HOME » NEWS » District » FOUR DIE IN AFZALPUR TALUK HOSPITAL DUE TO OXYGEN SHORTAGE SNVS

ಕಲಬುರ್ಗಿಯಲ್ಲೂ ಆಕ್ಸಿಜನ್ ಕೊರತೆಯಿಂದ ನಾಲ್ವರು ಸಾವು; ಅಫ್ಜಲಪುರದಲ್ಲಿ ರೋಗಿಗಳು ಕಂಗಾಲು

ಕಲಬುರ್ಗಿ ಜಿಲ್ಲೆ ಆಫ್ಜಲಪುರ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ನಿನ್ನೆ ರಾತ್ರಿಯಿಂದ ಆಕ್ಸಿಜನ್ ಕೊರತೆ ಉಂಟಾಗಿ ನಾಲ್ವರು ದುರ್ಮರಣವಪ್ಪಿರುವ ದಾರುಣ ಘಟನೆ ಬೆಳಕಿಗೆ ಬಂದಿದೆ.

news18-kannada
Updated:May 4, 2021, 1:31 PM IST
ಕಲಬುರ್ಗಿಯಲ್ಲೂ ಆಕ್ಸಿಜನ್ ಕೊರತೆಯಿಂದ ನಾಲ್ವರು ಸಾವು; ಅಫ್ಜಲಪುರದಲ್ಲಿ ರೋಗಿಗಳು ಕಂಗಾಲು
ಆಕ್ಸಿಜನ್ ಸಿಲಿಂಡರ್ (ಸಾಂದರ್ಭಿಕ ಚಿತ್ರ).
  • Share this:
ಕಲಬುರ್ಗಿ(ಮೇ 04): ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 24 ಮಂದಿ ರೋಗಿಗಳು ಆಕ್ಸಿಜನ್ ಸಿಗದೆ ಉಸಿರು ನಿಲ್ಲಿಸಿದ ಘಟನೆಗೆ ಇಡೀ ರಾಜ್ಯ ತಲ್ಲಣಗೊಂಡಿದೆ. ಸರ್ಕಾರ ಗಡಿಬಿಡಿಯಿಂದ ಎಚ್ಚೆತ್ತುಕೊಳ್ಳುತ್ತಿದೆ. ಚಾಮರಾನಗರದಲ್ಲಿಯಂತೆ ಅನೇಕ ಜಿಲ್ಲೆಗಳಲ್ಲೂ ಆಕ್ಸಿಜನ್ ಕೊರತೆ ಕಾಡುತ್ತಿದೆ. ಕಲಬುರ್ಗಿಯಲ್ಲೂ ಆಕ್ಸಿಜನ್ ಕೊರತೆಯಿಂದ ನಾಲ್ವರು ಸಾವನ್ನಪ್ಪಿರುವ ದುರಂತ ಘಟನೆ ಬೆಳಕಿಗೆ ಬಂದಿದೆ. ಜಿಲ್ಲೆಯ ಅಫ್ಜಲಪುರ ತಾಲೂಕು ಆಸ್ಪತ್ರೆಯಲ್ಲಿ ನಿನ್ನೆ ರಾತ್ರಿಯಿಂದ ನಾಲ್ವರು ನಿಧನರಾಗಿದ್ದಾರೆ. ಅದೃಷ್ಟಕ್ಕೆ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಸಕಾಲಕ್ಕೆ ಎಚ್ಚೆತ್ತು ಜಿಲ್ಲಾಡಳಿದೊಂದಿಗೆ ಸೇರಿ ಆಕ್ಸಿಜನ್ ಪೂರೈಕೆಗೆ ತಾತ್ಕಾಲಿಕ ವ್ಯವಸ್ಥೆ ಒದಗಿಸಿದ್ದಾರೆ.

ಅಫ್ಜಲಪುರದ ತಾಲೂಕು ಆಸ್ಪತ್ರೆಯಲ್ಲಿ 32 ಸೋಂಕಿತರಿಗೆ ಆಕ್ಸಿಜನ್ ನೀಡಲಾಗುತ್ತಿತ್ತು. ರಾತ್ರಿಯಿಂದಲೇ ನಾಲ್ವರು ನಿಧನರಾಗಿದ್ದಾರೆ. ನಸುಕಿನ 4 ಗಂಟೆಗೆ ಆಕ್ಸಿಜನ್ ಖಾಲಿಯಾಗಿದೆ. ಆಸ್ಪತ್ರೆಯಲ್ಲಿ ಆಕ್ಸಿಜನ್ ಮೇಲೆ ಅವಲಂಬಿತರಾಗಿದ್ದ ಇನ್ನೂ ಹಲವು ರೋಗಿಗಳು ಸಾವಿನ ಅಪಾಯಕ್ಕೆ ಸಿಲುಕಿದ್ದರು. ಇಲ್ಲಿಂದ ಡಿಸ್​ಚಾರ್ಜ್ ಆಗಿ ಬೇರೆ ಕಡೆ ಹೋಗಬೇಕೆಂದರೂ ಜಿಲ್ಲೆಯಲ್ಲಿ ಬೇರೆ ಆಕ್ಸಿಜನ್ ಬೆಡ್​ಗಳು ಖಾಲಿ ಇಲ್ಲ. ರೋಗಿಗಳು ಹಾಗೂ ಅವರ ಸಂಬಂಧಿಕರು ಜೀವ ಕೈಯಲ್ಲಿಟ್ಟುಕೊಂಡು ಕ್ಷಣಕ್ಷಣವೂ ಆತಂಕದಿಂದ ಕಳೆಯಬೇಕಾಯಿತು. ಸೋಂಕಿತರ ಸಂಬಂಧಿಕರು ತಾಲೂಕು ಆಸ್ಪತ್ರೆ ಎದುರು ನಡೆಸಿದ ಅಕ್ರಂದನ ಮುಗಿಲು ಮುಟ್ಟಿತ್ತು.

ಇದನ್ನೂ ಓದಿ: ಲಾಕ್​ಡೌನ್ ಮಾತ್ರ ನೆಚ್ಚಿಕೊಂಡಿದ್ದಾರೆ; ಇವರಿಗೆ ಸರ್ಕಾರ ನಡೆಸಲು ಬರಲ್ಲ: ಕಾಂಗ್ರೆಸ್ ಕಿಡಿ

ಈ ಬಗ್ಗೆ ಮಾಹಿತಿ ಪಡೆದ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಕೂಡಲೇ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿ, ಆಸ್ಪತ್ರೆಗೆ ಆಕ್ಸಿಜನ್ ಸಿಲಿಂಡರ್ ರವಾನೆ ಮಾಡುವ ವ್ಯವಸ್ಥೆ ಮಾಡಿದರು. ಇದು ತಾತ್ಕಾಲಿಕ ವ್ಯವಸ್ಥೆ ಮಾತ್ರವಾಗಿದ್ದು, ಜಿಲ್ಲಾಡಳಿತ ಎಚ್ಚೆತ್ತುಕೊಂಡು ಆಮ್ಲಜನಕ ಸಮಸ್ಯೆಗೆ ಪರಿಹಾರ ಹುಡುಕುವ ಅಗತ್ಯ ಇದೆ.

ಇದೇ ವೇಳೆ, ಚಿತ್ರದುರ್ಗದಲ್ಲಿ ನಾಲ್ವರು ಕೋವಿಡ್ ಸೋಂಕಿತರು ಕೊನೆಯುಸಿರೆಳೆದಿದ್ದಾರೆ. ಚಿತ್ರದುರ್ಗ ನಗರದ ಕೆಎಚ್​ಬಿ ಕಾಲೋನಿಯ ಓಂಕಾರಮ್ಮ (50 ವರ್ಷ), ಚಿಕ್ಕನಾಯಕನಹಳ್ಳಿ ತಾಲೂಕಿನ ಗ್ಯಾರೇ ಹ ಳ್ಳಿ ಗ್ರಾಮದ ಪ್ರಸನ್ನ ಕುಮಾರ್ (35), ಮೊಳಕಾಲ್ಮೂರು ತಾಲೂಕಿನ ರಾಂಪುರ ಗ್ರಾಮದ ಶಿವಕುಮಾರ್ (50) ಮತ್ತು ಚಿತ್ರದುರ್ಗ ನಗರದ ಚೇಳುಗುಡ್ಡದ ಸಿದ್ದೇಶ್ (38) ಮೃತ ಪಟ್ಟವರೆಂದು ಗುರುತಿಸಲಾಗಿದೆ. ಆದರೆ, ಇವರಾರೂ ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿಲ್ಲ. ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿರುವುದು ತಿಳಿದುಬಂದಿದೆ.
Published by: Vijayasarthy SN
First published: May 4, 2021, 1:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories