HOME » NEWS » District » GADAG FARMERS SUCCEEDED IN BLACK WHEAT GROWING SKG SESR

ಔಷಧೀಯ ಗುಣ ಉಳ್ಳ ಕಪ್ಪು ಗೋಧಿ ಬೆಳೆದ ಗದಗ ರೈತ: ಇವರ ಪ್ರಯೋಗಕ್ಕೆ ಎಲ್ಲೆಡೆ ಮೆಚ್ಚುಗೆ

ಕಪ್ಪು ಗೋಧಿಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಆ್ಯಂಟಿ ಆಕ್ಸಿಡೆಂಟ್, ವಿಟಿಮಿನ್ ಬಿ, ಪಾಲಿಕ್ ಆ್ಯಸಿಡ್, ಐರನ್, ಕಾಪರ್ ಪೊಟ್ಯಾಷಿಯಂ, ಪೈಬರ್, ಜಿಂಕ್, ಮ್ಯಾಗ್ನೇಷಿಯಂ ಸೇರಿದಂತೆ ಹಲವು ಲವಣಾಂಶಗಳನ್ನ ಹೊಂದಿದೆ.

news18-kannada
Updated:March 23, 2021, 12:13 PM IST
ಔಷಧೀಯ ಗುಣ ಉಳ್ಳ ಕಪ್ಪು ಗೋಧಿ ಬೆಳೆದ ಗದಗ ರೈತ: ಇವರ ಪ್ರಯೋಗಕ್ಕೆ ಎಲ್ಲೆಡೆ ಮೆಚ್ಚುಗೆ
ಕಪ್ಪು ಗೋಧಿ
  • Share this:
ಗದಗ : ಅವರು ವೃತ್ತಿಯಲ್ಲಿ ವಕೀಲರು. ಜೊತೆಗೆ ಅರೆಕಾಲಿಕ ಉಪನ್ಯಾಸಕ , ಇವುಗಳ ಜೊತೆಗೆ ಕೃಷಿಯಲ್ಲಿಯೂ ಇವರಿಗೆ ಎಲ್ಲಿಲ್ಲದ ಆಸಕ್ತಿ. ಪ್ರತಿ ವರ್ಷ ಕೃಷಿಯಲ್ಲಿ ಏನಾದರೂ ಒಂದು ಪ್ರಯೋಗ ಮಾಡುವುದನ್ನು ಇವರು ಹವ್ಯಾಸವಾಗಿ ಬೆಳೆಸಿಕೊಂಡು ಬಂದಿದ್ದಾರೆ. ಅದೇ ರೀತಿ ಈ ಬಾರಿ ಕಪ್ಪು ಗೋಧಿ ಬೆಳೆಯುವ ಮೂಲಕ ರೈತ ಯಶಸ್ಸು ಕಂಡಿದ್ದಾರೆ. ಜೊತೆಗೆ ಏಳು ಗುಂಟೆಯ ಜಮೀನನಲ್ಲಿ ಲಕ್ಷಾಂತರ ರೂಪಾಯಿ ಆದಾಯ ಬರುವ ನಿರೀಕ್ಷೆಯಲ್ಲಿದ್ದಾರೆ. ಜಿಲ್ಲೆ ನರಗುಂದ ತಾಲೂಕಿನ  ಶಿರೋಳ ಗ್ರಾಮದ ಮೃತ್ಯುಂಜಯ ವಸ್ತ್ರದ ಎಂಬುವರು ಕೃಷಿಯಲ್ಲಿ ಹಲವು ಬಾರಿ ಅನೇಕ ಪ್ರಯೋಗಗಳನ್ನು ಮಾಡುವುದನ್ನು ಇವರು ರೂಢಿಮಾಡಿಕೊಂಡು ಬಂದಿದ್ದಾರೆ. ಬಹಳಷ್ಟು ಸಾರಿ ಕೃಷಿಯಲ್ಲಿ ಬೇರೆ ಬೇರೆ ಬೆಳೆ ಪ್ರಯೋಗ ಮಾಡಿಯೂ ಕೈ ಸುಟ್ಟುಕೊಂಡಿದ್ದಾರೆ. ಆದರೆ ಕಳೆದ ಲಾಕ್ ಡೌನ್ ನಲ್ಲಿ ಹುಟ್ಟಿಕೊಂಡ ಇವರ ಹೊಸ ಪ್ರಯೋಗದಲ್ಲಿ ಯಶಸ್ವಿಯಾಗಿದ್ದಾರೆ. ಅದು ಸ್ವಂತ ಪ್ರಾಯೋಗಿಕವಾಗಿ ಏಳು ಗುಂಟೆ ಜಮೀನನಲ್ಲಿ ಕಪ್ಪು ಗೋಧಿ ಬೆಳೆಯಲು ಆರಂಭಿಸಿದ್ದು,  ಇದು ಇವರ ಕೈ ಹಿಡಿದಿದೆ.

ಮಾರುಕಟ್ಟೆಯಲ್ಲಿ ಕಪ್ಪು ಗೋಧಿಗೆ ಬಹುಬೇಡಿಕೆ ಇದೆ.  ಹೀಗಾಗಿ ಈ ಬಾರಿ ಪ್ರಾಯೋಗಿಕವಾಗಿ ಬೆಳೆದ ಬೆಳೆ ಏನಾದರೂ ಕೈ ಹಿಡಿದರೆರೆ ಮುಂದಿನ ದಿನಗಳಲ್ಲಿ ಇನಷ್ಟು ದೊಡ್ಡ ಪ್ರಮಾಣದಲ್ಲಿ ಕಪ್ಪು ಗೋಧಿ ಬೆಳೆಯುವ ನಿರೀಕ್ಷೆಯಲ್ಲಿದ್ದಾರೆ. ಇನ್ನು ಸರ್ವೆ ಸಾಮಾನ್ಯವಾಗಿ ಕರ್ನಾಟಕದಲ್ಲಿ ಕೆಂಪು ಗೋಧಿ ಬೆಳೆಯೋದು ಸಾಮಾನ್ಯ. ಆದರೆ ಮೃತ್ಯುಂಜಯ ಅವರು ಕಪ್ಪುಗೋಧಿ ಬೆಳೆ ಬೆಳೆದು ಯಶಸ್ಸು ಕಂಡಿದ್ದಾರೆ.

ಕಪ್ಪುಗೋಧಿಯನ್ನ ಕರ್ನಾಟಕ ಸೇರಿದಂತೆ ಅದರಲ್ಲೂ ದಕ್ಷಿಣ ಭಾರತದಲ್ಲಿ  ಎಲ್ಲಿಯೂ ಬೆಳೆಯೋದಿಲ್ಲ. ಬದಲಾಗಿ ಉತ್ತರ ಭಾರತದ ಕೇವಲ‌ ನಾಲ್ಕೇ ರಾಜ್ಯಗಳಲ್ಲಿ ಬೆಳೆಯಲಾಗ್ತಿದೆ. ಉತ್ತರ ಪ್ರದೇಶ, ಬಿಹಾರ, ಪಂಜಾಬ್, ಹರಿಯಾಣ ಜಿಲ್ಲೆಗಳಲ್ಲಿ ಮಾತ್ರ ಅದು ಆಯ್ದ ಭಾಗಗಳಲ್ಲಿ ಬೆಳೆಯುತ್ತಾರೆ. ಅಲ್ಲದೇ, ಈ ಬೆಳೆಯನ್ನು ಎಲ್ಲೆಂದರಲ್ಲಿ ಬೆಳೆಯುವುದಕ್ಕೆ ಆಗುವುದಿಲ್ಲ. ಅದೂ ಬೆಳೆಯುವುದು ಇಲ್ಲ. ಇಂತಹ ಒಂದು ಬೆಳೆಯನ್ನ ಗದಗ ಜಿಲ್ಲೆಗೆ ಪರಿಚಯ ಮಾಡಿಕೊಟ್ಟಿದ್ದಾರೆ ರೈತ ಮೃತ್ಯುಂಜಯ.

ಇನ್ನು ಈ ಬೆಳೆಗೆ ಇಷ್ಟೊಂದು ಬೆಲೆ ಯಾಕೆ ಎಂದರೆ, ಇದರಲ್ಲಿ ಔಷಧಿಯಗುಣ ಮತ್ತು ಮನುಷ್ಯನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಆ್ಯಂಟಿ ಆಕ್ಸಿಡೆಂಟ್, ವಿಟಿಮಿನ್ ಬಿ, ಪಾಲಿಕ್ ಆ್ಯಸಿಡ್, ಐರನ್, ಕಾಪರ್ ಪೊಟ್ಯಾಷಿಯಂ, ಪೈಬರ್, ಜಿಂಕ್, ಮ್ಯಾಗ್ನೇಷಿಯಂ ಸೇರಿದಂತೆ ಹಲವು ಲವಣಾಂಶಗಳನ್ನ ಹೊಂದಿದೆ. ಹೀಗಾಗಿ ಬಹುತೇಕ ಪೋಷಕಾಂಶಗಳನ್ನು ಹೊಂದಿದ ಈ ಬೆಳೆಗೆ ಬಲು ಬೇಡಿಕೆ ಇದೆ. ಡಯಾಬಿಟಿಸ್ ರೋಗಿಗಳಿಗೆ, ಕ್ಯಾನ್ಸರ್, ರಕ್ತದ ಒತ್ತಡ ಹತೋಟಿಗೆ, ಒಬ್ಯಾಸಿಟಿ ಬಿಪಿ ಇರುವಂತ ರೋಗಿಗಳಿಗೆ ಇದು ರಾಮಬಾಣವಾಗಿದೆ. ಇನ್ನು ಈ ಭಾಗದಲ್ಲಿ ಸಾಮಾನ್ಯವಾಗಿ ಕೆಂಪು ಗೋಧಿ ಬೆಳೆಯಲಾಗ್ತಿದೆ. ಕಪ್ಪುಗೋಧಿ ಬಹುತೇಕ ಜನರಿಗೆ ಗೊತ್ತಿಲ್ಲ. ಇಂತಹ ಬೆಳೆಗಳು ನಮ್ಮ ರೈತರಿಗೂ ಪರಿಚಯ ಆಗಲಿ ಅವರೂ ಸಹ ಇಂತಹ ಬೆಳೆಗಳಿಂದ ಅಭಿವೃದ್ಧಿ ಹೊಂದಲಿ ಅಂತಾರೆ ವಕೀಲ ಮೃತ್ಯುಂಜಯನವರು. ಇದರ ಜೊತೆಗೆ ಕಡಲೆ, ಜೋಳ, ಮೆಣಸಿನಕಾಯಿ ಹೀಗೆ ಹಲವು ಬೆಳೆಗಳನ್ನು ಸಹ ಬೆಳೆಯುತ್ತಾರೆ. ಇದಕ್ಕಾಗಿ ಓರ್ವ ರೈತನನ್ನ ಇಟ್ಟುಕೊಂಡಿದ್ದು ಈ‌ ಎಲ್ಲ ಪ್ರಯೋಗಕ್ಕೆ ಸಾತ್ ಕೊಟ್ಟು ವಕೀಲರು ಹೇಳಿದಂತೆ ಉಳುಮೆ ಮಾಡ್ತಿದ್ದಾರೆ.

ಇನ್ನು ಮೃತ್ಯುಂಜಯನವರಿಗೆ ಈ ಪ್ರಯೋಗ ಹೊಳೆದಿದ್ದು ಕೊರೊನಾ ಲಾಕ್ ಡೌನ್ ಟೈಮ್ ನಲ್ಲಿ. ಲಾಕ್ ಡೌನ್ ಟೈಮ್ ನಲ್ಲಿ ಖಾಲಿ ಕುಳಿತಾಗ ಹೀಗೆ ಗೂಗಲ್ ಸರ್ಚ್ ಮಾಡ್ತಾ ಈ ಹೊಸ ಪ್ರಯೋಗ ಹೊಳೆದಿದೆ. ಕೊನೆಗೆ ಇದರಲ್ಲಿ ಯಶಸ್ವಿಯಾಗಿದ್ದಾರೆ. ಜನ ಈಗ ಇವರ ಪ್ರಯೋಗ ಕ್ಕೆ ಫೀದಾ ಆಗಿದ್ದು ಕಪ್ಪು ಗೋಧಿಯನ್ನ ನೋಡೋದಕ್ಕೆ ಬರ್ತಿದ್ದಾರೆ. ನಾವು ಸಹ ಈ ರೀತಿ ಬೆಳೆ ಬೆಳೆಯಬಹುದಾ ಅಂತ ಅವರಿಂದ ಮಾಹಿತಿ ಪಡೆದುಕೊಳ್ತಿದ್ದಾರೆ. ಪರಿಸರ ವಿಜ್ಞಾನ ಬೋಧಿಸುವ ಉಪನ್ಯಾಸಕ ಮೃತ್ಯುಂಜಯ ಕೇವಲ ಪಾಠ ಮಾಡೋದಲ್ಲದೇ ಅದನ್ನ ಕಾರ್ಯರೂಪಕ್ಕ ತಂದು ಯಶಸ್ವಿ ಆಗಿದ್ದಾರೆ.

(ವರದಿ: ಸಂತೋಷ ಕೊಣ್ಣೂರ)
Published by: Seema R
First published: March 21, 2021, 7:20 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories