ನ್ಯೂಸ್18 ಅಭಿಯಾನಕ್ಕೆ ಸ್ಪಂದಿಸಿದ ಗದಗದ ಮಹಾರಾಣಾ ಪ್ರತಾಪ್ ಶಿಕ್ಷಣ ಸಂಸ್ಥೆ; 250ಕ್ಕೂ ಹೆಚ್ಚು ಮಕ್ಕಳಿಗೆ ಉಚಿತ ಶಿಕ್ಷಣ

ಕೆಲವು ಸಂಸ್ಥೆಗಳು ಶೇಕಡಾ 50 ರಷ್ಟು ಫೀಸ್ ಕಡಿಮೆ ಮಾಡಲು ಮುಂದಾಗಿವೆ. ಈ ನಡುವೆ ಗದಗ ಬೆಟಗೇರಿಯ ಮಹಾರಾಣಾ ಪ್ರತಾಪ್‌ ಸಿಂಹ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಮುಂದೆ ಬಂದಿರುವು ಎಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಮಾದರಿಯಾಗಿದೆ.

ಗದಗದ ರಾಣಾ ಪ್ರತಾಪ ಸಿಂಹ ಶಿಕ್ಷಣ ಸಂಸ್ಥೆ

ಗದಗದ ರಾಣಾ ಪ್ರತಾಪ ಸಿಂಹ ಶಿಕ್ಷಣ ಸಂಸ್ಥೆ

  • Share this:
ಗದಗ:  ನ್ಯೂಸ್ 18 ಕನ್ನಡ ನಿರಂತರವಾಗಿ ಪ್ಲೀಜ್ ಫೀಸ್ ಕಡಿಮೆ ಮಾಡಿ ಅಂತಾ ಜನಾಭಿಪ್ರಾಯ ಸಂಗ್ರಹಣೆಯ ಅಭಿಯಾನ ನಡೆಸಿತ್ತು. ನ್ಯೂಸ್ 18  ಅಭಿಯಾನಕ್ಕೆ ಗದಗನ ಬೆಟಗೇರಿಯ ಮಹಾರಾಣಾ ಪ್ರತಾಪ್‌ ಸಿಂಹ ಶಿಕ್ಷಣ ಸಂಸ್ಥೆಯು ಸ್ಪಂದಿಸಿದ್ದು, 250ಕ್ಕೂ ಹೆಚ್ಚು ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಮುಂದಾಗಿದೆ.

ಮಹಾರಾಣಾ ಪ್ರತಾಪ್‌ ಸಿಂಹ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಗಣೇಶ್ ಸಿಂಗ್ ಬ್ಯಾಳಿ ಶಾಲಾ ಆಡಳಿತ ಮಂಡಳಿಯೊಂದಿಗೆ ಸಭೆ ನಡೆಸಿ ಈ ವರ್ಷ ವಿದ್ಯಾರ್ಥಿಗಳಿಂದ ಫೀಸ್ ತೆಗೆದುಕೊಳ್ಳುವಂತಿಲ್ಲ  ಎಂದು ನಿರ್ಣಯ ತಗೆದುಕೊಂಡಿದ್ದಾರೆ. ಸದ್ಯ ಮಹಾರಾಣಾ ಪ್ರತಾಪ್‌ ಸಿಂಹ ಶಾಲೆಯಲ್ಲಿ 8 ರಿಂದ ಪಿಯುಸಿ ವರೆಗೆ ಸುಮಾರು 250 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಮಕ್ಕಳಿಗೆ ಉಚಿತ ಶಿಕ್ಷಣದ ಜೊತೆಗೆ ಸಮವಸ್ತ್ರ, ನೋಟ್ ಬುಕ್,ಪಠ್ಯ ಪುಸ್ತಕ ವಿತರಣೆ ಮಾಡಲೂ ಸಹ ನಿರ್ಧರಿಸಲಾಗಿದೆ.

ಮಹಾಮಾರಿ ಕೊರೋನಾ ಸೋಂಕನ್ನು ತಡೆಗಟ್ಟಲು ಸರ್ಕಾರ ಲಾಕ್ ಡೌನ್ ಘೋಷಿಸಿತ್ತು. ಹೀಗಾಗಿ ಜನರು ಮನೆಯಿಂದ ಹೊರಗೆ ಬರಲು, ಕೆಲಸ ಮಾಡಳು ಸಹ ಭಯ ಪಡುವಂತಾಗಿತ್ತು. ಪರಿಣಾಮ ದುಡಿಮೆ ಇಲ್ಲದೆ, ಕೈಯಲ್ಲಿ ಹಣ ಇಲ್ಲದೆ ಮಕ್ಕಳ ವಿದ್ಯಾಭ್ಯಾಸ ಚಿಂತೆಯಲ್ಲಿ ಕೊರಗುವಂತಾಗಿತ್ತು.

ಪೋಷಕರ ಈ ಗೋಳಾಟ ಬಗ್ಗೆ ನ್ಯೂಸ್‌18 ನಿರಂತರವಾಗಿ ದ್ವನಿ ಎತ್ತಿತ್ತು, ಈ ಕುರಿತು ಜನಾಭಿಪ್ರಾಯ ರೂಪುಗೊಳ್ಳುವಂತೆ ಮಾಡಿತ್ತು. ಈ ಅಭಿಯಾನಕ್ಕೆ ಸ್ಪಂದಿಸಿದ ಕೆಲವು ಶಿಕ್ಷಣ ಸಂಸ್ಥೆಗಳು ಉಚಿತವಾಗಿ ಶಿಕ್ಷಣ ನೀಡುವ ಭರವಸೆ ನೀಡಿವೆ.

ಇದನ್ನೂ ಓದಿ : ಪ್ರೀತಿಸಿದವಳಿಗಾಗಿ ಪ್ರಾಣ ಸ್ನೇಹಿತನ ಕೊಲೆ; ಹಂತಕನನ್ನು ಬಂಧಿಸಿದ ವಾಡಿ ಪೊಲೀಸರು

ಇನ್ನು ಕೆಲವು ಸಂಸ್ಥೆಗಳು ಶೇಕಡಾ 50 ರಷ್ಟು ಫೀಸ್ ಕಡಿಮೆ ಮಾಡಲು ಮುಂದಾಗಿವೆ. ಈ ನಡುವೆ ಗದಗ ಬೆಟಗೇರಿಯ ಮಹಾರಾಣಾ ಪ್ರತಾಪ್‌ ಸಿಂಹ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಮುಂದೆ ಬಂದಿರುವು ಎಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಮಾದರಿಯಾಗಿದೆ.
First published: