇ ನಮಗೆ ಅನ್ವಯಿಸಿ ಹೇಳುತ್ತಿದ್ದಾರೆ. ಜನ ಈಗಾಗಲೇ ಅವರಿಗೆ ತಕ್ಕ ಉತ್ತರ ಕೊಟ್ಟು ಅವರ ಸ್ಥಾನ ಏನು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.

ಇದನ್ನು ಓದಿ: ಕೊರೋನಾ ತಂದ ಸಂಕಷ್ಟ; ಬೀದಿಗೆ ಬಿದ್ದ ಕ್ಯಾಬ್ ಚಾಲಕರ ಬದುಕು, ಕಾರಿನಲ್ಲಿ ಮಾಸ್ಕ್, ತರಕಾರಿ ಮಾರಾಟ

ರಾಜ್ಯದಲ್ಲಿ ದಿನೇ ದಿನೇ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿವೆ. ಕೊಪ್ಪಳ ಜಿಲ್ಲೆಯಲ್ಲೂ ಪ್ರಕರಣಗಳು ಜಾಸ್ತಿ ಆಗ್ತಿವೆ. ಕಾಯಿಲೆ ಯಾರನ್ನೂ ಬಿಡಲ್ಲ. ಮಾಧ್ಯಮದವರನ್ನೂ, ಜನಪ್ರತಿನಿಧಿಗಳನ್ನೂ ಬಿಡಲ್ಲ. ಕಾಯಿಲೆ ನಿಯಂತ್ರಣದ ನಿಟ್ಟಿನಲ್ಲಿ ಅಧಿಕಾರಿಗಳ ಸಭೆ ನಡೆಸುತ್ತೇನೆ. ಕ್ವಾರಂಟೈನ್ ಸೆಂಟರ್, ಆಸ್ಪತ್ರೆ, ಚಿಕಿತ್ಸೆ ಕುರಿತ ಸಮಸ್ಯೆಗಳಿದ್ದರೆ ಪರಿಹರಿಸುವ ಕುರಿತು ಸಮಾಲೋಚನೆ ನಡೆಸಲಾಗುವುದು ಎಂದರು.

ಈ ವೇಳೆ ಸಂಸದ ಸಂಗಣ್ಣ ಕರಡಿ, ಶಾಸಕ ಬಸವರಾಜ ದಢೇಸೂಗೂರು, ಬಿಜೆಪಿ ಮುಖಂಡರು ಇದ್ದರು.
Published by: HR Ramesh
First published: July 20, 2020, 9:53 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading