Koppala: ಅಪ್ಪು​ ಬ್ಯಾನರ್​ ಕಿತ್ತು ಹಾಕಿದ್ದಕ್ಕೆ ಅಭಿಮಾನಿಗಳ ಆಕ್ರೋಶ; ಇಬ್ಬರ ಬಂಧನ, ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ

ಗ್ರಾಮ ಪಂಚಾಯತ್​ ಸದಸ್ಯರಿಬ್ಬರು ಸೇರಿ ರಾತ್ರೋ ರಾತ್ರಿ ಬ್ಯಾನರ್​ ಕಿತ್ತುಹಾಕಿದ್ದಾರೆ. ಇದಕ್ಕೆ ರೊಚ್ಚಿಗೆದ್ದ ಅಭಿಮಾನಿಗಳು ಟಯರ್​ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದಾರೆ.

ಅಪ್ಪು ಅಭಿಮಾನಿಗಳ ಆಕ್ರೋಶ

ಅಪ್ಪು ಅಭಿಮಾನಿಗಳ ಆಕ್ರೋಶ

  • Share this:
ಕೊಪ್ಪಳ: ಹುವಿನಾಳ ಗ್ರಾಮದಲ್ಲಿ ನಟ ಪುನೀತ್ ರಾಜ್​ಕುಮಾರ್​​ (Puneeth Rajkumar) ಬ್ಯಾನರ್​ ಹಾಗೂ ಕನ್ನಡ ಬಾವುಟ ಕಿತ್ತು ಹಾಕಿದ್ದಕ್ಕೆ ಅಭಿಮಾನಿಗಳು ರೊಚ್ಚಿಗೆದಿದ್ದಾರೆ. ಕೊಪ್ಪಳ ತಾಲೂಕಿನ  ಹುವಿನಾಳ ಗ್ರಾಮದಲ್ಲಿ ನಿನ್ನೆ ತಡರಾತ್ರಿ ಕಿಡಿಗೇಡಿಗಳು ಬ್ಯಾನರ್​ (Banner) ಕಿತ್ತುಕೊಂಡು ಹೋಗಿ ಕೆರೆಯಲ್ಲಿ (Lake) ಬಿಸಾಡಿದ್ದಾರೆ. ಇದಕ್ಕೆ ಅಪ್ಪು ಅಭಿಮಾನಿಗಳ (Fans) ತೀವ್ರ ಆಕ್ರೋಶ (Outrage) ಹೊರಹಾಕಿದ್ದಾರೆ. ಗ್ರಾಮ ಪಂಚಾಯಿತಿ ಸದಸ್ಯರ ಈ ಕೆಲಸ ಮಾಡಿದ್ದು, ಆತನ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಹೂವಿನಾಳ ಗ್ರಾಮದಲ್ಲಿ ಟಯರ್​ಗೆ ಬೆಂಕಿ ಹಚ್ಚಿ ಅಭಿಮಾನಿಗಳು ಪ್ರತಿಭಟನೆ ನಡೆಸಿದ್ರು. ಪುನೀತ್​ ರಾಜ್​ ಕುಮಾರ್ ಬ್ಯಾನರ್​ ಕಿತ್ತು ಹಾಕಿದ್ದ ಗ್ರಾಮ ಪಂಚಾಯತ್​ ಸದಸ್ಯ ಪತ್ರಯ್ಯ ಹಾಗೂ ಶಾಂತಯ್ಯರನ್ನು ಪೊಲೀಸರು ಬಂಧಿಸಿದ್ದಾರೆ.

ಸಿಸಿಟಿವಿಯಲ್ಲಿ ಸೆರೆಯಾಯ್ತು ಕಿಡಿಗೇಡಿಗಳ ಕೃತ್ಯ

ಗ್ರಾಮ ಪಂಚಾಯತಿ ಸದಸ್ಯರಾದ ಪತ್ರಯ್ಯ ಹಾಗೂ ಶಾಂತಯ್ಯ ಎಂಬುವರು ಪುನೀತ್​ ರಾಜ್​ಕುಮಾರ್​ ಬ್ಯಾನರ್​ ಹಾಗೂ ಕನ್ನಡ ಬಾವುಟವನ್ನು ಕಿತ್ತುಕೊಂಡು ಹೋಗಿ ಕೆರೆಗೆ ಬಿಸಾಡಿದ್ದಾರೆ. ಅಪ್ಪು ಭಾವಚಿತ್ರವುಳ್ಳ ಬ್ಯಾನರ್​ ಕಿತ್ತುಹಾಕಿರೋ ದೃಶ್ಯ ಸಿಸಿಟಿವಿಯಲ್ಲೂ ಸೆರೆಯಾಗಿದೆ. ಗ್ರಾಮ ಪಂಚಾಯತ್​ ಸದಸ್ಯ ಪತ್ರಯ್ಯ ಹಾಗೂ ಶಾಂತಯ್ಯರನ್ನು ಪೊಲೀಸರು ಬಂಧಿಸಿದ್ದಾರೆ.

ಜಿಲ್ಲಾಧಿಕಾರಿ ಎದುರು ಆಕ್ರೋಶ

ಇಂದು ಗ್ರಾಮದಲ್ಲಿ ನಡೆದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮಕ್ಕೆಂದು ಜಿಲ್ಲಾಧಿಕಾರಿಗಳು ಹುವಿನಾಳ ಗ್ರಾಮಕ್ಕೆ ಆಗಮಿಸಿದ್ರು ಈ ವೇಳೆ ಅಪ್ಪು ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ. ನಾಮ ಫಲಕ, ಕನ್ನಡ ಬಾವುಟ ಕಿತ್ತು ಹಾಕಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದ್ದಾರೆ.

ಟಯರ್​ಗೆ ಬೆಂಕಿ ಹಚ್ಚಿ ಪ್ರತಿಭಟನೆ

ಗುರುವಾರ ಪುನೀತ್ ರಾಜ್​ಕುಮಾರ್​ ಹುಟ್ಟು ಹಬ್ಬದ ದಿನ ಗ್ರಾಮದಲ್ಲಿ ಅಭಿಮಾನಿಗಳು ಬ್ಯಾನರ್​ ಹಾಕಿದ್ದರು,. ಗ್ರಾಮ ಪಂಚಾಯತ್​ ಸದಸ್ಯರಿಬ್ಬರು ಸೇರಿ ರಾತ್ರೋ ರಾತ್ರಿ ಬ್ಯಾನರ್​ ಕಿತ್ತುಹಾಕಿದ್ದಾರೆ. ಇದಕ್ಕೆ ರೊಚ್ಚಿಗೆದ್ದ ಅಭಿಮಾನಿಗಳು ಟಯರ್​ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದಾರೆ. ಎಸಿ ಹಾಗೂ ಪೊಲೀಸರ ಎದುರು ಪ್ರತಿಭಟನೆ ಮಾಡಿ ಅಭಿಮಾನಿಗಳು ಪ್ರತಿಭಟನೆ ಮಾಡಿ ಆಕ್ರೋಶ ಹೊರಹಾಕಿದ್ದಾರೆ ಈ ವೇಳೆ ಫಲಕವನ್ನು ಮತ್ತೆ ಅಳವಡಿಸೋದಾಗಿ ಎಸಿ ಹಾಗೂ ಪೊಲೀಸರು ಭರವಸೆ ನೀಡಿದ್ದಾರೆ.

ಇದನ್ನೂ ಓದಿ: Bhagavad Gita Teaching: ಭಗವದ್ಗೀತೆ, ಕುರಾನ್, ಬೈಬಲ್​ಗೆ ವಿರೋವಿಲ್ಲ-ಸಿದ್ದು, ಕುಮಾರಸ್ವಾಮಿ ಅಪಸ್ವರ, ಕೊರೊನಾಗಿಂತ ಮಾರಕ-ತನ್ವೀರ್​

ಶಾಲಾ ಪಠ್ಯದಲ್ಲಿ ಪುನೀತ್​ ಪಾಠ

ರಾಜ್ಯದೆಲ್ಲೆಡೆ ಪುನೀತ್ ರಾಜಕುಮಾರ್​​ (Puneeth Rajkumar) ಅವರ ಕೊನೆಯ ಚಿತ್ರ ಜೇಮ್ಸ್ (James) ​ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣ್ತಿದೆ. ಇದೇ ಸಂದರ್ಭದಲ್ಲಿ ಸರ್ಕಾರ ಕೂಡ  ಪುನೀತ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ(Karnataka Ratna)  ಹಾಗೂ ಸಹಕಾರ ರತ್ನ ಬಿರುದು ಘೋಷಿಸಿ ಗೌರವ ಸಲ್ಲಿಸಿದೆ. ಜೊತೆಗೆ ಪುನೀತ್ ಅವರ ಬದುಕಿನ ಸಾಧನೆ ಬಗ್ಗೆ ಪಠ್ಯ ಪುಸ್ತಕಗಳಲ್ಲಿ ಒಂದು ಪಾಠವಾಗಿ ಸೇರಿಸುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ತಮ್ಮ ನಟನೆಯಿಂದಷ್ಟೆ ಅಲ್ಲ ಪುನೀತ್ ರಾಜ್​ಕುಮಾರ್​ ತಮ್ಮ ಸಾಮಾಜಿಕ ಸೇವೆಗಳಿಂದ ಜನ-ಮನ ಗೆದ್ದವರು. ಅವರು ಮೃತಪಟ್ಟು 4 ತಿಂಗಳಾದ್ರೂ ಜನ ಅವ್ರರನ್ನ ಮರೆಯುತ್ತಿಲ್ಲ. ಅಪ್ಪು (Appu) ಜನ್ಮ ದಿನವನ್ನು ಹಬ್ಬದಂತೆ ಆಚರಿಸುತ್ತಿದ್ದಾರೆ. ಇನ್ನು ಪುನೀತ್​ ಅವರಿಗೆ ಮರಣೋತ್ತರವಾಗಿ ನೀಡಬಹುದಾದ ಗೌರವ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇದೆ.

ಹಲವು ಸಂಘ ಸಂಸ್ಥೆಗಳಿಂದ ಮನವಿ

ಚಿಕ್ಕ ವಯಸ್ಸಿನಲ್ಲೇ ರಾಷ್ಟ್ರ ಪ್ರಶಸ್ತಿ ಪಡೆದು ಕನ್ನಡಿಗರ ಕಣ್ಮಣಿಯಾಗಿ ರಾರಾಜಿಸಿ ಇತ್ತೀಚೆಗಷ್ಟೆ ನಿಧನ ಹೊಂದಿರುವ ಪುನೀತ್ ರಾಜ್‍ಕುಮಾರ್ ಅವರ ಜೀವನ ಗಾಥೆಯನ್ನು ಪ್ರಾಥಮಿಕ ಶಾಲಾ ಮಕ್ಕಳಿಗೆ ಪಠ್ಯವನ್ನಾಗಿ ಮಾಡುವಂತೆ ಹಲವಾರು ಸಂಘ-ಸಂಸ್ಥೆಗಳಿಂದ ಬೇಡಿಕೆ ಇಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಸಂಬಂಧ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: The Kashmir Files ಬಗ್ಗೆ ಹೀಗೆಲ್ಲಾ ಹೇಳಿದ್ರಾ ಪ್ರಕಾಶ್ ರಾಜ್? ಇತ್ತ "ನಾ ಸಿನಿಮಾ ನೋಡಲ್ಲ" ಅಂದ್ರು ಸಿದ್ದರಾಮಯ್ಯ!

ಚಿಕ್ಕ ವಯಸ್ಸಿನಲ್ಲೇ ಪ್ರಶಸ್ತಿ ಪಡೆಯುವುದರ ಜತೆಗೆ ಸಾಮಾಜಿಕ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅಜರಾಮರ ಸೇವೆ ಸಲ್ಲಿಸುವ ಮೂಲಕ ಮಕ್ಕಳು ಮತ್ತು ಯುವಕರಿಗೆ ಸ್ಪೂರ್ತಿಯಾಗಿರುವ ಪುನೀತ್ ಅವರ ಜೀವನ ಗಾಥೆ ಮುಂದಿನ ಜನಾಂಗಕ್ಕೆ ಮಾದರಿಯಾಗಬೇಕು ಎಂಬ ಉದ್ದೇಶದಿಂದ ಅವರ ಪಠ್ಯವನ್ನು ಪ್ರಾಥಮಿಕ ಶಾಲೆಯ 4 ಅಥವಾ 5ನೆ ತರಗತಿಯ ಪಠ್ಯದಲ್ಲಿ ಅಳವಡಿಕೆ ಮಾಡಬೇಕು ಎಂದು ಹಲವಾರು ಸಂಘ-ಸಂಸ್ಥೆಗಳು ಬಿಬಿಎಂಪಿಯ ಶಿಕ್ಷಣ ವಿಭಾಗಕ್ಕೆ ಪತ್ರ ಬರೆದು ಒತ್ತಾಯಿಸಿದ್ದವು.
Published by:Pavana HS
First published: