HOME » NEWS » District » GADAG FARMERS EARNING LAKS OF MONEY BY CROPING MEDICINAL PLANTS IN GENERAL FARMING MAK

ಗದಗದಲ್ಲಿ ಸಾಮೂಹಿಕ ಕೃಷಿಯ ಮೂಲಕ ಔಷಧೀಯ ಸಸ್ಯಗಳನ್ನು ಬೆಳೆದು ಲಕ್ಷಾಂತರ ಲಾಭ ಎಣಿಸುತ್ತಿರುವ ರೈತರು

ಸಾವಯವ ಕೃಷಿಯ ಪದ್ದತಿಯನ್ನು ಅಳವಡಿಸಿಕೊಂಡು ಸಮಗ್ರ ಔಷಧೀಯ ಸಸ್ಯಗಳನ್ನು ಬೆಳೆಯುತ್ತಿರುವ ರೈತ ಸಮೂಹ ಸದ್ಯ ಔಷಧಿಯ ಬೆಳೆಯವಲ್ಲಿ ಯಶಸ್ಸು ಕಂಡಿದ್ದಾರೆ. ಅಷ್ಟೇ ಅಲ್ದೆ ಸದ್ಯ  ನಸಗುನ್ನಿ,ನೆಲನೆಲ್ಲಿ, ಶತಾವರಿಯಂತಹ ಬೆಳೆಯಿಂದ ಕೋಟ್ಯಾಂತರ ರೂಪಾಯಿ ಆದಾಯ ಬರುತ್ತೇ ಅಂತಾ ರೈತರು ನಿರೀಕ್ಷಯಲ್ಲಿದ್ದಾರೆ.

news18-kannada
Updated:January 21, 2021, 12:23 PM IST
ಗದಗದಲ್ಲಿ ಸಾಮೂಹಿಕ ಕೃಷಿಯ ಮೂಲಕ ಔಷಧೀಯ ಸಸ್ಯಗಳನ್ನು ಬೆಳೆದು ಲಕ್ಷಾಂತರ ಲಾಭ ಎಣಿಸುತ್ತಿರುವ ರೈತರು
ಬೆಳೆ ಕಟಾವು ನಡೆಸುತ್ತಿರುವ ರೈತ ಮಹಿಳೆ.
  • Share this:
ಗದಗ: ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಅದರಹಳ್ಳಿ ಗ್ರಾಮದ ರೈತರು ಸಾಂಪ್ರದಾಯಿಕ ಕೃಷಿಯನ್ನು ಕೈಬಿಟ್ಟು ಔಷಧಿಯ ಕೃಷಿಯ ಕಡೇ ಮುಖ ಮಾಡಿದ್ದಾರೆ. ಹೌದು ಒಗ್ಗಟ್ಟಿನಲ್ಲಿ ಬಲಿವಿದೆ ಎನ್ನುವ ಹಾಗೇ ನಾಲ್ಕು ಜನ ಸಮಾನ ಮನಸ್ಕರರು ಸೇರಿಕೊಂಡು ಔಷಧಿಯ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ವೆಂಕನಗೌಡ ಪಾಟೀಲ್, ವಿಠ್ಠಲ ದಾನಪ್ಪ ಲಮಾಣಿ, ಖೀಮಪ್ಪ ಲಮಾಣಿ ಮತ್ತು ಕಿರಣ ಮೇಟಿ ಎನ್ನುವ ರೈತರು ಸಾಮೂಹಿಕ ಕೃಷಿಗೆ ಮುಂದಾಗಿದ್ದಾರೆ. ಈ ನಾಲ್ಕು ಜನ ರೈತರು ಈ ಹಿಂದೆ ಬೋರವೇಲ್ ನೀರನ್ನು ಬಳಸಿಕೊಂಡು ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಿದ್ದರು‌, ಇನ್ನೂ ಕೆಲವರು ತೋಟಗಾರಿಕೆ ಬೆಳೆಯನ್ನು ಬೆಳೆಯುತ್ತಿದ್ದರು. ಆದ್ರೆ ಹೆಚ್ಚಿನ ಆದಾಯ ಬಂದಿರಲಿಲ್ಲ. ಹೀಗಾಗಿ ಔಷಧಿಯ ಸಸ್ಯಗಳು ಬೆಳೆದ ಲಾಭ ಪಡೆಯಬೇಕು ಎನ್ನುವ ಕಾರಣಕ್ಕೆ ಇದೇ ಮೊದಲ ಭಾರಿಗೆ ಹೊಸದೊಂದು ಸಾಹಸಕ್ಕೆ ಕೈ ಹಾಕಿದ್ದಾರೆ.

ಈಗಾಗಲೇ 20 ಎಕರೆ ಜಮೀನಿನಲ್ಲಿ ಶತಾವರಿ,ತುಳಸಿ,ನಸಗುನ್ನಿ ಹಾಗೂ ನೆಲ ನೆಲ್ಲಿಯಂತಹ ಔಷಧೀಯ ಸಸ್ಯಗಳನ್ನು ಬೆಳೆಯುತ್ತಿದ್ದಾರೆ. ಶತಾವರಿ ಬೆಳೆಯ ಸಸ್ಯಯನ್ನು ಉತ್ತರ ಪ್ರದೇಶದಿಂದ ತಂದು ನಾಟಿ ಮಾಡಿದ್ದಾರೆ. ಶತಾವರಿ ಬೆಳೆ ಎರಡು ವರ್ಷ ಬೆಳೆಯಾಗಿದೆ. ಹೀಗಾಗಿ ಅದರ ಜೊತೆಗೆ ತುಳಸಿ, ನೆಲನೆಲ್ಲಿ, ನಸಗುನ್ನಿಯನ್ನು ಅಂತರ ಬೆಳೆಯಾಗಿ ಬೆಳೆಯುತ್ತಿದ್ದಾರೆ.

ಈ ಒಂದು ಔಷಧಿಯ ಗುಣವಿರುವ ಬೆಳೆಗೆ ಮಾರುಕಟ್ಟೆಯಲ್ಲಿ ತುಂಬಾನೆ ಬೇಡಿಕೆ ಇದೆ. ಹೀಗಾಗಿ ಇವರು ಅಂತರ ಬೆಳೆಯಾಗಿ ಬೆಳೆದಿದ ತುಳಸಿ ಬೆಳೆಯನ್ನು ಖಾಸಗಿ ಕಂಪನಿಯವರೊಂದಿಗೆ ಟೈಪ್‌ ಆಗಿ ಮಾರಾಟ ಮಾಡುತ್ತಿದ್ದಾರೆ. ಸದ್ಯ ತುಳಸಿ ಬೆಳೆ ಕಟಾವಿಗೆ ಬಂದಿದೆ. ಪ್ರತಿ ತಿಂಗಳಿಗೆ ಒಂದು ಬಾರಿ ಕಟಾವು ಮಾಡಿ ಮಾರುಕಟ್ಟೆಗೆ ಹೋದ್ರೆ ಸುಮಾರು 2 ಲಕ್ಷ ಆದಾಯ ಬರುತ್ತಿದೆ. ಹೀಗಾಗಿ ತುಳಸಿ ಬೆಳೆಯಿಂದ ಲಕ್ಷಾಂತರ ರೂಪಾಯಿ ಆದಾಯ ಬರುತ್ತಿದೆ.

ಔಷಧಿಯ ಬೆಳೆಯನ್ನು ಬೆಳೆಯುವ ರೈತರು ಕಡಿಮೆ ಇರುವ ಕಾರಣ ಮಾರುಕಟ್ಟೆಯಲ್ಲಿ ತುಂಬಾನೆ ಡಿಮ್ಯಾಂಡ್‌ ಇದೆ. ಹೀಗಾಗಿ ರೈತರು ತಾವೆ ಖಾಸಗಿ ಕಂಪನಿಯವರಿಗೆ ಮಾರಾಟ ಮಾಡಿ ತಿಂಗಳು ತಿಂಗಳು ಲಕ್ಷ ಲಕ್ಷ ಆದಾಯ ಬರುವ ಮಾರ್ಗ ಕಂಡುಕೊಂಡಿದ್ದಾರೆ. ತುಳಸಿ ಬೆಳೆಯನ್ನು ಬೆಂಗಳೂರು,ಹುಬ್ಬಳಿ,ಗದಗನಲ್ಲಿರುವ ಖಾಸಗಿ ಕಂಪನಿಯವರಿಗೆ ಮಾರಾಟ ಮಾಡುತ್ತಿದ್ದಾರೆ.. ಇವರಿಗೆ ಯಾವುದೆ ದಲ್ಲಾಳಿಗಳ ಹಾವಳಿ ಇಲ್ದೆ ನೇರವಾದ ಮಾರುಕಟ್ಟೆ ವ್ಯವಸ್ತೆ ಸಿಗುತ್ತಿರುವದರಿಂದ ಲಕ್ಷ ಲಕ್ಷ ಹಣ ರೈತರು ನೇರವಾಗಿ ಪಡೆಯುತ್ತಿದ್ದಾರೆ.

ಇದನ್ನೂ ಓದಿ: COVID-19 Vaccination: ಎರಡನೇ ಹಂತದ ಕೋವಿಡ್​ ಲಸಿಕೆ ಅಭಿಯಾನದ ವೇಳೆ ಪ್ರಧಾನಿ ಮೋದಿಗೂ ಲಸಿಕೆ

ಸಾವಯವ ಕೃಷಿಯ ಪದ್ದತಿಯನ್ನು ಅಳವಡಿಸಿಕೊಂಡು ಸಮಗ್ರ ಔಷಧೀಯ ಸಸ್ಯಗಳನ್ನು ಬೆಳೆಯುತ್ತಿರುವ ರೈತ ಸಮೂಹ ಸದ್ಯ ಔಷಧಿಯ ಬೆಳೆಯವಲ್ಲಿ ಯಶಸ್ಸು ಕಂಡಿದ್ದಾರೆ. ಅಷ್ಟೇ ಅಲ್ದೆ ಸದ್ಯ  ನಸಗುನ್ನಿ,ನೆಲನೆಲ್ಲಿ, ಶತಾವರಿಯಂತಹ ಬೆಳೆಯಿಂದ ಕೋಟ್ಯಾಂತರ ರೂಪಾಯಿ ಆದಾಯ ಬರುತ್ತೇ ಅಂತಾ ರೈತರು ನಿರೀಕ್ಷಯಲ್ಲಿದ್ದಾರೆ. ಔಷದೀಯ ಬೆಳೆಗೆ ನೇರವಾದ ಮಾರುಕಟ್ಟೆ ಸಿಗುತ್ತಿರೋದ್ರಿಂದ ರೈತರಿಗೆ ಕಡಿಮೆ ಖರ್ಚು ಹೆಚ್ಚಿನ ಲಾಭವಾಗುತ್ತಿದೆ.. ಇದ್ರಿಂದ ಔಷಧಿತ ಸಸ್ಯಗಳನ್ನು ಬೆಳೆಯುತ್ತಿರುವ ರೈತರು ಫುಲ್‌ ಖುಷಿಯಾಗಿದ್ದಾರೆ.
Youtube Video
ಗದಗ ಭಾಗದ ರೈತರು ಹೆಚ್ಚಾಗಿ ಒಣ ಬೇಸಾಯ ಮಾಡ್ತಾರೆ. ನೀರಾವರಿ ವ್ಯವಸ್ಥೆ ಇದ್ದವರು ತೋಟಗಾರಿಕೆ ವ್ಯವಸಾಯ ಮಾಡ್ತಾರೆ. ಆದ್ರೆ, ಸಮಾನ ಮನಸ್ಕರರು ಸೇರಿಕೊಂಡು ಔಷಧಿ ಕೃಷಿ ಮಾಡಿಕೊಂಡು ಕೈ ತುಂಬು ಸಂಪಾದನೆ ಮಾಡ್ತಾಯಿದ್ದಾರೆ. ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವ ಹಾಗೇ ನಾಲ್ಕು ಜನ‌ ರೈತರು ಸೇರಿಕೊಂಡು 20 ಎಕರೆ ಜಮೀನಿನಲ್ಲಿ ಔಷಧಿಯ ಸಸ್ಯಗಳು ಬೆಳೆದು ಸೂಕ್ತವಾದ ಮಾರುಕಟ್ಟೆ ವ್ಯವಸ್ಥೆ ಮಾಡಿಕೊಂಡು ಸೈ ಎನಿಸಿಕೊಂಡಿದ್ದಾರೆ.
Published by: MAshok Kumar
First published: January 21, 2021, 12:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories