ರಾಯಚೂರು(ಅಕ್ಟೋಬರ್. 07): ಕೊರೋನಾದಿಂದಾಗಿ ವಿಧಾನಸಭೆ ಹಾಗು ಲೋಕಸಭೆ ಅಧಿವೇಶನವನ್ನ ಮೊಟುಕು ಗೊಳಿಸಿದ್ದಾರೆ. ಈ ಸಮಯದಲ್ಲಿ ಶಾಲೆ ತೆರೆಯುವುದು ಎಷ್ಟು ಸರಿ ಎಂದು ಮಾಜಿ ಸಂಸದ ಹಾಗೂ ಕಾಂಗ್ರೆಸ್ ಪಕ್ಷದ ಆರೋಗ್ಯ ಹಸ್ತ ಕಾರ್ಯಕ್ರಮದ ಅಧ್ಯಕ್ಷ ಧ್ರುವ ನಾರಾಯಣ ಹೇಳಿದ್ದಾರೆ. ರಾಜ್ಯದಲ್ಲಿ ಕೊರೋನಾ ಸೋಂಕು ಸಮುದಾಯಕ್ಕೆ ಹರಡುತ್ತಿದೆ. ಈ ಸಮಯದಲ್ಲಿ ಕೊರೋನಾ ಸೋಂಕು ತಡೆಗೆ ಸರಕಾರ ಮಾಡಬೇಕಾಗಿತ್ತು. ಆದರೆ ರಾಜಕೀಯ ಪಕ್ಷವಾಗಿ ನಾವು ಮಾಡುತ್ತಿದ್ದೇವೆ. ರಾಜ್ಯದ 6.50 ಕೋಟಿ ಜನರಿಗೆ ತಪಾಸಣೆ ಮಾಡಲಿದ್ದಾರೆ. ಕೊರೋನಾ ವಾರಿಯರ್ಸ್ ಗೆ ಒಂದು ಲಕ್ಷ ರೂಪಾಯಿ ಗ್ರೂಪ್ ವಿಮೆ ಮಾಡಲಾಗಿದೆ. ರಾಜ್ಯದಲ್ಲಿ ಯಾರು ಆರೋಗ್ಯ ಮಂತ್ರಿ ಎಂಬುವುದು ಗೊತ್ತಿಲ್ಲ, ರಾಜ್ಯ ಸಚಿವರು ಗೊಂದಲ ಮಾಡಿಕೊಂಡು ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕೆ ತಡೆಯೊಡ್ಡಿಲ್ಲ. ಕೊರೋನಾವನ್ನು ಖಾಸಗಿ ಆಸ್ಪತ್ರೆಗಳು ದಂಧೆ ಮಾಡಿಕೊಂಡಿವೆ. ಇದೇ ಸ್ಥಿತಿ ಮುಂದುವರಿದರೆ 10 ದಿನಗಳಲ್ಲಿ ಜಗತ್ತಿನಲ್ಲಿ ಭಾರತದಲ್ಲಿ ಸೋಂಕಿತರ ಹೆಚ್ಚಳವಾಗಿ ಮೊದಲು ಸ್ಥಾನಕ್ಕೇರಲಿದೆ ಎಂದರು
ಡಿಕೆ ಶಿವಕುಮಾರ ಮೇಲೆ ಸಿಬಿಐ ದಾಳಿ ಪ್ರಕರಣ, ಶಿವಕುಮಾರ ಹಣ ಎಷ್ಟು ಎನ್ನುವುದು ಅವರ ಸಹೋದರರು ಹೇಳಿದ್ದಾರೆ. ಸಿಬಿಐ ದಾಳಿಯ ಆರೋಪಗಳಿಂದ ಹೊರಬರುವ ಶಕ್ತಿ ಡಿಕೆಶಿಗೆ ಇದೆ. ರಾಜಕೀಯ ಉದ್ದೇಶಕ್ಕಾಗಿ ಸಾಂಸ್ಥಿಕ ಸಂಸ್ಥೆಗಳನ್ನು ದುರಪಯೋಗ ಪಡಿಸಿಕೊಂಡಿಸಿದ್ದಾರೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಆರೋಗ್ಯ ಹಸ್ತ ಎಂಬ ಹೆಸರಿನಲ್ಲಿ ಪ್ರತಿ ಜಿಲ್ಲೆಯಲ್ಲಿಯೂ ಕಾಂಗ್ರೆಸ್ ವೈದ್ಯರ ವಿಂಗ್ ಹಾಗು ಕಾರ್ಯಕರ್ತರ ತಂಡದೊಂದಿಗೆ ಆರೋಗ್ಯ ಸೇವೆ ಮಾಡಲು ಮುಂದಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ : ಡೋಲಾಯಮಾನ ಸ್ಥಿತಿಯಲ್ಲಿ ದಸರಾ ಸಿದ್ದತೆ : ಕೆಲವೇ ದಿನ ಬಾಕಿ ಇದ್ದರೂ ಇನ್ನು ನಿರ್ಧಾರವಾಗದ ಉದ್ಘಾಟಕರ ಹೆಸರು
ಮಾಜಿ ಸಂಸದ ಧ್ರುವ ನಾರಾಯಣ ನೇತ್ರತ್ವದಲ್ಲಿ ಆರೋಗ್ಯ ಹಸ್ತ ಕಾರ್ಯಕ್ರಮ ನಡೆಯುತ್ತಿದೆ. ಇದಕ್ಕಾಗಿ 15 ಸಾವಿರ ಕಾಂಗ್ರೆಸ್ ಕಾರ್ಯಕರ್ತರು ವಾರಿಯರ್ಸ್ ಆಗಿ ದುಡಿಯುತ್ತಿದ್ದಾರೆ. ಆರೋಗ್ಯ ಹಸ್ತ ಕಾರ್ಯಕ್ರಮಕ್ಕೆ ಇಂದು ರಾಯಚೂರಿನಲ್ಲಿ ಚಾಲನೆ ನೀಡಲಾಯಿತು.
ವಾಮಮಾರ್ಗದಿಂದ ಗೆಲ್ಲಲು ಹೊರಟಿದೆ : ಈಶ್ವರ ಖಂಡ್ರೆ
ಇದೇ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಎಲ್ಲಾ ಸಿದ್ದತೆ ಮಾಡಿಕೊಂಡಿದೆ. ಉಪಚುನಾವಣೆಯಲ್ಲಿ ಗೆಲ್ಲಲು ಉದ್ದೇಶದಿಂದ ನಮ್ಮ ಅಧ್ಯಕ್ಷರ ಮೇಲೆ ಸಿಬಿಐ ದಾಳಿ ಮಾಡಿದ್ದಾರೆ. ವಾಮಮಾರ್ಗದಿಂದ ಗೆಲ್ಲಲು ಹೊರಟಿದೆ. ಡಿಕೆ ಶಿವಕುಮಾರ್ ಅವರಿಗೆ ಯಾವುದೇ ಭಯವಿಲ್ಲ, ನಾನು ಅಂಜುವುದಿಲ್ಲ, ಸಿಬಿಐ ಆಡಳಿತ ಪಕ್ಷದ ಪಂಜರದ ಗಿಳಿ, ಸಿಬಿಐಯನವರು ಆಡಳಿತ ಪಕ್ಷದ ಎಜೆಂಟರಂತೆ ವರ್ತಿಸಬೇಡಿ ಬಿಜೆಪಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ