ಪಾರಿವಾಳ ವಿಚಾರದಲ್ಲಿ ಶುರುವಾದ ಜಗಳಕ್ಕೆ ಹಾರಿ ಹೋದ ಸ್ನೇಹಿತನ ಪ್ರಾಣ ಪಕ್ಷಿ

ಪಾರಿವಾಳ ಕದ್ದ ವಿಚಾರಕ್ಕೆ ಸ್ನೇಹಿತರ ಮಧ್ಯೆ ದ್ವೇಷ ಹುಟ್ಟಿಕೊಂಡು ಅಂತಿಮವಾಗಿ ಒಬ್ಬನ ಕೊಲೆಯಾದ ಘಟನೆ ಆನೇಕಲ್​ನ ಸೂರ್ಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

news18-kannada
Updated:October 11, 2020, 7:28 AM IST
ಪಾರಿವಾಳ ವಿಚಾರದಲ್ಲಿ ಶುರುವಾದ ಜಗಳಕ್ಕೆ ಹಾರಿ ಹೋದ ಸ್ನೇಹಿತನ ಪ್ರಾಣ ಪಕ್ಷಿ
ಆನೇಕಲ್ ತಾಲೂಕಿನ ಸೂರ್ಯನಗರ ಪೊಲೀಸ್ ಠಾಣೆ
  • Share this:
ಆನೇಕಲ್: ಅವರಿಬ್ಬರು ಒಂದೇ ಊರಿನವರು ಜೊತೆಗೆ ಸ್ನೇಹಿತರು ಕೂಡ. ಈಗ್ಗೆ ಆರು ತಿಂಗಳ ಹಿಂದೆ ಪಾರಿವಾಳ ಕಳುವಾದ ವಿಚಾರಕ್ಕೆ ಅವರಿಬ್ಬರ ನಡುವೆ ವಿರಸ ಮೂಡಿತ್ತು. ಅದು ಯಾವ ಮಟ್ಟಕ್ಕೆ ಅಂದ್ರೆ ಒಬ್ಬರನ್ನೊಬ್ಬರು ಕಂಡರೆ ಸಾಕು ಹೊಡೆದಾಡುವ ಮಟ್ಟಕ್ಕೆ. ಮೊನ್ನೆ ಇಬ್ಬರ ನಡುವಿನ ದ್ವೇಷ ಓರ್ವನ ಕೊಲೆಯಲ್ಲಿ ಅಂತ್ಯ ಕಂಡಿದೆ. ಕೊಲೆಯಾದ ಯುವಕನ ಹೆಸರು ವಿಕಾಸ್. ಆನೇಕಲ್ ತಾಲ್ಲೂಕಿನ ಸೂರ್ಯ ಸಿಟಿ ಬಳಿಯ ಯಾರಂಡಳ್ಳಿ ಬಳಿ ಸ್ನೇಹಿತನಿಂದಲೇ ಈತ ಕೊಲೆಯಾಗಿ ಹೋಗಿದ್ದಾನೆ.

ವೃತ್ತಿಯಲ್ಲಿ ಡ್ರೈವರ್ ಕೆಲಸ ಮಾಡಿಕೊಂಡಿದ್ದ ಈತನಿಗೆ ಕೆಲ ಪುಡಾರಿಗಳ ಸಹವಾಸವಿತ್ತು. ಅವರಲ್ಲಿನ ಓರ್ವ ಪುಡಾರಿಯೇ ಇಂದು ಈತನ ಬಾಳಿಗೆ ವಿಲನ್ ಆಗಿದ್ದಾನೆ. ಪೀಟರ್ ಎನ್ನುವವನಿಂದಲೇ ವಿಕಾಸ್ ಕೊಲೆ ನಡೆದಿದೆ ಎನ್ನಲಾಗಿದೆ. ವಿಕಾಸ್ ಮತ್ತು ಪೀಟರ್ ಇಬ್ಬರು ಸಹ ಒಂದೇ ಊರಿನವರು, ಹಾಗಾಗಿ ಪರಿಚಯ ಕೂಡ ಹೆಚ್ಚೇ ಇತ್ತು.‌ ಈ ಪೀಟರ್​ಗೆ ಪಾರಿವಾಳ ಸಾಕುವ ಅಭ್ಯಾಸವಿತ್ತು. ಇದ್ರಿಂದ ಮನೆ ಬಳಿಯೇ ಪಾರಿವಾಳ ಸಾಕುತ್ತಿದ್ದ. ಕೆಲ‌ ತಿಂಗಳ ಹಿಂದೆ ಪೀಟರ್ ಸಾಕಿದ್ದ ಪಾರಿವಾಳವನ್ನು ಈ ವಿಕಾಸ್ ಕದ್ದಿದ್ದನಂತೆ.  ಹೀಗಾಗಿ ಅಲ್ಲಿಂದ ಇವರ ನಡುವೆ ದ್ವೇಷದ ಬೀಜ ಶುರುವಾಗಿದ್ದು. ಹೀಗಾಗಿ ಹಾವು ಮುಂಗುಸಿಯಂತೆ ಇವರಿಬ್ಬರು ಸಹ ಇರ್ತಾರೆ. ದ್ವೇಷ ಮಾತ್ರ ಇಬ್ಬರಿಗೂ ಜಾಸ್ತಿಯೇ ಇರತ್ತೆ.

ಇದನ್ನೂ ಓದಿ: ಪದವೀಧರರಿಗೆ ಬಿಜೆಪಿಯವರು ಏನು ಮಾಡಿದ್ದಾರೆ? ಪಶ್ಚಿಮ ಪದವೀಧರರ ಕ್ಷೇತ್ರದಲ್ಲಿ ಜೆಡಿಎಸ್​ಗೆ ಗೆಲುವು ಎಂದ ಹೊರಟ್ಟಿ

ಪ್ರತಿದಿನ ಹುಡುಗರನ್ನು ಹಾಕೊಂಡು ತಿರುಗ್ತಾಯಿದ್ದ ವಿಕಾಸ್ ತನ್ನ ಜೊತೆಗೆ ಯಾವಾಗಲು ಚಾಕುವನ್ನು ಸಹ ಇಟ್ಟುಕೊಂಡು ಓಡಾಡ್ತಾಯಿದ್ದ. ಮೊನ್ನೆಯೂ ಸಹ ಯಾರಂಡಹಳ್ಳಿ ಬಳಿ ವಿಕಾಸ್ ಮತ್ತು ಪೀಟರ್ ಮುಖಾಮುಖಿಯಾಗಿದ್ದಾರೆ. ವಿಕಾಸ್‌ ಜೊತೆಗೆ ಕೆಲ‌ ಹುಡುಗರು ಸಹ ಇದ್ರು. ನಂತರ ಮಾತಿಗೆ ಮಾತು ಬೆಳೆದು, ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ಆಗ ವಿಕಾಸ್ ತನ್ನ ಬಳಿಯಿದ್ದ ಚಾಕುವನ್ನು ಹೊರ ತೆಗೆದಿದ್ದಾನೆ. ಆದ್ರೆ ಗ್ರಹಚಾರ ಕೆಟ್ಟರೆ ಏನು ಬೇಕಾದ್ರು ಆಗತ್ತೆ ಅನ್ನೋದಕ್ಕೆ ಇದೊಂದು ಉದಾಹರಣೆ. ವಿಕಾಸ್ ಕೈನಲ್ಲಿದ್ದ ಚಾಕುವನ್ನು ಪೀಟರ್ ಕಸಿದುಕೊಂಡು ಗಂಟಲಿನ ಭಾಗಕ್ಕೆ ಹಲ್ಲೆ ಮಾಡಿ ಹೊಟ್ಟೆ, ಎದೆ ಭಾಗಕ್ಕೆ ಚುಚ್ಚಿದ್ದಾನೆ. ಗಲೇ ವಿಕಾಸ್ ಪ್ರಾಣ ಪಕ್ಷಿ ಹಾರಿ ಹೋಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ನಂತರ ವಿಕಾಸ್ ಜೊತೆಗಿದ್ದ ಗೆಳೆಯರೆಲ್ಲರೂ ಸಹ ಅಲ್ಲಿಂದ ಕಾಲು ಕಿತ್ತಿದ್ದಾರೆ. ವಿಕಾಸ್ ಅಲ್ಲಿಯೇ ರಕ್ತ ಸಿಕ್ತನಾಗಿದ್ದಾನೆ. ವಿಕಾಸ್ ಜೊತೆಗಿದ್ದ ಸ್ನೇಹಿತರು ಈ ಮಾಹಿತಿಯನ್ನು ಅವರ ಮನೆಗೆ ತಿಳಿಸಿದ್ದಾರೆ. ನಂತರ ಸೂರ್ಯ ನಗರ ಪೊಲೀಸರು ‌ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಪೀಟರ್​ನನ್ನು ಬಂಧಿಸಿದ್ದಾರೆ. ಒಟ್ಟಿನಲ್ಲಿ ಇನ್ನೂ ಹರೆಯದ ವಯಸ್ಸಿನಲ್ಲಿಯೇ ಈ ರೀತಿಯಾಗಿ ಆಟ‌ ಆಡ್ತೀನಿ ಅಂತ ಹೋದ್ರೆ ಅದು ಸಾವಿಗೆ ಕುತ್ತಿಗೆ ಕೊಟ್ಟಂತೆ ಎಂಬುದು ಸರಿ.

ವರದಿ: ಆದೂರು ಚಂದ್ರು
Published by: Vijayasarthy SN
First published: October 11, 2020, 7:28 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading