ಯಾವಾಗಲೂ ಜೊತೆಯಾಗೇ ಇರುತ್ತಿದ್ದ ಸ್ನೇಹಿತರು ಸಾವಲ್ಲೂ ಒಂದಾದರು: ಮಂಡ್ಯ ಯುವಕರ ದುರಂತ ಅಂತ್ಯ

ಕೆರೆಯಲ್ಲಿ ಈಜಲು ಹೋಗಿದ್ದ ಇಬ್ಬರು ಯುವಕರು ಆಕಸ್ಮಿಕವಾಗಿ ಮುಳುಗಿ ಜಲ ಸಮಾಧಿಯಾಗಿದ್ದಾರೆ. 

ರಾಜು, ಪ್ರದೀಪ

ರಾಜು, ಪ್ರದೀಪ

 • Share this:
  ಮಂಡ್ಯ: ಜೊತೆ ಜೊತೆಯಾಗೇ ಇರುತ್ತಿದ್ದ ಇಬ್ಬರು ಸ್ನೇಹಿತರು ಜೊತೆಯಾಗೇ ಪ್ರಾಣ ಬಿಟ್ಟಿರುವ ದಾರುಣ ಘಟನೆ ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆ ಹೋಬಳಿಯ ಮೋದೂರು ಗ್ರಾಮದಲ್ಲಿ ನಡೆದಿದೆ. ಕೆರೆಯಲ್ಲಿ ಈಜಲು ಹೋಗಿದ್ದ ಇಬ್ಬರು ಯುವಕರು ಆಕಸ್ಮಿಕವಾಗಿ ಮುಳುಗಿ ಜಲ ಸಮಾಧಿಯಾಗಿದ್ದಾರೆ. ರಾಜು(19), ಪ್ರದೀಪ(21) ಮೃತ ದುರ್ದೈವಿಗಳು. ಇವರಿಬ್ಬರು ಸ್ನೇಹಿತರಾಗಿದ್ದು ಗ್ರಾಮದ ಕೆರೆಯಲ್ಲಿ ಈಜಾಡಲು ಹೋಗಿದ್ದರು. ಆದ್ರೆ ಕೆರೆಯಲ್ಲಿ ನೀರು ಹೆಚ್ಚಾಗಿದ್ದರಿಂದ ಈಜು ಬಾರದ ಇವರಿಬ್ಬರು ನೀರಿನಲ್ಲಿ ಮುಳುಗಿದ್ದಾರೆ. ಈ ಸಂದರ್ಭ ಕೆರೆಯ ಹಾಸುಪಾಸಿನಲ್ಲಿ ಯಾರು ಇಲ್ಲದೆ ಇರೋದ್ರಿಂದ ಇಬ್ಬರೂ ಮುಳುಗಿ ಪ್ರಾಣ ಬಿಟ್ಟಿದ್ದಾರೆ. 

  ಕೆಆರ್ ಪೇಟೆಯ ಅಗ್ನಿಶಾಮಕ ದಳದ ಕೆರೆಯಲ್ಲಿ ಮೃತ ದೇಹಗಳನ್ನು ಪತ್ತೆ ಮಾಡಿ ಹೊರ ತಂದಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಮೃತ ದೇಹವನ್ನ ದಡಕ್ಕೆ ತರುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು‌. ಬೆಳದ ಮಕ್ಕಳನ್ನ ಕಳೆದುಕೊಂಡ ಪೋಷಕರಲ್ಲಿ ದುಃಖ ಮಡುಗಟ್ಟಿತ್ತು. ಈ ಸಂದರ್ಭ ಮೃತ ಯುವಕರನ್ನ ನೋಡಲು ಗ್ರಾಮದ ಹಾಗೂ ಅಕ್ಕ ಪಕ್ಕದ ಗ್ರಾಮಸ್ಥರ ದಂಡು ಹರಿದು ಬಂದಿತ್ತು. ಸ್ಥಳಕ್ಕೆ ಬಂದ ಕೆಆರ್ ಪೇಟೆ ಪೊಲೀಸರು ಜನರನ್ನ ಗುಂಪು ಕಟ್ಟದಂತೆ ಮನವಿ ಮಾಡಿಕೊಂಡ್ರು.

  ಇದನ್ನೂ ಓದಿ: ಲಸಿಕೆ ಹಾಕಿಸಿಕೊಂಡ ಸ್ಥಳದಲ್ಲಿ ಬಲ್ಬ್ ಬೆಳಗಿದ ಪ್ರಕರಣಕ್ಕೆ ಟ್ವಿಸ್ಟ್: ಬಯಲಾಯ್ತು ಅಸಲಿ ಸತ್ಯ..!

  ಮರಣೋತ್ತರ ಪರೀಕ್ಷೆಯನ್ನ ಕೆಆರ್ ಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ನೆರವೇರಿಸಿ ಬಳಿಕ ಕುಟುಂಬಸ್ಥರಿಗೆ ಮೃತದೇಹಗಳನ್ನು ಹಸ್ತಾಂತರ ಮಾಡಲಾಯಿತು. ಈ ಬಗ್ಗೆ ಕೆಆರ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಘಟನೆ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಕೆಸಿ ನಾರಾಯಣಗೌಡ ವಿಷಾದ ವ್ಯಕ್ತಪಡಿಸಿ, ಮೃತ ಯುವಕರ ಕುಟುಂಬಸ್ಥರಿ ನೆರವು ನೀಡುವ ಭರವಸೆ ನೀಡಿದ್ದಾರೆ.

  ಮೃತ ರಾಜು ಮತ್ತು ಪ್ರದೀಪ್ ಕುಟುಂಬಸ್ಥರು ಕಡು ಬಡವರಾಗಿದ್ದಾರೆ‌. ಕುಟುಂಬಕ್ಕೆ ಆಸರೆಯಾಗಬೇಕಿದ್ದ ಮಕ್ಕಳು ಸಾವನ್ನಪ್ಪಿದ್ದಾರೆ‌. ಹೀಗಾಗಿ ಕುಟುಂಬಸ್ಥರ ನೆರವಿಗೆ ಸರ್ಕಾರ ಮುಂದಾಗಬೇಕು, ಅವರಿಗೆ ಆರ್ಥಿಕ ನೆರವನ್ನ ನೀಡಿದ್ರೆ ಕುಟುಂಬ ಹೇಗೋ ಜೀವನ ಸಾಗಿಸಲು ಸಹಾಯವಾಗತ್ತೆ ಅಂತ ಗ್ರಾಮಸ್ಥರು ಆಗ್ರಹಿಸಿದ್ದಾರೆ.

  ಇನ್ನು ದೇಶದಲ್ಲಿ ಕೊರೋನಾ 2ನೇ ಅಲೆ ತಗ್ಗುತ್ತಿದ್ದು, ಲಸಿಕೆ ಅಭಿಯಾನ ಸಮರೋಪಾದಿಯಲ್ಲಿ ನಡೆಯುತ್ತಿದೆ. ಈವರೆಗೂ ಕೇಂದ್ರದಿಂದ ರಾಜ್ಯಗಳಿಗೆ 25.60 ಕೋಟಿ ಡೋಸ್ ಹಂಚಿಕೆಯಾಗಿದೆ. ಈವರೆಗೂ 24.44 ಕೋಟಿ ಡೋಸ್ ಬಳಕೆಯಾಗಿದೆ. ರಾಜ್ಯಗಳಲ್ಲಿ ಸದ್ಯ 1.17 ಕೋಟಿ ಡೋಸ್ ಬಳಕೆಗೆ ಲಭ್ಯವಿದೆ. ಇನ್ನು ಮೂರು ದಿನಗಳಲ್ಲಿ 38 ಲಕ್ಷ ಡೋಸ್ ಹಂಚಿಕೆಯಾಗಕಲಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಿಕೆ ಮಾಡಲಾಗುವುದು ಎಂದು ಕೇಂದ್ರ ಆರೋಗ್ಯ ಇಲಾಖೆಯಿಂದ ಮಾಹಿತಿ ನೀಡಿದೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.

  (ವರದಿ: ಸುನೀಲ್​​ ಕುಮಾರ್​)
  Published by:Kavya V
  First published: