HOME » NEWS » District » GADAG SUCCESSFUL SURGERY FOR PREGNANT WOMEN INFECTED WITH CORONAVIRUS SKG MAK

ಗದಗ: ಕೊರೋನಾ ಸೋಂಕಿತ ಗರ್ಭಿಣಿಯರಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ...!

ಅಷ್ಟಕ್ಕೂ ಅವ್ರು ತುಂಬು ಗರ್ಭಿಣಿಯರು ಎರಡು ದಿನದ ಹಿಂದೆ ಚಿಕಿತ್ಸೆಗೆಂದು ಗದಗ ಜಿಮ್ಸ್ ಗೆ ಬಂದಿದ್ದರು. ಆದರೆ ಹೆರಿಗೆಗೂ ಮುನ್ನ ಕೊರೋನಾ ಟೆಸ್ಟ್ ಮಾಡಿದಾಗಿ ಇಬ್ಬರು ಗರ್ಭಿಣಿಯರಿಗೆ ಪಾಸಿಟಿವ್ ದೃಢವಾಗಿದೆ.

news18-kannada
Updated:April 26, 2021, 7:39 AM IST
ಗದಗ: ಕೊರೋನಾ ಸೋಂಕಿತ ಗರ್ಭಿಣಿಯರಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ...!
ಗದಗ ಸರ್ಕಾರಿ ಆಸ್ಪತ್ರೆ.
  • Share this:
ಗದಗ: ಕ್ರೂರಿ ಕೊರೋನಾ ಎಲ್ಲರ ಬಾಳಲ್ಲೂ ಆಟ ಆಡ್ತಾಯಿದೆ. ಅದ್ರಲ್ಲೂ ಈಗ ತಾನೇ ಹುಟ್ಟಿದ ಹಸುಗೂಸನ್ನು ತಾಯಿ ಎತ್ತಿಕೊಂಡು ಮುದ್ದಾಡದಂತೆ ಮಾಡಿದೆ ಹೆಮ್ಮಾರಿ ಕೊರೋನಾ. ಹೌದು ಬಾಣಂತಿಗೆ ಕರೊನಾ ಪಾಸಿಟಿವ್ ಆಗಿದೆ. ವೈದ್ಯರೂ ಹೆಮ್ಮಾರಿ ಭಯದಲ್ಲೂ ಎರಡು ಸಿಜಿರಿಯನ್ ಮಾಡಿ ಯಶಸ್ವಿ ಹೆರಿಗೆ ಮಾಡಿದ್ದಾರೆ. ಆದ್ರೆ, ಪಾಪ ಬಾಣಂತಿಯರು ಮುದ್ದಾದ ಕಂದಮ್ಮಗಳಿಗೆ ಜನ್ಮ ನೀಡಿದ್ರೂ ಪ್ರೀತಿಯ ಕಂದಮ್ಮಗಳನ್ನು ಎತ್ತಿಕೊಂಡು ಮುದ್ದಾಡುವ ಭಾಗ್ಯವಿಲ್ಲ. ಪಕ್ಕದಲ್ಲೇ ಕಂದಮ್ಮ ಇದ್ರೂ ಮುದ್ದಾಡೋಕೆ ಹೆಮ್ಮಾರಿ ಅಡ್ಡಿ ಮಾಡಿದೆ.  ಹೌದು ಮಹಿಳೆಯರು ಹೆರಿಗೆ ಆದ್ರೆ ಸಾಕು ಖುಷಿಗೆ ಪಾರವೇ ಇರಲ್ಲ. ಹೆತ್ತ ಕಂದನನ್ನು ಮುದ್ದಾಡಿ ಖುಷಿ ಪಡುವ ಸಮಯವದು. ಮನೆ ಮಂದಿಯೆಲ್ಲಾ ಮುದ್ದಾದ ಕಂದಮ್ಮನನ್ನು ನೋಡಿ ಸಂಭ್ರಮಿಸುವ ಸಂದರ್ಭ.

ಆದರೆ, ಕ್ರೂರಿ ಕೊರೋನಾ ಅಟ್ಟಹಾಸದ ಅಟ್ಟಹಾಸಕ್ಕೆ ಹೆತ್ತ ಕಂದಮ್ಮಗಳು ಪಕ್ಕದಲ್ಲೇ ಮಲಗಿದ್ರು ಆ ತಾಯಂದಿರಿಗೆ ಮುದ್ದಾಡುವ ಭಾಗ್ಯವಿಲ್ಲ. ಈ ಮನಕಲುಕುವ ದೃಶ್ಯಗಳು ಕಂಡಿದ್ದ ಗದಗ ಜಿಮ್ಸ್ ಆಸ್ಪತ್ರೆಯ ಕೋವಿಡ್ ವಾರ್ಡ್ ನಲ್ಲಿ. ಕಣ್ಣು ಬಿಡುವ ಮೊದಲೇ ತಾಯಿ ಹಸುಗೂಸು ಮುದ್ದಾಡದಂತೆ ಮಾಡಿದ ಕಿಲ್ಲರ್ ಕೊರೊನಾಕ್ಕೆ ಎಲ್ಲರೂ ಹಿಡಿಶಾಪ ಹಾಕ್ತಾಯಿದ್ದಾರೆ. ಅಂದ್ಹಾಗೆ ಗದಗ ಜಿಲ್ಲೆಯ ಇಬ್ಬರು ಗರ್ಭಿಣಿಯರಿಗೆ ಕೊರೊನಾ ಪಾಸಟಿವ್ ದೃಢಪಟ್ಟಿದೆ.

ಅಷ್ಟಕ್ಕೂ ಅವ್ರು ತುಂಬು ಗರ್ಭಿಣಿಯರು ಎರಡು ದಿನದ ಹಿಂದೆ ಚಿಕಿತ್ಸೆಗೆಂದು ಗದಗ ಜಿಮ್ಸ್ ಗೆ ಬಂದಿದ್ದರು. ಆದರೆ ಹೆರಿಗೆಗೂ ಮುನ್ನ ಕೊರೋನಾ ಟೆಸ್ಟ್ ಮಾಡಿದಾಗಿ ಇಬ್ಬರು ಗರ್ಭಿಣಿಯರಿಗೆ ಪಾಸಿಟಿವ್ ದೃಢವಾಗಿದೆ. ತಕ್ಷಣ ಗದಗ ಜಿಮ್ಸ್ ವೈದ್ಯರ ತಂಡ ಹೆರಿಗೆ ಮಾಡಿಸುವ ನಿರ್ಧಾರಕ್ಕೆ ಬಂದರು. ತುಂಬು ಗರ್ಭಿಣಿಯರನ್ನು ಸಿಜಿರಿಯನ್ ಮಾಡುವ ಮೂಲಕ ಯಶಸ್ವಿ ಹೆರಿಗೆ ಮಾಡಿಸಿದ್ದಾರೆ.

ಹೆರಿಗೆ ಮಾಡಿಸುವ ಸವಾಲು ಜಿಮ್ಸ್ ವೈದ್ಯರಿಗೆ ಎದುರಾಗಿತ್ತು. ಜಿಮ್ಸ್ ನಿರ್ದೇಶಕ ಡಾ. ಪಿ ಎಸ್ ಭೂಸರೆಡ್ಡಿ ಮಾರ್ಗದರ್ಶನದಲ್ಲಿ ತಯಾರಾದ ಮೂರು ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಕೊರೊನಾ ಸೋಂಕಿತ ಗರ್ಭಿಣಿಯರಿಗೆ ಹೆರಿಗೆ ಮಾಡಿದ್ದಾರೆ. ಈಗ ತಾಯಂದಿರು ಹಾಗೂ ಕಂದಮ್ಮಗಳು ಆರೋಗ್ಯವಾಗಿ ಇದ್ದಾರೆ.

ಒಂದು ಗಂಡು, ಒಂದು ಹೆಣ್ಣು ಮಗುವಿಗೆ ತಾಯಂದಿರರು ಜನ್ಮ ನೀಡಿದ್ದಾರೆ. ಪಕ್ಕದಲ್ಲೇ ಕಂದಮ್ಮಗಳನ್ನು ಮಲಗಿಸಿಕೊಂಡಿದ್ದಾರೆ. ಆದ್ರೆ, ಕೇವಲ ಫೀಡಿಂಗ್ ಮಾತ್ರ ಮಾಡಬೇಕು. ಆದ್ರೆ, ಹೆತ್ತ ತಾಯಿಯಾದ್ರೂ ಕಂದಮ್ಮಗಳನ್ನು ಮುದ್ದಾಡುವಂತಿಲ್ಲ. ಹೀಗಾಗಿ ಕರುಳಿನ ಕುಡಿಗಳ ಆಟ, ನಕ್ಕರೂ ಖುಷಿಯಿಂದ ಮುದ್ದಾಡುವಂತಿಲ್ಲ. ಇದು ತಾಯಂದಿರರ ನೋವಿಗೆ ಕಾರಣವಾಗಿದೆ. ಇನ್ನು ತಂದೆ, ಅಜ್ಜ, ಅಜ್ಜಿಗಳಿಗೂ ಕಂದಮ್ಮಗಳ ನೋಡುವ ಭಾಗ್ಯ ಇಲ್ಲದಂತಾಗಿದೆ.

ಇದನ್ನೂ ಓದಿ: CoronaVirus: ಭಾರತದಲ್ಲಿ ಕೈಮೀರಿದ ಕೋವಿಡ್; ಅಮೆರಿಕದಿಂದ ಸಹಾಯ ಹಸ್ತದ ಭರವಸೆ!

ಜಿಮ್ಸ್ ಕೋವಿಡ್ ವಾರ್ಡ್ ಗಳಲ್ಲಿ ಕರೊನಾ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಂದಮ್ಮಗಳು ಆರೋಗ್ಯವಾಗಿವೆ. ತಾಯಿಯ ಪಕ್ಕದಲ್ಲೇ ಚೆನ್ನಾಗಿ ಆಟವಾಡುತ್ತಿವೆ. ಅತ್ತ ತಾಯಿ ಬಳಿ ಕೇವಲ‌ ಕೊರೊನಾ ಪೇಷೆಂಟ್ ತುಂಬಿದ್ದಾರೆ. ಈ ಮೂಲಕ ಮಹಾಮಾರಿ ಕೊರೊನಾ ತಾಯಿ ಪಕ್ಕದಲ್ಲೇ ಇದ್ರೂ ಅಪ್ಪಿಕೊಳ್ಳುವಂತಿಲ್ಲ. ಮುದ್ದಾಡುವ ಹಾಗಿಲ್ಲ.. ಪಕ್ಕದಲ್ಲೇ ಇದ್ರೂ ತಾಯಿ ಮಕ್ಕಳನ್ನು ಬೇರೆ ಮಾಡಿ ಕ್ರೂರಿ ಕರೊನಾ ಚೆಲ್ಲಾಟವಾಡ್ತಿದೆ.
Youtube Video

ಸಂಬಂಧಿಕರು ಮುದ್ದಾದ ಮಕ್ಕಳುನ್ನು ನೋಡಬೇಕಂದ್ರೆ ಯಾರನ್ನೂ ಕೋವಿಡ್ ವಾರ್ಡ್ ಗೆ ಬಿಡುವಂತಿಲ್ಲ. ಪಕ್ಕದಲ್ಲೇ ಕಂದಮ್ಮಗಳು ಇದ್ರೂ ಮುದ್ದಾಡುವ ಭಾಗ್ಯ ತಾಯಂದಿರರಿಗೆ ಇಲ್ಲ. ಇನ್ನು ಹೊರಗಳು ತಂದೆ, ಅಜ್ಜ, ಅಜ್ಜಿಯರಿಗೆ ಮುದ್ದಾಡುವ ಭಾಗ್ಯವಿದೆ. ಆದ್ರ ಕಂದ ಇಲ್ಲ. ಇದೆಂಥಾ ದುರ್ದೈವ ನೋಡಿ. ಕ್ರೂರಿಯ ಅಟ್ಟಹಾಸಕ್ಕೆ ತಾಯಂದಿರರು ಹಿಡಿಶಾಪ ಹಾಕುತ್ತಿದ್ದಾರೆ.

(ವರದಿ: ಸಂತೋಷ ಕೊಣ್ಣೂರ)
Published by: MAshok Kumar
First published: April 26, 2021, 7:39 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories