HOME » NEWS » District » GADAG AGRICULTURE SUCCESS STORY BED GRADUATE FARMER EARNING LAKH RUPEES IN CROPING MANGO SCT SKG

Gadag: ಗದಗ; ಬಯಲು ಸೀಮೆಯಲ್ಲಿ ಬಂಗಾರದಂತಹ ಬೆಳೆ ಬೆಳೆದ ಬಿಎಡ್ ಪದವೀಧರ; ಮಾವು, ಚಿಕ್ಕು ಹಣ್ಣಿನಿಂದ ಲಕ್ಷಾಂತರ ರೂ. ಲಾಭ

Gadaga: ಗದಗದ ಯುವ ರೈತ ಶಿವಕುಮಾರ್ ಅವರು ನಾಲ್ಕು ಎಕರೆ ಜಮೀನಿನಲ್ಲಿ ಆಪೋಸ್, ತೋತಾಪುರಿ, ಸಿಂಧೂರಿ, ಧಾರವಾಡ ರಸಪುರಿ, ನೀಲಂ ಸೇರಿದಂತೆ ಅನೇಕ ತಳಿಯ ಮಾವು ಬೆಳೆದಿದ್ದಾರೆ. ಮಾವಿನ ಬೆಳೆಯಿಂದ ಸುಮಾರು ಎರಡರಿಂದ ಮೂರು ಲಕ್ಷ ಆದಾಯ ಬರುವ ನಿರೀಕ್ಷೆಯಲ್ಲಿದ್ದಾರೆ.

news18-kannada
Updated:March 22, 2021, 8:30 AM IST
Gadag: ಗದಗ; ಬಯಲು ಸೀಮೆಯಲ್ಲಿ ಬಂಗಾರದಂತಹ ಬೆಳೆ ಬೆಳೆದ ಬಿಎಡ್ ಪದವೀಧರ; ಮಾವು, ಚಿಕ್ಕು ಹಣ್ಣಿನಿಂದ ಲಕ್ಷಾಂತರ ರೂ. ಲಾಭ
ಗದಗದ ಯುವ ರೈತ ಶಿವಕುಮಾರ್
  • Share this:
ಗದಗ (ಮಾ. 22): ಇದು ಬಯಲು ಸೀಮೆಯ ನಾಡಿನ ಬಂಜರು ಭೂಮಿಯಲ್ಲಿ ಮಿಶ್ರ ಬೇಸಾಯ ಪದ್ದತಿಯಲ್ಲಿ ಕೃಷಿ ಮಾಡಿ ಯಶಸ್ಸು ಕಂಡ ಬಿಎಡ್  ಪದವಿ ಪಡೆದ ಯುವಕನ ಕತೆ. ಯಾವುದೇ ಉದ್ಯೋಗ ಅರಸಿ ಹೋಗದೆ ಕೃಷಿಯಲ್ಲಿ ಏನಾದರೂ ಸಾಧನೆ ಮಾಡುವ ಹಂಬಲದಿಂದ ಬಂಜರು ಭೂಮಿಯಲ್ಲಿ ತೋಟಗಾರಿಕೆ ಬೆಳೆಯಲು ಅವರು ಆರಂಭಿಸಿದರು. ಆರಂಭದಲ್ಲಿ ಸಾಕಷ್ಟು ತೊಡಕುಗಳನ್ನು ಅನುಭವಿಸಿದರೂ ಸದ್ಯ ಭೂಮಿ ತಾಯಿಯನ್ನು ನಂಬಿ ಕೆಟ್ಟವರು ಇಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ.  ಬಂಜರು ಭೂಮಿಯಲ್ಲಿ ಬಂಗಾರದಂತಹ ಫಸಲು ತಗೆದು ಲಕ್ಷಾಂತರ ರೂಪಾಯಿ ಆದಾಯ ತಗೆಯುತ್ತಿದ್ದಾರೆ.

ಪದವಿ ಮುಗಿಸಿದರೂ ಉದ್ಯೋಗ ಅರಸಿ ಹೋಗದೆ ಈ ಯುವಕ ಬಯಲು ಸೀಮೆಯ ನಾಡು ಗದಗ ಜಿಲ್ಲೆಯಲ್ಲಿ ಸಖತ್ ಆಗಿ ತೋಟಗಾರಿಕೆ ಬೆಳೆದಿದ್ದಾರೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಉಂಡೇನಹಳ್ಳಿ ಗ್ರಾಮದ ಶಿವಕುಮಾರ್ ಇಳಿಗಾರ ಎಂಬ ರೈತ ಸ್ವಂತ ಜಮೀನಿನಲ್ಲಿ ಶೂನ್ಯ ಬಂಡವಾಳದಲ್ಲಿ ಮಿಶ್ರ ಬೇಸಾಯ ಕೃಷಿಯಲ್ಲಿ ಯಶಸ್ಸು ಕಂಡಿದ್ದಾರೆ. ಶಿವಕುಮಾರ್ ಇವರು ಬಿಎಡ್ ಪದವಿ ವ್ಯಾಸಂಗ ಮಾಡಿದ್ದಾರೆ. ಆದರೆ ಉದ್ಯೋಗ ಅರಸಿ ಹೋಗದೆ ಕೃಷಿಯಲ್ಲಿ ಏನಾದರೂ ಸಾಧನೆ ಮಾಡುವ ತವಕದಲ್ಲಿದವನ್ನು ಅವರ ಸಾಧನೆಗೆ ಭೂಮಿ ತಾಯಿಯು ಸಹ ಕೈ ಹಿಡಿದಿದ್ದಾಳೆ.

Gadaga: Gadag Agriculture Success Story BEd Graduate Farmer earning Lakh rupees in Croping Mango.

ಮೊದಲು ವಾಣಿಜ್ಯ ಬೆಳೆಗಳನ್ನು ಬೆಳೆಯಲು ಆರಂಭಿಸಿದ ಶಿವಕುಮಾರ್ ಅದರಲ್ಲಿ ಅಷ್ಟೊಂದು ಲಾಭದಾಯಕವಾಗಿರಲಿಲ್ಲ. ಹೀಗಾಗಿ ತೋಟಗಾರಿಕೆ ಬೆಳೆಯಲ್ಲಿ ಉತ್ತಮ ಲಾಭ ಸಿಗಬಹುದು ಎಂಬ ದೃಷ್ಟಿಯಿಂದ ತೋಟಗಾರಿಕೆಯಲ್ಲಿ ಮಿಶ್ರ ಬೇಸಾಯ ಪದ್ದತಿ ಅಳವಡಿಸಿಕೊಂಡು ಮಾವು, ನಿಂಬೆ, ಕರಿಬೇವು, ಪಪ್ಪಾಯಿ ಜೊತೆಗೆ ರೇಷ್ಮೆ ಕೃಷಿಯನ್ನು ಸಹ ಮಾಡಿದ್ದಾರೆ. ಜಮೀನಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಸಾಗುವಾನಿ ಸಹ ಬೆಳೆದಿದ್ದಾರೆ. ಹೀಗಾಗಿ ಸುಮಾರು ನಾಲ್ಕು ಎಕರೆ ಪ್ರದೇಶದಲ್ಲಿ ಸಮಗ್ರ ತೋಟಗಾರಿಕೆ ಬೆಳೆಯಿಂದ ಪ್ರತಿ ವರ್ಷ ಲಕ್ಷಾಂತರ ರೂಪಾಯಿ ಆದಾಯ ಬರುತ್ತಿದೆ.

ಇದನ್ನೂ ಓದಿ: Farmers Protest: ಬೆಂಗಳೂರಿನಲ್ಲಿ ಇಂದು ರೈತರ ಬೃಹತ್ ಪ್ರತಿಭಟನೆ; ವಾರದ ಮೊದಲ ದಿನವೇ ಟ್ರಾಫಿಕ್ ಜಾಮ್ ಸಾಧ್ಯತೆ

ಇನ್ನು, ಈ ವರ್ಷ ಮಾವು, ಚಿಕ್ಕು ಹಣ್ಣಿನ ಬೆಳೆ ಸಹ ಶಿವಕುಮಾರ್ ನ ಕೈ ಹಿಡಿದಿದೆ.‌ ಈಗಾಗಲೇ ಮಾವು ಹಾಗೂ ಚಿಕ್ಕು ಹಣ್ಣು ಕಟಾವು ಮಾಡಲಾಗುತ್ತಿದೆ. ಖರೀದಿಗಾರರು ಜಮೀನಿಗೆ ಬಂದು ಹಣ್ಣು ಖರೀದಿಸಿಕೊಂಡು ಹೋಗುತ್ತಿದ್ದಾರೆ. ಮಾರುಕಟ್ಟೆ ಸಮಸ್ಯೆ ಸಹ ಇಲ್ಲ. ಖರೀದಿಗಾರರು ತೋಟಕ್ಕೆ ಬಂದು ಹಣ್ಣು ಖರೀದಿ ಮಾಡಿಕೊಂಡು ಹೋಗುತ್ತಿದ್ದಾರೆ. ಹೀಗಾಗಿ ಪ್ರತಿ ವರ್ಷ ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಶಿವಕುಮಾರ ಸಾವಯವ ಕೃಷಿ ಪದ್ದತಿ ಅಳವಡಿಸಿಕೊಂಡು ಸಮಗ್ರ ಕೃಷಿ ಆರಂಭಿಸಿದ್ದಾರೆ. ಕಳೆದ ಎಂಟು ವರ್ಷಗಳಿಂದ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಬಿಎಡ್ ಪದವೀಧರನಾಗಿರುವುದರಿಂದ ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ತೋಟಗಾರಿಕೆ ಕೃಷಿಯಲ್ಲಿ ಸಾಧನೆ ಮಾಡಿದ್ದಾರೆ.

ಸದ್ಯ ಸಣ್ಣ ಹಿಡುವಳಿ ರೈತನಾಗಿರುವ ಶಿವಕುಮಾರ್ ಅವರು ನಾಲ್ಕು ಎಕರೆ ಜಮೀನಿನಲ್ಲಿ ಒಟ್ಟು 450 ಮಾವಿನ  ಗಿಡಗಳನ್ನು ಬೆಳೆದಿದ್ದಾರೆ. ಅದರಲ್ಲಿ ಆಪೋಸ್, ತೋತಾಪುರಿ, ಸಿಂಧೂರಿ, ಧಾರವಾಡ ರಸಪುರಿ, ನೀಲಂ ಸೇರಿದಂತೆ ಅನೇಕ ತಳಿಯ ಮಾವು ಬೆಳೆದಿದ್ದಾರೆ. ಈ ಬಾರಿ ಆಪೋಸ್ ಮಾವಿಗೆ ಭಾರಿ ಡಿಮ್ಯಾಂಡ್ ಇದೆ ಅಂತಿದ್ದಾರೆ ರೈತ ಶಿವಕುಮಾರ್.ಮಾವಿನ ಬೆಳೆಯಿಂದ ಸುಮಾರು ಎರಡರಿಂದ ಮೂರು ಲಕ್ಷ ಆದಾಯ ಬರುವ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ ಮೊದಲೇ ಹಂತದ ಕಟಾವಿನಿಂದ 1 ಲಕ್ಷ ಮೌಲ್ಯದ ಮಾವು ಮಾರಾಟ ಮಾಡಿದ್ದಾರೆ. ಆದರೆ ಈ ವರ್ಷ ಇಳುವರಿ ಚೆನ್ನಾಗಿ ಬಂದಿದೆ ಮಾರುಕಟ್ಟೆಯಲ್ಲಿ ಬೆಲೆ ಕಡಿಮೆಯಾಗಿದೆ. ಬೆಲೆ ಬಂದಾಗ ಬೆಳೆ ಇರೋಲ್ಲ, ಬೆಳೆ ಬಂದಾಗ ಬೆಲೆ ಬರೋದಿಲ್ಲ. ಹೀಗಾಗಿ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಬಂದರೆ ರೈತರಿಗೆ ಉತ್ತೇಜನವಾಗುತ್ತದೆ.

ಸದ್ಯ ಶಿವಕುಮಾರ್ ಅವರು ಬಂಜರು ಭೂಮಿಯಲ್ಲಿ ಬಂಗಾರದಂತಹ ಬೆಳೆ ತಗೆದು ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿರುವ ಮೂಲಕ ಮಾದರಿಯಾಗಿದ್ದಾರೆ. ಸಾವಯವ ಪದ್ದತಿಯನ್ನು ಅಳವಡಿಸಿಕೊಂಡು ಸಮಗ್ರ ಕೃಷಿ ಮಾಡಿ ಯಶಸ್ಸು ಕಂಡಿರುವ ಯುವ ರೈತನ ಕಾರ್ಯಕ್ಕೆ ರೈತ ಸಮೂಹ ಮೆಚ್ಚುಗೆ ವ್ಯಕ್ತಪಡಿಸಿದೆ.

(ವರದಿ: ಸಂತೋಷ ಕೊಣ್ಣೂರ)
Published by: Sushma Chakre
First published: March 22, 2021, 8:30 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories