ಗದಗ ಜಿಲ್ಲೆಯಲ್ಲಿ ಮಕ್ಕಳ ಮೇಲೆ‌ ಕಟ್ಟೆಚ್ಚರ ವಹಿಸಿದ ಆರೋಗ್ಯ ಇಲಾಖೆ; ಅಪೌಷ್ಟಿಕತೆ ಮಕ್ಕಳ ಆರೈಕೆ, ಚಿಕಿತ್ಸೆ ಆರಂಭ

ಕೊರೋನಾ ಮೂರನೇಯ ಅಲೆ ಮಕ್ಕಳನ್ನೆ ಟಾರ್ಗೆಟ್ ಮಾಡಿದ್ದು, ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಟ್ಚೆಚ್ಚರ ವಹಿಸಿದೆ. ನಾನಾ ಕಾಯಿಲೆ ಹಾಗೂ ಅಪೌಷ್ಟಿಕತೆ ಮಕ್ಕಳ ಪೋಷಕರು ಮಗಳ‌ ಮೇಲೆ‌ ಹೆಚ್ವಿನ ನಿಗಾ ವಹಿಸಿ, ಎಚ್ಚರಿಕೆಯಿಂದ ಇರಬೇಕಾಗಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಗದಗ: ಹೆಮ್ಮಾರಿ ಕೊರೋನಾ‌‌ ಕಾಟ ಸ್ವಲ್ಪ ಮಟ್ಟಿಗೆ ಕಡಿಮೆ ಆಯ್ತು ಎನ್ನುವಷ್ಟರಲ್ಲಿ, ಮೂರನೇಯ ಅಲೆ ಆತಂಕ ಆರಂಭವಾಗಿದೆ. ಹೌದು ಮೂರನೇಯ ಅಲೆಗೆ ಮಕ್ಕಳೇ ಟಾರ್ಗೆಟ್ ಎನ್ನಲಾಗುತ್ತಿದೆ. ಹೀಗಾಗಿ ಮಕ್ಕಳನ್ನು ಕಾಪಾಡಿಕೊಳ್ಳೋದೆ ಪಾಲಕರಿಗೆ ಸವಾಲಾಗಿದೆ. ಅದರಲ್ಲೂ ಇತ್ತ ಕಾಯಿಲೆ, ಹಾಗೂ ಅಪೌಷ್ಟಿಕ ಮಕ್ಕಳ ಗೋಳಾಟ ಮನಕಲುಕುವಂತಿದೆ. ಮಕ್ಕಳನ್ನು ಗಟ್ಟಿ ಮಾಡಲು ಬಡ ಕುಟುಂಬಗಳ ತೊಳಲಾಡುತ್ತಿದ್ದಾರೆ.

ಹೌದು, ಗದಗ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ 243 ಮಕ್ಕಳ ಮೇಲೆ‌ ಕಟ್ಟೆಚ್ವರ ವಹಿಸಿದೆ. ಇನ್ನು ಮೂರನೆಯ ಅಲೆಯಲ್ಲಿ ಮಕ್ಕಳೆ ಟಾರ್ಗೆಟ್ ಆಗಿರುವ ಆರೋಗ್ಯ ಇಲಾಖೆಗೆ ಟೇನ್ಶನ್ ಶುರುವಾಗಿದೆ. ಹೀಗಾಗಿ ಮಕ್ಕಳ ತಪಾಸಣೆ ಕಾರ್ಯ ಆರಂಭಿಸಲಾಗಿದ್ದು, ಕ್ರಿಟಿಕಲ್ ಕಂಡೀಶನ್ ಇದ್ರೆ ಚಿಕಿತ್ಸೆ ಸಹ ಪ್ರಾರಂಭ ಮಾಡಲಾಗಿದೆ.

ಹೌದು ಮಕ್ಕಳು ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ. ಮಕ್ಕಳು ಕಪ್ಪು ಇರಲಿ, ಬೆಳ್ಳಗಿರಲಿ ಹೇಗೆ ಇದ್ರೂ ಹೆತ್ತವರಿಗೆ ಮುದ್ದು. ಮನೆಯಲ್ಲಿ ಓಡಾಡಿಕೊಂಡು ಹೆತ್ತವರ ಮಡಿಲಲ್ಲಿ ನಲಿದಾಡಬೇಕಾದ ಮಕ್ಕಳು ಈಗ ಆಸ್ಪತ್ರೆಯಲ್ಲಿ ಕಣ್ಣೀರು ಹಾಕ್ತಾಯಿವೆ. ಹೌದು ಇದು ಗದಗ ಜಿಲ್ಲೆಯ ಅಪೌಷ್ಟಿಕತೆಯಿಂದ ಬಳಲುತ್ತಿರೋ ಮಕ್ಕಳ ಕಣ್ಣೀರಿನ ಕಥೆ. ಕ್ರೂರಿ ಕೊರೋನಾ ಮೂರನೇ ಅಲೆಯಿಂದ ಅಪೌಷ್ಟಿಕ ಮಕ್ಕಳನ್ನು ಬಚಾವ್ ಮಾಡಲು ಗದಗ ಜಿಲ್ಲಾಡಳಿತ ಅಪೌಷ್ಟಿಕ ಮಕ್ಕಳ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಂಡಿದೆ. ಗದಗ ನಗರದ ಕೆಸಿ ರಾಣೆ ರಸ್ತೆಯಲ್ಲಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಮಕ್ಕಳ ಆರೋಗ್ಯ ತಪಾಸಣೆ ನಡೆದಿದೆ. ತಪಾಸಣೆ ಬಂದ ಬಹುತೇಕ ಮಕ್ಕಳು ಅತೀ ಕಡಿಮೆ ತೂಕ ಹೊಂದಿವೆ. ಮಕ್ಕಳು ನೋಡೋಕೆ ಚೆನ್ನಾಗಿ ಕಾಣುತ್ತವೆ. ಆಟ, ನಲಿದಾಟ ಎಲ್ಲವೂ ಮಾಡ್ತಾವೆ. ಆದ್ರೆ ವೈದ್ಯರ ತಪಾಸಣೆ ವೇಳೆ ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರೋದು ಕಂಡು ಬಂದಿದೆ. ಅಂತಹ ಮಕ್ಕಳಿಗೆ ಪೌಷ್ಟಿಕ ಆಹಾರ ಜೊತೆಗೆ ಚಿಕಿತ್ಸೆ ಕೂಡಾ ನೀಡಲಾಗುತ್ತಿದೆ. ಹಾಗೇ ಜಿಲ್ಲೆಯಲ್ಲಿ ನಾನಾ ಕಾಯಿಲೆ ಹಾಗೂ ಅಪೌಷ್ಟಿಕತೆ ಮಕ್ಕಳ ಸರ್ವೆ ಕಾರ್ಯ ಮಾಡ್ತಾಯಿದ್ದು, ಅಂತಹವರಿಗೆ ಆರೈಕೆ ಮಾಡಲಾಗುತ್ತಿದೆ ಅಂತಾರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾ ಉಷ್ಮಾನ ಎ.

ಇದನ್ನು ಓದಿ: Delta Plus: ಕಳೆದೊಂದು ವಾರದಲ್ಲಿ ಬ್ರಿಟನ್​ನಲ್ಲಿ 50 ಸಾವಿರ ಡೆಲ್ಟಾ ಪ್ರಕರಣ ವರದಿ

ಇನ್ನೂ ಮೂರನೇಯ ಅಲೆ ಮಕ್ಕಳಿಗೆ ಹೆಚ್ಚಾಗಿ ಕಾಡುತ್ತೇ ಎನ್ನುವ ಉದ್ದೇಶದಿಂದ ಗದಗ ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ‌‌‌ ಕಲ್ಯಾಣ ಇಲಾಖೆ ಫುಲ್ ಅಲರ್ಟ್ ಆಗಿದೆ. ಈಗಾಲೇ ಜಿಲ್ಲೆಯಲ್ಲಿ ನವಜಾತ ಶಿಶುಗಳಿಂದ ಹಿಡಿದು, ಆರು ವರ್ಷದ 92 ಸಾವಿರ ಮಕ್ಕಳನ್ನು ಗುರುತಿಸಿದೆ. ಆ ಪೈಕಿ, 243 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿವೆ. ಈ ಮಕ್ಕಳಿಗೆ ಕರೊನಾ ಬರಬಹುದು ಅಂತಾ ಅಂದಾಜು ಮಾಡಿದ್ದು, ಹೆಚ್ಚಿನ ನಿಗಾ ವಹಿಸಲಾಗಿದೆ. ಗದಗ ನಗರದಲ್ಲಿ ಒಂದು, ರೋಣ ಹಾಗೂ ನರಗುಂದ ಪಟ್ಟಣದಲ್ಲಿ ಒಂದೊಂದು ಮಕ್ಕಳ ಪೌಷ್ಟಿಕ ಪುನಃಶ್ವೇತನ ಕೇಂದ್ರವನ್ನು ತೆರದು, ಮಕ್ಕಳ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ನಾನಾ ಕಾಯಿಲೆ ಹಾಗೂ ಅಪೌಷ್ಟಿಕತೆ ಬಳಲುತ್ತಿದ್ದ, ಮಕ್ಕಳಿಗೆ ಪೌಷ್ಟಿಕ ಆಹಾರದ ಜೊತೆಗೆ ಪೋಷಕರಿಗೆ ಊಟ ವಾಸ್ತವ್ಯ ನೀಡಿ ಉಪಚಾರ ಮಾಡಲಾಗುತ್ತಿದೆ.

ಕೊರೋನಾ ಮೂರನೇಯ ಅಲೆ ಮಕ್ಕಳನ್ನೆ ಟಾರ್ಗೆಟ್ ಮಾಡಿದ್ದು, ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಟ್ಚೆಚ್ಚರ ವಹಿಸಿದೆ. ನಾನಾ ಕಾಯಿಲೆ ಹಾಗೂ ಅಪೌಷ್ಟಿಕತೆ ಮಕ್ಕಳ ಪೋಷಕರು ಮಗಳ‌ ಮೇಲೆ‌ ಹೆಚ್ವಿನ ನಿಗಾ ವಹಿಸಿ, ಎಚ್ಚರಿಕೆಯಿಂದ ಇರಬೇಕಾಗಿದೆ. ಇಲ್ಲವಾದ್ರೆ ಅಪಾಯ ಕಟ್ಟಿಟ್ಟ ಬುತ್ತಿ.

ವರದಿ: ಸಂತೋಷ ಕೊಣ್ಣೂರ
Published by:HR Ramesh
First published: