ಗದಗ ಜಿಲ್ಲೆಯಲ್ಲಿ ವಿಚಿತ್ರ ರೋಗ ಬಾಧೆ, ಕಾಯಿಲೆಯಿಂದ ಮಲಗಿರುವ ರೋಗಿಗಳು; ಆತಂಕಗೊಂಡ ಗ್ರಾಮಸ್ಥರು

ಇನ್ನು ಈಗಾಗಲೇ ಹಕ್ಕಿ ಜ್ವರ ಎಲ್ಲೆಡೆ ಹರಡುತ್ತಿದ್ದು, ಅದಕ್ಕೂ ಸಹ ಜನರು ಭಯಭೀತರಾಗಿದ್ದಾರೆ. ‌ಆದರೆ ಕಾಯಿಲೆ ಹರಡಿ ಸುಮಾರು 15 ದಿನವಾದರೂ ಯಾರೂ ಈ ಬಗ್ಗೆ ಎಚ್ಚತ್ತುಕೊಂಡಿರಲಿಲ್ಲ. ಈಗ ಆರೋಗ್ಯ ಇಲಾಖೆ ಗ್ರಾಮದಲ್ಲಿ ಮೊಕ್ಕಾಂ ಹೊಡಿದ್ದು, ವರದಿ ಬಂದ ನಂತರ ವಿಚಿತ್ರ ರೋಗಕ್ಕೆ ಕಾರಣ ಗೊತ್ತಾಗಬೇಕಾಗಿದೆ.

ಗದಗ ಜಿಲ್ಲೆಯ ರೋಣ ತಾಲೂಕಿನ ಅರಹುಣಸಿ ಗ್ರಾಮ

ಗದಗ ಜಿಲ್ಲೆಯ ರೋಣ ತಾಲೂಕಿನ ಅರಹುಣಸಿ ಗ್ರಾಮ

  • Share this:
ಗದಗ: ಗದಗ ಜಿಲ್ಲೆಯ ರೋಣ ತಾಲೂಕಿನ ಅರಹುಣಸಿ ಗ್ರಾಮದಲ್ಲಿ ಕಳೆದ 15 ದಿನಗಳಿಂದ ನಿಗೂಢವಾದ ಕಾಯಿಲೆ ಇಲ್ಲಿನ ಜನರ ನಿದ್ದೆಗೆಡಿಸಿದೆ. ಸುಮಾರು 200ಕ್ಕೂ ಹೆಚ್ಚು ಜನರು ವಿವಿಧ ಕಾಯಿಲೆಯಿಂದ ಬಳಲುತ್ತಿದ್ದಾರೆ. ಒಂದೊಂದು ಮನೆಯಲ್ಲಿ ಇಬ್ಬರು, ಮೂವರು ಹಾಸಿಗೆ ಹಿಡಿದಿದ್ದಾರೆ. ಕೈಕಾಲು ಬೇನೆ, ತಲೆ ಸುತ್ತು, ಪ್ರಜ್ಞಾಹೀನತೆ, ಕಣ್ಣು ಉರಿ, ಜ್ವರ ನೆಗಡಿ, ಹೊಟ್ಟೆಯಲ್ಲಿ ಸಂಕಟವಾಗುವುದು ಹೀಗೆ ನಾನಾ ರೀತಿಯ ಸಮಸ್ಯೆಯಿಂದ ಜನರು ಬಳಲುತ್ತಿದ್ದಾರೆ. ಒಂದೊಂದು ಮನೆಯಲ್ಲಿ 10 ರಿಂದ 12 ಜನ ಹಾಸಿಗೆ ಹಿಡಿದಿದ್ದಾರಂತೆ. ದಿನದಿಂದ ದಿನಕ್ಕೆ ಈ ಕಾಯಿಲೆ ಉಲ್ಬಣಗೊಂಡಿದ್ದು ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಇದರಿಂದ ಕೆಲವರು ಊರು ಬಿಟ್ಟು ಜಮೀನಿನಲ್ಲಿ ಉಳಿದುಕೊಂಡಿದ್ದಾರಂತೆ. ಇನ್ನು ಮುಖ್ಯವಾಗಿ ಈ ಘಟನೆಗೆ ಕಾರಣ ಏನೂ ಅನ್ನೋದು ಇನ್ನೂ ಗೊತ್ತಾಗಿಲ್ಲ.

ಮುಖ್ಯವಾಗಿ ಈ ಗ್ರಾಮ ನೈರ್ಮಲ್ಯದ ಬಗ್ಗೆ ಹೆಚ್ಚು ಒತ್ತು ನೀಡಿಲ್ಲ ಅನ್ನೋ ಮಾಹಿತಿ ಲಭ್ಯವಾಗಿದೆ. ಎಲ್ಲೆಂದರಲ್ಲಿ ಕೊಳಚೆ ಇರೋದ್ರಿಂದ ರೋಗ ಹರಡುವುದಕ್ಕೆ ಕಾರಣ ಎನ್ನಲಾಗುತ್ತಿದೆ. ಜೊತೆಗೆ ಶುದ್ಧ ಕುಡಿಯುವ ನೀರಿನ ಘಟಕಗಳು ಇದ್ದರೂ ಅಲ್ಲಿ ಸಹ ಸ್ವಚ್ಛತೆ ಕಾಪಾಡಿಲ್ಲ. ಹೀಗಾಗಿ ಜನ ನಲ್ಲಿ ನೀರು ಕುಡಿಯುತ್ತಿದ್ದಾರೆ. ಅದು ಒಮ್ಮೆ ಬೋರ್ವೆಲ್ ನೀರು,  ಇನ್ನೊಮ್ಮೆ ಹೊಳೆಯಿಂದ ಬರುವ ನೀರನ್ನು ನಲ್ಲಿ ಮೂಲಕ ಬಿಡಲಾಗ್ತಿದೆಯಂತೆ. ಹೀಗಾಗಿ ಇದೂ ಕಾರಣ ಇರಬಹುದು ಅಂತ ಜನ ಹೇಳ್ತಿದ್ದಾರೆ. ಇನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳು ಇಂದು ಗ್ರಾಮಕ್ಕೆ ಭೇಟಿ ನೀಡಿ ಜನರ ರಕ್ತ ತಪಾಸಣೆಗೆ ಮುಂದಾಗಿದ್ದಾರೆ. ಹಾಗೂ ಅವರ ಗಟ್ಟಲಿನ ಮಾದರಿಯನ್ನು ತಪಾಸಣೆಗೆ ಕಳುಹಿಸಲಾಗಿದ್ದು, ವರದಿ ಬಂದ ನಂತರ ಖಚಿತವಾದ ಮಾಹಿತಿ ಲಭ್ಯವಾಗಲಿದೆ. ಈಗಾಗಲೇ ನಮ್ಮ ವೈದ್ಯಕೀಯ ಸಿಬ್ಬಂದಿಗಳು ತಪಾಸಣೆ ಮುಂದೆವರೆಸಿದ್ದಾರೆ.‌ ಯಾರು ಭಯ ಪಡುವ ಅಗತ್ಯ ಇಲ್ಲಾ ಅಂತಾ ಹೇಳ್ತಾಯಿದ್ದಾರೆ.

ಇದನ್ನು ಓದಿ: ನಾರ್ವೆಯಲ್ಲಿ ಕೊರೋನಾ ವೈರಸ್ ವಿರುದ್ಧ ಫೈಜರ್ ಲಸಿಕೆ ಪಡೆದವರಲ್ಲಿ 23 ವೃದ್ಧರ ಸಾವು!

ಅರಹುಣಸಿ ಒಂದು ಪುಟ್ಟ ಹಳ್ಳಿ. ಅಲ್ಲಿ ಇಷ್ಟು ದಿನ ಕೊರೋನಾ ಭಯವೂ ಇಲ್ಲದೆ‌ ನೆಮ್ಮದಿ ಜೀವನ ನಡೆಸುತ್ತಿದ್ದರು. ಇದೂವರೆಗೂ ಒಂದೇ ಒಂದು ವ್ಯಕ್ತಿಗೆ ಕೊರೋನಾ ಸೋಂಕು ತಗುಲಿರಲಿಲ್ಲ. ಆದರೆ ಈಗ ಆ ಊರಿಗೆ ನಿಗೂಢ ಕಾಯಿಲೆ ಲಗ್ಗೆ ಇಟ್ಟಿದೆ. ಇಡೀ ಊರಿಗೆ ಊರೇ ಕಾಯಿಲೆಯಿಂದ ಬಳಲುತ್ತಿದೆ.

ಇನ್ನು ಈಗಾಗಲೇ ಹಕ್ಕಿ ಜ್ವರ ಎಲ್ಲೆಡೆ ಹರಡುತ್ತಿದ್ದು, ಅದಕ್ಕೂ ಸಹ ಜನರು ಭಯಭೀತರಾಗಿದ್ದಾರೆ. ‌ಆದರೆ ಕಾಯಿಲೆ ಹರಡಿ ಸುಮಾರು 15 ದಿನವಾದರೂ ಯಾರೂ ಈ ಬಗ್ಗೆ ಎಚ್ಚತ್ತುಕೊಂಡಿರಲಿಲ್ಲ. ಈಗ ಆರೋಗ್ಯ ಇಲಾಖೆ ಗ್ರಾಮದಲ್ಲಿ ಮೊಕ್ಕಾಂ ಹೊಡಿದ್ದು, ವರದಿ ಬಂದ ನಂತರ ವಿಚಿತ್ರ ರೋಗಕ್ಕೆ ಕಾರಣ ಗೊತ್ತಾಗಬೇಕಾಗಿದೆ.

ವರದಿ: ಸಂತೋಷ ಕೊಣ್ಣೂರ
Published by:HR Ramesh
First published: