110 ಹಳ್ಳಿಗಳಿಗೆ ನೀರಾವರಿ ಸೌಲಭ್ಯ ಒದಗಿಸುವ ಕಾಲುವೆಗೆ ಆಗ್ರಹಿಸಿ 4 ಗ್ರಾಮ ಪಂಚಾಯತಿಗೆ ನಾಮಪತ್ರ ಸಲ್ಲಿಸದ ಗ್ರಾಮಸ್ಥರು

ಈ ಚುನಾವಣೆ ಗ್ರಾಮ ಪಂಚಾಯತಿ ಸ್ಥಳೀಯ ಆಡಳಿತ, ಪಕ್ಷಾತೀತವಾಗಿದೆ ಎಂಬ ಕಾರಣಕ್ಕೆ ರಾಜಕಾರಣಿಗಳು ಇವರ ಹೋರಾಟವನ್ನು ಲಘುವಾಗಿ ತೆಗೆದುಕೊಂಡಂತೆ ಇದೆ. ಆದರೆ 30 ಗ್ರಾಮಸ್ಥರು ಒಗ್ಗಟ್ಟಿನಿಂದ ಈಗ ಆರಂಭಿಸುವ ಹೋರಾಟ ಮುಂದುವರಿಯಲಿದೆ. ಒಂದು ವೇಳೆ ಈ ಹೋರಾಟ ಮುಂದುವರಿದರೆ ಮುಂಬರುವ ಮಸ್ಕಿ ವಿಧಾನಸಭಾ ಕ್ಷೇತ್ರದ ಬೈ ಎಲೆಕ್ಷನ್ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಸುಮಾರು 35 ಸಾವಿರ ಮತದಾರರು ಚುನಾವಣೆಯಿಂದ‌ ದೂರ ಉಳಿಯಲಿದ್ದಾರೆ. 

ಕಾಲುವೆ ನಿರ್ಮಾಣಕ್ಕೆ ಆಗ್ರಹಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ.

ಕಾಲುವೆ ನಿರ್ಮಾಣಕ್ಕೆ ಆಗ್ರಹಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ.

  • Share this:
ರಾಯಚೂರು: ಮಸ್ಕಿ ತಾಲೂಕಿನ 110 ಹಳ್ಳಿಗಳಿಗೆ ನೀರಾವರಿ ಸೌಲಭ್ಯ ಒದಗಿಸುವ 5ಎ ಕಾಲುವೆಗಾಗಿ ರೈತರ ನಡೆಸುತ್ತಿರುವ ಹೋರಾಟ ತೀವ್ರಗೊಂಡಿದೆ. ಕಳೆದ 28 ದಿನಗಳಿಂದ ನಾಲೆ ವ್ಯಾಪ್ತಿಯ ಗ್ರಾಮಸ್ಥರು 28 ದಿನಗಳಿಂದ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಈ ಮಧ್ಯೆ ನಾಲ್ಕು ಗ್ರಾಮ ಪಂಚಾಯತಿಯ 77 ಸದಸ್ಯ ಸ್ಥಾನಕ್ಕೆ ನಡೆಯುವ ಚುನಾವಣೆಗೆ ಯಾರು ನಾಮಪತ್ರ ಸಲ್ಲಿಸಿಲ್ಲ. 

ಮಸ್ಕಿ ತಾಲೂಕಿನ ವಟಗಲ್, ಅಮಿನಗಡ, ಅಂಕುಶದೊಡ್ಡಿ ಹಾಗೂ ಪಾಮನಕಲ್ಲೂರಿನ ನಾಲ್ಕು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಒಟ್ಟು 72 ಸ್ಥಾನಗಳಿಗೆ ಇದೇ ಡಿಸೆಂಬರ್ 27 ರಂದು ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಡಿಸೆಂಬರ್ 11 ರಿಂದ ಡಿಸೆಂಬರ್ 16 ರವರೆಗೂ ನಾಮಪತ್ರ ಸಲ್ಲಿಸಲು ಅವಕಾಶವಿತ್ತು. ಆದರೆ ನಾಲ್ಕು ಗ್ರಾಮ ಪಂಚಾಯತಿಗೆ ಕೊನೆಯ ದಿನದವರೆಗೂ ಯಾರು ನಾಮಪತ್ರ ಸಲ್ಲಿಸಿಲ್ಲ. ಇದರಿಂದಾಗಿ ಈ ಗ್ರಾಮಸ್ಥರು ಚುನಾವಣೆಗೆ ಬಹಿಷ್ಕಾರ ನಿರ್ಧಾರಕ್ಕೆ ಬದ್ದರಾಗಿದ್ದಾರೆ.

ಕಳೆದ 12 ವರ್ಷಗಳಿಂದ ನಾರಾಯಣಪುರ ಬಲದಂಡೆ ನಾಲೆಗೆ 5ಎ ಕಾಲುವೆ ನಿರ್ಮಿಸಿ ಮಸ್ಕಿ ತಾಲೂಕಿನ 110 ಹಳ್ಳಿಗಳ 1.72 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸುವ ಈ ಯೋಜನೆ ಆರಂಭಿಸಬೇಕೆಂದು ರೈತರು ಹೋರಾಟ ನಡೆಸಿದ್ದಾರೆ. ಕೃಷ್ಣಾ ಜಲನಿಗಮದಿಂದ ಸರಕಾರಕ್ಕೆ 2700 ಕೋಟಿ ರೂಪಾಯಿ ಯೋಜನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಸರಕಾರ ನಿರ್ಲಕ್ಷ್ಯ ವಹಿಸುತ್ತಾ ಬಂದಿದೆ. ಇದರಿಂದ ಬೇಸತ್ತ ಗ್ರಾಮಸ್ಥರು ಈಗ ಚುನಾವಣೆಯಿಂದಲೇ ದೂರ ಉಳಿಯಲು ನಿರ್ಧರಿಸಿದ್ದಾರೆ. ಈ ಮಧ್ಯೆ ನವಂಬರ್ 30 ರಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಡಿಸಿಎಂ ಲಕ್ಷ್ಮಣ ಸವದಿ ರೈತರ ಧರಣಿ ನಿರತ  ಸ್ಥಳಕ್ಕೆ ಭೇಟಿ ನೀಡಿ 15 ದಿನದೊಳಗೆ ಕಾಲುವೆ ನಿರ್ಮಾಣದ ಬಗ್ಗೆ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದರು. ಆದರೆ ರೈತರು ಸರಕಾರದಿಂದ ನಿರ್ಧಾರ ಬರುವವರೆಗೂ ಧರಣಿ ಮುಂದುವರಿಸುವ ಪಟ್ಟು ಹಿಡಿದಿದ್ದರು.

ಇದನ್ನು ಓದಿ: ದೆಹಲಿಯಲ್ಲಿ ರೈತರ ಬೃಹತ್ ಪ್ರತಿಭಟನೆ ನಡುವೆ ನಾಳೆ ಮಧ್ಯಪ್ರದೇಶ ರೈತರನ್ನು ಉದ್ದೇಶಿಸಿ ಮಾತನಾಡಲಿರುವ ಪ್ರಧಾನಿ ಮೋದಿ

ಡಿಸಿಎಂ ನೀಡಿದ 15 ದಿನಗಳ ಗಡುವು ಮುಗಿದರೂ ಸರಕಾರದಿಂದ ಸ್ಪಷ್ಟ ನಿರ್ಧಾರ ಬಂದಿಲ್ಲ. ಇದರಿಂದಾಗಿ ಮಸ್ಕಿ ತಾಲೂಕಿನ ರೈತರ ಹೋರಾಟಕ್ಕೆ ಜನತೆಯೂ ಸಹ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದು ಮುಂದಿನ ಮಸ್ಕಿ ಉಪಚುನಾವಣೆಯ ಮೇಲೆಯೂ ಪರಿಣಾಮ ಬೀರಲಿದೆ. ಈ ಚುನಾವಣೆ ಗ್ರಾಮ ಪಂಚಾಯತಿ ಸ್ಥಳೀಯ ಆಡಳಿತ, ಪಕ್ಷಾತೀತವಾಗಿದೆ ಎಂಬ ಕಾರಣಕ್ಕೆ ರಾಜಕಾರಣಿಗಳು ಇವರ ಹೋರಾಟವನ್ನು ಲಘುವಾಗಿ ತೆಗೆದುಕೊಂಡಂತೆ ಇದೆ. ಆದರೆ 30 ಗ್ರಾಮಸ್ಥರು ಒಗ್ಗಟ್ಟಿನಿಂದ ಈಗ ಆರಂಭಿಸುವ ಹೋರಾಟ ಮುಂದುವರಿಯಲಿದೆ. ಒಂದು ವೇಳೆ ಈ ಹೋರಾಟ ಮುಂದುವರಿದರೆ ಮುಂಬರುವ ಮಸ್ಕಿ ವಿಧಾನಸಭಾ ಕ್ಷೇತ್ರದ ಬೈ ಎಲೆಕ್ಷನ್ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಸುಮಾರು 35 ಸಾವಿರ ಮತದಾರರು ಚುನಾವಣೆಯಿಂದ‌ ದೂರ ಉಳಿಯಲಿದ್ದಾರೆ.

ಈ ಹಿನ್ನೆಲೆ ಇತ್ತೀಚಿಗೆ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ, ಕೊಪ್ಪಳ ಸಂಸದ ಸಂಗಣ್ಣ ಕರಡಿ ಜಲಸಂಪನ್ಮೂಲ ಸಚಿವರನ್ನು ಭೇಟಿ ಮಾಡಿದ್ದರು. ಈ ಸಂದರ್ಭದಲ್ಲಿ 5A ಕಾಲುವೆಗಿಂತ ಹೆಚ್ಚು ಚರ್ಚೆಯಾಗಿದ್ದು ನಂದವಾಡಗಿ ಏತ ನೀರಾವರಿಯದ್ದು. ನಂದವಾಡಗಿ ಏತ ನೀರಾವರಿಯಿಂದ ನಮ್ಮ ಭಾಗಕ್ಕೆ ಅನುಕೂಲವಾಗುವುದಿಲ್ಲ. ಹೀಗಾಗಿ ನಮಗೆ ನಂದವಾಡಗಿಗಿಂತ 5A ಕಾಲುವೆ ಬೇಕು ಎಂದು ರೈತರು ಪಟ್ಟು ಹಿಡಿದಿದ್ದಾರೆ.
Published by:HR Ramesh
First published: