ಹೆಚ್​ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ಡಾ. ಸೂರಜ್ ರೇವಣ್ಣ ಆಯ್ಕೆ

ಈ ಹಿಂದೆ ಹೆಚ್.ಡಿ.ರೇವಣ್ಣ, ಹಾಗೂ ಭವಾನಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ಅವರುಗಳ ಚುನಾವಣೆಯ ಗೆಲುವಿಗೆ ಶ್ರಮಿಸಿದ್ದ ಸೂರಜ್ ರೇವಣ್ಣ ಹೆಚ್.ಡಿ.ಸಿ.ಸಿ ಬ್ಯಾಂಕ್ ಮೂಲಕ ರಾಜಕೀಯ ಅಧಿಕಾರ ಪಡೆದಿದ್ದಾರೆ. 

ಡಾ. ಸೂರಜ್​.

ಡಾ. ಸೂರಜ್​.

  • Share this:
ಹಾಸನ; ಹೆಚ್​ಡಿಸಿಸಿ ಬ್ಯಾಂಕ್​ ನಿರ್ದೇಶಕರಾಗುವ ಮೂಲಕ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಕುಟುಂಬದ ಮತ್ತೊಂದು ಕುಡಿ ನೇರ ರಾಜಕೀಯ ಅಖಾಡಕ್ಕೆ ಎಂಟ್ರಿ ಕೊಟ್ಟಿದೆ. ಮಾಜಿ ಸಚಿವ ರೇವಣ್ಣ ಅವರಹಿರಿಯ ಪುತ್ರ ಡಾ| ಸೂರಜ್ ರೇವಣ್ಣ ಹಾಸನದ ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕರ ಸ್ಥಾನಕ್ಕೆ ನಾಮಪತ್ರಸಲ್ಲಿಸಿದ್ದ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಡಾ| ಸೂರಜ್ ರೇವಣ್ಣ ಹೊಳೆ ನರಸೀಪುರ ತಾಲ್ಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಸಂಘಗಳ ಕ್ಷೇತ್ರದಿಂದ ನಿರ್ದೇಶಕ ಸ್ಥಾನಕ್ಕೆ ನಾಮಪತ್ರ  ಸಲ್ಲಿಸಿದ್ದು ಅವರ ವಿರುದ್ಧ ಯಾರೊಬ್ಬರು ನಾಮಪತ್ರ ಸಲ್ಲಿಸದೆ ಇದ್ದುದರಿಂದ ಸೂರಜ್ ರೇವಣ್ಣ ಹೆಚ್.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾಗುವಲ್ಲಿ ಸಫಲರಾಗಿದ್ದಾರೆ. ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿರುವ ಡಾ,ಸೂರಜ್ ರೇವಣ್ಣ ದಂಡಿಗನಹಳ್ಳಿ ಜಿ.ಪಂ ಕ್ಷೇತ್ರದ ವ್ಯಾಪ್ತಿಯಲ್ಲಿತಮ್ಮದೇ ಆದ ಸಾಮಾಜಿಕ ಕಾರ್ಯಗಳ ಮೂಲಕಜನಮನ್ನಣೆ ಗಳಿಸಿದ್ದರು.

ಡಾ| ಸೂರಜ್ ರೇವಣ್ಣ ಅವರಿಗೆ ದಂಡಿಗನಹಳ್ಳಿ ಭಾಗದಲ್ಲಿ ಹಲವು ಅಭಿಮಾನಿ ಸಂಘಗಳು ಸ್ಥಾಪನೆಯಾಗಿದ್ದು ಅವರ ಸಾಮಾಜಿಕ ಸೇವೆಗೆ ಸಾಕ್ಷಿಯಾಗಿತ್ತು.ಇಂತಹ ಸೂರಜ್ ರೇವಣ್ಣ ಇದೀಗ ಇದೇ ಮೊದಲ ಬಾರಿಗೆ ನೇರ ರಾಜಕೀಯ ಅಖಾಡಕ್ಕೆ ಧುಮುಕಿದ್ದು ಹೆಚ್.ಡಿ.ಸಿ.ಸಿ ಬ್ಯಾಂಕ್‌ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

ಈ ಹಿಂದೆ ಹೆಚ್.ಡಿ.ರೇವಣ್ಣ, ಹಾಗೂ ಭವಾನಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ಅವರುಗಳ ಚುನಾವಣೆಯ ಗೆಲುವಿಗೆ ಶ್ರಮಿಸಿದ್ದ ಸೂರಜ್ ರೇವಣ್ಣ ಹೆಚ್.ಡಿ.ಸಿ.ಸಿ ಬ್ಯಾಂಕ್ ಮೂಲಕ ರಾಜಕೀಯ ಅಧಿಕಾರ ಪಡೆದಿದ್ದಾರೆ.

ಇದನ್ನೂ ಓದಿ : ರಾಜ್ಯಸಭೆಯಲ್ಲಿ ಕೇಂದ್ರದ ಮೂರು ಕೃಷಿ ಮಸೂದೆ; ಬಿಜೆಪಿಗಿದೆಯೇ ಬಹುಮತ?, ಸಂಖ್ಯೆಗಳ ಆಟದಲ್ಲಿ ಸರ್ಕಾರ!

ಇನ್ನೂ ಶ್ರವಣಬೆಳಗೊಳ ಕ್ಷೇತ್ರದ ಶಾಸಕರಾದ ಸಿ.ಎನ್. ಬಾಲಕೃಷ್ಣ ಅವರು ಚನ್ನರಾಯಪಟ್ಟಣಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ನಿರ್ದೇಶಕರ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಹೆಚ್.ಡಿ.ಸಿ.ಸಿ ಬ್ಯಾಂಕ್‍ನಲ್ಲಿಯೂ ನಿರ್ದೇಶಕರ ಸ್ಥಾನವನ್ನು ಖಾಯಂಗೊಳಿಸಿ ಕೊಂಡಿದ್ದಾರೆ.

ಹಾಲಿ ಶಾಸಕ ಎ.ಟಿ.ರಾಮಸ್ವಾಮಿ ಅವರ ಪ್ರಬಲ ವಿರೋಧದ ನಡುವೆಯೂ ಅರಕಲಗೂಡುಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕರ ಸ್ಥಾನಕ್ಕೆಸ್ಪರ್ಧಿಸಿದ್ದ ಹೊನ್ನವಳ್ಳಿ ಸತೀಶ್ ಪುನರಾಯ್ಕೆಯಾಗಿದ್ದಾರೆ.
Published by:MAshok Kumar
First published: