ಸಿನಿಮೀಯ ಸ್ಟೈಲ್ನಲ್ಲಿ ದರೋಡೆ; ಮುತ್ತೂಟ್ ಫೈನಾನ್ಸ್ನಲ್ಲಿ ಏಳೂವರೆ ಕೋಟಿ ಮೌಲ್ಯದ ಚಿನ್ನಾಭರಣ ಲೂಟಿ; ಕಳ್ಳರ ಬಂಧನ
ಬೆಂಗಳೂರು ಸಮೀಪದ ಹೊಸೂರಿನ ಬಳಿ ಮುತ್ತೂಟ್ ಫೈನಾನ್ಸ್ ಕಚೇರಿಯಲ್ಲಿ ಶುಕ್ರವಾರ ಬೆಳಗ್ಗೆ ಐವರು ದುಷ್ಕರ್ಮಿಗಳು ಗನ್ ತೋರಿಸಿ ದರೋಡೆ ಮಾಡಿ ಏಳೂವರೆ ಕೋಟಿ ರೂ ಮೌಲ್ಯದ ಚಿನ್ನಾಭರಣವನ್ನು ಲೂಟಿ ಮಾಡಿದ್ದಾರೆ.
ತಮಿಳುನಾಡು: ಅವರು ಆಗಷ್ಟೇ ಬಂದು ಕಚೇರಿ ಪ್ರಾರಂಭಕ್ಕೆ ಸಿದ್ಧತೆಯಲ್ಲಿದ್ದರು. ಅಷ್ಟೊತ್ತಿಗೆ ಹೆಲ್ಮೆಟ್ ಧರಿಸಿದ್ದ ಐವರು ಅಸಾಮಿಗಳು ಆ ಕಚೇರಿಗೆ ಎಂಟ್ರಿ ಕೊಟ್ಟಿದ್ದರು. ನೋಡ ನೋಡುತ್ತಿದ್ದಂತೆ ಕಛೇರಿಯಲ್ಲಿದ್ದ ನಾಲ್ವರನ್ನು ಸುತ್ತುವರೆದ ಐವರು ದುಷ್ಕರ್ಮಿಗಳು ಹಣೆಗೆ ಗನ್ ಇಟ್ಟು ಚಿನ್ನಾಭರಣ ಲಾಕರ್ ಓಪನ್ ಮಾಡಿಸಿದ್ದಾರೆ. ಬಳಿಕ ಕೈ ಕಾಲು ಕಟ್ಟಿ ನಗದು ಜೊತೆ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಇದೇ ವೇಳೆ, ತಮಿಳುನಾಡು ಪೊಲೀಸರು ಆರೋಪಿಗಳನ್ನ ಹಿಡಿಯುವಲ್ಲಿ ಇಂದು ಶನಿವಾರ ಯಶಸ್ವಿಯಾಗಿದ್ದಾರೆ.
ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೋಟ್ಯಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾದ ಈ ಘಟನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆ ಹೊಸೂರು ಸಮೀಪದ ಬಾಗಲೂರು ರಸ್ತೆ ಬಳಿ ಶುಕ್ರವಾರ ಬೆಳಗ್ಗೆ 9:30 ರ ಸುಮಾರಿಗೆ ನಡೆದಿದೆ. ಸುಮಾರು ಏಳೂವರೆ ಕೋಟಿ ಮೌಲ್ಯದ 25 ಕೆ.ಜಿ ಚಿನ್ನಾಭರಣ ಮತ್ತು 96 ಸಾವಿರ ನಗದು ಹಣವನ್ನು ದುಷ್ಕರ್ಮಿಗಳು ದೋಚಿದ್ದರು.
ಮೊದಲೇ ಪ್ಲಾನ್ ಮಾಡಿಕೊಂಡಿದ್ದ ದುಷ್ಕರ್ಮಿಗಳು ತಮ್ಮ ಯೋಜನೆಯಂತೆಯೇ ಗ್ರಾಹಕರಿಲ್ಲದ ಸಮಯ ನೋಡಿ 9:30 ಸುಮಾರಿಗೆ ಹೆಲ್ಮೆಟ್ ಧರಿಸಿ ಮುತ್ತೂಟ್ ಫೈನಾನ್ಸ್ ಕಛೇರಿಗೆ ಎಂಟ್ರಿ ಕೊಟ್ಟಿದ್ದಾರೆ. ಅಲ್ಲಿದ್ದ ಕಚೇರಿ ನಾಲ್ವರು ಸಿಬ್ಬಂದಿ ಮತ್ತು ಓರ್ವ ಗ್ರಾಹಕನನ್ನು ಸುತ್ತುವರೆದು ಹೆಣೆಗೆ ಗನ್ ಇಟ್ಟು ಕೈ ಕಾಲು ಕಟ್ಟಿ ಒಂದು ಮೂಲೆಯಲ್ಲಿ ಕೂಡಿ ಹಾಕಿದ್ದಾರೆ. ಶಾಖೆ ವ್ಯವಸ್ಥಾಪಕನಿಗೆ ಚೆನ್ನಾಗಿ ಥಳಿಸಿ ಲಾಕರ್ ಓಪನ್ ಮಾಡಿಸಿದ ಅಸಾಮಿಗಳು ಮೊದಲೇ ತಂದಿದ್ದ ದೊಡ್ಡ ಲಗೇಜ್ ಬ್ಯಾಗ್ನಲ್ಲಿ ಚಿನ್ನಾಭರಣ ತುಂಬಿಕೊಂಡು ಬೈಕ್ನಲ್ಲಿ ಪರಾರಿಯಾಗಿದ್ದಾರೆ. ಹಣ ಪಡೆಯಲು ಮುತ್ತೂಟ್ ಫೈನಾನ್ಸ್ ಕಚೇರಿಗೆ ಹೋಗಿದ್ದ ವ್ಯಕ್ತಿ ಎಷ್ಟೊತ್ತಾದರೂ ವಾಪಸ್ ಬರದಿರುವುದನ್ನು ಕಂಡು ಆತನ ಮನೆಯವರು ಕಚೇರಿಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಸ್ಥಳೀಯ ಕರುಣಾನಿಧಿ ತಿಳಿಸಿದ್ದಾರೆ.
ಇನ್ನು, ಮುತ್ತೂಟ್ ಫೈನಾನ್ಸ್ ದರೋಡೆ ವಿಚಾರ ತಿಳಿದು ಸ್ಥಳಕ್ಕಾಗಮಿಸಿದ ಗ್ರಾಹಕ ಪಾಲ್ಗುಣನ್ ಮಾತನಾಡಿ, ಕಷ್ಟಪಟ್ಟು ಚಿನ್ನಾಭರಣ ಖರೀದಿಸಿದ್ದು, ಸಂಕಷ್ಟದ ಸಮಯದಲ್ಲಿ ಅಡಮಾನವಿಟ್ಟು ಹಣ ಪಡೆದುಕೊಂಡಿದ್ದೆವು. ಇದೀಗ ಮುತ್ತೂಟ್ ಫೈನಾನ್ಸ್ ಶಾಖೆ ದರೋಡೆಯಾಗಿರುವ ವಿಷಯ ತಿಳಿದು ಇಲ್ಲಿಗೆ ಆಗಮಿಸಿದ್ದೆನೆ. ದಯವಿಟ್ಟು ನಮ್ಮ ಒಡವೆಗಳನ್ನು ಆದಷ್ಟು ಬೇಗ ಪತ್ತೆ ಮಾಡಿಕೊಡಿ ಎಂದು ಪೊಲೀಸ್ ಅಧಿಕಾರಿಗಳ ಬಳಿ ಮನವಿ ಮಾಡಿದ್ದಾರೆ.
ಸದ್ಯ ಘಟನೆ ಹಿನ್ನೆಲೆ ಹೊಸೂರು ನಗರ ಪೊಲೀಸರು ಮುತ್ತೂಟ್ ಫೈನಾನ್ಸ್ ಕಚೇರಿಯ ವ್ಯವಸ್ಥಾಪಕ ಮತ್ತು ಸಿಬ್ಬಂದಿಯನ್ನು ತೀವ್ರ ತನಿಖೆ ನಡೆದರು. ಸಿಸಿ ಕ್ಯಾಮರಾಗಳಲ್ಲಿನ ದೃಶ್ಯಗಳನ್ನು ಪರಿಶೀಲನೆ ನಡೆಸಿದರು. ಬಳಿಕ ಕಾರ್ಯಾಚರಣೆ ನಡೆಸಿ 24 ಗಂಟೆಯೊಳಗೆ ಕಳ್ಳರ ಗ್ಯಾಂಗನ್ನು ತಮಿಳುನಾಡು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ವರದಿ : ಆದೂರು ಚಂದ್ರು
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ