ಚಿತ್ರದುರ್ಗದಲ್ಲಿ ನಾಲ್ವರು ಕೊರೋನಾ ಸೋಂಕಿತರು ಗುಣಮುಖ: ಹೂಮಳೆ ಸುರಿಸಿ ಆಸ್ಪತ್ರೆಯಿಂದ ಬೀಳ್ಕೊಟ್ಟ ಜಿಲ್ಲಾಡಳಿತ

ಚಿತ್ರದುರ್ಗ ಜಿಲ್ಲೆಯ ಒಟ್ಟಾರೆ 38 ಕೊರೊನಾ ಪಾಸಿಟಿವ್ ಪ್ರಕರಣಗಳ ಪೈಕಿ 09 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಓರ್ವ ಬಾಲಕಿ ಉಡುಪಿ ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಸದ್ಯ ಜಿಲ್ಲೆಯಲ್ಲಿ 28 ಕೊರೋನಾ ಆಕ್ಟಿವ್ ಪ್ರಕರಣಗಳಿವೆ.

ಹೂ ಮಳೆಗರೆದು ಬೀಳ್ಕೊಟ್ಟ ಆಸ್ಪತ್ರೆ ಸಿಬ್ಬಂದಿ ಮತ್ತು ಜಿಲ್ಲಾಡಳಿತ

ಹೂ ಮಳೆಗರೆದು ಬೀಳ್ಕೊಟ್ಟ ಆಸ್ಪತ್ರೆ ಸಿಬ್ಬಂದಿ ಮತ್ತು ಜಿಲ್ಲಾಡಳಿತ

  • Share this:
ಚಿತ್ರದುರ್ಗ(ಮೇ 30): ದಿನೇ ದಿನೇ ಹೆಚ್ಚಾಗುತ್ತಿರುವ ಕೊರೋನಾ ಪಾಸಿಟಿವ್ ಪ್ರಕರಣಗಳ ನಡುವೆ ಚಿತ್ರದುರ್ಗ ಜಿಲ್ಲೆಯ ಜನರಿಗೆ ಕೊಂಚ ನಿರಾಳ ಸಿಕ್ಕಂತಾಗಿದೆ. ಕೊರೋನಾ ಸೋಂಕಿಗೆ ತುತ್ತಾಗಿ ಚಿತ್ರದುರ್ಗ  ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ಒಂದು ತಿಂಗಳಿನಿಂದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಾಲ್ವರು ಕೊರೊನಾ ಸೋಂಕಿತರು ಇಂದು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಸೋಂಕಿನಿಂದ ಗುಣಮುಖರಾದವರಲ್ಲಿ ಮೂರು ವರ್ಷದ ಬಾಲಕಿ ಸೇರಿದಂತೆ ನಾಲ್ವರು ಕೊರೋನಾ ಮುಕ್ತರಾಗಿದ್ದಾರೆ. 64 ವರ್ಷದ ತಬ್ಲಿಘೀ P753, 17 ವರ್ಷದ ತಬ್ಲಿಘೀ P789 ಕೋವಿಡ್ ಆಸ್ಪತ್ರೆಯಿಂದ ಹೋಂ ಕ್ವಾರೆಂಟೈನ್ ಗೆ ಶಿಫ್ಟ್ ಮಾಡಲಾಗಿತ್ತು. ಗುಜರಾತಿನ ಅಹಮದಾಬಾದ್​ನಿಂದ ಬಂದಿದ್ದ ತಬ್ಲಿಘಿಗಳು ಗುಣಮುಖರಾದರೂ ಹೋಂ ಕ್ವಾರೆಂಟೈನ್ ನಲ್ಲಿರುವಂತೆ  ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಸೂಚಿಸಿದ್ದಾರೆ.

ಮಹಾ ಮುಖಭಂಗ: ಮಹಾರಾಷ್ಟ್ರ ಪ್ರವಾಹಕ್ಕೆ ಕರ್ನಾಟಕದ ಜಲಾಷಯಗಳು ಕಾರಣವಲ್ಲ: ತಜ್ಞರ ಸಮಿತಿ ಸ್ಪಷ್ಟನೆ

ಇನ್ನು, ಚೆನ್ನೈನಿಂದ ಬಂದಿದ್ದ 3 ವರ್ಷದ ಬಾಲಕಿ P993 ಮತ್ತು ಆಕೆಯ ತಂದೆ 35ವರ್ಷದ P994 ಸಂಪೂರ್ಣ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಗುಣಮುಖರಾದವರಿಗೆ ಡಿಸಿ ವಿನೋದ್ ಪ್ರಿಯಾ, ಸಿಇಒ ಹೊನ್ನಾಂಬಾ, ಡಿಹೆಚ್ಒ ಡಾ.ಪಾಲಾಕ್ಷ ಸೇರಿದಂತೆ ಕೊರೋನಾ ವಾರಿಯರ್ಸ್ ಗಳು ಗುಲಾಬಿ ಹೂ ನೀಡಿ ಹೂ ಮಳೆಗರೆದು ಬೀಳ್ಕೊಟ್ಟರು.

ಇದರೊಂದಿಗೆ ಚಿತ್ರದುರ್ಗ ಜಿಲ್ಲೆಯ ಒಟ್ಟಾರೆ 38 ಕೊರೊನಾ ಪಾಸಿಟಿವ್ ಪ್ರಕರಣಗಳ ಪೈಕಿ 09 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಓರ್ವ ಬಾಲಕಿ ಉಡುಪಿ ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಸದ್ಯ ಜಿಲ್ಲೆಯಲ್ಲಿ 28 ಕೊರೋನಾ ಆಕ್ಟಿವ್ ಪ್ರಕರಣಗಳಿವೆ.

ಒಟ್ಟಾರೆ ದಿನದಿಂದ ದಿನಕ್ಕೆ ಕೊರೋನಾ ಸೊಂಕಿತರ ಸಂಖ್ಯೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಚಿತ್ರದುರ್ಗದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೋಂಕಿತರು ಗುಣಮುಖ ಆಗಿ ಬಿಡುಗಡೆಯಾಗಿರುವುದು ಜಿಲ್ಲೆಯ ಜನರಿಗೆ ಕೊಂಚ ನಿರಾಳತೆಯನ್ನು ಉಂಟು ಮಾಡಿದೆ.
First published: