• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಹಿರಿಯ ಹಸುವಿನ ಅಂತ್ಯ ಸಂಸ್ಕಾರ ವೇಳೆ ನಡೆಯಿತು ಅಚ್ಚರಿ; ಗೋವುಗಳ ಅಂತಃಕರಣ ಕಂಡು ಸ್ವಾಮೀಜಿಗಳೇ ಮೂಕರಾದರು!

ಹಿರಿಯ ಹಸುವಿನ ಅಂತ್ಯ ಸಂಸ್ಕಾರ ವೇಳೆ ನಡೆಯಿತು ಅಚ್ಚರಿ; ಗೋವುಗಳ ಅಂತಃಕರಣ ಕಂಡು ಸ್ವಾಮೀಜಿಗಳೇ ಮೂಕರಾದರು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಗೌರಿ ಎನ್ನುವ ಹಿರಿಯ ಹಸು ಹಲವಾರು ವರ್ಷಗಳಿಂದ ಶ್ರೀ ಮಠದ ಗೋ ಶಾಲೆಯಲ್ಲಿ ವಾಸವಾಗಿತ್ತು. ಆದರೆ, ಇತ್ತಿಚಿನ ಕೆಲವು ದಿನಗಳಿಂದ ಗೌರಿ ಎನ್ನುವ ಗೋವು ಅನಾರೋಗ್ಯದಿಂದ ವಯೋಸಹಜವಾಗಿ ಸಾವನ್ನಪ್ಪಿದೆ

  • Share this:

ಗದಗ: ಮಾನವೀಯತೆ, ಅಂತಃಕರಣ ಎಂಬುದು ಮನಷ್ಯರಿಗೆ ಹೆಚ್ಚಾಗಿ ಮೂಕ ಪ್ರಾಣಿಗಳಲ್ಲಿಯೇ ಇರುತ್ತದೆ ಎಂಬುದು ಅನೇಕ ಬಾರಿ ಸಾಬೀತಾಗಿದೆ. ಈಗ ಇಂತಹದೇ ಒಂದು ಘಟನೆ ಜಿಲ್ಲೆ ನರಗುಂದ ಪಟ್ಟಣದ ಶ್ರೀ ಸಿದ್ದೇಶ್ವರ ಪಂಚಗ್ರಹ ಗುಡ್ಡದ ಹಿರೇಮಠದಲ್ಲಿ ನಡೆದಿದೆ. ಮನುಷ್ಯ ಸಾವನ್ನಪ್ಪಿದ್ದರೆ, ಹತ್ತು ಸಾರಿ ಕರೆದರೂ ಅಂತ್ಯ ಸಂಸ್ಕಾರಕ್ಕೆ ಬರಲು ಹಿಂದೆ ಮುಂದೆ ನೋಡುವ ಕಾಲ ಇದು. ಆದ್ರೆ ಇಲ್ಲೊಂದು ಅಚ್ಚರಿ ಎಂಬಂತೆ ತಮ್ಮೊಟ್ಟಿಗೆ ಇದ್ದ ಹಿರಿಯ ಹಸುವೊಂದು ವಯೋಸಹಜ ಸಾವನ್ನಪ್ಪಿದ್ದಾಗ ಅದರ ಅಂತ್ಯಸಂಸ್ಕಾರದಲ್ಲಿ ಇತರೆ ಹಸುಗಳು ಭಾಗಿಯಾಗಿ ಕಂಬನಿ ಮಿಡಿದಿವೆ. ಗೌರಿ ಎನ್ನುವ ಹಿರಿಯ ಹಸು ಹಲವಾರು ವರ್ಷಗಳಿಂದ ಶ್ರೀ ಮಠದ ಗೋ ಶಾಲೆಯಲ್ಲಿ ವಾಸವಾಗಿತ್ತು. ಆದರೆ, ಇತ್ತಿಚಿನ ಕೆಲವು ದಿನಗಳಿಂದ ಈ ಗೋವು ಅನಾರೋಗ್ಯದಿಂದ ವಯೋಸಹಜವಾಗಿ ಸಾವನ್ನಪ್ಪಿದೆ. ಶ್ರೀ ಮಠದಲ್ಲಿ ಬೆಳೆದ ಗೌರಿಯನ್ನು ವೀರಶೈವ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ಮಾಡಲಾಗುತ್ತಿತ್ತು. ಈ ವೇಳೆ ಜೆಸಿಬಿ ಮೂಲಕ ಕುಣಿ ತೆಗೆದು, ಅಂತ್ಯ ಸಂಸ್ಕಾರ ಮಾಡುವಾಗ ಗೋ ಶಾಲೆಯ ಇತರೆ ಹಸುಗಳು ಆಗಮಿಸಿವೆಯಂತೆ. ರಾತ್ರಿ ಅಂತ್ಯ ಸಂಸ್ಕಾರ ಮಾಡುವ ಬಂದು ಸಂತಾಪ ವ್ಯಕ್ತಪಡಿಸಿವೆ ಎಂದು ಸಿದ್ದೇಶ್ವರ ಪಂಚಗ್ರಹ ಗುಡ್ಡದ ಹಿರೇಮಠ ಮಠದ ಶ್ರೀಗಳಾದ ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ತಿಳಿಸಿದ್ದಾರೆ.


ಇನ್ನು ಶ್ರೀ ಮಠದ ಗೋ ಶಾಲೆಯಲ್ಲಿ 20 ದೇಶಿ ಗೋವುಗಳಿವೆ. ಆ ಪೈಕಿ ಹಿರಿಯ ಗೋವು ಅಂದ್ರೆ ಗೌರಿ ಎನ್ನುವ ಕಿಲಾರಿ ಜಾತಿಗೆ ಸೇರಿದ ಹಸು. ಗೌರಿ ಎನ್ನುವ ಹಸು ಗೋ ಶಾಲೆಗೆ ಬಂದ ನಂತರ ಇತರೆ ಹಸುಗಳು ಬಂದಿದ್ದು, ಗೌರಿ ಬೇರೆ ಹಸುಗಳ ಜೊತೆಗೆ ಬಹಳ ಸಭ್ಯತೆಯಿಂದ ವರ್ತನೆ ಮಾಡುತ್ತಿತ್ತು. ಹಾಗೇ ಬೇರೆ ಕರುಗಳಿಗೆ ಹಾಲು‌ ಕುಡಿಸುವ ಮೂಲಕ ಎಲ್ಲಾ ಹುಸಗಳು ಜೊತೆಗೆ ಬೇರೆತು, ಸಹಬಾಳ್ವೆ ನಡೆಸುತ್ತಿತ್ತು. ಹೀಗಾಗಿ ಈ ಗೌರಿ ಎನ್ನುವ ಹಸು ಕಂಡ್ರೆ ಇತರೆ ಹಸುಗಳಿಗೂ ಬಹಳ ಪ್ರೀತಿ.


ಇನ್ನೂ ಗೋ ಶಾಲೆಯಲ್ಲಿ 10 ಹೆಚ್ಚು ಕರುಗಳಿಗೆ ಜನ್ಮ ನೀಡಿದ್ದ, ಗೌರಿ ಎನ್ನುವ ಹಸು ಸಾವನ್ನಪ್ಪಿದಾಗ ಇತರೆ ಹಸುಗಳು ಬಂದು ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದು, ನಮಗೂ ಬಹಳ ಅಚ್ಚರಿ ಅನಿಸುತ್ತದೆ ಅಂತಾರೆ ಭಕ್ತರು.


ಹಸುವಿನ ಅಂತ್ಯ ಸಂಸ್ಕಾರದ ವೇಳೆ ಉಳಿದ ಹಸುಗಳು ಗೋ ಶಾಲೆಯಲ್ಲಿದ್ದವು. ಅವುಗಳು ಸ್ವ ಇಚ್ಛೆಯಿಂದಾಗಿ ಕೊಟ್ಟಿಗೆ ದಾಟಿ ಅಂತ್ಯ ಕ್ರಿಯೆ ಸ್ಥಳಕ್ಕೆ ಬಂದು ಮೌನವಾಗಿ ನಿಂತವು. ಈ ವೇಳೆ ನಮ್ಮ ಕಣ್ಣೆ ಒದ್ದೆಯಾದಂತೆ ಆಯಿತು. ಅಗಲಿದ ಹಿರಿಯ ಹಸುವನ್ನು ಕಂಡ ಉಳಿದ ಹಸುಗಳು ಮೌನವಾಗಿ ಕಣ್ಣೀರು ಸುರಿಸುತ್ತಿದ್ದವು. ಈ ಘಟನೆ ಎಂತಹವರ ಕರಳುನ್ನು ಹಿಂಡುವಂತೆ ಇತ್ತು.


ಜನರು ಒಡಹುಟ್ಟಿದವರ ಅಂತ್ಯ ಸಂಸ್ಕಾರದಲ್ಲಿಯೇ ಭಾಗಿಯಾಗುವುದ ಕಷ್ಟ ಎಂಬಂತೆ ಇರುವ ಈ ಕಾಲದಲ್ಲಿ ಹಸುಗಳ ಈ ದೃಶ್ಯ ಎಲ್ಲರ ಮನಕಲಿದ್ದು ಸುಳ್ಳಲ್ಲ.


(ವರದಿ: ಸಂತೋಷ ಕೊಣ್ಣೂರು)

First published: