• ಹೋಂ
 • »
 • ನ್ಯೂಸ್
 • »
 • ಜಿಲ್ಲೆ
 • »
 • ಅಭಿವೃದ್ಧಿ ಹೆಸರಿನಲ್ಲಿ ಅನ್ಯಾಯ; ಗದಗ ಹೊನ್ನಾಳಿ ಹೆದ್ದಾರಿ ಕಾಮಗಾರಿಯಿಂದ ರೈತರು ಹೈರಾಣು..!

ಅಭಿವೃದ್ಧಿ ಹೆಸರಿನಲ್ಲಿ ಅನ್ಯಾಯ; ಗದಗ ಹೊನ್ನಾಳಿ ಹೆದ್ದಾರಿ ಕಾಮಗಾರಿಯಿಂದ ರೈತರು ಹೈರಾಣು..!

ರಸ್ತೆ ಕಾಮಗಾರಿಯಿಂದ ಬರುತ್ತಿರುವ ಧೂಳು.

ರಸ್ತೆ ಕಾಮಗಾರಿಯಿಂದ ಬರುತ್ತಿರುವ ಧೂಳು.

ಒಂದು ಕಡೆ ಜಮೀನು ಕಳೆದುಕೊಂಡು ವೈಜ್ಞಾನಿಕ ಬೆಲೆ ಸಿಗದೆ ರೈತರು ಕಂಗಾಲಾಗಿದ್ದಾರೆ‌. ಇದ್ದ ಜಮೀನಿನಲ್ಲಿ ಫಸಲು ತೆಗೆದುಕೊಳ್ಳಬೇಕು ಅಂದರೆ ಧೂಳಿನ ಕಾಟ. ಹೀಗಾಗಿ ಈ ಭಾಗದ ರೈತರು ಗುತ್ತಿಗೆದಾರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನಾದರೂ ಹಿರಿಯ ಅಧಿಕಾರಿಗಳು ಎಚ್ಚೆತ್ತುಕೊಂಡು ನಷ್ಟ ಅನುಭವಿಸುತ್ತಿರುವ ರೈತರ ಸಹಾಯಕ್ಕೆ ಬರಬೇಕಿದೆ.

ಮುಂದೆ ಓದಿ ...
 • Share this:

ಗದಗ: ಭಾಗದ ಅನ್ನದಾತರು ಇಷ್ಟು ದಿನ ತಾವಾಯಿತು, ತಮ್ಮ ಕೃಷಿ ಆಯ್ತು ಅಂತಾ ಜೀವನ ನಡೆಸುತ್ತಿದ್ದರು. ಆದರೆ, ಆ ಭಾಗಕ್ಕೆ ಹೆದ್ದಾರಿ ಕಾಮಗಾರಿ ಆರಂಭವಾಗಿದ್ದೇ ತಡ, ಆ ರೈತರಿಗೆ ಸಂಕಷ್ಟ ಎದುರಾಗಿದೆ. ಹೌದು ಹುಲುಸಾಗಿ ಬೆಳೆದಿರುವ ಬೆಳೆಗೆ ಧೂಳಿನ ಕಾಟ‌ ಆರಂಭವಾಗಿದೆ. ಮಾರುಕಟ್ಟೆಗೆ ಫಸಲು ತೆಗೆದುಕೊಂಡು ಬಂದರೂ, ಬೆಲೆ ಸಿಗ್ತಾಯಿಲ್ಲಾ ಹೀಗಾಗಿ ಅನ್ನದಾತರು ಸಂಕಷ್ಟಕ್ಕೆ ಸಿಲುಕಿದ್ದಾರೆ.


ಧೂಳು.. ಧೂಳು ಧೂಳು ಬರೇ ಧೂಳು. ಹೌದು, ಗದಗ ಹೊನ್ನಾಳಿ ಹೆದ್ದಾರಿ ಕಾಮಗಾರಿಯಿಂದ ರೈತರು ಧೂಳಿನೊಂದಿಗೆ ಕೃಷಿ‌ ಕೆಲಸ ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಗದಗ ತಾಲೂಕಿನ ಶಿರುಂಜಿ, ಬೆಳದಡಿ, ಯಲಿ ಶಿರುಂಜಿ  ಸೇರಿದಂತೆ ಈ ಭಾಗದ ರೈತರು, ಹೆದ್ದಾರಿ ಕಾಮಗಾರಿಯಿಂದ ಹೈರಾಣಾಗಿದ್ದಾರೆ. ಈ ಭಾಗದಲ್ಲಿ ಅತಿ ಹೆಚ್ಚು ರೈತರು ನೀರಾವರಿ ಬೆಳೆಗಳಾದ, ಹೂ, ಬಾಳೆ, ಶೇಂಗಾ, ತರಕಾರಿ ಬೆಳೆಗಳು ಸೇರಿದಂತೆ ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಆದರೆ, ಅತಿಯಾದ ಧೂಳಿನಿಂದ ಬೆಳೆಯ ಮೇಲೆ ಧೂಳು ಬಂದು ಕುಡುತ್ತಿದೆ. ಜಮೀನಿನಲ್ಲಿ ಬೆಳೆದ ಬೆಳೆಯಲ್ಲಾ ಧೂಳು ಮಯವಾಗಿದ್ದು, ಬೆಳೆಯು ಕೂಡಾ ಕುಂಠಿತವಾಗಿವೆ. ಹಾಗೇ ತರಕಾರಿಗಳ ಮೇಲೆ‌ ಧೂಳ ಕುಡ್ತಾಯಿರೋದರಿಂದ ಮಾರುಕಟ್ಟೆಯಲ್ಲಿ ಈ ಭಾಗದ‌ ಫಸಲಿಗೆ ಬೆಲೆ ಸಿಗ್ತಾಯಿಲ್ಲಾ. ಮೊದಲು ತರಕಾರಿ ಹೂ ಮಾರಾಟ ಮಾಡಿ, ಕೈ ತುಂಬಾ ಹಣ ಗಳಸುತ್ತಿದ್ದರು. ಆದರೆ ಹೆದ್ದಾರಿ ಕಾಮಗಾರಿ ಧೂಳಿನಿಂದ ಬೆಳೆಗಳಿಗೆ ಬೆಲೆನೇ ಸಿಗ್ತಾಯಿಲ್ಲಾ. ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ಧೂಳ ಇರುವುದರಿಂದ ಖರೀದಿ ಕೂಡಾ ಮಾಡ್ತಾಯಿಲ್ಲಾ ಎಂದು ರೈತರು ಅಳಲು ತೋಡಿಕೊಳ್ಳುತ್ತಾರೆ.


ಬೆಳೆ ಮೇಲೆ ಕುಳಿತಿರುವ ಧೂಳು.


ಇದನ್ನು ಓದಿ: ಮೇವು ಹಗರಣ: ದುಮ್ಕಾ ಖಜಾನೆ ಪ್ರಕರಣದಲ್ಲಿ ಜಾಮೀನು, ಜೈಲಿನಿಂದ ಹೊರಬರಲಿರುವ ಲಾಲು ಪ್ರಸಾದ್ ಯಾದವ್!


ಗದಗದಿಂದ ಹೊನ್ನಾಳಿ ಸಂಪರ್ಕ ಕಲ್ಪಿಸುವ ಮೂಲಕ ಮಧ್ಯ ಕರ್ನಾಟಕ ಹಾಗೂ ಮುಂಬೈ ಕರ್ನಾಟಕ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಯೋಜನೆಯನ್ನು ಜಾರಿ ಮಾಡಲಾಗಿದೆ.  ಸುಮಾರು 99.50 ಕೋಟಿ ವೆಚ್ಚದಲ್ಲಿ 2020 ರಲ್ಲಿ ಯೋಜನೆಯನ್ನು ಜಾರಿ ಮಾಡಲಾಗಿದೆ. ಈಗ ಹೆದ್ದಾರಿ ಕಾಮಗಾರಿ ಭರದಿಂದ ಸಾಗಿದ್ದು, ಗದಗ ಜಿಲ್ಲೆಯಲ್ಲಿ ಹಾದು ಹೋಗುವ ಹೆದ್ದಾರಿ ಅಕ್ಕಪಕ್ಕದ ಭಾಗದ ರೈತರು ಧೂಳಿನಿಂದ ಹೈರಾಣಾಗಿದ್ದಾರೆ. ಹೆದ್ದಾರಿ ಕಾಮಗಾರಿ ಮಾಡುವಾಗ ಮೂರು ಹೊತ್ತು ಕಾಮಗಾರಿ ನಡೆಯುವ ರಸ್ತೆಗೆ ನೀರು ಹೊಡೆಯಬೇಕು, ಆದರೆ ಗುತ್ತಿಗೆದಾರರು ನಿಯಮಗಳು ಉಲ್ಲಂಘನೆ ಮಾಡಿ, ನೀರು ಹೊಡೆಯುತ್ತಿಲ್ಲಾ. ಹೀಗಾಗಿ ಈ ಭಾಗದ ರೈತರು ಬೆಳೆದ ಬೆಳೆ ಧೂಳಿನಿಂದ ಹಾಳಾಗಿ ಹೋಗುತ್ತಿವೆ. ಹಾಗೇ ಹೆದ್ದಾರಿ ರಸ್ತೆಗೆ ರೈತರ ಜಮೀನುಗಳನ್ನು ಭೂ ಸ್ವಾಧೀನ ಮಾಡಿಕೊಳ್ಳಲಾಗಿದ್ದು, ವೈಜ್ಞಾನಿಕವಾದ ಬೆಲೆಯನ್ನು ನೀಡಿಲ್ವಂತೆ. ಮುಂದಿನ ದಿನಗಳಲ್ಲಿ ಎಲ್ಲಾ ರೈತರು ಒಂದಾಗಿ ಹೋರಾಟ ಮಾಡುವ ಎಚ್ಚರಿಕೆಯನ್ನು ಸಹ ನೀಡಿದ್ದಾರೆ.


ಒಂದು ಕಡೆ ಜಮೀನು ಕಳೆದುಕೊಂಡು ವೈಜ್ಞಾನಿಕ ಬೆಲೆ ಸಿಗದೆ ರೈತರು ಕಂಗಾಲಾಗಿದ್ದಾರೆ‌. ಇದ್ದ ಜಮೀನಿನಲ್ಲಿ ಫಸಲು ತೆಗೆದುಕೊಳ್ಳಬೇಕು ಅಂದರೆ ಧೂಳಿನ ಕಾಟ. ಹೀಗಾಗಿ ಈ ಭಾಗದ ರೈತರು ಗುತ್ತಿಗೆದಾರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನಾದರೂ ಹಿರಿಯ ಅಧಿಕಾರಿಗಳು ಎಚ್ಚೆತ್ತುಕೊಂಡು ನಷ್ಟ ಅನುಭವಿಸುತ್ತಿರುವ ರೈತರ ಸಹಾಯಕ್ಕೆ ಬರಬೇಕಿದೆ.

top videos


  ವರದಿ: ಸಂತೋಷ ಕೊಣ್ಣೂರ

  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು