ಬೆಳಗಾವಿಯಲ್ಲಿ ಈ ವರ್ಷ ಅದ್ಧೂರಿ ಗಣೇಶೋತ್ಸವ ಇಲ್ಲ ; ಸರ್ಕಾರದ ಮಾರ್ಗಸೂಚಿ ಅನ್ವಯ ಆಚರಣೆ..!

ಬೆಳಗಾವಿ ಜಿಲ್ಲಾಡಳಿತ ಸದ್ಯ ಸಾರ್ವಜನಿಕ ಗಣೇಶ ಉತ್ಸವ ಮಹಾಮಂಡಳಗಳಿಗೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಈ ವರ್ಷ ಸಮೀಪದ ದೇವಸ್ಥಾನ ಅಥವಾ ಮಂಡಳದ ಪ್ರಮುಖರ ಮನೆಯಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು.

news18-kannada
Updated:August 13, 2020, 10:12 PM IST
ಬೆಳಗಾವಿಯಲ್ಲಿ ಈ ವರ್ಷ ಅದ್ಧೂರಿ ಗಣೇಶೋತ್ಸವ ಇಲ್ಲ ; ಸರ್ಕಾರದ ಮಾರ್ಗಸೂಚಿ ಅನ್ವಯ ಆಚರಣೆ..!
ಸಾಂದರ್ಭಿಕ ಚಿತ್ರ
  • Share this:
ಬೆಳಗಾವಿ(ಆಗಸ್ಟ್. 13): ಗಣೇಶ ಉತ್ಸವಕ್ಕೆ ಇನ್ನೇನು ಕೆಲ ದಿನಗಳು ಮಾತ್ರ ಬಾಕಿ ಉಳಿದಿವೆ. ಪ್ರತಿವರ್ಷ ಹಬ್ಬದ ಆಚರಣೆಗೆ ಮೂರು ತಿಂಗಳು ಮೊದಲೇ ಬೆಳಗಾವಿ ಜಿಲ್ಲೆಯಲ್ಲಿ ಸಿದ್ದತೆಗಳು ನಡೆಯುತ್ತಿದ್ದವು. ಆದರೆ, ಈ ವರ್ಷ ಅದ್ಧೂರಿ ಗಣೇಶೋತ್ಸವದ ಬದಲಾಗಿ ಸರ್ಕಾರದ ಮಾರ್ಗಸೂಚಿಯಂತೆ ಉತ್ಸವ ನಡೆಯುವುದು ಖಚಿತವಾಗಿದೆ. ಇದಕ್ಕಾಗಿ ಈಗಾಗಲೇ ಸರ್ಕಾರ ಮಾರ್ಗಸೂಚಿಯನ್ನು ಸಹ ಪ್ರಕಟ ಮಾಡಿದೆ.

ಲೋಕಮಾನ್ಯ ಬಾಲಗಂಗಾಧರ ತಿಲಕರು ಸ್ವತಃ ಬೆಳಗಾವಿಗೆ ಬಂದು ಸಾರ್ವಜನಿಕ ಗಣೇಶ ಉತ್ಸವನ್ನು ಆರಂಭಿಸಿದ್ದರು. ಅಂದಿನಿಂದ ಪ್ರತಿ ವರ್ಷದಿಂದ ವರ್ಷಕ್ಕೆ ನಗರದಲ್ಲಿ ಅದ್ಧೂರಿಯಾಗಿ ಗಣೇಶ ಉತ್ಸವ ನಡೆಯುತ್ತಲೇ ಬಂದಿದೆ. ಬೆಳಗಾವಿ ನಗರವೊಂದರಲ್ಲಿಯೇ 370ಕ್ಕೂ ಹೆಚ್ಚು ಗಣೇಶ ಉತ್ಸವ ಮಂಡಳಗಳು ಇವೆ. ಇಲ್ಲಿನ ಗಣೇಶ ಉತ್ಸವದ ಸಡಗರ ಸಂಭ್ರಮ ನೋಡುವುದೇ ಒಂದು ಸೊಬಗು. ಗಣೇಶ ಉತ್ಸವ ವಿಸರ್ಜನೆ ಮೆರವಣಿಗೆ 24ಗಂಟೆಗು ಹೆಚ್ಚು ಕಾಲ ನಡೆಯುತ್ತಿತ್ತು. ಈ ವೇಳೆಯಲ್ಲಿ ಅನೇಕ ಸಾಂಸ್ಕೃತಿ ಕಾರ್ಯಕ್ರಮಗಳು ಜನರ ಗಮನ ಸೆಳೆಯುತ್ತಿದ್ದವು.

ಆದರೆ, ಈ ವರ್ಷ ಬೆಳಗಾವಿಯ ಗಣೇಶೋತ್ಸವದ ಮೇಲೆ ಕೊರೋನಾ ವೈರಸ್ ಹಾವಳಿ ಮಂಕು ಕವಿದಿದೆ. ಈ ವರ್ಷದ ಸರ್ಕಾರದ ಮಾರ್ಗಸೂಚಿಯ ಅನ್ವಯ ಗಣೇಶ ಉತ್ಸವ ನಡೆಯುವುದು ಇದೀಗ ನಿಶ್ಚಿತವಾಗಿದೆ. ಪ್ರತಿ ವರ್ಷ ಅತ್ಯಂತ ಸಡಗರ ಸಂಭ್ರಮದಿಂದ ನಡೆಯುತ್ತಿದ್ದ ಉತ್ಸವ ಈ ಸಲ ಸರಳವಾಗಿ ನಡೆಯಲಿದೆ. ಇದು ಗಣೇಶ ಉತ್ಸವದ ಮಂಡಳ ಭಕ್ತರ ನಿರಾಶೆಯ ಮೂಡಿಸಿದ್ರು ಅನಿವಾರ್ಯವಾಗಿದೆ.

ಬೆಳಗಾವಿ ಜಿಲ್ಲೆಯಲ್ಲಿ 6352 ಕೊರೋನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಇನ್ನೂ ಜಿಲ್ಲೆಯಲ್ಲಿ ಸೋಂಕಿನಿಂದ ಈವರೆಗೆ 107 ಜನ ಮೃತಪಟ್ಟಿದ್ದು, ಸದ್ಯ 3457 ಆ್ಯಕ್ಟಿವ್ ಕೇಸ್ ಇವೆ. ಇಷ್ಟೆಲ್ಲ ಆತಂಕದ ನಡುವೆ ಸಾರ್ವಜನಿಕ ಗಣೇಶ ಉತ್ಸವ ಆಚರಣೆ ಬಂದಿದೆ. ಆದರೇ ಸರ್ಕಾರ ಮಾರ್ಗಸೂಚಿಯಂತೆ ಈ ವರ್ಷ ಅತ್ಯಂತ ಸರಳವಾಗಿ ಆಚರಣೆ ಮಾಡಲು ಈಗಾಗಲೇ ನಿರ್ಧಾರ ಮಾಡಲಾಗಿದೆ.

ಇನ್ನೂ ಓದಿ : ಶ್ರೀಮಂತ ಪಾಟೀಲ ವಿರುದ್ದ ಭುಗಿಲೆದ್ದ ಆಕ್ರೋಶ ; ಸಚಿವರ ಕ್ಷಮಾಪಣೆಗೆ ಆಗ್ರಹಿಸಿ ಪ್ರತಿಭಟನೆ

ಬೆಳಗಾವಿ ಜಿಲ್ಲಾಡಳಿತ ಸದ್ಯ ಸಾರ್ವಜನಿಕ ಗಣೇಶ ಉತ್ಸವ ಮಹಾಮಂಡಳಗಳಿಗೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಈ ವರ್ಷ ಸಮೀಪದ ದೇವಸ್ಥಾನ ಅಥವಾ ಮಂಡಳದ ಪ್ರಮುಖರ ಮನೆಯಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು. ಉತ್ಸವ ಆಚರಣೆ ಸಂಬಂಧ ಇಲಾಖೆ ಹಾಗೂ ಪ್ರಾಧಿಕಾರದ ಅನುಮತಿಯನ್ನ ಪಡೆದುಕೊಳ್ಳಬೇಕು ಎಂದು ಷರತ್ತು ವಿಧಿಸಿದೆ.
ಉತ್ಸವದ ಹೆಸರಿನಲ್ಲಿ ಪಟಾಕಿ, ಬಣ, ಲೌಡ್ ಸ್ಪೀಕರ್ ಬಳಸುವಂತಿಲ್ಲ. ಪಿಒಪಿ ಮೂರ್ತಿಗಳ ಬದಲಾಗಿ ಮಣ್ಣಿನ ಮೂರ್ತಿಗಳನ್ನು ಬಳಸಬೇಕು. ಉತ್ಸವ ಸಂದರ್ಭದಲ್ಲಿ ಕೊರೋನಾ ಬಗ್ಗೆ ಜಾಗೃತಿ ಮೂಡಿಸಬೇಕು. ಆರತಿ ಸಂದರ್ಭದಲ್ಲಿ 5 ಕ್ಕೂ ಹೆಚ್ಚು ಜನ ಸೇರುವಂತಿಲ್ಲ. ಗಣೇಶ ಉತ್ಸವ ದರ್ಶನವನ್ನು ಆನ್ ಲೈನ್ ನಲ್ಲಿ ಮಾಡಬೇಕು. ವಿಸರ್ಜನೆ ವೇಳೆ ಮೆರವಣಿಗೆಯನ್ನು ನಿಷೇಧಿಸಿದೆ. ಜಿಲ್ಲಾಡಳಿತದ ನಿಯಮ ಪಾಲನೆ ಮಾಡದೇ ಇದ್ದರೆ ಕಠಿಣ  ಕಾನೂನಿನ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದೆ.
Published by: G Hareeshkumar
First published: August 13, 2020, 10:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading