HOME » NEWS » District » GADAG CRIME MAN MURDERS HIS UNCLE AFTER HIS LOVER FAMILY REJECTED HIS PROPOSAL TO MARRY HER IN GADAG SCT SKG

Gadag Crime: ಚೆಲುವೆ ಸಿಗದಿದ್ದಕ್ಕೆ ಚಿಕ್ಕಪ್ಪನನ್ನೇ ಹತ್ಯೆ ಮಾಡಿದ ಯುವಕ; ಖಾರದ ಪುಡಿ ಎರಚಿ ಚಾಕುವಿನಿಂದ ಇರಿದು ಕಗ್ಗೊಲೆ!

Gadag Murder: ಬೆಟಗೇರಿಯ ನಿವಾಸಿಯಾದ 42 ವರ್ಷದ ಮಂಜುನಾಥ ಗದುಗಿನ ಎಂಬಾತನನ್ನು ಪ್ರವೀಣ ಗದುಗಿನ ಎನ್ನುವಾತ ಕೊಲೆ ಮಾಡಿದ್ದಾನೆ. ತಾನು ಇಷ್ಟಪಟ್ಟ ಹುಡುಗಿ ಕೈ ತಪ್ಪಲು ತನ್ನ ಚಿಕ್ಕಪ್ಪನೇ ಕಾರಣ ಎಂದುಕೊಂಡು ಚಿಕ್ಕಪ್ಪನನ್ನೇ ಕೊಲೆ ಮಾಡಿದ್ದಾನೆ ಕಿರಾತಕ ಮಗ.

news18-kannada
Updated:March 18, 2021, 7:52 AM IST
Gadag Crime: ಚೆಲುವೆ ಸಿಗದಿದ್ದಕ್ಕೆ ಚಿಕ್ಕಪ್ಪನನ್ನೇ ಹತ್ಯೆ ಮಾಡಿದ ಯುವಕ; ಖಾರದ ಪುಡಿ ಎರಚಿ ಚಾಕುವಿನಿಂದ ಇರಿದು ಕಗ್ಗೊಲೆ!
ಕೊಲೆ ಮಾಡಿದ ಯುವಕ ಪ್ರವೀಣ
  • Share this:
ಗದಗ: ಗದಗದ ಬೆಟಗೇರಿಯ ಹುಡುಗನಾದ ಆತ ಸಂಬಂಧಿಕರೊಬ್ಬರ ಮನೆಯ ಚೆಲುವೆಗೆ ಮಾರುಹೋಗಿದ್ದ. ಮದುವೆಯಾದರೆ ಆ ಚೆಲುವೆಯನ್ನೆ ಮದುವೆ ಮಾಡಿಕೊಳ್ಳಬೇಕು ಅಂತ ಡಿಸೈಡ್ ಮಾಡಿಬಿಟ್ಟಿದ್ದ. ಆದರೆ, ಆ ಹುಡುಗಿಯ ಮನೆಯವರು ಆ ಮದುವೆಗೆ ನಿರಾಕರಿಸಿದ್ದರು. ಆ ಚೆಲುವೆ ಕೈ ತಪ್ಪಲು ತನ್ನ ಚಿಕ್ಕಪ್ಪನೇ ಕಾರಣ ಎಂದು ಯುವಕ ಅಂದುಕೊಂಡಿದ್ದ. ಹಾಗಾಗಿಯೇ ಪ್ಲಾನ್ ಮಾಡಿ ಚಿಕ್ಕಪ್ಪನನ್ನೇ ಕೊಲೆ ಮಾಡಿದ್ದಾನೆ ಕಿರಾತಕ ಮಗ.

ಹೌದು, ತಾನು ಇಷ್ಟಪಟ್ಟ ಹುಡುಗಿ ಕೈ ತಪ್ಪಿದಕ್ಕೆ ತಮ್ಮ ಚಿಕ್ಕಪ್ಪನನ್ನೇ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಅಂದಹಾಗೇ ಗದಗನ ಬೆಟಗೇರಿಯ ತೆಂಗಿನಕಾಯಿ ಬಜಾರ್ ನಲ್ಲಿ ಮಂಗಳವಾರ ರಾತ್ರಿ 9 ಗಂಟೆಗೆ ಜನನಿಬಿಡ ಪ್ರದೇಶದಲ್ಲಿ ಕೊಲೆ ನಡೆದು ಹೋಗಿದೆ. ಬೆಟಗೇರಿಯ ನಿವಾಸಿಯಾದ 42 ವರ್ಷದ ಮಂಜುನಾಥ ಗದುಗಿನ ಎಂಬಾತನನ್ನು ಪ್ರವೀಣ ಗದುಗಿನ ಎನ್ನುವಾತ ಕೊಲೆ ಮಾಡಿದ್ದಾನೆ. ಮಂಜುನಾಥ ಗದುಗಿನ ನಿತ್ಯ ತೆಂಗಿನಕಾಯಿ ಬಜಾರನಿಂದ ತಮ್ಮ ಮನೆಗೆ ಹೋಗಿದ್ದನ್ನೇ ಕಾಯ್ದುಕೊಂಡು ಕುಳಿತಿದ್ದ ಪ್ರವೀಣ, ಚಿಕ್ಕಪ್ಪ ಬಂದ‌ ಕೂಡಲೇ ಮಾತನಾಡಿಸಿದ್ದಾನೆ. ಸ್ವಲ್ಪ ಹೊತ್ತು ಮಾತನಾಡಿದ್ದಾನೆ. ಆಗ ಪ್ರವೀಣ ಖಾರದ ಪುಡಿ ಮುಖಕ್ಕೆ ಎರಚಿ, ಚಾಕುವಿನಿಂದ ಕುತ್ತಿಗೆ ಕೊಯ್ದು, ಸಿಕ್ಕಸಿಕ್ಕಲ್ಲಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.

ಇದನ್ನೂ ಓದಿ: ಗೋವಾ-ಕಾರವಾರ ಗಡಿ ಭಾಗದಲ್ಲಿ ಮತ್ತೆ ಟಫ್ ರೂಲ್ಸ್; ಇಂದಿನಿಂದ ಕೋವಿಡ್ ನೆಗೆಟಿವ್ ರಿಪೋರ್ಟ್ ಇದ್ರೆ ಮಾತ್ರ ಪ್ರವೇಶ

ಪ್ರವೀಣನ ರಭಸಕ್ಕೆ ಚಾಕು ಕೂಡಾ ಮುರಿದುಹೋಗಿದೆ. ಸ್ಥಳದಲ್ಲಿಯೇ ಆತನ ಚಿಕ್ಕಪ್ಪನ ಪ್ರಾಣಪಕ್ಷಿ ಹಾರಿ ಹೋಗಿದೆ. ಅದೇ ಮಾರ್ಗವಾಗಿ ಬರುತ್ತಿದ್ದ ಪೊಲೀಸರು ಕೂಡಲೇ ಪ್ರವೀಣ ಗದುಗಿನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಕಿರಾತಕ ಪ್ರವೀಣ ಬೆಂಗಳೂರಿನಲ್ಲಿ ನವರಸ ಸಿನಿಮಾ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದು, ಬ್ಯಾಚುಲರ್ ಲೈಫ್ ಎನ್ನುವ ಧಾರಾವಾಹಿಯಲ್ಲಿ ನಾಯಕನ ನಟನ ಸ್ನೇಹಿತನಾಗಿ ಪಾತ್ರವನ್ನು ಮಾಡಿದ್ದಾನೆ. ಆದರೆ ಈ ಧಾರರಾಹಿ ಇನ್ನೂ ಬಿಡುಗಡೆಯಾಗಿಲ್ಲ. ಅದಾದ ಮೇಲೆ ಲಾಕ್ ಡೌನ್ ಘೋಷಣೆಯಾಗಿದಕ್ಕೆ ಗದಗಕ್ಕೆ ಬಂದು ವಾಸವಾಗಿದ್ದಾನೆ. ಇಲ್ಲಿಯೇ ಬಾರ್ ಬೈಂಡಿಂಗ್ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ.

ಇದೇ ವೇಳೆ ಕೊಲೆಯಾದ ಮಂಜುನಾಥ ಗದುಗಿನ ಅವರ ಅಕ್ಕನ ಮಗಳನ್ನು ಮದುವೆ ಮಾಡಿಕೊಳ್ಳಬೇಕು ಅಂತ ಪ್ರವೀಣ ಗದಗ ಜಿಲ್ಲೆಯ ಗ್ರಾಮವೊಂದರಲ್ಲಿ ಹೋಗಿ ಹುಡುಗಿಯನ್ನು ನೋಡಿ ಬಂದಿದ್ದ. ಹುಡುಗಿ ಕೂಡ ಗದಗದ ಪ್ರತಿಷ್ಠಿತ ಕಾಲೇಜಿನಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದಾಳೆ. ಆದರೆ ಈ ಪ್ರವೀಣ ಗದುಗಿನ ಬಾರ್ ಬೈಂಡಿಂಗ್ ಕೆಲಸ ಮಾಡುತ್ತಿದ್ದ, ಹೀಗಾಗಿ ಆ ಹುಡುಗಿಯ ಪೋಷಕರು ಮದುವೆಗೆ ನಿರಾಕರಣೆ ಮಾಡಿದ್ದರು. ಹಾಗಾಗಿ ಈ ಮದುವೆ ನಿಲ್ಲಿಸಲು ನಮ್ಮ ಚಿಕ್ಕಪ್ಪನೇ ಕಾರಣವೆಂದು ತಿಳಿದ ಪ್ರವೀಣ ಕೊಲೆ ಮಾಡಿದ್ದಾನೆ ಎಂದು ಮೃತನ ಪತ್ನಿ ಪ್ರೇಮಾ ಕಣ್ಣೀರು ಹಾಕ್ತಾಯಿದ್ದಾರೆ.

ಮೃತ ಮಂಜುನಾಥ ಗದುಗಿನ ಇಬ್ಬರು ಮಕ್ಕಳು, ಹಾಗೂ ಪತ್ನಿಯ ಮುಂದಿನ ಜೀವನ ನಡೆಸೋದು ಕಷ್ಟವಾಗಿದೆ. ಪಾಪ ಏನು ತಪ್ಪು ಮಾಡದ ಚಿಕ್ಕಪ್ಪನನ್ನೇ ಕೊಲೆ ಮಾಡಿರುವ ಈ ಕಿರಾತಕ ಮಗನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.(ವರದಿ: ಸಂತೋಷ ಕೊಣ್ಣೂರ)
Published by: Sushma Chakre
First published: March 18, 2021, 7:52 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories