ಕೊರೋನಾ ಕಾರ್ಮೋಡದ ನಡುವೆಯೇ ಗೌರಿ-ಗಣೇಶ ಹಬ್ಬ ; ಪರಿಸರ ಸ್ನೇಹಿ ಗಣಪನನ್ನು ಪರಿಚಯಿಸಿದ ಮಂಡ್ಯ ಜಿಲ್ಲಾಡಳಿತ

ಪರಿಸರ ಸ್ನೇಹಿ ಗಣೇಶನ ಪ್ರತಿಷ್ಠಾಪಿಸುವ ಪ್ರಾತ್ಯಕ್ಷಿಕೆ ಮಂಡ್ಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಿತು. ಪ್ರಾತ್ಯಕ್ಷಿಕೆ ವೀಕ್ಷಣೆ ಮಾಡಿ, ಅದರ ಮಹತ್ವ ಅರಿತ ಮಂಡ್ಯ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ಪರಿಸರ ಸ್ನೇಹಿ ಗಣೇಶ ಪ್ರತಿಷ್ಠಾಪಿಸಿ, ಪರಿಸರ ಉಳಿಸುವಂತೆ ಜನರಿಗೆ ಕರೆ ನೀಡಿದರು.

news18-kannada
Updated:August 13, 2020, 7:23 AM IST
ಕೊರೋನಾ ಕಾರ್ಮೋಡದ ನಡುವೆಯೇ ಗೌರಿ-ಗಣೇಶ ಹಬ್ಬ ; ಪರಿಸರ ಸ್ನೇಹಿ ಗಣಪನನ್ನು ಪರಿಚಯಿಸಿದ ಮಂಡ್ಯ ಜಿಲ್ಲಾಡಳಿತ
ಪರಿಸರ ಸ್ನೇಹಿ ಗಣೇಶನ ಮೂರ್ತಿ ಪ್ರಾತ್ಯಕ್ಷಿಕೆ
  • Share this:
ಮಂಡ್ಯ(ಆಗಸ್ಟ್​. 13): ಪ್ರತಿ ವರ್ಷದಂತೆ ಈ ವರ್ಷವೂ ಗೌರಿ-ಗಣೇಶ ಹಬ್ಬ ಬರುತ್ತಿದೆ. ಆದರೆ, ಈ ಬಾರೀ ಸಂಭ್ರಮದಿಂದ  ಹಬ್ಬ ಮಾಡಲು ಎಲ್ಲರು ಬಯಸಿದ್ದರು. ಈ ಬಾರಿಯ ಗೌರಿ-ಗಣೇಶ ಹಬ್ಬಕ್ಕೆ ಕೊರೋನಾ ಕಾರ್ಮೋಡ ಆವರಿಸಿಕೊಂಡಿದೆ. ಕೊರೋನಾ ಕರಿ ನೆರಳಲ್ಲಿ ಗೌರಿ-ಗಣೇಶ ಹಬ್ಬ ಮಾಡುವುದು ಹೇಗೆ ಅಂತಾ ಚಿಂತೆ ಮಾಡುತ್ತಿರುವವರಿಗೆ ಕೃಷಿ ಇಲಾಖೆ ಹಾಗೂ ಮಂಡ್ಯ ಜಿಲ್ಲಾಡಳಿತ ಒಂದು ಸಲಹೆ ನೀಡಿದೆ.

ಇದೇ ತಿಂಗಳ 21 ಹಾಗೂ 22ರಂದು ಗೌರಿ-ಗಣೇಶ ಹಬ್ಬವಿದೆ. ಪ್ರತಿ ವರ್ಷದಂತೆ ಈ ವರ್ಷವೂ ಗೌರಿ ಗಣೇಶ ಹಬ್ಬವನ್ನ ಸಂಭ್ರಮದಿಂದ ಆಚರಿಸುವುದಕ್ಕೆ ಜನ ನಿರ್ಧಾರ ಮಾಡಿದ್ದರು. ಆದರೆ, ಕೊರೋನಾ ಕಾರ್ಮೋಡ ಗೌರಿ-ಗಣೇಶ ಹಬ್ಬದ ಮೇಲೆ ಆವರಿಸಿದೆ.  ಕೊರೋನಾ ಕರಿ ನೆರಳಿನ ನಡುವೆಯೂ ಗೌರಿ-ಗಣೇಶ ಹಬ್ಬವನ್ನ ಆಚರಿಸೋದು ಹೇಗೆ ಅಂತಾ ಬಹುತೇಕರು ಯೋಚನೆ ಮಾಡುತ್ತಿದ್ದಾರೆ. ಅದಕ್ಕಾಗಿ, ಮಂಡ್ಯ ಜಿಲ್ಲಾಡಳಿತ, ಕೃಷಿ ಇಲಾಖೆ ಹಾಗೂ ವಿ.ಸಿ.ಫಾರಂ ವಲಯ ಕೃಷಿ ಸಂಶೋಧನಾ ಕೇಂದ್ರ ವಿನೂತನ ಟಿಪ್ಸ್ ನೀಡಿದೆ.

ಇನ್ನು ಕೊರೋನಾ ಹಾವಳಿ ಜೊತೆಗೆ ಪರಿಸರ ಉಳಿಸಿಕೊಳ್ಳ ಬೇಕಿರುವುದು ಪ್ರತಿ ಯೊಬ್ಬರ ಕರ್ತವ್ಯ ಕೂಡ ಹೌದು. ದಿನೇ ದಿನೇ ಹದಗೆಡುತ್ತಿರುವ ಪರಿಸರ ಉಳಿಸಲು ಸರ್ಕಾರಗಳು ನಿರಂತರವಾಗಿ ಶ್ರಮಿಸುತ್ತಲೇ ಇವೆ. ಈ ನಡುವೆಯೂ ಪರಿಸರಕ್ಕೆ ಮಾರಕವಾದ ಗಣೇಶ ಮೂರ್ತಿಗಳ ತಯಾರಿಕೆ ಮತ್ತು ಪ್ರತಿಷ್ಠಾಪನೆ ನಡೆಯುತ್ತಲೇ ಇವೆ.





ಅದನ್ನ ತಪ್ಪಿಸುವ ಉದ್ದೇಶದಿಂದ ಮಂಡ್ಯದ ವಿ.ಸಿ. ಫಾರಂ ನಲ್ಲಿರುವ ಆರಾಧ್ಯ ಆಗ್ರೋ ಫುಡ್ ಅಂಡ್ ಬೇವರೇಜ್ ನವರು ಜೇಡಿ ಮಣ್ಣಿನಿಂದ ಸಿದ್ಧಪಡಿಸಿರುವ ಪರಿಸರ ಸ್ನೇಹಿ ಗಣಪನನ್ನ ಜನರಿಗೆ ಪರಿಚಯಿಸಿದ್ದಾರೆ. ಅತ್ಯಂತ ಕಡಿಮೆ ಬೆಲೆಗೆ ಅಂದ್ರೆ, 120ರೂ.ಗೆ ಸಿಗುವ ಈ ಗೌರಿ-ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಯಿಂದ ಔಷಧೀಯ ಗುಣಗಳುಳ್ಳ ಗಿಡ, ಮರಗಳನ್ನು ಬೆಳೆಸಬಹುದು.

ಇದನ್ನೂ ಓದಿ : ಹುಟ್ಟಿದ್ದು ಅವಳಿ-ಜವಳಿ, ಎಸ್​ಎಸ್​ಎಲ್​​​ಸಿ ಪಡೆದದ್ದೂ ಸಮಾನ ಅಂಕ ; ಸಹೋದರಿಯರ ಅಚ್ಚರಿ ಫಲಿತಾಂಶ..!

ಇನ್ನು ಈ ಪರಿಸರ ಸ್ನೇಹಿ ಗಣೇಶನ ಪ್ರತಿಷ್ಠಾಪಿಸುವ ಪ್ರಾತ್ಯಕ್ಷಿಕೆ ಮಂಡ್ಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಿತು. ಪ್ರಾತ್ಯಕ್ಷಿಕೆ ವೀಕ್ಷಣೆ ಮಾಡಿ, ಅದರ ಮಹತ್ವ ಅರಿತ ಮಂಡ್ಯ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ಪರಿಸರ ಸ್ನೇಹಿ ಗಣೇಶ ಪ್ರತಿಷ್ಠಾಪಿಸಿ, ಪರಿಸರ ಉಳಿಸುವಂತೆ ಜನರಿಗೆ ಕರೆ ನೀಡಿದರು.

ಒಟ್ಟಾರೆ ಪರಿಸರ ಅಸಮತೋಲನದಿಂದ ಸಾಕಷ್ಟು ಅನಾಹುತಗಳನ್ನ ನೋಡುತ್ತಿದ್ದೇವೆ. ಈ ನಡುವೆಯೇ ಹಬ್ಬದ ಸಂಭ್ರಮವನ್ನ ಇಮ್ಮಡಿಗೊಳಿಸುವ ಜೊತೆಗೆ ಪರಿಸರ ಉಳಿಸುವ ದಿವಾಕರ್ ಆರಾಧ್ಯ ಅವರ ವಿನೂತನ ಪ್ರಯೋಗಕ್ಕೆ ಹ್ಯಾಟ್ಸ್ ಆಫ್ ಹೇಳಲೇಬೇಕಿದೆ.
Published by: G Hareeshkumar
First published: August 13, 2020, 7:23 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading