ವಿಜಯಪುರದಲ್ಲಿ ಅಗ್ನಿಶಾಮಕ ಸಿಬ್ಬಂದಿ ಪ್ರಯತ್ನದಿಂದ ಪಾರಾದ ರೈತ ಕುಟುಂಬ ಮತ್ತು ಜಾನುವಾರುಗಳು

ಹೊಲಕ್ಕೆ ಹೋಗಿದ್ದ ಕುಟುಂಬವೊಂದು ಮರಳಿ ಬರುವಾಗ ಹಳ್ಳದ ನೀರಿನಲ್ಲಿ ಸಿಲುಕಿದ ಘಟನೆ ವಿಜಯಪುರದ ಸಿಂದಗಿ ತಾಲೂಕಿನ ಬೂದಿಹಾಳ ಪಿ. ಎಚ್. ಗ್ರಾಮದ ಬಳಿ ನಡೆದಿದೆ. ಒಂದೇ ಕುಟುಂಬದ ನಾಲ್ಕು ಜನ ಮತ್ತು 4 ಜಾನುವಾರುಗಳನ್ನು ಈಗ ರಕ್ಷಿಸಲಾಗಿದೆ.

ವಿಜಯಪುರದಲ್ಲಿ ಹಳ್ಳದ ನೀರಿನಲ್ಲಿ ಸಿಲುಕಿದ್ದವರನ್ನು ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ

ವಿಜಯಪುರದಲ್ಲಿ ಹಳ್ಳದ ನೀರಿನಲ್ಲಿ ಸಿಲುಕಿದ್ದವರನ್ನು ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ

  • Share this:
ವಿಜಯಪುರ: ಹವಾಮಾನ ವೈಪರಿತ್ಯದಿಂದಾಗಿ ಸುರಿಯುತ್ತಿರುವ ಧಾರಾಕಾರ ಮಳೆ ಬಸವ ನಾಡಿನಲ್ಲಿ ನಾನಾ ಅವಾಂತರಗಳಿಗೆ ಕಾರಣವಾಗಿದೆ.  ಇದರಿಂದ ಜನ, ಜಾನುವಾರು ಹೈರಾಣಾಗಿದ್ದು, ಕೃಷಿ ಚಟುವಟಿಕೆಗಳ ಮೇಲೆ ಗಂಭೀರ ಪರಿಣಾಮ ಬೀರಿದೆ. ದೈನಂದಿನ ಕೃಷಿ ಚಟುವಟಿಕೆಗಾಗಿ ತಮ್ಮ ಹೊಲಕ್ಕೆ ಹೋಗಿದ್ದ ಕುಟುಂಬವೊಂದು ಮರಳಿ ಬರುವಾಗ ಹಳ್ಳದ ನೀರಿನಲ್ಲಿ ಸಿಲುಕಿ ಆಪತ್ತಿಗೆ ಸಿಲುಕಿದ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬೂದಿಹಾಳ ಪಿ. ಎಚ್. ಗ್ರಾಮದ ಬಳಿ ನಡೆದಿದೆ.  ಒಂದೇ ಕುಟುಂಬದ ನಾಲ್ಕು ಜನ ಮತ್ತು 4 ಜಾನುವಾರುಗಳನ್ನು ಈಗ ರಕ್ಷಿಸಲಾಗಿದೆ.

ಮುರಾಳ ಕುಟುಂಬಸ್ಥರು ತಮ್ಮ ದೈನಂದಿನ ಕೆಲಸಕ್ಕಾಗಿ ಮಂಗಳವಾರ ತಮ್ಮ ಹೊಲಕ್ಕೆ ಹೋಗಿದ್ದರು.  ಮೊನ್ನೆ ರಾತ್ರಿ ಧಾರಾಕಾರ ಮಳೆ ಸುರಿದ ಪರಿಣಾಮ ಹೊಲದಲ್ಲಿಯೇ ಉಳಿದಿದ್ದಾರೆ. ನಾಳೆ ಹೋದರಾಯಿತು ಎಂದುಕೊಂಡು ನಿನ್ನೆ ಸಂಜೆ ತಮ್ಮ ಮನೆಗೆ ವಾಪಸ್ ಮನೆಗೆ ಬರುವಾಗ ಬೂದಿಹಾಳ ಹಳ್ಳದಲ್ಲಿ ಏಕಾಏಕಿ ಪ್ರವಾಹ ಉಂಟಾಗಿದೆ.  ಅತ್ತ ಮುಂದೆ ಹೋಗಲಾಗದೆ, ಇತ್ತ ಹಿಂದೆ ವಾಪಸ್ಸಾಗಲು ಸಾಧ್ಯವಾಗದೇ ನಡು ನೀರಿನಲ್ಲಿ ಸಿಲುಕಿದ್ದಾರೆ.  ಈ ಘಟನೆಯ ಕುರಿತು ಸಿಂದಗಿ ತಾಲೂಕು ಆಡಳಿತಕ್ಕೆ ಮಾಹಿತಿ ಸಿಕ್ಕಿದೆ.

ಇದನ್ನೂ ಓದಿ: ದಶಕಗಳ ಬಳಿಕ ತುಂಬಿದ ಬೆಳವಾಡಿ ಕೆರೆ, ರೈತರ ಮೊಗದಲ್ಲಿ ಮಂದಹಾಸ

ಈ ಮಾಹಿತಿ ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಸಿಂದಗಿ ತಹಸೀಲ್ದಾರ ಸಂಜೀವಕುಮಾರ ದಾಸರ ಮತ್ತು ಅಗ್ನಿಶಾಮಕ ದಳದ ಠಾಣಾಧಿಕಾರಿ ಶಿವಕುಮಾರ ಬಾಗೇವಾಡಿ ಹಾಗೂ ತಂಡ ರಕ್ಷಣಾ ಕಾರ್ಯಾಚರಣೆ ನಡೆಸಿದೆ.  ಜೀವ ರಕ್ಷಕ ಜಾಕೇಟ್ ಮತ್ತು ಹಗ್ಗದ ಸಹಾಯದಿಂದ ನಾಲ್ವರನ್ನ ರಕ್ಷಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ನಾಲ್ಕು ಜನರನ್ನು ರಕ್ಷಿಸಿದ್ದಾರೆ.

ಈ ಸಂದರ್ಭದಲ್ಲಿ ಹಳ್ಳದಲ್ಲಿ ಸಿಲುಕಿದ್ದ 70 ವರ್ಷದ ಶಿವಶಂಕರಪ್ಪ ಪರಿತಪ್ಪ ಮುರಾಳ, 50 ವರ್ಷದ ಪರುತಪ್ಪ ಮುರಾಳ, 45 ವರ್ಷದ ಜಯಶ್ರೀ ಪರುತಪ್ಪ ಮುರಾಳ ಮತ್ತು 3 ವರ್ಷದ ಬಾಲಕ ಪ್ರಸನ್ನ ಹಾಗೂ 4 ಜಾನುವಾರುಗಳನ್ನು ರಕ್ಷಿಸಲಾಗಿದೆ. ಆದರೆ, ಈ ಸಂದರ್ಭದಲ್ಲಿ 1 ಎಮ್ಮೆ ಮತ್ತು 2 ಕುರಿಗಳು ಹಳ್ಳದಲ್ಲಿ ಕೊಚ್ಚಿ ಹೋಗಿವೆ.  ಕುಟುಂಬ ರಕ್ಷಿಸಿದ ತಾಲ್ಲೂಕು ಆಡಳಿತಕ್ಕೆ ಹಾಗೂ ಅಗ್ನಿಶಾಮಕ ಠಾಣಾ ಅಧಿಕಾರಿ ಶಿವಕುಮಾರ ಬಾಗೇವಾಡಿ ಅವರ ತಂಡಕ್ಕೆ ಗ್ರಾಮಸ್ಥರು ಕೃತಜ್ಞತೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಅಂಬೇಡ್ಕರ್ ಧರ್ಮಾಂತರಗೊಂಡ ದಿನವೇ ಬೌದ್ಧ ಧರ್ಮ ಸ್ವೀಕರಿಸಿ ಬೌದ್ಧ ಬಿಕ್ಕುವಾದ ಮುಸ್ಲಿಂ ವ್ಯಕ್ತಿ

ಈ ಸಂದರ್ಭದಲ್ಲಿ ಸಿಬ್ಬಂದಿಯಾದ ಮುಸ್ತಾಕ ಅತ್ತಾರ, ಸದ್ದಾಮ್ ಕಂದಾಯ ನಿರೀಕ್ಷಕರು, ಹಾಗೂ ಕಂದಾಯ ಇಲಾಖೆ ಅಧಿಕಾರಿ, ಪ್ರಮುಖ ಅಗ್ನಿಶಾಮಕ ಮಚ್ಚೇಂದ್ರ, ಅಗ್ನಿಶಾಮಕ ಮಲ್ಕಣ್ಣ ತೆಗ್ಗಿಹಾಳ, ಶಾಂತು ಬಿರಾದಾರ, ಕಲ್ಯಾಣಕುಮಾರ್ ಬಜಂತ್ರಿ, ಸಿದ್ದಣ್ಣ ರೋಡಗಿ, ವಿಷ್ಣು ಜಾದವ್, ಶ್ರೀಧರ್ ರತ್ನಪ್ಪಗೋಳ, ಅಶೋಕ್ ರಾಠೋಡ, ಚಾಲಕ ಮಾಂತೇಶ ವಡ್ಡರ ಮತ್ತು ಇತರರು ಉಪಸ್ಥಿತರಿದ್ದರು.

ವರದಿ: ಮಹೇಶ ವಿ. ಶಟಗಾರ
Published by:Vijayasarthy SN
First published: