ಸಿಗಂದೂರು‌ ದೇವಸ್ಥಾನದ ವಿಚಾರದಲ್ಲಿ ಸರ್ಕಾರದ ಹಸ್ತಕ್ಷೇಪ‌ ಬೇಡ: ಬೇಳೂರು ಗೋಪಾಲಕೃಷ್ಣ

ಯಡಿಯೂರಪ್ಪ ನವರೇ ನೀವು ಈ ಹಿಂದೆ ದೇವಸ್ಥಾನದ ವಿಷಯಕ್ಕೆ ಕೈ ಹಾಕಿ ಅಧಿಕಾರ ಕಳೆದುಕೊಂಡಿದ್ದೀರಿ. ಈಗ ಮತ್ತೇ ಸಿಗಂದೂರು ವಿಷಯಕ್ಕೆ ಕೈ ಹಾಕಿದರೆ ಅಧಿಕಾರ ಕಳೆದುಕೊಳ್ಳುತ್ತಿರಿ ಎಂದು ಬೇಳೂರು ಗೋಪಾಲಕೃಷ್ಣ ಮನವಿ ಮಾಡಿದ್ದಾರೆ

ಬೇಳೂರು ಗೋಪಾಲಕೃಷ್ಣ

ಬೇಳೂರು ಗೋಪಾಲಕೃಷ್ಣ

  • Share this:
ಶಿವಮೊಗ್ಗ(ನವೆಂಬರ್​. 03): ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಅರ್ಚಕರು ಮತ್ತು ಧರ್ಮದರ್ಶಿ‌ ನಡುವಿನ ಕಿತ್ತಾಟದಿಂದಾಗಿ ದೇವಸ್ಥಾನದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿದೆ. ಹಣಕಾಸಿನ ವಿಚಾರದ ಬಗ್ಗೆ ಆಪಾದನೆಗಳು ಕೇಳಿ ಬಂದ ಹಿನ್ನೆಲೆಯಲ್ಲಿ‌ ಜಿಲ್ಲಾಧಿಕಾರಿ ದೇವಸ್ಥಾನಕ್ಕೆ ಮೇಲ್ವಿಚಾರಣೆ ಮತ್ತು ಸಲಹಾ ಸಮಿತೆ ರಚನೆ ಮಾಡಿದ್ದಾರೆ. ಇದು ಈಗ ಈಡಿಗ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ. ಯಾವುದೇ ಕಾರಣಕ್ಕೂ ಮುಜರಾಯಿ ಇಲಾಖೆಗೆ ದೇವಸ್ಥಾನ‌ ಸೇರಿಸಿಕೊಳ್ಳಬಾರದು ಎಂಬ ಕೂಗು‌ ಜೋರಾಗಿದೆ. ಶಿವಮೊಗ್ಗದಲ್ಲಿ ಕಾಂಗ್ರೆಸ್‌ ವಕ್ತಾರ ಬೇಳೂರು ಗೋಪಾಲ ಕೃಷ್ಣ ಸರ್ಕಾರ ಮತ್ತು ಜಿಲ್ಲಾಧಿಕಾರಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಸಿಗಂದೂರು‌ ದೇವಸ್ಥಾನದ ವಿಚಾರದಲ್ಲಿ ಜಿಲ್ಲಾಧಿಕಾರಿ‌ ತೆಗೆದುಕೊಂಡಿರುವ ಕ್ರಮ‌ ಸರಿಯಲ್ಲ‌ಎಂದರು. ಜಿಲ್ಲೆಯಲ್ಲಿ ಕೆಂಜಿಗಾಪುರ ಮುಜುರಾಯಿ ಇಲಾಖೆ ವ್ಯಾಪ್ತಿಯ  ದೇವಸ್ಥಾನ ಉಳಿಸಿಕೊಳ್ಳಲು ಜಿಲ್ಲಾಡಳಿತಕ್ಕೆ ಆಗಿಲ್ಲ. ಆದರೆ ಖಾಸಗಿ ಟ್ರಸ್ಟ್ ಆಗಿರುವ ಸಿಗಂದೂರು ದೇವಸ್ಥಾನಕ್ಕೆ ಡಿಸಿ ಕೈ ಹಾಕಿರುವುದು ಯಾವ ನ್ಯಾಯ ಎಂದು ಪ್ರಶ್ನೆ‌ ಮಾಡಿದ್ದಾರೆ. 

ಸಿಗಂದೂರು ದೇವಸ್ಥಾನದ ಬಗ್ಗೆ ಬಿಜೆಪಿಯವರಿಗೆ ಯಾಕೆ ಅಷ್ಟು ಆಸಕ್ತಿ ಎಂದು ಕುಟಕಿದರು. ಅದು ರಾಮಪ್ಪ ಹಾಗೂ ಶೇಷಗಿರಿ ಭಟ್ ಗೆ ಸೇರಿದ ವಿಚಾರ. ರಾಜ್ಯದ ಯಾವ ದೇವಸ್ಥಾನದಲ್ಲಿ ಗಲಾಟೆಯಾಗಿಲ್ಲ ತೋರಿಸಿ, ಅವೆಲ್ಲವನ್ನು ಮುಜುರಾಯಿಗೆ ಸೇರಿಸಿದ್ದಿರಾ‌ ಎಂದು ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ.

ಸಿಗಂದೂರು ದೇವಸ್ಥಾನಕ್ಕೆ ಜಾತಿಯ ಪ್ರಶ್ನೆಯಿಲ್ಲ. ಸಿಗಂದೂರು ದೇವಸ್ಥಾನದ ಜಾಗ ಅರಣ್ಯ‌ ಭೂಮಿಯಲ್ಲಿದೆ ಒತ್ತವರಿ ಜಾಗವಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳುತ್ತಾರೆ. ಶಿವಮೊಗ್ಗ ಡಿಸಿ ಕಛೇರಿ ಕೂಡ ಅರಣ್ಯ ವ್ಯಾಪ್ತಿಯಲ್ಲಿದೆ, ನೀವು ಜಾಗ ಖಾಲಿ ಮಾಡುತ್ತಿರಾ ಎಂದಿದ್ದಾರೆ.

ಇದನ್ನೂ ಓದಿ : ಗಡಿಯಲ್ಲಿ ಶಿವಸೇನೆ ಉದ್ದಟತನ ; ಡಿಸಿಎಂ ಲಕ್ಷ್ಮಣ ಸವದಿ ಪ್ರತಿಕೃತಿ ದಹಿಸಿ ಪುಂಡಾಟಿಕೆ

ನೀವು ಬಿಜೆಪಿಯ ಏಜೆಂಟ್ ಆಗಿ ಕೆಲಸ ಮಾಡಬೇಡಿ. ನಮ್ಮ ಈಡಿಗ ಸಂಘವನ್ನು ಸ್ವಯಂ ಘೋಷಿತ ಸಂಘಟನೆ ಎಂದು ಪತ್ರ ಬರೆದಿದ್ದಿರಾ. ಸರ್ಕಾರಿ ಕಡತದಿಂದ ಆ ಪದ ಬಳಕೆ ತೆಗೆಯದಿದ್ದರೆ, ಈಡಿಗ ಸಮಾಜದಿಂದ ಪ್ರತಿಭಟನೆ ನಡೆಸಲಾಗುವುದು ಎಂದಿದ್ದಾರೆ.

ಯಡಿಯೂರಪ್ಪ ನವರೇ ನೀವು ಈ ಹಿಂದೆ ದೇವಸ್ಥಾನದ ವಿಷಯಕ್ಕೆ ಕೈ ಹಾಕಿ ಅಧಿಕಾರ ಕಳೆದುಕೊಂಡಿದ್ದೀರಿ. ಈಗ ಮತ್ತೇ ಸಿಗಂದೂರು ವಿಷಯಕ್ಕೆ ಕೈ ಹಾಕಿದರೆ ಅಧಿಕಾರ ಕಳೆದುಕೊಳ್ಳುತ್ತಿರಾ, ದಯವಿಟ್ಟು ಸಿಗಂದೂರು ಕ್ಷೇತ್ರವನ್ನು ರಾಮಪ್ಪ ಶೇಷಗಿರಿ ಭಟ್ ರವರಿಗೆ ಬಿಡಿ ಎಂದು ಬೇಳೂರು ಮನವಿ ಮಾಡಿಕೊಂಡಿದ್ದಾರೆ.
Published by:G Hareeshkumar
First published: