ಗದಗ: ಹಣವೆಂದ್ರೆ ಹೆಣ ಸಹ ಬಾಯಿ ಬಿಡುತ್ತದೆ ಅನ್ನೋ ಮಾತಿದೆ. ಆದ್ರೆ ಸುಮಾರು ನಾಲ್ಕು ಲಕ್ಷ ರೂಪಾಯಿ ಮೌಲ್ಯದ ಬಂಗಾರದ ಆಭರಣಗಳನ್ನು ಆಟೋದಲ್ಲಿ ಬಿಟ್ಟ ಹೋದ ಮಹಿಳೆಗೆ ಮರಳಿ ನೀಡುವ ಮೂಲಕ ಆಟೋ ಚಾಲಕ ಪ್ರಾಮಾಣಿಕತೆ ಮೆರೆದಿದ್ದಾರೆ. ಆಟೋ ಚಾಲಕ ವೀರಣ್ಣ ಯಾವಗಲ್ ಎಂಬುವರು ತಮಗೆ ಸಿಕ್ಕ ಬರೋಬ್ಬರಿ ಎಂಟು ತೊಲೆ ಚಿನ್ನವನ್ನ ವಾಪಾಸು ಮಾಲೀಕರಿಗೆ ತಲುಪಿಸಿದ್ದಾರೆ. ಆಟೋ ಚಾಲಕನ ಕಾರ್ಯಕ್ಕೆ ಮೆಚ್ಚಿ ಪೊಲೀಸರು ಸನ್ಮಾನ ಮಾಡಿದ್ದಾರೆ.
ವೀಣಾ ಕೊಣ್ಣೂರು ಎನ್ನೋ ಮಹಿಳೆ ಗದಗದ ನರಸಾಪುರದಿಂದ ಆಟೋ ಹತ್ತಿ ನಗರದ ಗಂಜಿ ಬಸವೇಶ್ವರ ಸರ್ಕಲ್ ಬಳಿ ಇಳಿದುಕೊಂಡಿದ್ದಾಳೆ. ಆಟೋ ಫುಲ್ ಆಗಿದ್ರಿಂದ ಮುಂದಿನ ಸೀಟ್ ಬಳಿ ತಮ್ಮ ಬ್ಯಾಗ್ ಇರಿಸಿದ್ರಂತೆ. ಆಟೋ ಇಳಿಯೋ ಹೊತ್ತಿಗೆ ಅದ್ಯಾವ್ದೋ ಗುಂಗಲ್ಲಿ ಬ್ಯಾಗ್ ಮರೆತಿದ್ದಾರೆ. ಆಟೋ ಚಾಲಕ ವೀರಣ್ಣನೂ ಕೆಲಸದ ಗಡಬಡಿಯಲ್ಲಿ ಹೊರಟಿದ್ದ. ಆಟೋ ಪಾಸ್ ಆಗ್ತಿದ್ದಂತೆ ವೀಣಾ ಅವರಿಗೆ ಬ್ಯಾಗ್ ಬಿಟ್ಟಿದ್ದ ನೆನಪಾಗುತ್ತೆ. ಆಗ್ಲೆ ರೋಟರಿ ಸರ್ಕಲ್ ನಲ್ಲಿದ್ದ ದಾವಲ್ ಹಾಗೂ ಆಸೀಫ್ ಅನ್ನೋ ಆಟೋ ಚಾಲಕರ ಸಹಾಯದಿಂದ ವೀರಣ್ಣ ಅವರ ಆಟೋ ಹುಡುಕೋದಕ್ಕೆ ಶುರು ಮಾಡಿದ್ರು. ಜೊತೆಗೆ ಠಾಣೆಗೆ ದೂರು ಕೊಡಲು ಮುಂದಾಗಿದ್ದರು.
ವೀಣಾ ಶಹರ ಪೊಲೀಸ್ ಠಾಣೆ ತಲುಪೋದ್ರಲ್ಲಿ ಮನೆಯಿಂದ ಫೋನ್ ಬರುತ್ತೆ. ಆಟೋ ಚಾಲಕ ಈರಣ್ಣ ಮನೆ ಹುಡುಕ್ಕೊಂಡು ಬ್ಯಾಗ್ ತಲುಪಿಸಿದ್ದರು. ವೀಣಾ ದಾವಣಗೆರೆಯಿಂದ ಸಂಬಂಧಿಕರ ಮನೆ ಕಾರ್ಯಕ್ರಮಕ್ಕೆ ಬಂದಿದ್ರು. ಕಾರ್ಯಕ್ರಮದಲ್ಲಿ ಧರಿಸಲು ನಾಲ್ಕು ತೊಲೆ ಲಾಂಗ್ ಚೈನ್ ಹಾಗೂ ನಾಲ್ಕು ತೊಲೆಯ ಮಾಂಗಲ್ಯ ಸರವನ್ನ ಬ್ಯಾಂಗ್ ನಲ್ಲಿ ಇಟ್ಕೊಂಡು ಬಂದಿದ್ರಂತೆ. ಬರೋಬ್ಬರಿ 4 ಲಕ್ಷ ಮೌಲ್ಯದ ಚಿನ್ನ ಅದು. ಆದ್ರೆ, ವೀರಣ್ಣ ಬ್ಯಾಗ್ ತೆಗೆದು ನೋಡಿರಲಿಲ್ಲ. ಯಾರದ್ದೇ ಬ್ಯಾಗ್ ಸಿಕ್ಕಾಗ್ಲೂ ಪ್ರಾಮಾಣಿಕವಾಗಿ ಮುಟ್ಟಸ್ತೇನಿ ಅಂತಾರೆ ಈರಣ್ಣ.
ಇದನ್ನೂ ಓದಿ: Love U Racchu Movie Tragedy: ನಾನೇನು ಹೆದರಿಕೊಂಡು ಜಾಮೀನಿಗಾಗಿ ಅರ್ಜಿ ಹಾಕಿರಲಿಲ್ಲ : ನಟ ಅಜಯ್ ರಾವ್
ಇನ್ನು ಆಟೋ ಚಾಲಕ ವೀರಣ್ಣನ ಪ್ರಾಮಾಣಿಕತೆ ಮೆಚ್ಚಿದ ಗದಗ ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟರ್ ಅವರು ಶಹರ ಠಾಣೆಯಲ್ಲಿ ಸನ್ಮಾಸಿದ್ರು. ಅಷ್ಟೇ ಅಲ್ದೇ ಸ್ಥಳದಲ್ಲೇ ಇದ ಆಟೋ ಚಾಲಕರಿಗೆ ವೀರಣ್ಣ ಕಾರ್ಯ ಮಾದರಿಯಾಗಿದೆ ಎಲ್ಲಾ ಚಾಲಕರು ವೀರಣ್ಣ ಗುಣಗಳನ್ನು ಅಳವಡಿಸಿಕೊಳ್ಳಿ ಅಂತಾ ತಿಳಿಸಿದ್ರು. ಪ್ರಾಮಾಣಿಕ ಆಟೋ ಡ್ರೈವರ್ ಗಳನ್ನ ಸಿನಿಮಾದಲ್ಲಿ ನೋಡಿರ್ತೀವಿ.. ಆದ್ರೆ ವೀರಣ್ಣ ರಿಯಲ್ ಹೀರೋ. ಇವರು ಗದಗ ಬೆಟಗೇರಿ ಜನರಿಗೆ ಹೆಮ್ಮೆ ತಂದಿದೆ. ಇಂಥ ಆಟೋ ಚಾಲಕರು ನಮ್ಮ ಮಧ್ಯೆ ಇದಾರೆ ಅಂದ್ರೆ ನಮಗೂ ಹೆಮ್ಮೆನೆ. ವೀರಣ್ಣನ ಪ್ರಾಮಾಣಿ ಕಥೆಗೆ ಒಂದ್ ಸಲಾಮ್ ಹೇಳಲೇ ಬೇಕು.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ