ಮಾಜಿ ಸಚಿವ ವಿನಯ್ ಕುಲಕರ್ಣಿ ಬಂಧನ ರಾಜಕೀಯ ಪ್ರೇರಿತ : ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್
ಬಿಜೆಪಿಗರ ರಾಜಕೀಯ ಷಡ್ಯಂತ್ರ ಎದುರಿಸಲು ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಜತೆಗೆ ಕಾಂಗ್ರೆಸ್ ಪಕ್ಷ ಬೆಂಗಾವಲಾಗಿದೆ. ಬಿಜೆಪಿ ಸಾಂವಿಧಾನಿಕ ಸಂಸ್ಥೆಗಳಾದ ಸಿಬಿಐ, ಇಡಿ ಇಲಾಖೆ ದುರ್ಬಳಸಿಕೊಳ್ಳುವುದು ಅತ್ಯಂತ ನಾಚಿಗೇಡಿನ ಸಂಗತಿ
news18-kannada Updated:November 11, 2020, 4:04 PM IST

ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್
- News18 Kannada
- Last Updated: November 11, 2020, 4:04 PM IST
ಧಾರವಾಡ(ನವೆಂಬರ್. 11): ಲೋಕಸಭಾ ಚುನಾವಣೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಿರುದ್ಧ ವಿನಯ್ ಕುಲಕರ್ಣಿ ಸ್ಪರ್ಧಿಸುವ ಹಿನ್ನಲೆ ಅವರ ವಿರುದ್ಧ ಸಿಬಿಐ ಅಸ್ತ್ರ ಪ್ರಯೋಗಿಸಿದ್ದಾರೆ. ವಿನಯ್ ಬಂಧನ ರಾಜಕೀಯ ಪ್ರೇರಿತ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಆರೋಪಿಸಿದರು. ನ್ಯಾಯಾಂಗ ಬಂಧನದಲ್ಲಿ ಇರುವ ವಿನಯ್ ಕುಲಕರ್ಣಿ ಅವರ ಧಾರವಾಡದ ಮನೆಗೆ ಭೇಟಿನೀಡಿ, ಕುಟುಂಬಸ್ಥರಿಗೆ ಧೈರ್ಯ ತುಂಬಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಬಿಐ ತನಿಖೆ ಅಗತ್ಯವಿಲ್ಲ ಅಂತಾ ಹೈಕೋರ್ಟ್ ಹೇಳಿತ್ತು. ಪೊಲೀಸರ ತನಿಖೆ ಅಂತಿಮ ಹಂತದಲ್ಲಿದ್ದಾಗ ಬಿಜೆಪಿ ಸರ್ಕಾರ ದುರುದ್ದೇಶದಿಂದ ಪ್ರಕರಣ ಸಿಬಿಐಗೆ ವಹಿಸಿದೆ. ಇದು ನ್ಯಾಯಾಂಗ ನಿಂಧನೆ ಆಗಲಿದೆ. ಬಿಜೆಪಿಗರು ಅಧಿಕಾರಕ್ಕೆ ಬಂದ ನಂತರ ಸೇಡಿನ ರಾಜಕೀಯ ಮಾಡುತ್ತಿದ್ದಾರೆ ಎಂದು ಆಪಾದಿಸಿದರು. ದ್ವೇಷ ಸಾಧನೆಗೆ ಇಂಥ ನೀಚ ಕೆಲಸಕ್ಕೆ ಇಳಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಐದು ನೂರು ವರ್ಷ ಬದುಕುತ್ತಾರೆಯೇ? ಬಿಜೆಪಿ ನಾಯಕರ ರಾಜಕೀಯ ಸಿದ್ಧಾಂತವೇ ದ್ವೇಷ, ಅಸೂಯೆ, ದಮನ ನೀತಿ ಅನುಕರಣೆಯೂ ಆಗಿದೆ ಎಂದು ಕಿಡಿಕಾರಿದರು.
ಬಿಜೆಪಿಗರ ರಾಜಕೀಯ ಷಡ್ಯಂತ್ರ ಎದುರಿಸಲು ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಜತೆಗೆ ಕಾಂಗ್ರೆಸ್ ಪಕ್ಷ ಬೆಂಗಾವಲಾಗಿದೆ. ಬಿಜೆಪಿ ಸಾಂವಿಧಾನಿಕ ಸಂಸ್ಥೆಗಳಾದ ಸಿಬಿಐ, ಇಡಿ ಇಲಾಖೆ ದುರ್ಬಳಸಿಕೊಳ್ಳುವುದು ಅತ್ಯಂತ ನಾಚಿಗೇಡಿನ ಸಂಗತಿ ಎಂದು ಹರಿಹಾಯ್ದರು. ಶಿರಾ-ಆರ್.ಆರ್. ನಗರ ಉಪಚುನಾವಣೆ ಬಗ್ಗೆ ಪ್ರತಿಕ್ರಿಸಿದ ಅವರು, ಮುನಿರತ್ನ ಕೋವಿಡ್ ವೇಳೆ ಸಾಕಷ್ಟು ಕೆಲಸ ಮಾಡಿದ್ದಾರೆ. ಅವರ ಜತೆಗೆ ಕೈ ಕಾರ್ಯಕರ್ತರು ಕೆಲಸ ಮಾಡಿದ್ದಾರೆ. ಹೀಗಾಗಿ ಅವರು ಆರ್ ಆರ್.ನಗರದಲ್ಲಿ ಗೆಲವು ಸಾಧಿಸಿದ್ದು, ಮುನಿರತ್ನ ವಿನಃ ಬಿಜೆಪಿ ಅಲ್ಲ. ರಾಜಕಾರದಲ್ಲಿ ಸೋಲು-ಗೆಲವು ಸಹಜ ಎಂದರು.
ಇದನ್ನೂ ಓದಿ : ದಕ್ಷಿಣಕನ್ನಡದಲ್ಲಿ ಕಸ್ತೂರಿರಂಗನ್ ವರದಿ ವಿರೋಧಿ ಹೋರಾಟಕ್ಕೆ ಮತ್ತೆ ಸಜ್ಜು
ಮಾಜಿ ಸಚಿವ ವಿನಯ್ ಕುಲಕರ್ಣಿ ಸಿಬಿಐ ವಶ ಬಳಿಕ ನ್ಯಾಯಾಂಗ ಬಂಧನದಲ್ಲಿದ್ದಾರೆ. ಆದರೆ, ಕುಲಕರ್ಣಿ ಬಂಧನವಾದ ಬಳಿಕ ಮಾಜಿ ಸಚಿವ ವಿನಯ್ ಕುಲಕರ್ಣಿ ಕುಟುಂಬಕ್ಕೆ ಭೇಟಿ ನೀಡಿ ಧೈರ್ಯ ತುಂಬಿದ್ದು ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತ್ರ. ಸಿದ್ದರಾಮಯ್ಯ ಅವರ ಶಿಷ್ಯನಾಗಿದ್ದ ವಿನಯ್ ಕುಲಕರ್ಣಿ ಬಂಧನ ಬಳಿಕ ಟ್ವೀಟ್ ಮಾಡಿ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬಿದ್ದನ್ನು ಬಿಟ್ಟರೆ ಮನೆಗೆ ಭೇಟಿ ನೀಡಿಲ್ಲ. ಅಲ್ಲದೇ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಸಹ ವಿನಯ್ ಕುಲಕರ್ಣಿ ಮನೆಗೆ ಭೇಟಿ ನೀಡಿಲ್ಲ.
ವಿನಯ್ ಕುಲಕರ್ಣಿ ಹಾಗೂ ಡಿ ಕೆ ಶಿವಕುಮಾರ್ ಇಬ್ಬರು ಹಾವು ಮುಂಗುಸಿ ಇದ್ದಂತೆ. ಇದಕ್ಕೆ ಉತ್ತಮ ಸಾಕ್ಷಿ ಅಂದ್ರೆ ಲಿಂಗಾಯತ ಹೋರಾಟ ಮಾಡಿದ್ದು ತಪ್ಪೆಂದು ಡಿಕೆಶಿ ಹೇಳಿದರು ಇದರಿಂದ ವಿನಯ್ ಕುಲರ್ಣಿ ಗರಂ ಆಗಿದ್ದರು. ಒಂದಲ್ಲ ಒಂದು ವಿಷಯದಲ್ಲಿ ಡಿಕೆಶಿ ಹಾಗೂ ವಿನಯ ವಿರೋಧಿಗಳಂತೆ ಕಾಣಿಸಿಕೊಂಡಿದ್ದಾರೆ ಎಂದರೆ ತಪ್ಪಾಗಲಾರದು.
ಬಿಜೆಪಿಗರ ರಾಜಕೀಯ ಷಡ್ಯಂತ್ರ ಎದುರಿಸಲು ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಜತೆಗೆ ಕಾಂಗ್ರೆಸ್ ಪಕ್ಷ ಬೆಂಗಾವಲಾಗಿದೆ. ಬಿಜೆಪಿ ಸಾಂವಿಧಾನಿಕ ಸಂಸ್ಥೆಗಳಾದ ಸಿಬಿಐ, ಇಡಿ ಇಲಾಖೆ ದುರ್ಬಳಸಿಕೊಳ್ಳುವುದು ಅತ್ಯಂತ ನಾಚಿಗೇಡಿನ ಸಂಗತಿ ಎಂದು ಹರಿಹಾಯ್ದರು.