ಗದಗದಲ್ಲಿ ತಾಳಿ ಅಡವಿಟ್ಟು ಗಂಡನ ತಿಥಿ ಮಾಡಿದ ಹೆಂಡತಿ; ಕೊರೋನಾ ವಾರಿಯರ್ ಕುಟುಂಬದ ಕಣ್ಣೀರಿನ ಕಥೆ

ಕೊರೋನಾ ವಾರಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದ ಉಮೇಶ್ ಮೃತಪಟ್ಟು 5 ದಿನಗಳು ಕಳೆದರೂ ಇವರ ಮನೆಯತ್ತ  ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯ ಯಾವೊಬ್ಬ ಪ್ರತಿನಿಧಿಯೂ ಭೇಟಿ ನೀಡಿರಲಿಲ್ಲ. ಸೌಜನ್ಯಕ್ಕೂ ಕುಟುಂಬಕ್ಕೆ ಸಾಂತ್ವಾನ ಹೇಳದ ಜಿಲ್ಲಾಡಳಿತದ ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ಸಾರ್ವಜನಿಕರು ಅಸಮಾಧಾನ ಹೊರಹಾಕಿದ್ದಾರೆ.

news18-kannada
Updated:June 1, 2020, 2:05 PM IST
ಗದಗದಲ್ಲಿ ತಾಳಿ ಅಡವಿಟ್ಟು ಗಂಡನ ತಿಥಿ ಮಾಡಿದ ಹೆಂಡತಿ; ಕೊರೋನಾ ವಾರಿಯರ್ ಕುಟುಂಬದ ಕಣ್ಣೀರಿನ ಕಥೆ
ಮೃತನ ಹೆಂಡತಿ
  • Share this:
ಗದಗ (ಜೂ.1): ಜಿಲ್ಲೆಯ ನರಗುಂದ ತಾಲೂಕಿನ‌ ಕೊಣ್ಣೂರ ಗ್ರಾಮದಲ್ಲಿ ಮೇ 27ರಂದು ಕರ್ತವ್ಯ ನಿರ್ವಹಿಸುತ್ತಿದ್ದ ಆಂಬ್ಯುಲೆನ್ಸ್ ಚಾಲಕ ಉಮೇಶ್ ಹೃದಯಾಘಾತದಿಂದ ಮೃತಪಟ್ಟಿದ್ದರು. ಕೊರೋನಾ ವಾರಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದ ಉಮೇಶ್ ಮೃತಪಟ್ಟು 5 ದಿನಗಳು ಕಳೆದರೂ ಇವರ ಮನೆಯತ್ತ  ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯ ಯಾವೊಬ್ಬ ಪ್ರತಿನಿಧಿಯೂ ಭೇಟಿ ನೀಡಿರಲಿಲ್ಲ. ಸೌಜನ್ಯಕ್ಕೂ ಕುಟುಂಬಕ್ಕೆ ಸಾಂತ್ವಾನ ಹೇಳದ ಜಿಲ್ಲಾಡಳಿತದ ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ಸಾರ್ವಜನಿಕರು ಅಸಮಾಧಾನ ಹೊರಹಾಕಿದ್ದಾರೆ.

ಈ ವಿಚಾರ ನನ್ನ ವ್ಯಾಪ್ತಿಗೆ ಬರಲ್ಲ ಅಂತ ಬೇಜವಾಬ್ದಾರಿ ಡಿಎಚ್ಓ ಸಹ ಅಂದು ಪ್ರತಿಕ್ರಿಯೆ ನೀಡಿದ್ದರು. ಇದನ್ನೆಲ್ಲ ಕಂಡಾರೆ ಕಂಡು ಬೇಸತ್ತಿದ್ದ ಚಾಲಕನ ಪತ್ನಿ ಜ್ಯೋತಿ ಸ್ವತಃ ತನ್ನ ತಾಳಿಯನ್ನೇ ಅಡವಿಟ್ಟು ಪತಿಯ ಶ್ರಾದ್ಧಕಾರ್ಯವನ್ನು ಮಾಡಿದ್ದಾರೆ. ಅಂಥಹ ಅನಿವಾರ್ಯತೆ ಮೃತ ಉಮೇಶ್ ನ ಪತ್ನಿಗೆ ಎದುರಾಗಿತ್ತು.
ಈ ಕಣ್ಣೀರಿನ ಕಥೆಯು ಇಂದು ಬೆಳಿಗ್ಗೆ  ನ್ಯೂಸ್18 ಕನ್ನಡದಲ್ಲಿ ಸುದ್ದಿ ಪ್ರಸಾರವಾಗಿದ್ದೇ ತಡ ಸ್ವತಃ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲಕ ಉಮೇಶ್ ಪತ್ನಿ ಜ್ಯೋತಿ ಅವರಿಗೆ ದೂರವಾಣಿ‌ ಮಾಡಿದ್ದಾರೆ.

ಸಿಎಂ ಕೂಲಂಕುಷವಾಗಿ ನಡೆದ ಘಟನೆಯನ್ನ ಆಲಿಸಿದ್ದಾರೆ. ಅಂಬ್ಯುಲೆನ್ಸ್‌ ಚಾಲಕರಿಗೆ ಇನ್ಸುರೆನ್ಸ್‌ ಸೌಲಭ್ಯವಿದ್ದು ಜಿಲ್ಲಾಧಿಕಾರಿಗಳ ಮೂಲಕ ಅದನ್ನ ನಿಮ್ಮ ಕುಟುಂಬಕ್ಕೆ ದೊರಕಿಸಲಾಗುವದು. ಸರಕಾರದ ಎಲ್ಲ ನೆರವುಗಳು ನಿಮಗೆ ದೊರಕಲಿವೆ ಅಂತಾ ಹೇಳಿ ನಿಮ್ಮ ಕುಟುಂಬದ ಜೊತೆ ನಮ್ಮ‌ ಸರಕಾರ ಇರುತ್ತೆ ಅಂತ ಸಾಂತ್ವನದ ನುಡಿಗಳನ್ನ ಹೇಳಿ ಭರವಸೆ ಬೆಳಕು ನೀಡಿದ್ದಾರೆ.

ಇದನ್ನೂ ಓದಿ: ಸಾಗರ ಭಾಗದ ಜನರಿಗೆ ಹಂದಿಗೋಡು ಕಾಯಿಲೆಯಿಂದ ಮುಕ್ತಿ ಎಂದು?; ಏನೆ ಮಾಡಿದರೂ ಸರ್ಕಾರದಿಂದ ಸಿಗುತ್ತಿಲ್ಲ ಸ್ಪಂದನೆ

ಮುಖ್ಯಮಂತ್ರಿಗಳ ಒಂದೇ ಒಂದು ಈ‌ ದೂರವಾಣಿ ಕರೆ ಇಡೀ ಕುಟುಂಬಕ್ಕೆ ಬಡಿದಿದ್ದ ಬರಸಿಡಿಲನ್ನ ದೂರವಾಗಿಸಿದೆ. ಚಾಲಕ ಉಮೇಶ್ ನ ಪರಿಸ್ಥಿತಿ ನೋಡಿ ಕೊರೋನಾ ಸೇವೆ ಮಾಡಬೇಕೋ, ಬೇಡವೋ ಎನ್ನುವ ಚಿಂತೆಯಲ್ಲಿದ್ದ 108ರ ಸಿಬ್ಬಂದಿಗೆ ತುಸು‌ ಭರವಸೆಯ‌ ನೆಮ್ಮದಿ ದೊರೆತಿದೆ.

ಕೊರೋನಾ ವಾರಿಯರ್ಸ್ ಎಂದು ಕೇವಲ ಬಾಯಿಮಾತಿನಲ್ಲಿ ಅವರನ್ನ ಅಟ್ಟಕೇರಿಸಿ ಸುಮ್ಮನೆ ಕುಳಿತಿದ್ದ ಜಿಲ್ಲೆಯ ಜನಪ್ರತಿನಿಧಿಗಳಿಗೆ ಹಾಗೂ ಜಿಲ್ಲಾಡಳಿತಕ್ಕೆ ಸ್ವತಃ ಮುಖ್ಯಮಂತ್ರಿಗಳೇ ಪಾಠ ಕಲಿಸಿದ್ದಾರೆ. ಇನ್ನಾದರೂ ಕೊರೋನಾ ಯೋಧರು ತೊಂದರೆಗೊಳಗಾದಾಗ ಕನಿಷ್ಠ ಮಾನವೀಯತೆಯ‌ ನ್ಯಾಯವಾದ್ರೂ‌ ಸಿಗಲಿ‌ ಅನ್ನೋದು ಎಲ್ಲರ ಆಶಯ.
First published: June 1, 2020, 2:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading