ಉತ್ತರ ಕರ್ನಾಟಕದ ಸಹ್ಯಾದ್ರಿ, ಕಪ್ಪತಗುಡ್ಡದಲ್ಲಿ ಬೆಳೆದುನಿಂತ ಸಸ್ಯರಾಶಿ; ಈ ಬೇಸಿಗೆಯಲ್ಲಿ ಬೆಂಕಿ ಆತಂಕ!

ಹೋರಾಟದ ಫಲವಾಗಿ ಕಪ್ಪತಗುಡ್ಡವನ್ನು ವನ್ಯಜೀವಿ ಧಾಮವೆಂದು ಘೋಷಣೆ ಮಾಡಲಾಗಿದೆ. ಆದ್ರೆ ಬೇಸಿಗೆ ಕಾಲದಲ್ಲಿ ಕಪ್ಪತಗುಡ್ಡಕ್ಕೆ ಅಪಾರ ಪ್ರಮಾಣದ ಬೆಂಕಿ ಬಿದ್ದು ಬಹುತೇಕ ಕಾಡು ಸುಟ್ಟು ಹೋಗಿತ್ತು.

ಗದಗದ ಕಪ್ಪತ್ತಗುಡ್ಡದಲ್ಲಿ ಕಳೆದ ವರ್ಷ ಹೊತ್ತಿದ್ದ ಕಾಡ್ಗಿಚ್ಚು.

ಗದಗದ ಕಪ್ಪತ್ತಗುಡ್ಡದಲ್ಲಿ ಕಳೆದ ವರ್ಷ ಹೊತ್ತಿದ್ದ ಕಾಡ್ಗಿಚ್ಚು.

  • Share this:
ಗದಗ: ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಖ್ಯಾತಿಪಡೆದಿರುವ ಅಪಾರ ಪ್ರಮಾಣದ ಔಷಧಿ ಸಸ್ಯಗಳನ್ನು ಹೊಂದಿರುವ ಗದಗದ ಕಪ್ಪತಗುಡ್ಡ ಈ ಭಾರಿ ಹಸಿರಿನಿಂದ ಕಂಗೊಳಿಸುತ್ತಿದೆ. ಕಪ್ಪತಗುಡ್ಡದ ವನ್ಯಜೀವಿ ಧಾಮ ಗದಗ, ಮುಂಡರಗಿ ಹಾಗೂ ಶಿರಹಟ್ಟಿ ಮೂರು ತಾಲೂಕಿನಲ್ಲಿ 255 ಚದರ ಕಿಲೋಮೀಟರ್ ವಿಸ್ತೀರ್ಣ ಹೊಂದಿದೆ. ಕಳೆದ ಎರಡು ವರ್ಷಗಳಿಂದ ಸಮೃದ್ಧವಾಗಿ ಮಳೆಯಾಗಿರೋದರಿಂದ ಕಪ್ಪತಗುಡ್ಡದಲ್ಲಿ ಅಪಾರ ಪ್ರಮಾಣದ ಔಷಧಿಯ ಗಿಡಗಳು ಬೆಳೆದು ನಿಂತಿವೆ. ಹೀಗಾಗಿ ಬೇಸಿಗೆ ಕಾಲದಲ್ಲಿ ಬೆಂಕಿಯನ್ನು ನಿಯಂತ್ರಣ ಮಾಡೋದು ಅರಣ್ಯ ಇಲಾಖೆಗೆ ಸವಾಲಿನ ಕೆಲಸವಾಗಿದೆ. ಕಡಿಮೆ ಪ್ರಮಾಣದಲ್ಲಿ ಗಿಡಗಳು ಬೆಳೆದಾಗ ಪ್ರತಿವರ್ಷ ಬೆಂಕಿಯನ್ನು ನಿಯಂತ್ರಣ ಮಾಡಲು ಅರಣ್ಯ ಇಲಾಖೆ ಹರ ಸಾಹಸ ಪಡುತ್ತಿತ್ತು. ಆದರೆ, ಈ ಭಾರಿ ಅತೀ ಹೆಚ್ಚು ಗಿಡಗಳು ಬೆಳೆದು ನಿಂತಿರುವ ಕಾರಣ ಬೆಂಕಿಯನ್ನು ನಿಯಂತ್ರಣ ಮಾಡೋದು ಅರಣ್ಯ ಇಲಾಖೆ ಕಷ್ಟ ಸಾಧ್ಯವಾಗಿದೆ.

ಅದರಲ್ಲೂ ಕೊರೋನಾ ಹಾವಳಿಯಿಂದ ನಾಲ್ಲು ಜನರ 8 ಗುಂಪುಗಳಿರೋ ಸಿಬ್ಬಂದಿಗಳನ್ನು ಸಹ ಕೆಲಸದಿಂದ ತೆಗೆದು ಹಾಕಲಾಗಿದೆ. ಹೀಗಾಗಿ ಅರಣ್ಯ ಇಲಾಖೆಯಲ್ಲಿ ಕಾಯಂ ಕೆಲಸ ಮಾಡುವ ಸಿಬ್ಬಂದಿಗಳಿಂದ ಬೆಂಕಿ ರೇಖೆ ಗುರುತು ಮಾಡುವ ಕಾರ್ಯ ನಡೆಯುತ್ತಿದೆ. ಸುಮಾರು 600 ರಿಂದ 700 ಕಿಲೋಮೀಟರ್ ಬೆಂಕಿ ರೇಖೆ ಗುರುತು ಮಾಡಬೇಕು. ಆದ್ರೆ ಈ ಭಾರಿ ನಮ್ಮ ಸಿಬ್ಬಂದಿಗಳ ಮೂಲಕ ಕೇವಲ 50 ರಿಂದ 60 ಕಿಲೋಮೀಟರ್ ಮಾತ್ರ ಬೆಂಕಿ ರೇಖೆಯನ್ನು ಗುರುತು ಮಾಡಲಾಗಿದೆ. ಹೀಗಾಗಿ ವನ್ಯಜೀವಿ ಧಾಮವಾದ ಕಪ್ಪತಗುಡ್ಡಕ್ಕೆ ಸಿಬ್ಬಂದಿ ಹಾಗೂ ಅನುದಾನ ಕೊರತೆ ನಡುವೆ ನಾವು ಕೆಲಸ ಮಾಡುತ್ತಿದ್ದೇವೆ ಅಂತಾರೆ ಅರಣ್ಯ ಇಲಾಖೆ ಅಧಿಕಾರಿ ಸೂರ್ಯಸೇನ್.

ಹೋರಾಟದ ಫಲವಾಗಿ ಕಪ್ಪತಗುಡ್ಡವನ್ನು ವನ್ಯಜೀವಿ ಧಾಮವೆಂದು ಘೋಷಣೆ ಮಾಡಲಾಗಿದೆ. ಆದ್ರೆ ಬೇಸಿಗೆ ಕಾಲದಲ್ಲಿ ಕಪ್ಪತಗುಡ್ಡಕ್ಕೆ ಅಪಾರ ಪ್ರಮಾಣದ ಬೆಂಕಿ ಬಿದ್ದು ಬಹುತೇಕ ಕಾಡು ಸುಟ್ಟು ಹೋಗಿತ್ತು. ಹಾಗಾಗಿ ಬೆಂಕಿಯನ್ನು ನಿಯಂತ್ರಣ ಮಾಡಲು ಅರಣ್ಯ ಇಲಾಖೆ ಬೆಂಕಿ ರೇಖೆಯನ್ನು ಮಾಡುವ ಕೆಲಸ ಮಾಡುತ್ತದೆ. ಬೆಂಕಿ ರೇಖೆ ಮಾಡುವುದರಿಂದ ಹೆಚ್ಚಿನ ಪ್ರಮಾಣದ ಬೆಂಕಿ ಬಿದ್ದಾಗ ನಿಯಂತ್ರಣ ಮಾಡಲು ಸಹಕಾರಿಯಾಗುತ್ತದೆ. ಈ ಭಾರಿ ಬೆಂಕಿ ರೇಖೆ ನಿಯಂತ್ರಣ ಮಾಡಲು ಸಿಬ್ಬಂದಿ ಹಾಗೂ ಅನುದಾನ ಕೊರತೆಯನ್ನು ಅರಣ್ಯ ಇಲಾಖೆ ಎದುರಿಸುತ್ತಿದೆ.

ಇದನ್ನೂ ಓದಿ : ತಿಳುವಳಿಕೆ ಕೊರತೆ, ಎನ್​ಆರ್​ಸಿ ಸೆಂಟರ್​ಗೆ ದಾಖಲಾಗದ ಮಕ್ಕಳು: ಮಹತ್ವಾಕಾಂಕ್ಷಿ ಯೋಜನೆಗೆ ಬೀದರ್​ನಲ್ಲಿ ಹಿನ್ನಡೆ

ಸುಮಾರು‌  30 ರಿಂದ 50 ಹೊರ ಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿಗಳು ಬೇಕು ಹಾಗೂ 30 ರಿಂದ 40 ಲಕ್ಷ ರೂಪಾಯಿ ಅನುದಾನ ಬೇಕು ಇದ್ಯಾವುದನ್ನು ಸರ್ಕಾರ ಈ ಭಾರಿ ನೀಡಿಲ್ಲಾ. ಹೀಗಾಗಿ ಪರಿಸರ ಪ್ರೇಮಿಗಳು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಅನುದಾನ ಬಿಡುಗಡೆ ಮಾಡಿ ಇಲ್ಲವಾದರೆ ಹೋರಾಟ ಮಾಡುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ವನ್ಯಜೀವಿ ಧಾಮವಾದ ಕಪ್ಪತಗುಡ್ಡಕ್ಕೆ ಈ ಭಾರಿ ಬೆಂಕಿ ಆತಂಕ ಎದುರಾಗಿದೆ. ಅಪರೂಪದ ಸಸ್ಯ ಸಂಪತ್ತು ಉಳಿಸಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ. ಇನ್ನಾದರೂ ಸರ್ಕಾರ ಅನುದಾನ ನೀಡಿ ಬೆಂಕಿಯಿಂದ ಕಪ್ಪತಗುಡ್ಡವನ್ನು ರಕ್ಷಣೆ ಮಾಡಬೇಕಾಗಿದೆ.
Published by:MAshok Kumar
First published: