• Home
  • »
  • News
  • »
  • district
  • »
  • Ganesha Temple: ಈ ಗಣಪನಿಗೆ ದೇವಸ್ಥಾನ ಕಟ್ಟೋಕೆ ಆಗಲ್ಲ, ಅದಕ್ಕೆ ಬಯಲಲ್ಲೇ ನಿಂತಿದ್ದಾನೆ ಭಗವಂತ!

Ganesha Temple: ಈ ಗಣಪನಿಗೆ ದೇವಸ್ಥಾನ ಕಟ್ಟೋಕೆ ಆಗಲ್ಲ, ಅದಕ್ಕೆ ಬಯಲಲ್ಲೇ ನಿಂತಿದ್ದಾನೆ ಭಗವಂತ!

ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನ

ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನ

ಎಲ್ಲಾ ಕ್ಷೇತ್ರಗಳಲ್ಲಿ ದೇವರಿಗೆ ಬೆಳ್ಳಿ-ಬಂಗಾರಗಳ ಹರಕೆಯನ್ನು ಸಮರ್ಪಿಸುವುದು ಸಾಮಾನ್ಯವಾಗಿದ್ದರೆ, ಈ ಗಣೇಶನಿಗೆ ನೀಡಬೇಕಾಗಿರುವುದು ಕೇವಲ ಗಂಟೆಯನ್ನಷ್ಟೇ.

  • Share this:

ಈ ಗಣಪನಿಗೆ(Ganesha Temple) ಅಂತಿಂಥ ಗುಡಿ ಸಾಲಲ್ಲ, ಗುಡಿ ಕಟ್ಟಿದರೆ ಅದರ ನಿರ್ಮಾಣ ಒಂದೇ ದಿನದಲ್ಲಾಗಬೇಕು ಹಾಗೂ ಗುಡಿಯ ಎತ್ತರ ಕಾಶಿ ವಿಶ್ವನಾಥನ ಮುಕುಟಕ್ಕೆ ತೋರುವಂತಿರಬೇಕು. ಹೌದು, ಇದು ದಕ್ಷಿಣಕನ್ನಡ(Dakshina Kannada) ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಸೌತಡ್ಕದ ಬಯಲು ಆಲಯದ ಗಣೇಶ ಕ್ಷೇತ್ರದ ವಿಶಿಷ್ಟತೆ. ರಾಜ್ಯದಲ್ಲಿ ಗೋಪುರವಿಲ್ಲದೆ, ಗರ್ಭಗುಡಿಯಿಲ್ಲದೇ ಇರುವ ದೇವಸ್ಥಾನಗಳು ಇರುವುದು ವಿರಳವಾಗಿದ್ದರೆ, ಈ ಕ್ಷೇತ್ರದ ಅಧಿದೇವನಾದ ಗಣಪತಿಗೆ ಪ್ರಕೃತಿಯೇ ಗರ್ಭಗುಡಿ. ಇಲ್ಲಿಗೆ ಬರುವ ಭಕ್ತಾಧಿಗಳು ಹರಕೆ ರೂಪದಲ್ಲಿ ಚಿನ್ನ, ಬೆಳ್ಳಿಯನ್ನು ತರಬೇಕಾಗಿಲ್ಲ, ಮೋದಕ ಪ್ರಿಯನಾದ ಗಣಪನಿಗೆ ಗಂಟೆಗಳೇ ಹರಕೆಯಾಗಿದ್ದು, ಅದೂ ಕೊಡಲಾಗದವನು ಸೌತೆಕಾಯಿಯನ್ನು ಕೊಟ್ಟರೂ ಈ ದೇವ ಪ್ರಸನ್ನನಾಗುತ್ತಾನೆ. 


ಧರ್ಮಸ್ಥಳದಿಂದ(Dharmastala) ಸುಬ್ರಮಣ್ಯಕ್ಕೆ(Sumbrahmanya) ತೆರಳುವಂತಹ ರಸ್ತೆಯ ಮಧ್ಯದಲ್ಲೇ ಇರುವಂತಹ ಕ್ಷೇತ್ರವೇ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನ. ಇತರ ದೇವಸ್ಥಾನಗಳಿಗೆ ಇರುವಂತಹ ಗೋಪುರಗಳು, ಗರ್ಭಗುಡಿಗಳು ಈ ದೇವನಿಗಿಲ್ಲ. ಬಯಲೇ ಇವನ ಆಲಯ, ಪ್ರಕೃತಿಯೇ ಇವನ ಗರ್ಭಗುಡಿ. ಹೌದು ಅನಾದಿ ಕಾಲದಲ್ಲಿ ಈ ಪ್ರದೇಶದಲ್ಲಿ ದನಕಾಯುವ ಗೊಲ್ಲರಿಗೆ ಕಲ್ಲಿನ ರಾಶಿಗಳ ಮಧ್ಯೆ ಗಣಪತಿಯ ವಿಗ್ರಹವೊಂದು ದೊರೆತಿದ್ದು, ಆ ಗೊಲ್ಲರು ಇದನ್ನು ಒಂದು  ಸ್ಥಳದಲ್ಲಲಿ ಪ್ರತಿಷ್ಟಾಪಿಸಿ ನಿತ್ಯ ಪೂಜೆಯನ್ನು ನೆರವೇರಿಸುತ್ತಿದ್ದರಂತೆ. ಗಣಪನಿಗೆ ನೈವೇದ್ಯದ ರೂಪದಲ್ಲಿ ಕೊಡಲು ಈ ಗೊಲ್ಲರಿಗೆ ಯಾವುದೇ ವಿಶೇಷ ವಸ್ತುಗಳು ಸಿಗದ ಪರಿಣಾಮ ಈ ಭಾಗದಲ್ಲಿ ಯಥೇಚ್ಛವಾಗಿ ಬೆಳೆಯುತ್ತಿದ್ದಂತಹ ಸೌತೆಕಾಯಿಯನ್ನೇ ನೈವೇದ್ಯದ ರೂಪದಲ್ಲಿ ನೀಡಿದ್ದರಂತೆ ಈ ಕಾರಣಕ್ಕಾಗಿಯೇ ಈ ಕ್ಷೇತ್ರಕ್ಕೆ ಸೌತಡ್ಕ ಎನ್ನುವ ನಾಮಾಂಕಿತವಾಯಿತು ಎನ್ನುವುದು ಇಲ್ಲಿನ ನಂಬಿಕೆಯಾಗಿದೆ.


ಇದನ್ನೂ ಓದಿ:WhatsApp Chat Migration Tool: ಐಫೋನ್‍ನಿಂದ ಸ್ಯಾಮ್‍ಸಂಗ್ ಮೊಬೈಲ್‍ಗೆ ವಾಟ್ಸ್ಯಾಪ್​ ಚಾಟ್ ವರ್ಗಾವಣೆ ಮಾಡುವುದು ಹೇಗೆ?


ಬಯಲೇ ತನ್ನ ಗುಡಿಯಾಗಿರಬೇಕೆಂಬ ಕಾರಣಕ್ಕಾಗಿಯೋ ಏನೋ ಈ ಕ್ಷೇತ್ರಕ್ಕೆ ಇಂದಿನವರೆಗೂ ಗುಡಿ, ಗೋಪುರವನ್ನು ನಿರ್ಮಿಸುವ ಪ್ರಯತ್ನ ನಡೆದಿಲ್ಲ. ಹಿಂದೆ ಶ್ರೀಮಂತ ಬ್ರಾಹ್ಮಣನೊಬ್ಬನಿಗೆ ಈ ಕ್ಷೇತ್ರಕ್ಕೆ ಗೋಪುರವೊಂದನ್ನು ಕಟ್ಟಿಸಬೇಕೆಂಬ ಇಚ್ಛೆಯುಂಟಾಗಿ ಈ ಸಂಬಂಧ ಎಲ್ಲಾ ತಯಾರಿಯನ್ನೂ ನಡೆಸಿದ್ದರಂತೆ. ಆದರೆ ಒಂದು ರಾತ್ರಿ ಆತನಿಗೆ ಕನಸಿನಲ್ಲಿ ಬಂದ ಗೊಲ್ಲ ಬಾಲಕನೊಬ್ಬ ಕ್ಷೇತ್ರಕ್ಕೆ ಗೋಪುರ ನಿರ್ಮಿಸುವುದಾದರೆ, ಅದನ್ನು ಒಂದೇ ದಿನದಲ್ಲಿ ನಿರ್ಮಿಸಬೇಕು ಹಾಗೂ ಆ ಗೋಪುರವು ಕಾಶಿ ವಿಶ್ವನಾಥನ ಮುಕುಟ ತೋರುವಷ್ಟು ಎತ್ತರವಾಗಿರಬೇಕೆಂಬ ಆಶಯವನ್ನೂ ತೋರಿಸಿದ್ದನಂತೆ. ಈ ಕಾರಣಕ್ಕಾಗಿ ಗೋಪುರ ನಿರ್ಮಿಸುವ ಕಾರ್ಯವನ್ನು ಕೈಬಿಟ್ಟ ಬ್ರಾಹ್ಮಣ ಅನಾದಿ ಕಾಲದಿಂದಲೇ ಇರುವಂತಹ ಬಯಲಿನಲ್ಲೇ ಗಣೇಶನ ಪೂಜೆಗಳನ್ನು ನಡೆಸುವ ತೀರ್ಮಾನಕ್ಕೆ ಬದ್ಧನಾದನು ಎನ್ನುವ ಪ್ರತೀತಿಯೂ ಇದೆ.


ಎಲ್ಲಾ ಕ್ಷೇತ್ರಗಳಲ್ಲಿ ದೇವರಿಗೆ ಬೆಳ್ಳಿ-ಬಂಗಾರಗಳ ಹರಕೆಯನ್ನು ಸಮರ್ಪಿಸುವುದು ಸಾಮಾನ್ಯವಾಗಿದ್ದರೆ, ಈ ಗಣೇಶನಿಗೆ ನೀಡಬೇಕಾಗಿರುವುದು ಕೇವಲ ಗಂಟೆಯನ್ನಷ್ಟೇ.  ಈ ಕಾರಣಕ್ಕಾಗಿಯೇ ಇಲ್ಲಿ ಗಂಟೆಗಳ ಹರಕೆ ವಿಶಿಷ್ಟ ಸೇವೆಯಾಗಿಯೂ ಗುರುತಿಸಲ್ಪಟ್ಟಿದೆ. ತಾವು ತೋಡಿಕೊಂಡ ಬೇಡಿಕೆ ಈಡೇರಿಸಿದ ಬಳಿಕವೇ ಇಲ್ಲಿಗೆ ಭಕ್ತಾಧಿಗಳು ಗಂಟೆಯನ್ನು ಸಮರ್ಪಿಸುತ್ತಾರೆ.


ಸೌತಡ್ಕ ಗಣಪತಿಗೆ ಅತೀ ಮೆಚ್ಚಿನ ಪೂಜೆಯೆಂದರೆ ಮೂಡಪ್ಪ ಸೇವೆಯಾಗಿದ್ದು, ಪ್ರತಿವರ್ಷವೂ ಇಲ್ಲಿ ಭಕ್ತಾಧಿಗಳು ವಿಘ್ನನಾಯಕನಿಗೆ ಮೂಡಪ್ಪ ಸೇವೆಯನ್ನು ನೆರವೇರಿಸಿಕೊಂಡು ಬರುತ್ತಿದ್ದಾರೆ. ಅಲ್ಲದೆ ರಂಗಪೂಜೆಯ ಇಲ್ಲಿನ ವಿಶೇಷ ಪೂಜೆಗಳಲ್ಲಿ ಒಂದಾಗಿದ್ದು, ದೇಶದೆಲ್ಲೆಡೆಗಳಿಂದ ಭಕ್ತರು ಈ ಕ್ಷೇತ್ರಕ್ಕೆ ಬೇಟಿ ನೀಡಿ ತಮ್ಮ ಇಷ್ಟಾರ್ಥಗಳನ್ನು ನೆರವೇರಿಸಿಕೊಳ್ಳುತ್ತಾರೆ. ತನ್ನನ್ನು ನಂಬಿದವರಿಗೆ ಇಂಬು ಕೊಂಡುವಂತಹ ಈ ವಿನಾಯಕನ ಸನ್ನಿಧಿಗೆ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಬರುತ್ತಿದ್ದು, ಪ್ರತಿ ಸಂಕಷ್ಟಿಯ ದಿನಗಳಲ್ಲಿ ಬಯಲಲ್ಲಿರುವ ಈ ಗಣಪತಿ ವಿಗ್ರಹಕ್ಕೆ ಪ್ರಕೃತಿಯಲ್ಲೇ ಸಿಗುವಂತಹ ವೀಳ್ಯದೆಲೆ, ಹಣ್ಣು, ತರಕಾರಿಗಳ ಮಾಲೆಗಳನ್ನು ಹಾಕುವುದು ಇಲ್ಲಿನ ವಿಶೇಷತೆಯಾಗಿದೆ.


ಇದನ್ನೂ ಓದಿ:COVID-19 Symptoms: ಕಿವಿ ಕೇಳಿಸದಿರುವುದು, ಬಾಯಿ ಒಣಗುವುದು ಕೂಡಾ ಕೋವಿಡ್​ ಲಕ್ಷಣಗಳು, ಎಚ್ಚರದಿಂದಿರಿ!


ಸೌತಡ್ಕ ಕ್ಷೇತ್ರ ಜನಸಾಮಾನ್ಯನ ಕ್ಷೇತ್ರವಾಗಿಯೂ ಹೆಸರುವಾಸಿಯಾಗಿದೆ. ದೇವಸ್ಥಾನಗಳಲ್ಲಿ ಗರ್ಭಗುಡಿಯಲ್ಲೇ ಇರುವಂತಹ ದೇವರನ್ನು ಹತ್ತಿರದಿಂದ ನೋಡುವುದು ಸಾಧ್ಯವಿಲ್ಲದೇ ಇರುವಾಗ ಸೌತಡ್ಕದಲ್ಲಿ ಜನರ ಕೈಗೆ ಮುಟ್ಟುವ ರೀತಿಯಲ್ಲಿರುವ ಗಣೇಶ ಎಲ್ಲರಿಗೂ ದರ್ಶನವನ್ನು ನೀಡುತ್ತಾನೆ. ಭಕ್ತನೇ ತನ್ನ ಹರಕೆಯನ್ನು ನೇರವಾಗಿ ದೇವರಿಗೇ ಸಲ್ಲಿಸುವಂತಹ ವ್ಯವಸ್ಥೆಯೂ ಇಲ್ಲಿದೆ. ಪ್ರತಿವರ್ಷವೂ  ಇಲ್ಲಿ ಸಾವಿರ ಸಂಖ್ಯೆಯಲ್ಲಿ ಗಂಟೆಗಳ ಕಾಣಿಕೆ ಬರುತ್ತಿದ್ದು, ಪ್ರತಿವರ್ಷವೂ 11 ಟನ್ ಗಳಷ್ಟು ಗಂಟೆಗಳನ್ನು ಇಲ್ಲಿ ಮಾರಾಟಮಾಡಲಾಗುತ್ತಿದೆ. ಇನ್ನೂ ನೂರಾರು ಟನ್ ಗಂಟೆಗಳ ಸಂಗ್ರಹವೂ ಇಲ್ಲಿದ್ದು, ಪ್ರತಿ ವಾರವೂ ಭಕ್ತರು ಹರಕೆಯಾಗಿ ಕಟ್ಟಿದ ಗಂಟೆಗಳನ್ನು ಸಂಗ್ರಹಿಸುವಂತಹ ಕಾರ್ಯವೂ ಇಲ್ಲಿ ನಡೆಯುತ್ತಿದೆ.

Published by:Latha CG
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು