• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ; ವಿಷ ನೀಡಿ ಆಸ್ಪತ್ರೆಗೆ ಸೇರಿಸಿ ಪರಾರಿಯಾದ ಕಾಮುಕರು

ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ; ವಿಷ ನೀಡಿ ಆಸ್ಪತ್ರೆಗೆ ಸೇರಿಸಿ ಪರಾರಿಯಾದ ಕಾಮುಕರು

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

ಚಿಕಿತ್ಸೆ ಫಲಿಸದೆ ಮೇ 23 ರಂದು ಬಾಲಕಿ ಸಾವನ್ನಪ್ಪಿದ್ದು. ಯುವತಿಯ ಮರಣೋತ್ತರ ಪರೀಕ್ಷೆ ಕೇಳಿ ಮೃತಪಟ್ಟ ಬಾಲಕಿಯ ಪಾಲಕರಿಗೆ ಶಾಕ್ ಆಗಿದೆ. ಬಾಲಕಿಯ ಮೇಲೆ ಅತ್ಯಾಚಾರವಾಗಿರುವುದು ದೃಢವಾಗುತ್ತಿದ್ದಂತೆ, ಬಾಲಕಿಯ ತಂದೆ ಗರಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

  • Share this:

ಧಾರವಾಡ : ರಾಜ್ಯದಲ್ಲಿ ಇಂದು ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಫಲಿತಾಂಶ ಬಂದಾಗಿದೆ. ಎಲ್ಲರೂ ತಮ್ಮ ರಿಜಲ್ಟ್ ಗಾಗಿ ಕಾತುರದಿಂ‌ದ ಕಾಯುತ್ತಿದ್ದವರು ಫಲಿತಾಂಶದ ಸಂತಸದಲ್ಲಿದ್ದಾರೆ. ಅದರಂತೆ‌ ಆ ಬಾಲಕಿ ಸಹ ಪರೀಕ್ಷೆಗೆ ಹಾಜರಾಗಿದ್ದರೆ ಆಕೆಯೂ ಉತ್ತಮ ಅಂಕ ಪಡೆಯುತ್ತಿದ್ದರು. ಆದರೆ, ತಾನು ಸಹ ಹೆಚ್ಚಿನ ಅಂಕ ಗಳಿಸಿ ಹೆತ್ತವರಿಗೆ ಕೀರ್ತಿ ತರಬೇಕೆಂದ ಯುವತಿಯ ಮೇಲೆ‌ ಕಾಮುಕರ‌ ಕಣ್ಣು ಬಿದ್ದಿತ್ತು. ಸಾಮೂಹಿಕ ಅತ್ಯಾಚಾರ ನಡೆಸಿದ ಅವರು ಆಕೆಗೆ ವಿಷ ನೀಡಿ ಆಸ್ಪತ್ರೆಗೆ ದಾಖಲು ಮಾಡಿ‌ ಪರಾರಿಯಾದ ಘಟನೆ ಧಾರವಾಡ ಜಿಲ್ಲೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.


ಧಾರವಾಡ ತಾಲೂಕಿನ ಗರಗ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರಲ್ಲಿ 15 ವರ್ಷದ ಬಾಲಕಿಯನ್ನ ಎಳೆದೊಯ್ದು ಇಬ್ಬರು ಕಾಮುಕರು ಅತ್ಯಾಚಾರ ನಡೆಸಿ ನಂತರ ಆಕೆಗೆ ವಿಷ ಕುಡಿಸಿ ಆಸ್ಪತ್ರೆಗೆ ದಾಖಲಿಸುವ ನಾಟಕವಾಡಿದ್ದಾರೆ.


ಎಸ್.ಎಸ್.ಎಲ್.ಸಿ ಪರಿಕ್ಷೆ‌ಗಾಗಿ ಸಿದ್ದತೆ ನಡೆಸಿ ಯುವತಿ ಹೆಚ್ಚಿನ ಅಂಕ ಪಡೆಯಲು ನಿತ್ಯವು ಓದುತ್ತಿದ್ದಳು. ಬಾಲಕಿ ಕುಟುಂಬ ತಮ್ಮ ಜಮೀನಿನಲ್ಲಿರುವ ಮನೆಯಲ್ಲಿ ವಾಸವಿದ್ದರು. ಮೇ 21 ರಂದು ತಮ್ಮದೇ ಗದ್ದೆಯ ಮಾವಿನ ಮರದ‌ ಕೆಳಗೆ ಕುಳಿತು ಆಕೆಯೂ ಓದುತ್ತಿದ್ದಳು. ಈ ವೇಳೆ ಇಬ್ಬರು ಕಾಮುಕರ ಕಣ್ಣು ಈ ಬಾಲಕಿ‌ ಮೇಲೆ‌ ಬಿದ್ದಿದೆ.


15 ವರ್ಷದ ಬಾಲಕಿಯನ್ನು ಕಬ್ಬಿನ ಗದ್ದೆge ಬಲವಂತವಾಗಿ ಎಳೆದೊಯ್ದು ಇಬ್ಬರು ಯುವಕರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಬಳಿಕ ಆಕೆಗೆ ವಿಷ ನೀಡಿದ್ದಾರೆ. ಇವಳು ಬದುಕುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಂಡ ಕಾಮುಕರು ನಂತರ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ ಪರಾರಿಯಾಗಿದ್ದಾರೆ.


ಬಾಲಕಿ ಆಸ್ಪತ್ರೆಗೆ ದಾಖಲಾಗಿರೊ ಬಗ್ಗೆ ಪೋಷಕರಿಗೆ ಮಾಹಿತಿ‌ ನೀಡಲಾಗಿದೆ. ಬಳಿಕ ಆಸ್ಪತ್ರೆಗೆ ಬಂದ ಪಾಲಕರು ತಮ್ಮ‌ ಮಗಳನ್ನು ಬದುಕಿಸಿಕೊಡಿ ಎಂದು ವೈದ್ಯರ ಬಳಿ‌ ಕೇಳಿಕೊಂಡಿದ್ದಾರೆ. ಆದರೆ, ಯುವತಿಗೆ ಹೆಚ್ಚಿನ ಚಿಕಿತ್ಸೆ‌‌ ನೀಡಬೆಂಕೆಂದು‌ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿತ್ತು.


ಇದನ್ನೂ ಓದಿ : Karnataka KSEEB SSLC Result 2020: ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಚಿಕ್ಕಬಳ್ಳಾಪುರ ಫಸ್ಟ್; ಯಾವ ಜಿಲ್ಲೆಗೆ ಎಷ್ಟನೇ ಸ್ಥಾನ?


ಚಿಕಿತ್ಸೆ ಫಲಿಸದೆ ಮೇ 23 ರಂದು ಬಾಲಕಿ ಸಾವನ್ನಪ್ಪಿದ್ದು. ಯುವತಿಯ ಮರಣೋತ್ತರ ಪರೀಕ್ಷೆ ಕೇಳಿ ಮೃತಪಟ್ಟ ಬಾಲಕಿಯ ಪಾಲಕರಿಗೆ ಶಾಕ್ ಆಗಿದೆ. ಬಾಲಕಿಯ ಮೇಲೆ ಅತ್ಯಾಚಾರವಾಗಿರುವುದು ದೃಢವಾಗುತ್ತಿದ್ದಂತೆ, ಬಾಲಕಿಯ ತಂದೆ ಗರಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.


ದೂರು ದಾಖಲಿಕೊಂಡ ಪೊಲೀಸರು ಸದ್ಯ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಇನ್ನೊಬ್ಬ ಕಾಮುಕ ಆರೋಪಿಯ ಹುಡುಕಾಟ ನಡೆಸಿದ್ದಾರೆ. ಹೇಯ ಕೃತ್ಯ ನಡೆಸಿದವರ ವಿರುದ್ದ ಕಠಿಣ ಶಿಕ್ಷೆ ನೀಡಬೇಕು ಎಂದು  ಎಲ್ಲಡೆ ಅಭಿಪ್ರಾಯ ಕೇಳಿಬರುತ್ತಿದೆ. ಆದರೆ, ಸರ್ಕಾರ ಅತ್ಯಾಚಾರಿಗೆ ಕಠಿಣ ಶಿಕ್ಷೆ ನೀಡುತ್ತಾ ಎಂಬುದನ್ನು ಕಾದುನೋಡಬೇಕಿದೆ.

Published by:MAshok Kumar
First published: