ದೊಡ್ಡಬಳ್ಳಾಪುರ: ಹಾಡಹಗಲೇ ಮನೆಗೆ ನುಗ್ಗಿ 4 ಲಕ್ಷ ರೂ. ನಗದು, 5 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ಕಳ್ಳರು

ಮತ್ತೊಬ್ಬ ಕಳ್ಳ ಮನೆಯ ಬಾಗಿಲು ಹಾಕೊಂಡು ಬೀರು ಹೊಡೆದು 4 ಲಕ್ಷ ನಗದು 5 ಲಕ್ಷ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಮನೆಯ ಹೊರಗಡೆ ಆಡುತ್ತಿದ್ದ ಮಗಳು ನೀರು ಕುಡಿಯಲು ಬಂದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳ್ಳತನ ಚಿತ್ರ

ಕಳ್ಳತನ ಚಿತ್ರ

  • Share this:
ದೊಡ್ಡಬಳ್ಳಾಪುರ(ಆ.27): ಮಟ ಮಟ ಮಧ್ಯಾಹ್ನ  ಮನೆ ಬಾಗಿಲು ಹೊಡೆದು ಒಳ ನುಗ್ಗಿದ ಕಳ್ಳರು ಬೀರುವಿನಲ್ಲಿದ್ದ 4 ಲಕ್ಷ ನಗದು, 5 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಈ ಘಟನೆ ದೊಡ್ಡಬಳ್ಳಾಪುರ ತಾಲೂಕಿನ  ತಿರುಮಗೊಂಡನಹಳ್ಳಿ ಎಂಬಲ್ಲಿ ನಡೆದಿದೆ.

ಗ್ರಾಮದ ರಾಜಣ್ಣ  ಎಂಬುವರ ಮನೆಯಲ್ಲಿ ಕಳ್ಳತನ ಕೃತ್ಯ ನಡೆದಿದೆ. ಮನೆಯ ಗಂಡಸರು ಕೆಲಸ ನಿಮಿತ್ತ  ಹೊರ ಹೊಗಿದ್ದು, ಮನೆಯ ಹೆಂಗಸರು ಬಟ್ಟೆ ಹೊಗೆಯಲು ತೋಟಕ್ಕೆ ಹೋಗಿದ್ದರು. ಮನೆಯಲ್ಲಿ ಯಾರು ಇಲ್ಲದನ್ನ ಗಮನಿಸಿದ ಕಳ್ಳರಿಬ್ಬರು ಮನೆಯ ಬೀಗ ಹೊಡೆದು ಒಳ ನುಗ್ಗಿದ್ದಾರೆ. ಒಬ್ಬ ಮನೆಯ ಹೊರಗೆ ನಿಂತು ಜನರ ಬಗ್ಗೆ ನಿಗಾವಹಿಸಿದ್ದಾನೆ.

ಮತ್ತೊಬ್ಬ ಕಳ್ಳ ಮನೆಯ ಬಾಗಿಲು ಹಾಕೊಂಡು ಬೀರು ಹೊಡೆದು 4 ಲಕ್ಷ ನಗದು 5 ಲಕ್ಷ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಮನೆಯ ಹೊರಗಡೆ ಆಡುತ್ತಿದ್ದ ಮಗಳು ನೀರು ಕುಡಿಯಲು ಬಂದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ದೊಡ್ಡಬಳ್ಳಾಪುರ  ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ  ದಾಖಲಾಗಿದೆ.

ಮಹಿಳೆ ಚಂದ್ರಕಲಾ ‌ಬಟ್ಟೆ ತೊಳೆಯಲು ತೋಟಕ್ಕೆ ತೆರಳಿದ್ದರು. ಮನೆಯ ಯಜಮಾನ ರಾಜಣ್ಣ ಹೊಲದಲ್ಲಿ ಬಿತ್ತನೆ ಬೀಜ ಮತ್ತು ತರಕಾರಿ ಹಣ ಮಂಡಿಯಿಂದ ತರಲು ತೆರಳಿದ್ದರು. ಇದೇ ಸಮಯಕ್ಕಾಗಿ ಹೊಂಚು ಹಾಕಿ ಕಾಯುತ್ತಿದ್ದ ಖತರ್ನಾಕ್ ಕಳ್ಳರು ಮನೆ ಹೊಕ್ಕಿದ್ದಾರೆ. ಊರ ಒಳಗೆ ಆಟ ಆಡುತ್ತಿದ್ದ ಮಗಳು ಮನೆಗೆ ಬಂದು ನೋಡಲು ಮನೆ ಬಾಗಿಲು ತೆರೆದಿದ್ದು, ಒಳಗೆ ಬಟ್ಟೆಗಳು ಚಿಲ್ಲಪಿಲ್ಲಿ ಆಗಿದ್ದನ್ನು ಗಮನಿಸಿ ತೋಟಕ್ಕೆ ಹೋಗಿ ಒಡತಿ ಚಂದ್ರಕಲಾ ಗಮನಕ್ಕೆ ತಂದಿದ್ದಾರೆ.

ಇದನ್ನೂ ಓದಿ: ತಿಂಗಳಿಗೆ 2 ಲಕ್ಷಕ್ಕೂ ಅಧಿಕ ಸಂಪಾದನೆ; ಈತನ ಕಾಲಿಗೆ ಏಕೆ ಅಷ್ಟು ಬೇಡಿಕೆ?

ಮನೆಯೊಡತಿ ಬಂದು ನೋಡಲು ಕೋಣೆ ಒಳಗೆ ಇದ್ದ ಬೀರುವಿನಲ್ಲಿದ್ದ ಒಡವೆ ಮತ್ತು ವ್ಯವಸಾಯದಿಂದ ಬಂದಿದ್ದ ನಾಲ್ಕು ಲಕ್ಷ ಹಣ ಎಗರಿಸಿ ಕಳ್ಳರು ಪರಾರಿ ಆಗಿರುವುದು ಬಳಕಿಗೆ ಬಂದಿದೆ. ತಕ್ಷಣ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರಿಗೆ ಮಾಹಿತಿ ನೀಡಿದ್ದು, ಗ್ರಾಮಾಂತರ ಪಿಎಸ್​​ಐ ಗಜೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಪತ್ತೆಗೆ ಪ್ರತ್ಯೇಕ ತಂಡ ರಚಿಸಿದ್ದು, ಬಂಧನಕ್ಕೆ ಬಲೆ ಬಯಸಿದ್ದಾರೆ. ಹಾಡಹಗಲೇ ನಡೆದ ದರೋಡೆಯಿಂದ ಇಡೀ ಗ್ರಾಮವೆ ಬೆಚ್ಚಿ ಬಿದ್ದಿದೆ.
Published by:Ganesh Nachikethu
First published: