HOME » NEWS » District » FOUR PEOPLE KILLED IN BIKE ACCIDENT AT KALBURGI HK

Accident: ಅತಿಯಾದ ವೇಗ ತಂದ ಆಪತ್ತು ; ಎರಡು ಬೈಕ್ ಗಳ ಮುಖಾಮುಖಿ ಡಿಕ್ಕಿಯಾಗಿ ನಾಲ್ವರ ಸಾವು

ಡಿಕ್ಕಿಯ ರಭಸಕ್ಕೆ ಬೈಕ್ ಮೇಲೆ ಕುಳಿತಿದ್ದ ಇಬ್ಬರು ವ್ಯಕ್ತಿಗಳ ಎರಡೂ ಕಾಲು ಹಾಗೂ ಕೈಗಳು ತುಂಡು ತುಂಡಾಗಿವೆ. ಅತಿಯಾದ ವೇಗ ಹಾಗೂ ತ್ರಿಬಲ್ ರೈಡಿಂಗ್ ಭೀಕರ ಅಪಘಾತಕ್ಕೆ ಕಾರಣ ಎನ್ನಲಾಗಿದೆ

news18-kannada
Updated:November 3, 2020, 10:12 PM IST
Accident: ಅತಿಯಾದ ವೇಗ ತಂದ ಆಪತ್ತು ; ಎರಡು ಬೈಕ್ ಗಳ ಮುಖಾಮುಖಿ ಡಿಕ್ಕಿಯಾಗಿ ನಾಲ್ವರ ಸಾವು
ಪ್ರಾತಿನಿಧಿಕ ಚಿತ್ರ
  • Share this:
ಕಲಬುರ್ಗಿ(ನವೆಂಬರ್​. 03): ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ನಾಲ್ವರು ಸಾವನ್ನಪ್ಪಿ, ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಕಲಬುರ್ಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಲಾಡ್ಲಾಪುರ ಗ್ರಾಮದ ಬಳಿ ನಡೆದಿದೆ. ಎರಡೂ ಬೈಕ್ ಗಳ ಮೇಲೆ ತಲಾ ಮೂವರು ಸವಾರಿ ಮಾಡಿಕೊಂಡು ಹೋಗುತ್ತಿದ್ದರು. ಈ ವೇಳೆ ಬೈಕ್ ಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದೆ. ಸ್ಥಳದಲ್ಲಿಯೇ ಮುವ್ವರು ಸಾವನ್ನಪ್ಪಿದ್ದಾರೆ. ಮತ್ತೋರ್ವ ವಾಡಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ. ಮೃತ ದುರ್ದೈವಿಗಳನ್ನು ಲಾಡ್ಲಾಪುರ ಗ್ರಾಮದ ಮರೆಪ್ಪ(50), ಬಸ್ಸಪ್ಪ (32) ಮತ್ತು ಅಲ್ಲೂರು ಗ್ರಾಮದ ದೇವೇಂದ್ರ(50) ಹಾಗೂ ಮಲ್ಲಪ್ಪ ರಾಯಪ್ಪ (35) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಹನಮಂತ ಹಾಗೂ ಕಾಶಿನಾಥ ಎಂಬುವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ವಾಡಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 

ಅತಿಯಾದ ವೇಗದಲ್ಲಿ ಬಂದ ಎರಡೂ ಬೈಕ್ ಗಳೂ ರಾಷ್ಟ್ರೀಯ ಹೆದ್ದಾರಿ ಮೇಲೆ ಮುಖಾಮುಖಿ ಢಿಕ್ಕಿಯಾಗಿವೆ. ಕತ್ತಲಲ್ಲಿ ಢಿಕ್ಕಿ ಹೊಡೆದ ರಭಸಕ್ಕೆ ಒಂದು ಬೈಕ್ ನ ಮುಂದಿನ ಚಕ್ರ ತುಂಡಾಗಿ ಹೋಗಿದೆ. ಎರಡೂ ಬೈಕ್ ಗಳು ಜಖಂ ಗೊಂಡಿದ್ದು, ಬೈಕ್ ಎನ್ನುವುದು ಗುರುತು ಸಿಗಲಾರದ ಸ್ಥಿತಿಗೆ ತಲುಪಿವೆ.

ಇದನ್ನೂ ಓದಿ : ಮಹದೇಶ್ವರ ಬೆಟ್ಟದಲ್ಲಿ ಒಂದೇ ದಿನ 1465 ಮಂದಿಯಿಂದ ಮುಡಿಸೇವೆ

ಢಿಕ್ಕಿಯ ರಭಸ ಎಷ್ಟಿತ್ತೆಂದರೆ ಬೈಕ್ ಮೇಲೆ ಕುಳಿತಿದ್ದ ಇಬ್ಬರು ವ್ಯಕ್ತಿಗಳ ಎರಡೂ ಕಾಲು ಹಾಗೂ ಕೈಗಳು ತುಂಡು ತುಂಡಾಗಿವೆ. ಅತಿಯಾದ ವೇಗ ಹಾಗೂ ತ್ರಿಬಲ್ ರೈಡಿಂಗ್ ಭೀಕರ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಗಾಯಾಳುಗಳು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.
Published by: G Hareeshkumar
First published: November 3, 2020, 8:59 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories