• Home
  • »
  • News
  • »
  • district
  • »
  • CoronaVirus: ಮೈಸೂರಿನಲ್ಲಿ ಸ್ವಯಂ ಸೇವಕರ ಸಂಘದ ಉಚಿತ ಸೇವೆ: ಕೋವಿಡ್ ಆಸ್ಪತ್ರೆಯಲ್ಲಿ ಹಣ ಅಪೇಕ್ಷೆ ಇಲ್ಲದೆ ಕರ್ತವ್ಯ

CoronaVirus: ಮೈಸೂರಿನಲ್ಲಿ ಸ್ವಯಂ ಸೇವಕರ ಸಂಘದ ಉಚಿತ ಸೇವೆ: ಕೋವಿಡ್ ಆಸ್ಪತ್ರೆಯಲ್ಲಿ ಹಣ ಅಪೇಕ್ಷೆ ಇಲ್ಲದೆ ಕರ್ತವ್ಯ

ಮೈಸೂರಿನ ಸ್ವಯಂ ಸೇವಕರ ಸಂಘ.

ಮೈಸೂರಿನ ಸ್ವಯಂ ಸೇವಕರ ಸಂಘ.

ಮೆಡಿಕಲ್ ನಾಲೆಡ್ಜ್ ಇಲ್ಲದ ಸ್ವಯಂ ಸೇವಕರಿಗೂ ಕನಿಷ್ಠ ತರಬೇತಿ ನೀಡಿ ಸೋಂಕಿತರನ್ನು ಆ್ಯಂಬುಲೆನ್ಸ್ ನಿಂದ ಕರೆತರುವುದು, ಪಲ್ಸ್ ಚೆಕ್ ಮಾಡುವುದು, ಹಾಸಿಗೆ ರೆಡಿ ಮಾಡುವುದು, ವಯಸ್ಸಾದ ಸೋಂಕಿತರಿಗೆ ನೆರವು ನೀಡುವುದು ಹೀಗೆ ಹಲವು ಕೆಲಸಗಳಿಗೆ ತೊಡಗಿಸಿಕೊಳ್ಳಲಾಗಿದೆ.

  • Share this:

ಮೈಸೂರು (ಮೇ 15); ಜಿಲ್ಲೆಯಲ್ಲಿ ಕೊರೋನಾ ಪರಿಸ್ಥಿತಿ ದಿನದಿಂದ ದಿನಕ್ಕೆ ಕರುಣಾಜಕತ ಹಂತಕ್ಕೆ ತಲುಪುತ್ತಿದೆ. ಆಸ್ಪತ್ರೆ ತೆರೆದರೂ ಮಾನವ ಸಂಪನ್ಮೂಲ ಹೊಂದಿಸಿಕೊಳ್ಳುವುದು ಬಹುದೊಡ್ಡ ಸವಾಲಾಗಿದೆ. ಲಕ್ಷ ರೂ. ಸಂಬಳ ಕೊಟ್ಟರೂ ವೈದ್ಯರು ಸಿಗುತ್ತಿಲ್ಲ ಅಂತ ಶಾಸಕರೇ ಅಸಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಸಂದಿಗ್ಧ ಸನ್ನಿವೇಶದಲ್ಲಿ ಕೆಲ ವೈದ್ಯರು, ಸ್ವಯಂಸೇವಕರು ಉಚಿತವಾಗಿ ಸೇವೆ ಸಲ್ಲಿಸಿ ಇತರರಿಗೆ ಮಾದರಿಯಾಗಿದ್ದಾರೆ. ಎಲ್ಲಾ ವಿಭಾಗದಲ್ಲು ವೈದ್ಯಕೀಯ ಸೇವೆ ‌ನೀಡಿ ಉಚಿತ ಸೇವೆ ಸಲ್ಲಿಸುತ್ತಿರುವ 30 ಮಂದಿಯಲ್ಲಿ  ಜರ್ಮನಿಯಿಂದ ಬಂದಿರುವ ವೈದ್ಯರೂ ಇದ್ದಾರೆ. ಇದಲ್ಲದೆ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ, ಖಾಸಗಿ ಆಸ್ಪತ್ರೆ ಕೆಲಸದ ಜೊತೆಗೆ ಈ ಕೋವಿಡ್ ಆಸ್ಪತ್ರೆಗು ಬಂದು  ಸೇವೆ ಮಾಡುತ್ತಿದ್ದಾರೆ. ಈ ತಂಡವನ್ನ ಹುಡುಕುತ್ತಾ ಹೋದರೆ 30 ಮಂದಿಯದ್ದು ಒಂದೊಂದು ವಿಶೀಷ್ಠ ಸೇವಾ ಮನೋಭಾವದ ಮಾಹಿತಿ ಬಹಿರಂಗವಾಗಲಿದೆ.


ಮೈಸೂರಿನಲ್ಲಿ ಬಹುತೇಕ ಆಸ್ಪತ್ರೆಗಳು ಭರ್ತಿಯಾಗಿವೆ. ಹೊಸ ಆಸ್ಪತ್ರೆ ತೆರೆಯೋದು ದೊಡ್ಡದಲ್ಲ. ಆದ್ರೆ ಅಗತ್ಯ ವೈದ್ಯರು, ನರ್ಸ್, ಪ್ಯಾರಾಮೆಡಿಕಲ್ ಸಿಬ್ಬಂದಿ ಹೊಂದಿಸಿಕೊಳ್ಳಲು ಆಗುತ್ತಿಲ್ಲ. ಒಂದು ಲಕ್ಷ ರೂ. ಸಂಬಳ ಕೊಡುತ್ತೇವೆ ಅಂದರೂ ವೈದ್ಯರು ಸಿಗುತ್ತಿಲ್ಲ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಕೆಲ ವೈದ್ಯರು, ಸ್ವಯಂ ಸೇವಕರು ಉಚಿತ ಸೇವೆ ಮಾಡುತ್ತಿದ್ದಾರೆ. ರೋಟರಿ ಸಂಸ್ಥೆ ಸ್ವಯಂ ಸೇವಕರ ನಡುವೆ ಸಮನ್ವಯ ಮಾಡಿ 30 ಮಂದಿ ಆಸ್ಪತ್ರೆಯ ವಿವಿಧ ವಿಭಾಗದಲ್ಲಿ ಕರ್ತವ್ಯ ರೂಪದ ಸೇವೆ ನೀಡುತ್ತಿದ್ದಾರೆ.


ಮೈಸೂರಿನ ತುಳಿಸಿ ದಾಸಪ್ಪ ಆಸ್ಪತ್ರೆಯಲ್ಲಿ 6 ವೈದ್ಯರು ಹಗಲು ರಾತ್ರಿ ಸೇವೆ ಸಲ್ಲಿಸುತ್ತಿದ್ದಾರೆ. ಅವರೊಂದಿಗೆ ವೈದ್ಯಕೀಯ ವಿದ್ಯಾರ್ಥಿಗಳೂ ಪಿಪಿಇ ಕಿಟ್ ತೊಟ್ಟು ದುಡಿಯುತ್ತಿದ್ದಾರೆ. ನಯಾಪೈಸೆ ಹಣದ ಅಪೇಕ್ಷೆ ಇಲ್ಲದೆ ಉಚಿತವಾಗಿ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ವೈದ್ಯ ಡಾ.ಸಂಜನಾ, ದುಡ್ಡು ಎಲ್ಲ ಸಂದರ್ಭದಲ್ಲೂ ಮುಖ್ಯ ಅಲ್ಲ. ಸಂಕಷ್ಟದಲ್ಲಿ ನಮ್ಮ ಓದು ಮಾವನೀಯತೆಗೆ ಬಳಕೆಯಾಗಬೇಕು ಅನ್ನೋ ಉದ್ದೇಶದಿಂದ ಈ ಸೇವೆ ಮಾಡುತ್ತಿದ್ದೇವೆ ಅಂತ ಹೇಳುತ್ತಿದ್ದಾರೆ.


ಇದನ್ನೂ ಓದಿ: Covid-19 Death: ರಾಜ್ಯದಲ್ಲಿ ನಡೆದ ಲೋಕ-ವಿಧಾನಸಭಾ ಉಪ ಚುನಾವಣೆ; ಕಾರ್ಯನಿರ್ವಹಿಸಿದ 35 ಶಿಕ್ಷಕರುಗಳು ಕೊರೋನಾಗೆ ಬಲಿ!


ಮೆಡಿಕಲ್ ನಾಲೆಡ್ಜ್ ಇಲ್ಲದ ಸ್ವಯಂ ಸೇವಕರಿಗೂ ಕನಿಷ್ಠ ತರಬೇತಿ ನೀಡಿ ಸೋಂಕಿತರನ್ನು ಆ್ಯಂಬುಲೆನ್ಸ್ ನಿಂದ ಕರೆತರುವುದು, ಪಲ್ಸ್ ಚೆಕ್ ಮಾಡುವುದು, ಹಾಸಿಗೆ ರೆಡಿ ಮಾಡುವುದು, ವಯಸ್ಸಾದ ಸೋಂಕಿತರಿಗೆ ನೆರವು ನೀಡುವುದು ಹೀಗೆ ಹಲವು ಕೆಲಸಗಳಿಗೆ ತೊಡಗಿಸಿಕೊಳ್ಳಲಾಗಿದೆ. ವೃತ್ತಿಯಲ್ಲಿ ಪೇಂಟರ್ ಆಗಿರುವ ನಾಗರಾಜ್, ನಾನ್ ಮೆಡಿಕಲ್ ಸ್ಟಾಫ್ ಆಗಿ ಕೆಲಸ ಮಾಡುತ್ತಿದ್ದಾರೆ. ಇವರೆಲ್ಲರ ಪರಿಶ್ರಮದ ಫಲವಾಗಿ ಕೋವಿಡ್ ಮಿತ್ರ ಎನ್ನುವ ಟೆಲಿ ಮಾನಿಟರಿಂಗ್ ವ್ಯವಸ್ಥೆ ಸ್ವಯಂ ಸೇವಕರಿಂದಲೇ ನಿರಾಯಾಸವಾಗಿ ನಡೆಯುತ್ತಿದೆ.


ಮೈಸೂರು ಡಿಎಚ್​ಒ ಕಚೇರಿ 18 ವೈದ್ಯರ ನೇಮಕಾತಿಗೆ ಅರ್ಜಿ ಆಹ್ವಾನಿಸಿತ್ತು. 66 ಸಾವಿರ ರೂ. ಸಂಬಳ ನಿಗದಿ ಮಾಡಿದರೂ ನೇರ ಸಂದರ್ಶನಕ್ಕೆ ಬಂದವರು ಕೇವಲ ಇಬ್ಬರು. ಅಂದ್ರೆ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಕೇಳಿದಷ್ಟು ಹಣ ಕೊಡಲು ರೆಡಿ ಇವೆ. ಇಂತಹ ಸಂದರ್ಭದಲ್ಲೂ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಸೇವೆ ಮಾಡುತ್ತಿರುವ ವೈದ್ಯರು ಮತ್ತು ಸ್ವಯಂ ಸೇವಕರಿಗೆ ಸಲಾಂ ಹೇಳಲೇಬೇಕು.

Published by:MAshok Kumar
First published: