HOME » NEWS » District » GADAG PEOPLE DEMANDING STATE GOVERNMENT TO CONSIDER RUDRAPPA MATTIKATTIS NAME FOR KANNADA RAJYOSTAVA AWARD AE

ಹಿರಿಯ ರಂಗ ಕಲಾವಿದ ರುದ್ರಪ್ಪ ಮುತ್ತಿಕಟ್ಟಿಗೆ ರಾಜ್ಯೋತ್ಸವ ಪ್ರಶಸ್ತಿ; ಗದಗ ಜನರಿಂದ ಆಗ್ರಹ

90 ವರ್ಷದ ರುದ್ರಪ್ಪ ಮತ್ತಿಗಟ್ಟಿ ಅವರು ದಿವಂಗತ ಪಂಡಿತ ಪುಟ್ಟರಾಜ ಗವಾಯಿ ಅವರ ಶಿಷ್ಯರು.  ನೂರಾರು ನಾಟಕ ಮಾಡಿ ಸೈ ಎನಿಸಿಕೊಂಡಿದ್ದಾರೆ. ಗದಗ ಜಿಲ್ಲಾಡಳಿತದಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ರಂಗಭೀಷ್ಮ, ಜಗದ್ಗುರು ಪಂಚಾಚಾರ್ಯ ಸೇವಾ ಸಂಘದಿಂದ ನಟಶೇಖರ ಪ್ರಶಸ್ತಿ ಸೇರಿದಂತೆ ಸ್ಥಳೀಯವಾಗಿ ಹಾಗೂ ವಿವಿಧ ಜಿಲ್ಲೆಗಳಿಂದ ನೂರಾರು ಪ್ರಶಸ್ತಿಗಳು ಇವರನ್ನು ಅರಸಿ ಬಂದಿವೆ.

news18-kannada
Updated:October 11, 2020, 3:29 PM IST
ಹಿರಿಯ ರಂಗ ಕಲಾವಿದ ರುದ್ರಪ್ಪ ಮುತ್ತಿಕಟ್ಟಿಗೆ ರಾಜ್ಯೋತ್ಸವ ಪ್ರಶಸ್ತಿ; ಗದಗ ಜನರಿಂದ ಆಗ್ರಹ
ರುದ್ರಪ್ಪ ಮುತ್ತಿಕಟ್ಟಿ
  • Share this:
ಮುದ್ರಣ ಕಾಶಿ ಗದಗದ ಆದರ್ಶ ನಗರದ ಹಿರಿಯ ರಂಗ ಕಲಾವಿದ ರುದ್ರಪ್ಪ ಮುತ್ತಿಕಟ್ಟಿ.  ತಮ್ಮ ಜೀವನದಲ್ಲಿ ಸುದೀರ್ಘವಾಗಿ ಅಂದ್ರೆ 60 ವರ್ಷಗಳ ಕಾಲ ರಂಗಭೂಮಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ‌ಉತ್ತರ ಕರ್ನಾಟಕದ ಪ್ರಮುಖ ನಾಟಕಗಳಲ್ಲಿ ಅಭಿನಯಿಸಿ ಜನರ ಮೆಚ್ಚುಗೆ ಪಾತ್ರರಾಗಿದ್ದಾರೆ. ಪ್ರಮುಖವಾಗಿ ಸಿಂಧೂರ ಲಕ್ಷ್ಮಣ, ಬಸ್ ಕಂಡಕ್ಟರ್, ಗರೀಬಿ ಹಠಾವೊ, ಸೈನಿಕನ ಸಹೋದರಿ, ಅಕ್ಕಮಹಾದೇವಿ, ಶ್ರೀ ಕೃಷ್ಣ ಗಾರುಡಿ, ಹೇಮರೆಡ್ಡಿ ಮಲ್ಲಮ್ಮ, ಜೈ ಜವಾನ, ಜೈ ಕಿಸಾನ್ ಸೇರಿದಂತೆ ನೂರಾರು ನಾಟಕಗಳನ್ನು ಮಾಡಿದ್ದಾರೆ. ಉತ್ತರ ಕರ್ನಾಟಕ ನಾನಾ ಭಾಗಗಳಲ್ಲಿ ನಾಟಕ ಪ್ರದರ್ಶನ ಮಾಡಿ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದನೆ ಮಾಡಿದ್ದಾರೆ. 60 ವರ್ಷಗಳಿಂದ ಅವರು ರಂಗಭೂಮಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಇಂತಹ ಅಪರೂಪದ ವ್ಯಕ್ತಿಯನ್ನು ಗುರುತಿಸಿ, ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು ಎನ್ನುವದು ಜಿಲ್ಲೆಯ ಜನರ ಒತ್ತಾಯವಾಗಿದೆ. 

90 ವರ್ಷದ ರುದ್ರಪ್ಪ ಮತ್ತಿಗಟ್ಟಿ ಅವರು ದಿವಂಗತ ಪಂಡಿತ ಪುಟ್ಟರಾಜ ಗವಾಯಿ ಅವರ ಶಿಷ್ಯರು.  ನೂರಾರು ನಾಟಕ ಮಾಡಿ ಸೈ ಎನಿಸಿಕೊಂಡಿದ್ದಾರೆ. ಗದಗ ಜಿಲ್ಲಾಡಳಿತದಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ರಂಗಭೀಷ್ಮ, ಜಗದ್ಗುರು ಪಂಚಾಚಾರ್ಯ ಸೇವಾ ಸಂಘದಿಂದ ನಟಶೇಖರ ಪ್ರಶಸ್ತಿ ಸೇರಿದಂತೆ ಸ್ಥಳೀಯವಾಗಿ ಹಾಗೂ ವಿವಿಧ ಜಿಲ್ಲೆಗಳಿಂದ ನೂರಾರು ಪ್ರಶಸ್ತಿಗಳು ಇವರನ್ನು ಅರಸಿ ಬಂದಿವೆ.

Gadag people demanding state government to consider rudrappa mattikattis name for Kannada Rajyostava award
ರುದ್ರಪ್ಪ ಮುತ್ತಿಕಟ್ಟಿ

ಹಿರಿಯ ಕಲಾವಿದರಾದ ವೀರೇಂದ್ರ ಗೋಪಾಲ, ಉದಯ ಕುಮಾರ್ ಸೇರಿದಂತೆ ನಾನಾ ಹಿರಿಯ ಕಲಾವಿದರೊಂದಿಗೆ ಅಭಿನಯಿಸಿದ್ದಾರೆ ರುದ್ರಪ್ಪ ಮುತ್ತಿಕಟ್ಟಿ.  22 ನೇ ವಯಸ್ಸಿನವರಿದ್ದಾಗ ವೃತ್ತಿರಂಗಭೂಮಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು, ಕಲಾ ಸೇವೆಯನ್ನು ಮಾಡಿದ್ದಾರೆ.

Gadag people demanding state government to consider rudrappa mattikattis name for Kannada Rajyostava award
ಗರೀಬಿ ಹಠಾವೊ ನಾಟಕದಲ್ಲಿ ಧೀರೇಂದ್ರ ಗೋಪಾಲ್​ ಅವರೊಂದಿಗೆ ರುದ್ರಪ್ಪ ಮತ್ತಿಕಟ್ಟಿ

ಇತ್ತೀಚೆಗೆ ಅವರ ಕಿವಿ ಸರಿಯಾಗಿ ಕೇಳುತ್ತಿಲ್ಲ. ಹೀಗಾಗಿ ಮನೆಯಲ್ಲಿಯೇ ಇರುತ್ತಾರೆ. ಜೀವನದ ಉದ್ದಕ್ಕೂ ಬಣ್ಣ ಹಚ್ಚಿದ ಕಲಾವಿದನಿಗೆ ಈಗ ಮುಪ್ಪು ಆವರಿಸಿಕೊಂಡಿದೆ. ಆಧುನಿಕ ಕಾಲದ ಭರಾಟೆಯ ನಡುವೆ ರಂಗಭೂಮಿಯನ್ನು ಉಳಿಸಿ ಬೆಳೆಸಿದ್ದಾರೆ. ಇನ್ನಾದರೂ ಅವರನ್ನು ಗುರುತಿಸಿ, ಸರ್ಕಾರ ಈ ಸಲವಾದರೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಬೇಕು ಎನ್ನುವುದು ಮುದ್ರಣ ಕಾಶಿ ಗದಗ ಜಿಲ್ಲೆಯ ಜನರ ಆಶಯವಾಗಿದೆ.
Published by: Anitha E
First published: October 11, 2020, 3:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories