Ganesha Chaturthi 2021: ಗಣೇಶ ಚತುರ್ಥಿ ಹಬ್ಬಕ್ಕೆ ಚಕ್ಕುಲಿ ಕಂಬಳ; ಮಲೆನಾಡಿನಲ್ಲಿ ಹಬ್ಬದ ಖಾದ್ಯ

ಮಲೆನಾಡಿಗರು ಗೌರಿ ಗಣೇಶ ಹಬ್ಬವನ್ನು ವಿಭಿನ್ನವಾಗಿ  ಆಚರಿಸುತ್ತಾರೆ. ಹಬ್ಬ ಅಂದರೆ ಅಲ್ಲಿ ವಿಭಿನ್ನ ತಿಂಡಿ ತಿನಿಸುಗಳು  ಇರೋದು ಸಾಮಾನ್ಯ. ಆದರೆ ಚಕ್ಕುಲಿ ಕಂಬಳ ಮಾತ್ರ ಗಣೇಶ ಚತುರ್ಥಿಯ ವಿಶೇಷ  ತಿನಿಸು ಅನ್ನೋದಂತೂ ಸತ್ಯ.

ಮಲೆನಾಡಿನಲ್ಲಿ ಮನೆ ಮಂದಿಯಲ್ಲ ಸೇರಿ ಚಕ್ಕುಲಿ ತಯಾರಿಸುತ್ತಿರುವುದು.

ಮಲೆನಾಡಿನಲ್ಲಿ ಮನೆ ಮಂದಿಯಲ್ಲ ಸೇರಿ ಚಕ್ಕುಲಿ ತಯಾರಿಸುತ್ತಿರುವುದು.

  • Share this:
ಕಾರವಾರ: ರಾಜ್ಯದೆಲ್ಲೆಡೆ ಸಡಗರ ಸಂಭ್ರಮದಿಂದ ಗಣೇಶ ಚತುರ್ಥಿ (Ganesha Chaturthi 2021) ಆಚರಿಸುತ್ತಿದ್ದಾರೆ. ಕೊರೋನಾ ಆತಂಕದಿಂದಲೇ ಸರ್ಕಾರ ಸರಳವಾಗಿ ಗಣೇಶೋತ್ಸವನ್ನು (Simple Ganesh Festival Celebration) ಆಚರಿಸಲು ಮಾರ್ಗಸೂಚಿ (Guidelines) ಬಿಡುಗಡೆ ಮಾಡಿದೆ. ಅದರಂತೆ ಎಲ್ಲೆಡೆ ಸರಳವಾಗಿ ಇಂದು ಗಣೇಶ ಉತ್ಸವ ಆಚರಣೆ ಮಾಡಲಾಗುತ್ತದೆ. ಹಬ್ಬಗಳು ಬಂತು ಅಂದರೆ ಎಲ್ಲರಿಗೂ ಅದೇನೋ ಸಡಗರ ಸಂಭ್ರಮ. ಅದರಲ್ಲೂ ಮಲೆನಾಡಿಗರಿಗೆ ಯಾವುದೇ  ಹಬ್ಬ ಬಂದರೂ ಅದರಲ್ಲೇನೋ ವಿಶೇಷತೆ  ಇದ್ದೇ ಇರುತ್ತೆ. ಈಗಂತೂ  ಗೌರಿ- ಗಣೇಶ ಹಬ್ಬದ ಸಮಯ. ಈ ಹಬ್ಬಕ್ಕೆ ಮಲೆನಾಡ ಭಾಗವಾದ  ಶಿರಸಿಯಲ್ಲಿ (Sirasi) ವಿಶೇಷ  ತಿಂಡಿ ತಿನಿಸು‌ಗಳಿಗೆ ಆದ್ಯತೆ. ಹೀಗಾಗಿ ಇಲ್ಲಿನ ಜನ ಕೂಡ ಬ್ಯುಸಿಯಾಗಿ ಇರುತ್ತಾರೆ. ಚಕ್ಕುಲಿ ಕಂಬಳ ಎಂದೇ ಪ್ರಸಿದ್ದಿ ಪಡೆದ ಈ ಹಬ್ಬ ಇಲ್ಲಿ ತುಂಬಾ ವಿಶೇಷ.

ಏನಿದು ಚಕ್ಕುಲಿ ಕಂಬಳ ಏನಿದರ ವಿಶೇಷ

ಮಲೆನಾಡಿನಲ್ಲಿ ಯಾವುದೇ  ಹಬ್ಬ ಹರಿ ದಿನಗಳಿರಬಹುದು, ಪೂಜೆ  ಪುನಸ್ಕಾರಗಳು ಇರಬಹುದು ಅದರಲ್ಲೇನು ವಿಭಿನ್ನ, ವಿಶೇಷ ಇರುತ್ತೆ. ಈಗ ಗೌರಿ- ಗಣೇಶ ಹಬ್ಬ (Gauri Ganesha Festival) ಬಂದಿದೆ.   ಉತ್ತರ ಕನ್ನಡ ಜಿಲ್ಲೆಯ  ಶಿರಸಿ ಹಾಗೂ  ಸುತ್ತಮುತ್ತಲಿನ ಭಾಗದವರಿಗೆ ಹಬ್ಬದ ಸಡಗರ ಸ್ವಲ್ಪ ಜಾಸ್ತಿಯೇ ಮನೆ ಮಾಡಿದೆ. ಗಣೇಶ ಚತುರ್ಥಿ ಆಗಮಿಸುತ್ತಿದ್ದಂತೆ ಎಲ್ಲರ ಮನೆಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ವಿಶೇಷವಾಗಿ ಗಣೇಶ ಚೌತಿಗೆ ಮಾಡುವ  ಗಣೇಶನಿಗೆ ಪ್ರಿಯವಾದ  ಚಕ್ಕುಲಿ ಕಂಬಳ ಎಲ್ಲೆಡೆ ಸಂಭ್ರಮದಿಂದ  ಸಾಗಿದೆ. ಶಿರಸಿಯ ಹೆಗಡೆಕಟ್ಟಾ ಸಮೀಪದ ಕಲ್ಮನೆ, ದೇವತೆ ಮನೆ, ಸಾಲ್ಕಣಿ ಸೇರಿ ವಿವಿಧೆಡೆ ಎಲ್ಲರೂ ಚಕ್ಕುಲಿ ಕಂಬಳ ಮಾಡುವ ಕೆಲಸದಲ್ಲಿ ತೊಡಗಿದ್ದಾರೆ.  ಅದರಲ್ಲೂ ಉತ್ತರ ಕನ್ನಡ ಜಿಲ್ಲೆ ಶಿರಸಿಯ ಕೆಲವೆಡೆ ಮೊದಲಿನಿಂದಲೂ ರೂಢಿಯಲ್ಲಿರುವ ಕೈ ಚಕ್ಕುಲಿ ಕಂಬಳ ಜೋರಾಗಿದೆ. ಎಲ್ಲ ಕಂಬಳದಂತೆ ಕಲ್ಮನೆ ಹೆಗ್ಗಾರು, ಹೆಗಡೆಕಟ್ಟ ಸುತ್ತಮುತ್ತಲಿನ ಊರಿನವರು, ಸಂಬಂಧಿಗಳು ಒಬ್ಬರು ಮತ್ತೊಬ್ಬರ ಮನೆಗೆ ಕಂಬಳಕ್ಕೆ ಸಹಕರಿಸುವುದು ವಿಶೇಷ.

ಕಾಲ ಬದಲಾದಂತೆ ಮನುಷ್ಯನು ವೈಜ್ಞಾನಿಕ  ಉಪಕರಣಗಳ ಮೊರೆ ಹೋಗ್ತಾನೆ. ಆದರೆ ಈ ಊರಲ್ಲಿ ಮಾತ್ರ ಎಲ್ಲರೂ ಪ್ರತಿವರ್ಷ ಕೈ ಕಂಬಳನ್ನೇ  ಮಾಡುತ್ತಾರೆ. ಹಿಂದಿನಿಂದ  ಬಂದ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಇಂತಹ ವಿಶೇಷ ಕಲೆ ಎಲ್ಲರಿಗೂ ಬರೋಲ್ಲ. ಅದರಲ್ಲೂ ಈ ಚಕ್ಕುಲಿ ರುಚಿ ಹಾಗೂ ಬಾಳಿಕೆ ಜಾಸ್ತಿ ಅಂತಾರೆ ಸ್ಥಳೀಯರು. ಅಲ್ಲದೇ ಸ್ವತಃ ತಿಂಡಿಗೆ ಬೇಕಾಗುವ ವಸ್ತುಗಳನ್ನ ಸ್ವತಃ ತಯಾರಿಸಿಕೊಂಡು ಮಾಡಲಾಗುತ್ತೆ. ಹದವಾದ ಹಿಟ್ಟನ್ನ ತಯಾರು ಮಾಡಿ ಕೈಯಲ್ಲೇ ಬಿಡೋದು ಇದರ ಮತ್ತೊಂದು ವಿಶೇಷತೆ. ಅದರಲ್ಲೂ ವಿವಿಧ ವಿನ್ಯಾಸದ ಚಕ್ಕಲಿ ಮಾಡ್ತಾರೆ. ಉಪಕರಣಗಳಿಂದ ಮಾಡಿದ ಚಕ್ಕುಲಿ ಕೆಲವೇ ದಿನ ಉಳಿದರೆ ಇದನ್ನು ನಾಲ್ಕಾರು ತಿಂಗಳುಗಳ ಕಾಲ ಇಡಬಹುದು. ಹಬ್ಬಕ್ಕೆ ಮನೆಗೆ  ಬಂದ ಸಂಬಂಧಿಕರಿಗೆ ಹಾಗೂ ದೂರದ ಊರಲ್ಲಿ ಇರುವವರಿಗೆ ಪಾರ್ಸಲ್ ಮೂಲಕ ಕಳಿಸಿಕೊಡ್ತಾರೆ. ಅನಾದಿ ಕಾಲದಿಂದಲೂ ಚಕ್ಕುಲಿ ಕಂಬಳ ಪದ್ದತಿಯನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ ಇಲ್ಲಿನ ಜನರು.

ಇದನ್ನು ಓದಿ:  CoronaVirus| ಕೋವಿಡ್-19 ಸಾಂಕ್ರಾಮಿಕದ ಭಯದ ಹೊರತಾಗಿಯೂ ಭಾರತೀಯರು ಹಬ್ಬಗಳಲ್ಲಿ ಬೆರೆಯಲು ಸಿದ್ಧರು; ಸಮೀಕ್ಷೆ

ಮಾಡಿದ ತಿಂಡಿಗಳನ್ನು ಗಣೇಶನಿಗೆ ನೈವೇದ್ಯಕ್ಕಾಗಿ ಇಡಲಾಗುತ್ತೆ. ಒಟ್ಟಿನಲ್ಲಿ ಯಾವುದೇ ಹಬ್ಬಗಳು ಬಂದ್ರೂ ಎಲ್ಲ ಹಬ್ಬಗಳು ಎಲ್ಲರಿಗೂ ವಿಶೇಷವೇ. ಅದರಲ್ಲೂ ಮಲೆನಾಡಿಗರು ಗೌರಿ ಗಣೇಶ ಹಬ್ಬವನ್ನು ವಿಭಿನ್ನವಾಗಿ  ಆಚರಿಸುತ್ತಾರೆ. ಹಬ್ಬ ಅಂದರೆ ಅಲ್ಲಿ ವಿಭಿನ್ನ ತಿಂಡಿ ತಿನಿಸುಗಳು  ಇರೋದು ಸಾಮಾನ್ಯ. ಆದರೆ ಚಕ್ಕುಲಿ ಕಂಬಳ ಮಾತ್ರ ಗಣೇಶ ಚತುರ್ಥಿಯ  ವಿಶೇಷ  ತಿನಿಸು ಅನ್ನೋದಂತೂ ಸತ್ಯ.
Published by:HR Ramesh
First published: