ಜನವಸತಿ ಪ್ರದೇಶದ ಸ್ಮಶಾನದಲ್ಲಿ ಕೊರೋನಾ ಸೋಂಕಿತನ ಅಂತ್ಯಕ್ರಿಯೆ; ಕಲಬುರ್ಗಿ ಜನರ ಆಕ್ರೋಶ

ಈಗಾಗಲೇ ಬಳ್ಳಾರಿ, ಯಾದಗಿರಿ ಮತ್ತಿತರ ಕಡೆ ಕೊರೋನಾ ಸೋಂಕಿತರ ಶವಗಳನ್ನು ಬೇಕಾಬಿಟ್ಟಿಯಾಗಿ ಮಣ್ಣು ಮಾಡಿದ ಘಟನೆಗಳು ಹಸಿರಾಗಿರುವಾಗಲೇ, ಕಲಬುರ್ಗಿಯಲ್ಲಿ ಸೋಂಕಿತನ ಶವವನ್ನು ಜನನಿಬಿಡ ಪ್ರದೇಶದ ರುದ್ರಭೂಮಿಯಲ್ಲಿ ನೆರವೇರಿಸಿ ಆರೋಗ್ಯ ಇಲಾಖೆ ಚರ್ಚೆಗೆ ಗ್ರಾಸವಾಗಿದೆ.

news18-kannada
Updated:July 5, 2020, 2:42 PM IST
ಜನವಸತಿ ಪ್ರದೇಶದ ಸ್ಮಶಾನದಲ್ಲಿ ಕೊರೋನಾ ಸೋಂಕಿತನ ಅಂತ್ಯಕ್ರಿಯೆ; ಕಲಬುರ್ಗಿ ಜನರ ಆಕ್ರೋಶ
ಸಾಂದರ್ಭಿಕ ಚಿತ್ರ
  • Share this:
ಕಲಬುರ್ಗಿ; ಜಿಲ್ಲೆಯಲ್ಲಿ ಕೊರೋನಾ ಸೋಂಕು ವ್ಯಾಪಕಗಳ್ಳುತ್ತಲೇ ಇದೆ. ಸೋಂಕಿತರ ಜೊತೆ ಸಾವಿನ ಸಂಖ್ಯೆಯೂ ಹೆಚ್ಚುತ್ತಲೇ ಇದೆ. ಇಂತಹ ಸಂದರ್ಭದಲ್ಲಿಯೇ ಜನ ವಸತಿ ಪ್ರದೇಶದ ಸ್ಮಶಾದಲ್ಲಿ ಕೊರೋನಾ ಸೋಂಕಿತ ವ್ಯಕ್ತಿಯ ಅಂತ್ಯಕ್ರಿಯೆ ನೆರವೇರಿಸಿರುವುದಕ್ಕೆ ಕಲಬುರ್ಗಿಯಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಕಲಬುರ್ಗಿಯ ವಿಜಯ ನಗರದಲ್ಲಿ ಘಟನೆ ನಡೆದಿದೆ. ಕಳೆದ ರಾತ್ರಿ ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಸೋಂಕಿತ ವ್ಯಕ್ತಿಯ ಕುಟುಂಬದವರು ವಿಜಯನಗರ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಈ ಸ್ಮಶಾನದ ಸುತ್ತಮುತ್ತ ಅನೇಕ ಮನೆಗಳಿದ್ದು, ಸೋಂಕಿತನ ಶವದ ಅಂತ್ಯಕ್ರಿಯೆಯಿಂದಾಗಿ ಕೊರೋನಾ ಹರಡುವ ಆತಂಕ ವ್ಯಕ್ತವಾಗಿದೆ.

ನಗರದಲ್ಲಿ ಅಂತ್ಯಕ್ರಿಯೆ ಬದಲಾಗಿ ನಗರದಿಂದ ಹೊರಗೆ ಅಂತ್ಯಕ್ರಿಯೆ ಮಾಡುವಂತೆ ಜನರ ಆಗ್ರಹಿಸಿದೆ.  ಜನರ ಆಗ್ರಹಕ್ಕೆ ತಲೆಕೆಡಿಸಿಕೊಳ್ಳದೆ ನಿಗದಿತ ಸ್ಥಳದಲ್ಲೇ ಅಂತ್ಯಕ್ರಿಯೆ ನಡೆಸಿ ಕುಟುಂಬದ ಸದಸ್ಯರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಹೊರಟು ಹೋಗಿದೆ. ಹೀಗಾಗಿ ಜನ ಸಾಮಾನ್ಯರು ಸಿಬ್ಬಂದಿಯ ಬೇಜವಾಬ್ದಾರಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Coronavirus Updates: ಭಾರತದಲ್ಲಿ ಕೋವಿಡ್​-19 ಕಾವು: ಒಂದೇ ದಿನದಲ್ಲಿ 24 ಸಾವಿರ ಕೇಸ್​​ ಪತ್ತೆ, 6,73,165 ಸೋಂಕಿತರು

ಈಗಾಗಲೇ ಬಳ್ಳಾರಿ, ಯಾದಗಿರಿ ಮತ್ತಿತರ ಕಡೆ ಕೊರೋನಾ ಸೋಂಕಿತರ ಶವಗಳನ್ನು ಬೇಕಾಬಿಟ್ಟಿಯಾಗಿ ಮಣ್ಣು ಮಾಡಿದ ಘಟನೆಗಳು ಹಸಿರಾಗಿರುವಾಗಲೇ, ಕಲಬುರ್ಗಿಯಲ್ಲಿ ಸೋಂಕಿತನ ಶವವನ್ನು ಜನನಿಬಿಡ ಪ್ರದೇಶದ ರುದ್ರಭೂಮಿಯಲ್ಲಿ ನೆರವೇರಿಸಿ ಆರೋಗ್ಯ ಇಲಾಖೆ ಚರ್ಚೆಗೆ ಗ್ರಾಸವಾಗಿದೆ.
Published by: MAshok Kumar
First published: July 5, 2020, 2:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading