ಗ್ರಾಮ ಪಂಚಾಯ್ತಿ ಮಾಸ್ಟರ್ ಪ್ಲಾನ್​ನಿಂದಾಗಿ ಉಚಿತವಾಗಿ ಕಷಾಯ ಸೇವಿಸಿದ ಇಡೀ ಊರಿನ ಜನ!

ಗದಗ ಜಿಲ್ಲೆಯ ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮ ನಿಜಕ್ಕೂ ಮಾದರಿಯಾಗಿದೆ. ಪಿಡಿಓ ಹಾಗೂ ಗ್ರಾಮ ಪಂಚಾಯತ್ ಆಡಳಿತ ಮಂಡಳಿಯ ಮಾಸ್ಟರ್ ಪ್ಲಾನ್ ಸಖತ್ತಾಗೇ ವರ್ಕೌಟ್ ಆಗಿದೆ.

ಕಷಾಯ ಕುಡಿಯುತ್ತಿರುವ ಗ್ರಾಮದ ಜನರು.

ಕಷಾಯ ಕುಡಿಯುತ್ತಿರುವ ಗ್ರಾಮದ ಜನರು.

  • Share this:
ಗದಗ: ಮೊದಲೆಲ್ಲಾ ದುಡ್ಡು, ಅಧಿಕಾರ ಇದ್ದವನೇ ಮಹಾ ಶೂರ ಅಂತಿದ್ರು. ಆದರೆ ಈಗ ಕೊರೋನಾ ಬಂದ ಮೇಲೆ ಹ್ಯೂಮಿನಿಟಿ ಪವರ್ ಇದ್ದವನೆ ಮಹಾ ಶೂರ ಅನ್ನುವಂತಾಗಿದೆ. ಜ್ವರ, ನೆಗಡಿ, ಕೆಮ್ಮು ಬಂದ್ರೆ ಮನೆಯಲ್ಲಿ ಕಷಾಯ ಮಾಡಿಕೊಡ್ತಾರೆ. ಕಷಾಯ ಅದೇಷ್ಟೋ ರೋಗಿಗಳಿಗೆ ರಾಮ ಬಾಣ ಅಂತಾರೆ. ಇದನ್ನರಿತ ಅಬ್ಬಿಗೇರಿ ಗ್ರಾಮಸ್ಥರು ಗ್ರಾಮದ ಯಾವುದೇ ಹೋಟೆಲ್‌ಗೆ ಹೋದರೂ ಮೊದಲು ಉಚಿತ ಕಷಾಯ ಕೊಡ್ತಾರೆ. ಕಷಾಯ ಬೇಡ ಅಂದವರಿಗೆ ಟೀಫನ್, ಟೀ ಏನು ಕೊಡಲ್ಲ. ಗ್ರಾಮದ ಜನರ ಆರೋಗ್ಯ ದೃಷ್ಟಿಯಿಂದ ಗ್ರಾಮ ಪಂಚಾಯತಿಯವರು ಮಾಡಿದ ಮಾಸ್ಟರ್ ಪ್ಲಾನ್ ಇದು.

ಹೌದು ಗದಗ ಜಿಲ್ಲೆಯ ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮದಲ್ಲಿ ಇರುವ ಎಲ್ಲಾ ಹೋಟೆಲ್‌ಗಳಲ್ಲಿ ಮೊದಲು ದೊರೆಯುವುದು ಉಚಿತ ಕಷಾಯ. ಕಾರಣ ಕಷಾಯಕ್ಕೆ ಆಯುರ್ವೇದಲ್ಲಿ ವಿಶೇಷ ಸ್ಥಾನ ಇದೆ. ಗಂಟಲಿನಲ್ಲಿನ ವೈರಸ್ ಗಳನ್ನ ಕೊಲ್ಲಬಲ್ಲ, ರೋಗನಿರೋಧಕ ಶಕ್ತಿಯನ್ನ ಹೆಚ್ವಿಸುವಲ್ಲೂ ಕಷಾಯ ಸಹಾಯಕ. ಹಾಗೂ ಆರೋಗ್ಯ ದೃಷ್ಟಿಯಿಂದ ಅಬ್ಬಿಗೇರಿ ಗ್ರಾಮ ಪಂಚಾಯಿತಿ, ಗ್ರಾಮದ ಪ್ರತಿ ಹೋಟೆಲ್‌ಗಳಲ್ಲಿ ಕಷಾಯ ನೀಡುವಂತೆ ಮನವಿ ಮಾಡಿದೆ. ಹೀಗಾಗಿ ಟೀ ಅಂಗಡಿಗೆ ಬರೋ ಗ್ರಾಹಕರಿಗೆ ಮೊದಲಿಗೆ ಒಂದು ಕಪ್ ಕಷಾಯ ಕೊಟ್ಟು ಮುಂದೇನು ಬೇಕು ಅಂತ ಕೇಳ್ತಾರೆ. ಮೊದಲು ಕಷಾಯ ನಂತರ ಟೀ ಹಾಗೂ ಊಪಹಾರ ಕೊಡ್ತಾರೆ. ಕಷಾಯ ಬೇಡ ಅಂದವರಿಗೆ ಏನು ಕೊಡಲ್ಲ, ಮನೆಗೆ ಹೋಗ್ರಿ ಅಂತಾ ಕಳಿಸ್ತಾರೆ. ಗ್ರಾಮದ ಜನ್ರ ಒಳಿತಿಗಾಗಿ ಮಾಡಿರುವ ಪ್ಲಾನ್ ತುಂಬಾನೆ ಖುಷಿ ತಂದಿದೆ ಅಂತಿದ್ದಾರೆ ಸ್ಥಳೀಯರು.

ವಿಶೇಷ ಅಂದ್ರೆ ಕಷಾಯಕ್ಕೆ ಟೀ ಅಂಗಡಿಗಳಲ್ಲಿ ಯಾವುದೇ ಹಣ ಪಡೆಯೋದಿಲ್ಲ. ಇಲ್ಲಿ ಟೀ ಬೇಕಂದ್ರೂ ಮೊದಲಿಗೆ ಒಂದು ಕಪ್ ಕಷಾಯ ಕುಡಿಯಲೇಬೇಕು. ಈ ಪ್ರಯೋಗದಿಂದ ವೈರಸ್ ವಿರುದ್ಧ ಸಮರ್ಪಕವಾಗಿ ಹೋರಾಡಬಹುದು ಅನ್ನೋದು ಗ್ರಾಮಸ್ಥರ ಮಾತು. ಗ್ರಾಮ ಪಂಚಾಯತ್ ಸದಸ್ಯರು, ಅಧ್ಯಕ್ಷರು ಹಾಗೂ ಪಿಡಿಓ ಗ್ರಾಮದಲ್ಲಿ ಉಚಿತ ಕಷಾಯ ನೀಡುವ ಬಗ್ಗೆ ಯೋಜನೆ ರೂಪಿಸಿದ್ರು. ಹೋಟೆಲ್ ಮಾಲೀಕರನ್ನ ಕರೆದು ಉಚಿತ ಕಷಾಯ ನೀಡುವಂತೆ ಮನವಿ ಮಾಡಿದ್ರು. ಮೊದಲು ಒಂದು ವಾರ ಹೋಟೆಲ್‌ನವರೇ ಕಷಾಯ ಕೊಡಬೇಕು. ನಂತ್ರ ಪಂಚಾಯ್ತಿ ಸದಸ್ಯರೇ ಕಷಾಯ ಪೌಡರ್ ಹಾಗೂ ಬೆಲ್ಲವನ್ನ ಹೋಟೆಲ್‌ಗಳಿಗೆ ಪೂರೈಸುವುದಾಗಿ ಹೇಳಿದ್ದಾರೆ. ಗ್ರಾಮದ 17 ಹೋಟೆಲ್‌ಗಳಲ್ಲೂ ಇದು ಆರಂಭವಾಗಿದೆ. ಆರಂಭಿಕವಾಗಿ ದಿನಕ್ಕೆ 70 ರಿಂದ 80 ರೂಪಾಯಿ ಹೊರೆಯಾದ್ರೂ ಹೋಟೆಲ್ ಮಾಲೀಕರು ಜನರ ಒಳಿತಿಗಾಗಿ ಮಾಡುವುದಕ್ಕೆ ಮುಂದೆ ಬಂದಿದ್ದಾರೆ. ಹೀಗಾಗಿ ಜನರ ಆರೋಗ್ಯದ ದೃಷ್ಟಿಯಿಂದ ಕಷಾಯ ಹಂಚಲಾಗುತ್ತಿದೆ ಅಂತಾರೆ ಗ್ರಾಮದ ಪಿಡಿಓ.

ಇದನ್ನು ಓದಿ: ಕೆಲಸವಿಲ್ಲದ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿರುವ ವಕೀಲರ ನೆರವಿಗೆ ಬನ್ನಿ; ಕೇಂದ್ರಕ್ಕೆ ಸಿಜೆಐ ರಮಣ ಮನವಿ

ಗದಗ ಜಿಲ್ಲೆಯ ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮ ನಿಜಕ್ಕೂ ಮಾದರಿಯಾಗಿದೆ. ಪಿಡಿಓ ಹಾಗೂ ಗ್ರಾಮ ಪಂಚಾಯತ್ ಆಡಳಿತ ಮಂಡಳಿಯ ಮಾಸ್ಟರ್ ಪ್ಲಾನ್ ಸಖತ್ತಾಗೇ ವರ್ಕೌಟ್ ಆಗಿದೆ. ಕೊರೋನಾದಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಜನರು ಆರೋಗ್ಯಕರ ಆಹಾರ ಪದ್ಧತಿ ರೂಢಿಸಿಕೊಳ್ಳುವ ಮೂಲಕ ಆರೋಗ್ಯಕರ ಜೀವನ ಸಾಗಿಸಬಹುದಾಗಿದೆ. ಈ ನಿಟ್ಟಿನಲ್ಲಿ ಗ್ರಾಮಸ್ಥರು ಆರೋಗ್ಯವಾಗಿರಬೇಕು ಎಂಬ ದೃಷ್ಟಿ ಯಿಂದ ತೆಗೆದುಕೊಂಡ ಈ ನಿರ್ಧಾರಕ್ಕೆ ನಮ್ಮದೊಂದು ಸಲಾಂ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

  • ವರದಿ: ಸಂತೋಷ ಕೊಣ್ಣೂರ

Published by:HR Ramesh
First published: