ಕಾಂಗ್ರೆಸ್​​ಗೆ ಗುಡ್ ಬೈ ಹೇಳುತ್ತಾ ಹುಕ್ಕೇರಿ ಕುಟುಂಬ ; ಬಿಜೆಪಿ ಪರ ಬಹಿರಂಗ ಪ್ರಚಾರಕ್ಕೆ ಇಳಿದ ಪ್ರಕಾಶ್ ಹುಕ್ಕೇರಿ

ನನ್ನ ಮಗನ ಚುನಾವಣೆ ಪ್ರಚಾರ ಹೇಗೆ ಮಾಡಿದ್ದೇನೋ ಹಾಗೇ ಸುರೇಶ್ ಅಂಗಡಿ ಪರಿವಾರದ ಪರ ಪ್ರಚಾರ ಮಾಡುವೆ ಎನ್ನುವ ಮೂಲಕ ಮಾಜಿ ಸಂಸದ ಪ್ರಕಾಶ್ ಹುಕ್ಕೇರಿ ಹೊಸ ಬಾಂಬ್ ಸಿಡಿಸಿದ್ಧಾರೆ.

ಮಾಜಿ ಸಂಸದ ಪ್ರಕಾಶ್ ಹುಕ್ಕೇರಿ

ಮಾಜಿ ಸಂಸದ ಪ್ರಕಾಶ್ ಹುಕ್ಕೇರಿ

  • Share this:
ಚಿಕ್ಕೋಡಿ(ಅಕ್ಟೋಬರ್​. 26): ಬೆಳಗಾವಿ ಜಿಲ್ಲೆಯಲ್ಲೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ಮಾಜಿ ಸಂಸದ ಪ್ರಕಾಶ್ ಹುಕ್ಕೇರಿ ವಿಚಾರ ಈಗ ಜಿಲ್ಲೆಯಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಇದಕ್ಕೆ ಕಾರಣ ಅವರು ನೀಡಿದ ಹೇಳಿಕೆ. ಕಾಂಗ್ರೆಸ್ ಪಕ್ಷದಲ್ಲೆ ಇದ್ದು ಬಿಜೆಪಿ ಪರವಾಗಿ ಪ್ರಚಾರ ಮಾಡುವುದಾಗಿ ಪ್ರಕಾಶ್ ಹುಕ್ಕೇರಿ ಹೇಳಿಕೆ ನೀಡಿದ ಬೆನ್ನಲೆ ಕಾಂಗ್ರೆಸ್ ವಲಯದಲ್ಲಿ ತಲ್ಲನ ಉಂಟಾಗಿದೆ. ಮೊದಲಿನಿಂದಲೂ ತಮ್ಮದೆ ವರ್ಚಸ್ಸು ಹೊಂದಿರು ಪ್ರಕಾಶ್ ಹುಕ್ಕೇರಿ ಕಾಂಗ್ರೆಸ್ ಪಕ್ಷದಲ್ಲಿ ಕಳೆದ ಮೂರು ದಶಕಗಳಿಂದ ಪಕ್ಷ ನಿಷ್ಠೆಯನ್ನು ತೋರುತ್ತಾ ಬಂದಿದ್ದಾರೆ. 2014 ರಲ್ಲಿ ನರೇಂದ್ರ ಮೊದಿ ಅಲೆಯ ನಡುವೆಯೂ ಸಿದ್ದರಾಮಯ್ಯ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದ ಪ್ರಕಾಶ್ ಹುಕ್ಕೇರಿ ಚಿಕ್ಕೋಡಿಯಿಂದ ಲೋಕಸಭೆಗೆ ಸ್ಪರ್ಧಿಸಿ ಗೆಲುವು ಸಾಧಿಸುವ ಮೂಲಕ ಬಿಜೆಪಿ ಕೋಟೆಯನ್ನು ಒಡೆದು ಹಾಕಿ ತಮ್ಮ ಶಕ್ತಿಯನ್ನ ತೋರಿದ್ದರು. ಆದರೆ, ಅಂತಹ ನಾಯಕ ಇಂದು ಪಕ್ಷದ ವಿರುದ್ಧವೇ ಕೆಲಸ ಮಾಡುವುದಾಗಿ ಹೇಳಿಕೆ ನೀಡಿದ್ದಾರೆ.

ಕೇಂದ್ರ ಸಚಿವ ಸುರೇಶ್ ಅಂಗಡಿ ನಿಧನದ ಬಳಿಕೆ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಚುನಾವಣೆ ನಡೆಯಬೇಕಿದೆ. ಇದರ ಮಧ್ಯೆ ಟಿಕೆಟ್ ಪಡೆಯಲು ನಾನಾ ನಾಯಕರು ಕಸರತ್ತು ನಡೆಸಿದ್ದಾರೆ. ಇದರಲ್ಲಿ ಪ್ರಕಾಶ್ ಹುಕ್ಕೇರಿ ಕೂಡ ಒಬ್ಬರು. ಆದರೆ, ಅಚ್ಚರಿ ಎಂಬಂತೆ. ಸುರೇಶ್ ಅಂಗಡಿ ಕುಟುಂಬಕ್ಕೆ ಬಿಜೆಪಿ ಟಿಕೇಟ್ ನೀಡಿದ್ರೆ ಅಂಗಡಿ ಕುಟುಂಬದ ಪರವಾಗಿ ಪ್ರಚಾರ ಮಾಡುವುದಾಗಿ ಹೇಳಿದ್ದಾರೆ. ಅಂಗಡಿ ಕುಟುಂಬಕ್ಕೆ ಬಿಜೆಪಿ ಟಿಕೆಟ್ ಕೊಟ್ಟರೆ ನಾನು ಬಂದು ಪ್ರಚಾರ ಮಾಡುತ್ತೇನೆ. ಎಲ್ಲ ಮನೆಗಳಿಗೆ ಹಾಗೂ ಹಳ್ಳಿಗಳಿಗೆ ತಿರುಗಾಡಿ ಪ್ರಚಾರ ಮಾಡುವೆ. ಕಾಂಗ್ರೆಸ್ ಹೈಕಮಾಂಡ್ ನನ್ನ ಮೇಲೆ ಏನು ಕ್ರಮ ತಗೆದುಕೊಳ್ಳುತ್ತೊ ತಗೆದುಕೊಳ್ಳಲಿ. ನನ್ನ ಮಗನ ಚುನಾವಣೆ ಪ್ರಚಾರ ಹೇಗೆ ಮಾಡಿದ್ದೇನೋ ಹಾಗೇ ಅಂಗಡಿ ಪರಿವಾರದ ಪರ ಪ್ರಚಾರ ಮಾಡುವೆ ಎನ್ನುವ ಮೂಲಕ ಹೊಸ ಬಾಂಬ್ ಸಿಡಿಸಿದ್ಧಾರೆ.

ಹುಕ್ಕೇರಿ ಹೇಳಿಕೆ ಬೆನ್ನಲೆ ಕಾಂಗ್ರೆಸ್ ಪಕ್ಷದಲ್ಲಿ ಸಂಚಲನ ಶುರುವಾಗಿದೆ. ಅಲ್ಲದೆ ಇವರ ಮಾತುಗಳನ್ನ ನೋಡಿದ್ರೆ ಪ್ರಕಾಶ್ ಹುಕ್ಕೇರಿ ಪಕ್ಷ ಬಿಡುತ್ತಾರಾ ಎನ್ನುವ ಚರ್ಚೆಗಳು ಈಗ ಶುರುವಾಗಿವೆ. ಇದಕ್ಕೆ ಪುಷ್ಠಿ ನೀಡುವಂತೆ ಪ್ರಕಾಶ್ ಹುಕ್ಕೇರಿ ಕುಟುಂಬ ಕಳೆದ ಎರಡು ವರ್ಷಗಳಿಂದಲೂ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳಿಂದ ದೂರ ಉಳಿದಿರುವುದು ಗಮನಿಬಹುದು. ಕಳೆದ ಎರಡು ವರ್ಷಗಳಿಂದಲೂ ಪ್ರಕಾಶ್ ಹುಕ್ಕೇರಿ ಆಗಲಿ ಶಾಸಕ ಗಣೇಶ್ ಹುಕ್ಕೇರಿ ಆಗಲಿ ಪಕ್ಷದ ಯಾವುದೇ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿಲ್ಲ.

ಇನ್ನು ದೊಸ್ತಿ ಸರ್ಕಾರದ ವೇಳೆ ನಡೆದ ಆಪರೇಷನ್ ಕಮದಲ್ಲಿಯು ಶಾಸಕ ಗಣೇಶ್ ಹುಕ್ಕೇರಿ ಮಾತು ಕೇಳಿ ಬಂದಿತ್ತು. ಆದರೆ, ಕೊನೆಯ ಘಳಿಗೆಯಲ್ಲಿ ತಂದೆಯ ಮಾತು ಮೀರದ ಗಣೇಶ್ ಹುಕ್ಕೇರಿ ಕಾಂಗ್ರೆಸ್ ಪಕ್ಷದಲ್ಲಿ ಮುಂದುವರೆದಿದ್ದರು.

ಪಕ್ಷದ ನಾಯಕರ ವಿರುದ್ದ ಅಸಮಾಧಾನ :

ಇನ್ನು ಮಾಧ್ಯಮದವರ ಜೊತೆ ಮಾತನಾಡಿದ ಪ್ರಕಾಶ್ ಹುಕ್ಕೇರಿ, ಪಕ್ಷದ ನಾಯಕರ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾನು ಸಂಸದನಾಗಿದ್ದಾಗ ರಾಜ್ಯದಲ್ಲಿ ನಮ್ಮದೆ ಸರ್ಕಾರ ಇತ್ತು. ನಾನು ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕುಡಚಿ, ಕಲ್ಲೋಳ, ಮಂಗಾವತಿ, ಇಂಗಳಿ ಗ್ರಾಮದ ನದಿಗಳಿಗೆ ಸೇತುವೆಗಳ ಪ್ರತ್ಯೇಕ ಟೆಂಡರ್ ಕರೆದು ಕಾಮಗಾರಿ ಮಾಡಿ ಕೊಡುವಂತೆ ಕೇಳಿದ್ದೆ. ಆದರೆ, ಸಿದ್ದರಾಮಯ್ಯನವರು ಮಾತ್ರ ತನ್ನ ಸ್ವಾರ್ಥಕ್ಕಾಗಿ ಎಲ್ಲಾ ಕಾಮಗಾರಿಗಳನ್ನ ಒಬ್ಬರಿಗೆ ಟೆಂಡರ್ ನೀಡಿದರು. ಆ ಕಾಮಗಾರಿಗಳು ನನ್ನ ಅವಧಿ ಮುಗಿದರು ಶುರುವಾಗಲಿಲ್ಲಾ ಇದರಿಂದಾಗಿ ನಾನು 2018 ರ ಚುನಾವಣೆಯಲ್ಲಿ ಸೋಲುವಂತಾಯಿತು.

ಇದನ್ನೂ ಓದಿ : ದೂರದೃಷ್ಟಿ ಯೋಜನೆಗಳಿಂದ ಬಂಗಾರಪ್ಪ ಇಂದಿಗೂ ಚಿರಸ್ಥಾಯಿ: ಸಿಎಂ ಬಿ.ಎಸ್.ಯಡಿಯೂರಪ್ಪ

ಅಲ್ಲದೆ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನನ್ನ ಮಗನ ಕ್ಷೇತ್ರ ಚಿಕ್ಕೋಡಿಯಲ್ಲಿ 44 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗೆ ಅನುಮೋದನೆ ಸಿಕ್ಕಿತ್ತು. ಆದರೆ, ಬಿಜೆಪಿ ಸರ್ಕಾರ ಬಂದು ನಮ್ಮ ಕ್ಷೇತ್ರದ ಕಾಮಗಾರಿಗಳನ್ನ ರದ್ದು ಮಾಡಿತ್ತು. ಈ ವಿಚಾರದಲ್ಲಿ ಡಿಕೆ ಶಿವಕುಮಾರ್ ಅವರಿಗೆ ಪತ್ರ ಬರೆದರು ಸಹ ಸದನದಲ್ಲಿ ಈ ವಿಚಾರದಲ್ಲಿ ಚಕಾರ ಎತ್ತಲಿಲ್ಲಾ. ತಮ್ಮ ಕ್ಷೇತ್ರದ ಕಾಮಗಾರಿಗಳು ರದ್ದಾದಾಗ ಕೋರ್ಟ್ ಗೆ ಹೋಗಿ ಹಣ ಬಿಡುಗಡೆ ಮಾಡಿಸಿಕೊಂಡ ನಾಯಕರು ನಮ್ಮ ಕ್ಷೇತ್ರದ ಕಾಮಗಾರಿಗಳ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಇಂತಹ ನಾಯಕರು ಇರುವಾಗದ ಪಕ್ಷ ಉದ್ದಾರ ಆಗುತ್ತಾ ಎಂದು ಅಸಮಾಧಾನ ಹೊರ ಹಾಕಿದ್ದಾರೆ.

ಒಟ್ಟಿನಲ್ಲಿ ಪಕ್ಷದ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರ ಹಾಕಿರುವ ಪ್ರಕಾಶ್ ಹುಕ್ಕೇರಿ ಕುಟುಂಬ ಪಕ್ಷ ಬಿಡುವ ಸುಳಿವು ನೀಡಿದೆ. ಇವರನ್ನ ಕಾಂಗ್ರೆಸ್ ಯಾವ ರೀತಿ ಸಮಾಧಾನ ಮಾಡುತ್ತೆ ಎನ್ನುವುದನ್ನು ಕಾದು ನೋಡಬೇಕು.
Published by:G Hareeshkumar
First published: