ಕೋವಿಡ್​​-19: ಕಲ್ಯಾಣ ಕರ್ನಾಟಕದ ನಾಲ್ಕು ಜಿಲ್ಲೆಗಳಲ್ಲಿ ಗುರುವಾರ ಒಂದೇ ಒಂದು ಕೇಸ್​ ಇಲ್ಲ

ಜಿಲ್ಲೆಯಲ್ಲಿ ಇದುವರೆಗಿನ ಸೋಂಕಿತರ ಸಂಖ್ಯೆ 510. ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದ್ದ ಕಲಬುರ್ಗಿ ಈಗ ಎರಡನೇ ಸ್ಥಾನಕ್ಕಿಳಿದಿದೆ. ಗುರುವಾರ ಒಂದೇ ಒಂದು ಕೇಸ್​ ಕೂಡ ಪತ್ತೆಯಾಗದ ಕಾರಣ ಜನತೆ ನಿರಾಳರಾಗಿದ್ದಾರೆ.

news18-kannada
Updated:June 5, 2020, 9:37 AM IST
ಕೋವಿಡ್​​-19: ಕಲ್ಯಾಣ ಕರ್ನಾಟಕದ ನಾಲ್ಕು ಜಿಲ್ಲೆಗಳಲ್ಲಿ ಗುರುವಾರ ಒಂದೇ ಒಂದು ಕೇಸ್​ ಇಲ್ಲ
ಸಾಂದರ್ಭಿಕ ಚಿತ್ರ
  • Share this:
ಕಲಬುರ್ಗಿ(ಜೂ.05): ಕಲಬುರ್ಗಿ ಜಿಲ್ಲೆಯಲ್ಲಿ ಗುರುವಾರ ಒಂದೂ ಸೋಂಕು ದೃಢಪಟ್ಟಿಲ್ಲ. ಕಳೆದ ಎರಡು ದಿನಗಳಿಂದ ನಿತ್ಯ ನೂರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗುವ ಮೂಲಕ ಜಿಲ್ಲೆಯ ಜನತೆಯನ್ನು ತಬ್ಬಿಬ್ಬು ಮಾಡಿತ್ತು. ಈಗ ನಿನ್ನೆ ಒಂದೇ ಒಂದು ದಾಖಲಾಗದೇ ಸೋಂಕು ದಿಢೀರ್​​ ತಹಬದಿಗೆ ಬಂದಿದೆಯಾ? ಎಂಬ ಚರ್ಚೆಗಳು ನಡೆಯುತ್ತಿವೆ.


ಜಿಲ್ಲೆಯಲ್ಲಿ ಇದುವರೆಗಿನ ಸೋಂಕಿತರ ಸಂಖ್ಯೆ 510. ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದ್ದ ಕಲಬುರ್ಗಿ ಈಗ ಎರಡನೇ ಸ್ಥಾನಕ್ಕಿಳಿದಿದೆ. ಗುರುವಾರ ಒಂದೇ ಒಂದು ಕೇಸ್​ ಕೂಡ ಪತ್ತೆಯಾಗದ ಕಾರಣ ಜನತೆ ನಿರಾಳರಾಗಿದ್ದಾರೆ.

ಇನ್ನು ಕಲ್ಯಾಣ ಕರ್ನಾಟಕ ವಿಷಯಕ್ಕೆ ಬಂದರೆ ಈ ಭಾಗದ ನಾಲ್ಕೂ ಜಿಲ್ಲೆಗಳಲ್ಲಿ ಯಾವುದೇ ಹೊಸ ಸೋಂಕು ದೃಢಪಟ್ಟಿಲ್ಲ. ರಾಯಚೂರು ಜಿಲ್ಲೆಯಲ್ಲಿ ಮಾತ್ರ ಹೆಚ್ಚು ಪ್ರಕರಣಗಳು ಕಂಡುಬಂದಿವೆ. ರಾಯಚೂರು ಜಿಲ್ಲೆಯಲ್ಲಿ ನಿನ್ನೆ 88 ಪಾಟಿಸಿವ್ ಪ್ರಕರಣ ದೃಢಪಟ್ಟಿವೆ. ಕಲಬುರ್ಗಿ, ಬೀದರ್, ಯಾದಗಿರಿ, ಕೊಪ್ಪಳ ಜಿಲ್ಲೆಗಳಲ್ಲಿ ಇಂದು ಒಂದೂ ಸೋಂಕು ದೃಢಪಟ್ಟಿಲ್ಲ ಎನ್ನುವುದು ಖುಷಿ ವಿಚಾರ.

ಇದನ್ನೂ ಓದಿ: ಗುಜರಾತ್​​ನಲ್ಲಿ ಗರಿಗೆದರಿದ ರಾಜಕೀಯ: ರಾಜ್ಯಸಭಾ ಚುನಾವಣೆಗೆ ಮುನ್ನವೇ ಇಬ್ಬರು ಕಾಂಗ್ರೆಸ್​ ಶಾಸಕರು ರಾಜೀನಾಮೆ

ಗುರುವಾರ ಒಂದೇ ದಿನ ಕಲ್ಯಾಣ ಕರ್ನಾಟಕದಲ್ಲಿ 88 ಜನರಿಗೆ ಸೋಂಕು ಬಂದಿದೆ.  ಇದರಲ್ಲಿ 39 ಮಕ್ಕಳಿದ್ದಾರೆ. 88 ಸೋಂಕಿತರ ಪೈಕಿ ಮಹಾರಾಷ್ಟ್ರದಿಂದ ವಾಪಸ್ಸಾದವರು, ಅವರಿಂದ ಸೋಂಕು ಹರಡಿದವರಾಗಿದ್ದಾರೆ. ಕಲ್ಯಾಣ ಕರ್ನಾಟಕದ ಸೋಂಕಿತರ ಸಂಖ್ಕೆ 1344ಕ್ಕೆ ಏರಿಕೆಯಾಗಿದೆ. ಈ ಪೈಕಿ ಬಹುತೇಕ ಸೋಂಕಿತರು ವಲಸಿಗರಾಗಿದ್ದಾರೆ.
First published: June 5, 2020, 9:34 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading