Crime: ಮದುವೆ ಮಾಡುತ್ತಿಲ್ಲ ಎಂದು ತಂದೆ ಮೇಲೆ ಹಲ್ಲೆ; ಕ್ರೂರಿ ಮಗನಿಗೆ ಗದಗ ಜಿಲ್ಲಾ‌ ನ್ಯಾಯಾಲಯಯದಿಂದ ಶಿಕ್ಷೆ ಪ್ರಕಟ

ಮದುವೆ ವಯಸ್ಸಿಗೆ ಬಂದಿದ್ದ ರವಿ ಸರಿಯಾಗಿ ಕೆಲಸ ಮಾಡದೇ ಊರಿನಲ್ಲಿ ಉಡಾಳ ಹುಡುಗರ ಜೊತೆಗೆ ಸ್ನೇಹಿ ಮಾಡಿಕೊಂಡು ಓಡಾಡುತ್ತಿದ್ದ. ಹೀಗಾಗಿ ಮಗ ಸರಿಯಾಗಿ ಕೆಲಸ ಮಾಡಿಕೊಂಡು ಮನೆಗ ಜವಾಬ್ದಾರಿ ತೆಗೆದುಕೊಂಡ ಮೇಲೆ ಮದುವೆ ಮಾಡಬೇಕು ಎಂದು ಪೋಷಕರ ಲೆಕ್ಕಾಚಾರ ಇತ್ತು

ಆರೋಪಿ ರವಿ

ಆರೋಪಿ ರವಿ

  • Share this:
ಗದಗ (ಸೆ. 14):  ತಂದೆ- ತಾಯಿ ತಮ್ಮ ಮಕ್ಕಳ ಒಳಿತಿಗಾಗಿ ತಮ್ಮ ಬದುಕನ್ನೇ ಮೂಡುಪಾಗಿ ಇಟ್ಟಿರುತ್ತಾರೆ. ಆದರೆ ಕೆಲವು ನೀಚ ಮಕ್ಕಳು ಹೆತ್ತವರಿಗೆ ಕಿರುಕುಳ ನೀಡೋದು, ಹಲ್ಲೆ ಮಾಡುವಂತಹ ಘಟನೆಗಳು ಇತ್ತಿಚೆಗೆ ಹೆಚ್ಚಾಗಿಯೇ ನಡೆಯುತ್ತಿವೆ. ಗದಗ ಜಿಲ್ಲೆಯಲ್ಲಿ ಒಬ್ಬ ಮಗ ತನ್ನ ಮದುವೆ ಮಾಡಿಲ್ಲ ಎನ್ನುವ ಕ್ಷುಲಕ ಕಾರಣಕ್ಕೆ ಹೆತ್ತ ತಂದೆಯನ್ನೆ ಕೊಡಲಿಯಿಂದ ಭೀಕರವಾಗಿ ಹಲ್ಲೆ ಮಾಡಿದ್ದ. ಈ ಪ್ರಕರಣದ ಅರ್ಜಿ ವಿಚಾರಣೆ ನಡೆಸಿದ ಗೆ ನ್ಯಾಯಾಲಯ ಆರೋಪಿಗೆ ತಕ್ಕ ಶಿಕ್ಷೆಯನ್ನು ನೀಡಿದ್ದು, ಕ್ರೂರಿ ಮಕ್ಕಳಿಗೆ ತಕ್ಕ ಪಾಠ ಹೇಳಿದೆ.

ಏನಿದು ಘಟನೆ?

ಗದಗ ಜಿಲ್ಲೆ ರೋಣ ತಾಲೂಕಿನ ಬೆಳವಣಕಿ ಗ್ರಾಮದ ನಿವಾಸಿಯಾದ ರವಿ ಸುಣಗದ ಇವನ್ನು  ಮದುವೆ ಮಾಡುವಂತೆ ಅವರ ತಂದೆ ನಿಂಗಪ್ಪ ಸುಣಗದ ಅವರಿಗೆ ನಿತ್ಯ ಕಿರುಕುಳ ನೀಡುತ್ತಾ ಇದ್ದ. ನನ್ನ ಜೊತೆಗೆ ಇರುಸ್ನೇಹಿತರ ಮದುವೆಯಾಗಿದೆ ನೀನು ನನ್ನ ಮದುವೆ ಮಾಡು ಎಂದು ನಿತ್ಯ ಮನೆಯಲ್ಲಿ ಜಗಳ ತೆಗೆಯುತ್ತಿದ್ದ. ಇದೇ ರೀತಿ 2020 ಮೇ 24 ರಂದು ರೊಚ್ಚಿಗೆದ್ದು ಬಂದಿದ್ದ, ರವಿ ಸುಣಗದ ಅವರ ತಂದೆ ನಿಂಗಪ್ಪ ಅವರೊಂದಿಗೆ ಜಗಳ ಆರಂಭ ಮಾಡಿದ್ದ, ನನ್ನ ಮದುವೆ ಮಾಡು ಇಲ್ಲವಾದರೆ ನಿನ್ನ ಜೀವಂತ ಉಳಿಸುವದಿಲ್ಲ ಎಂದು ದೊಡ್ಡ ಗಲಾಟೆ ಮಾಡಿದ. ಈ ವೇಳೇ ಜಗಳ ವಿಕೋಪಕ್ಕೆ ಹೋಗಿ ಮನೆಯಲ್ಲಿದ್ದ ಕೊಡಲಿಯಿಂದ ರವಿ ಅವರ ತಂದೆಗೆ ಹಣೆಗೆ, ತಲೆ, ಕುತ್ತಿಗೆ ಮೇಲೆ ಮಾರಣಾಂತಿಕವಾಗಿ ಹಲ್ಲೆ‌ ಮಾಡಿದ್ದ. ಆ ರವಿ ಅವರ ತಂದೆ ನಿಂಗಪ್ಪ ರೋಣ ಪೊಲೀಸ ಠಾಣೆಯಲ್ಲಿ ಮಗನ ವಿರುದ್ಧ ದೂರು ದಾಖಲು ಮಾಡಿದ್ದರು.

ಇದನ್ನು ಓದಿ: ಡ್ರ್ಯಾಗನ್ ಫ್ರೂಟ್ ಮೂಲಕ ಲಾಭಾಗಳಿಸುತ್ತಿರುವ ಕೊಪ್ಪಳ ರೈತರು; ವಿದೇಶಿ ಹಣ್ಣಿಗೆ ಹೆಚ್ಚಿದ ಬೇಡಿಕೆ

ಎರಡು ವರ್ಷ ಶಿಕ್ಷೆ

ಹಲ್ಲೆಯಿಂದ ಗುಣಮುಖರಾಗಿರುವ ನಿಂಗಪ್ಪ  ಕೋರ್ಟ್ ಗೆ ಬಂದು ತಮ್ಮ ಮಗನ ಕೃತ್ಯದ ಕುರಿತು ಸಾಕ್ಷಿ ಕೂಡ ಹೇಳಿದ್ದಾರೆ. ಈಗ ಗದಗ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದ್ದು, ರವಿಗೆ ಎರಡು ವರ್ಷ ಕಠಿಣ ಶಿಕ್ಷೆ ಹಾಗೂ 500 ರೂಪಾಯಿ ದಂಡವನ್ನು ನೀಡಿ ಆದೇಶ ಹೊರಡಿಸಿದೆ ಎಂದು ಸರ್ಕಾರಿ ಅಭಿಯೋಜಕರು ತಿಳಿಸಿದ್ದಾರೆ.

ಇದನ್ನು ಓದಿ: ಕಾರವಾರದ ಯುವಕನಿಗೆ ನಿಫಾ ಸೋಂಕು ಶಂಕೆ; ವರದಿಗಾಗಿ ಕಾಯುತ್ತಿರುವ ದಕ್ಷಿಣ ಕನ್ನಡ ಜಿಲ್ಲಾಡಳಿತ

ಇನ್ನು ಮದುವೆ ವಯಸ್ಸಿಗೆ ಬಂದಿದ್ದ ರವಿ ಸರಿಯಾಗಿ ಕೆಲಸ ಮಾಡದೇ ಊರಿನಲ್ಲಿ ಉಡಾಳ ಹುಡುಗರ ಜೊತೆಗೆ ಸ್ನೇಹಿ ಮಾಡಿಕೊಂಡು ಓಡಾಡುತ್ತಿದ್ದ. ಹೀಗಾಗಿ ಮಗ ಸರಿಯಾಗಿ ಕೆಲಸ ಮಾಡಿಕೊಂಡು ಮನೆಗ ಜವಾಬ್ದಾರಿ ತೆಗೆದುಕೊಂಡ ಮೇಲೆ ಮದುವೆ ಮಾಡಬೇಕು ಎಂದು ಪೋಷಕರ ಲೆಕ್ಕಾಚಾರ ಇತ್ತು. ಆದರೆ ಈತ ಮಾತ್ರ ನಿತ್ಯ ಮದುವೆ ಮಾಡು ಎಂದು ತಂದೆಯ ಜೊತೆಗೆ ಜಗಳವಾಡುತ್ತಿದ್ದ. ಅಂದು ಜಗಳ ವಿಕೋಪಕ್ಕೆ ಹೋಗಿ ಕೊಲೆ ಮಾಡುವ ಉದ್ದೇಶದಿಂದ ರವಿ ಅವರ ತಂದೆಯ ಮೇಲೆ‌ ಮಾರಣಾಂತಿಕಕವಾಗಿ ಹಲ್ಲೆ ಮಾಡಿದ್ದ. ಕೋರ್ಟ್ ಎಲ್ಲವನ್ನೂ ಪರಿಗಣಿಸಿ ಈವಾಗ ಶಿಕ್ಷೆಯನ್ನು ಪ್ರಕಟ ಮಾಡಿದೆ‌‌. ಆದರೆ ಇತ್ತಿಚೆಗೆ ಹೆತ್ತ ತಂದೆ ತಾಯಿಗಳಿಗೆ ಮಕ್ಕಳು ಗೌರವ ನೀಡುತ್ತಿಲ್ಲ. ಇದೊಂದೇ ಪ್ರಕರಣವಲ್ಲ ತಂದೆ ತಾಯಿಗೆಗಳಿಗೆ ಗೌರವ ನೀಡದ ಸಾಕಷ್ಟು ಕೇಸ್ ಬರುತ್ತಿವೆ ಎಂದು ಸರ್ಕಾರಿ ಅಭಿಯೋಜಕರು ಬೇಸರ ವ್ಯಕ್ತಪಡಿಸಿದ್ದಾರೆ.
Published by:Seema R
First published: